ಈಕೆಯ ಕಥೆ ಕೇಳಿದರೆ ಅಚ್ಚರಿಯಾಗುತ್ತದೆ! ಯಾಕೆ ಗೊತ್ತೇ?

By: Deepak M
Subscribe to Boldsky

ಹುಡುಗಿಯರಿಗೆ ತಮ್ಮ ದೇಹದ ಅಂಗಗಳ ಮೇಲೆ ಇರುವಷ್ಟು ಪ್ರೀತಿ ಬಹುಶಃ ಪ್ರಪಂಚದಲ್ಲಿ ಇನ್ನಿತರ ಯಾವುದೇ ಜೀವಿಗಳಿಗೂ ಇರುವುದಿಲ್ಲ. ಹುಡುಗಿಯರಿಗೆ ತಮ್ಮ ಮುಖ, ಕೂದಲು, ಕೈ ಕಾಲು ಇತ್ಯಾದಿ ಅಂಗಗಳ ಅಲಂಕಾರದ ಮೇಲೆ ವಿಪರೀತವಾದ ಮೋಹ ಇರುತ್ತದೆ. ಅದಕ್ಕಾಗಿ ಅವರು ವಿವಿಧ ಬಗೆಯ ಅಲಂಕಾರಿಕ ಸಾಮಗ್ರಿಗಳನ್ನು ಬಳಸುತ್ತಿರುತ್ತಾರೆ.

ಅದರಲ್ಲೂ ಸೈಮೋನ್ ಟೇಲರ್ ಎಂಬ ಒಂದು ಅಪರೂಪದ ಹೆಣ್ಣು ಮಗಳು ಮೂರು ವರ್ಷದಿಂದ ಉಗುರುಗಳನ್ನು ಕತ್ತರಿಸದೆ, ಅವುಗಳನ್ನು ಲಾಲನೆ-ಪಾಲನೆ ಮಾಡುತ್ತಿದ್ದಾಳೆ! ಬನ್ನಿ ಸೈಮೋನ್ ಟೇಲರ್‌ಗೆ ಇರುವ ಆ ಉಗುರುಗಳ ಹುಚ್ಚು ಎಂತಹದು, ಆಕೆ ತನ್ನ ಉಗುರುಗಳನ್ನು ಹೇಗೆ ಬೆಳೆಸುತ್ತಿದ್ದಾಳೆ ಮತ್ತು ಅದಕ್ಕಾಗಿ ಯಾವ ರೀತಿಯ ದೈನಂದಿನ ಜೀವನವನ್ನು ರೂಢಿಸಿಕೊಂಡಿದ್ದಾಳೆ ಎಂಬುದನ್ನು ನಾವು ನಿಮಗೆ ಇಂದು ತಿಳಿಸುತ್ತೇವೆ. ಮುಂದೆ ಓದಿ ಸೈಮೋನ್ ಟೇಲರ್‌ಗಳ ನಖ ಪುರಾಣವನ್ನು....  

ಇದು ಹೇಗೆ ಆರಂಭವಾಯಿತು...

ಇದು ಹೇಗೆ ಆರಂಭವಾಯಿತು...

ಇದೇ ಪ್ರಶ್ನೆಯನ್ನು ಸೈಮೋನ್ ಬಳಿ ಕೇಳಿದಾಗ "ಅಸಲಿಗೆ ನನಗೆ ಉಗುರುಗಳನ್ನು ಉದ್ದಕ್ಕೆ ಬೆಳೆಸುವ ಆಲೋಚನೆಯೇ ಇರಲಿಲ್ಲ. ಆದರೆ ಉಗುರುಗಳು ಉದ್ದಕ್ಕೆ ಬೆಳೆದಂತೆಲ್ಲ, ಅವುಗಳನ್ನು ನೋಡಿ ಜನ ನನ್ನನ್ನು ಹೊಗಳಲು ಶುರು ಮಾಡಿದರು. ಇವುಗಳಿಂದ ಖುಷಿಯಾದ ನಾನು, ಉಗುರುಗಳನ್ನು ಬೆಳೆಸುವ ಮತ್ತು ಹಾಗೆಯೇ ಇರಿಸಿಕೊಳ್ಳುವ ತೀರ್ಮಾನಕ್ಕೆ ಬಂದೆ. ಮೊದಲ ವರ್ಷ ನಾನು ಇವುಗಳನ್ನು ನಾಳೆ ಕತ್ತರಿಸುತ್ತೇನೆ ಎಂದುಕೊಳ್ಳುತ್ತಿದ್ದೆ. ಆದರೆ ಎಂದಿಗೂ ಹಾಗೆ ಮಾಡಲು ಹೋಗಲಿಲ್ಲ" ಎಂದು ಹೇಳಿದಳು.

ಆಕೆಯ ಈ ಅಭ್ಯಾಸ ಶುರುವಾದ ಬಗೆ....

ಆಕೆಯ ಈ ಅಭ್ಯಾಸ ಶುರುವಾದ ಬಗೆ....

ಆಕೆಯು 2014 ರಲ್ಲಿ ಒಮ್ಮೆ ಉಗುರುಗಳಿಗೆ ಬಣ್ಣ ಬಳಿಯುವುದು ಹೇಗೆ ಎಂಬ ಟ್ಯೂಟೋರಿಯಲ್ ಅನ್ನು ವೀಕ್ಷಿಸಿದಳು. "ಬಹುಶಃ ನನಗೆ ಈ ಉಗುರು ಬೆಳೆಸುವ ಚಾಳಿ ಅಂದಿನಿಂದಲೇ ಆರಂಭವಾಯಿತು ಎಂದು ಹೇಳಬಹುದು. ಅಂದಿನಿಂದ ನನಗೆ ಉಗುರು ಕತ್ತರಿಸುವ ಸಾಧನಗಳೆಂದರೆ ಭಯವಾಗಲು ಆರಂಭವಾಯಿತು."

ಆಮೇಲೆ ಆಕೆ ಹೇಳಿದಳು...

ಆಮೇಲೆ ಆಕೆ ಹೇಳಿದಳು...

"ನನಗೆ ದೈಹಿಕ ಶಿಕ್ಷಣ ಅಥವಾ ಪಿಇಟಿ ಎಂದರೆ ಸಮಸ್ಯೆ, ನಾನು ವಾಲಿಬಾಲ್, ಬಾಸ್ಕೆಟ್ ಬಾಲ್ ಅಥವಾ ಇನ್ನಿತರ ಆಟಗಳನ್ನು ಆಡಲು ಆಗುವುದಿಲ್ಲ. ನನ್ನ ಪಿಇ ಟೀಚರ್‌ಗಳು ನನ್ನನ್ನು ಉಗುರು ಕತ್ತರಿಸಿಕೊಳ್ಳುವಂತೆ ಯಾವಾಗಲು ಸಲಹೆ ನೀಡುತ್ತಿರುತ್ತಾರೆ ಮತ್ತು ಪುಸಲಾಯಿಸುತ್ತಿರುತ್ತಾರೆ. ಆದರೆ ಅವರು ಯಾವತ್ತಿಗೂ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ. ಆದ್ದರಿಂದ ನನ್ನ ಪಿಇ ವಿಷಯದ ಗ್ರೇಡ್‌ಗಳು ಯಾವತ್ತಿಗೂ ಉತ್ತಮವಾಗಿ ಬಂದಿಲ್ಲ."

ಆಕೆಯ ವಯಸ್ಸು ಈಗ ಹದಿನಾರು

ಆಕೆಯ ವಯಸ್ಸು ಈಗ ಹದಿನಾರು

ಮೂರು ವರ್ಷಗಳಿಂದ ಆಕೆ ತನ್ನ ಉಗುರುಗಳನ್ನು ಬೆಳೆಸಲು ಆರಂಭಿಸಿದಳು ಮತ್ತು ಅದಕ್ಕಾಗಿ ಆಕೆ ನೂರಾರು ಪಡಿಪಾಟಲುಗಳನ್ನು ಪಡುತ್ತಿದ್ದಾಳೆ! ತನ್ನ ಪರೀಕ್ಷೆಗಳ ಸಮಯದಲ್ಲಿ ಪೆನ್ ಹಿಡಿಯಲು ಸಹ ಕಷ್ಟಪಡುತ್ತಾಳೆ.

ಇದು 3 ಗಂಟೆಗಳ ದೀರ್ಘ ಪ್ರಕ್ರಿಯೆ

ಇದು 3 ಗಂಟೆಗಳ ದೀರ್ಘ ಪ್ರಕ್ರಿಯೆ

ಸಿಮೋನ್ ತನ್ನ ಉಗುರುಗಳಿಗೆ ಬಣ್ಣ ಬಳಿಯಲು ಮೂರು ಗಂಟೆಗಳಷ್ಟು ದೀರ್ಘಕಾಲವನ್ನು ತೆಗೆದುಕೊಳ್ಳುತ್ತಾಳೆ. ಇದು ಉಗುರಿಗೆ ಎರಡು ಬೇಸ್ ಕೋಟ್ ಮತ್ತು ಒಂದು ಟಾಪ್ ಕೋಟ್ ಬಳಿಯುವುದನ್ನು ಒಳಗೊಂಡಿರುತ್ತದೆ. ಅದನ್ನು ಸ್ವಚ್ಛಗೊಳಿಸಲು ಹಾಗು ಪಾಲಿಷ್ ಅನ್ನು ತೆಗೆಯಲು ಅರ್ಧ ಗಂಟೆ ಸಮಯ ತೆಗೆಯುಕೊಳ್ಳುತ್ತಾಳೆ.

ಆಕೆ ಅವುಗಳನ್ನು ಬಳಸಿ ಬಳಸಿ ಸದೃಢಗೊಳಿಸುತ್ತಾಳೆ...

ಆಕೆ ಅವುಗಳನ್ನು ಬಳಸಿ ಬಳಸಿ ಸದೃಢಗೊಳಿಸುತ್ತಾಳೆ...

ಉಗುರುಗಳು ಗಟ್ಟಿ ಮುಟ್ಟಾಗಿ ಇರಿಸಲು ಸಿಮೋನ್ ಎರಡು ಕೋಟ್‌ಗಳಷ್ಟು ನೇಲ್ ಹಾರ್ಡನರ್ ಬಳಸುತ್ತಾಳೆ ಮತ್ತು ಪ್ರತಿ ಬಾರಿ ಉಗುರಿಗೆ ಪೇಯಿಂಟ್ ಮಾಡಿದಾಗ ಕ್ಯುಟಿಕಲ್ ಆಯಿಲ್ ಅನ್ನು ಸಹ ಲೇಪಿಸುತ್ತಾಳೆ. ಉಗುರುಗಳನ್ನು ಸ್ವಚ್ಛವಾಗಿ ಇರಿಸಲು, ಆಕೆ ಉಗುರಿನ ಕೆಳಭಾಗವನ್ನು ಪ್ರತಿದಿನ ಕಾಟನ್ ಬಡ್ ಬಳಸಿ ಸ್ವಚ್ಛಗೊಳಿಸುತ್ತಾಳೆ.

ಆಕೆಯನ್ನು ಹಲವಾರು ತಮಾಷೆಯ ಪ್ರಶ್ನೆಗಳನ್ನು ಕೇಳಲಾಗಿತ್ತು

ಆಕೆಯನ್ನು ಹಲವಾರು ತಮಾಷೆಯ ಪ್ರಶ್ನೆಗಳನ್ನು ಕೇಳಲಾಗಿತ್ತು

ಆಕೆಯನ್ನು ಜನರು ಈ ಮೂರು ವರ್ಷಗಳಲ್ಲಿ ವಿಚಿತ್ರವಾಗಿ ನೋಡಿದ್ದರು. ಜೊತೆಗೆ "ತುಂಬಾ ಜನ ನೀನು ಶೌಚಾಲಯಕ್ಕೆ ಹೋದಾಗ ಹೇಗೆ ಸ್ವಚ್ಛಗೊಳಿಸಿಕೊಳ್ಳುತ್ತೀಯಾ....?" ಎಂದು ಸಹ ಕೇಳಿದ್ದರು ಎಂದು ನಗುತ್ತಾಳೆ. ಸ್ನಾನ ಮಾಡುವುದು ತುಂಬಾ ಕಷ್ಟ, ಕೆಲವೊಮ್ಮೆ ನನ್ನ ಉಗುರುಗಳು ಕೂದಲಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಆದ್ದರಿಂದ ನಾನು ಮತ್ತಷ್ಟು ಜಾಗರೂಕಳಾಗಿರಬೇಕಾಗುತ್ತದೆ" ಎಂದು ಸಹ ಹೇಳಿದಳು.

ಆಕೆಯ ಉಗುರುಗಳು ಈ ಮೂರು ವರ್ಷದಲ್ಲಿ ಒಮ್ಮೆ ಮಾತ್ರ ಮುರಿದಿತ್ತು....

ಆಕೆಯ ಉಗುರುಗಳು ಈ ಮೂರು ವರ್ಷದಲ್ಲಿ ಒಮ್ಮೆ ಮಾತ್ರ ಮುರಿದಿತ್ತು....

"ಒಮ್ಮೆ ನಾನು ಮತ್ತು ನನ್ನ ಸ್ನೇಹಿತರು ಒಂದು ಗೇಟ್ ಅನ್ನು ಹತ್ತುತ್ತಿದ್ದೆವು. ಆಗ ಅದು ಸಿಕ್ಕಿಹಾಕಿಕೊಂಡಿತು ಮತ್ತು ನಾನು ಅಲ್ಲಿಂದ ನೆಗೆದೆ, ಅಷ್ಟೇ... ನನ್ನ ಮಧ್ಯದ ಉಗುರು ಕಬ್ಬಿಣದ ರಾಡಿನೊಳಗೆ ಸಿಕ್ಕಿಹಾಕಿಕೊಂಡು ಮುರಿದು ಹೋಯಿತು. ಆಮೇಲೆ ನಾನು ಅಳಲು ಶುರು ಮಾಡಿದೆ ಮತ್ತು ಕಿರುಚಾಡಲು ಆರಂಭಿಸಿದೆ, "ನನ್ನ ಉಗುರೇ ಏಕೆ? ಏನೇ ಆದರೂ ಉಗುರು ಉಗುರಲ್ಲವೇ? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಬರೆಯಿರಿ.

Image Courtesy

 
English summary

The Girl Who Did Not Cut Her Nails For 3 Years!

Check out the story of Simone Taylor who is obsessed with her growing nails that she does not wish to cut them and she does not mind changing her daily tasks that involve less of stressing on the nails. Find out more about this weird habit that Simone Taylor has developed.
Please Wait while comments are loading...
Subscribe Newsletter