ಈ ದೇವಾಲಯದಲ್ಲಿ ಮನುಷ್ಯರ ರಕ್ತವನ್ನೇ ದೇವರಿಗೆ ಅರ್ಪಿಸುತ್ತಾರಂತೆ!

Posted By: Hemanth
Subscribe to Boldsky

ದೇವಸ್ಥಾನಗಳನ್ನು ಭೂಮಿ ಮೇಲಿನ ಅತ್ಯಂತ ಪವಿತ್ರ ಜಾಗವೆಂದು ನಂಬಲಾಗಿದೆ. ಆದರೆ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವಂತಹ ಕೆಲವೊಂದು ಮೂಢನಂಬಿಕೆಗಳು ಮಾತ್ರ ಇಂತಹ ನಂಬಿಕೆ ಬಗ್ಗೆ ಸಂಶಯ ಮೂಡಿಸುತ್ತದೆ. ಮಗುವನ್ನುಮುಳ್ಳಿನ ರಾಶಿಗೆ ಬಿಸಾಕುವುದು, ನೀರಿನಿಂದ ಮುಳುಗಿಸಿ ತೆಗೆಯುವುದು ಇತ್ಯಾದಿ. ರಾಜ್ಯದ ಕೆಲವೊಂದು ಮಂದಿರಗಳಲ್ಲೂ ಇಂತಹ ಆಚರಣೆಗಳು ರೂಢಿಯಲ್ಲಿದೆ.

ಕ್ಷುದ್ರ ದೇವತೆಗಳಿಗೆ ರಕ್ತವನ್ನು ಅರ್ಪಿಸುವಂತಹ ಸಂಪ್ರದಾಯ ಹಿಂದಿನಿಂದಲೂ ಇದೆ. ಅದರಲ್ಲೂ ಕೆಲವು ಕಡೆಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡಲಾಗುತ್ತಾ ಇತ್ತು. ಆದರೆ ಕಠಿಣ ಕಾನೂನು ಬಂದ ಬಳಿಕ ಇದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ನೂರಾರು ವರ್ಷಗಳ ಹಿಂದೆ ಮನುಷ್ಯರನ್ನು ಕೂಡ ಬಲಿ ಕೊಡಲಾಗುತ್ತಾ ಇತ್ತು ಎಂದರೆ ನಂಬಲೇಬೇಕಾಗುತ್ತದೆ.  

ರಕ್ತ ಕುಡಿಯುವ ರಕ್ತಪಿಶಾಚಿಗಳ ಲೋಕದತ್ತ ಒಂದು ಪ್ರಯಾಣ

ಪುರಾತನವಾಗಿರುವಂತಹ ಕೆಲವೊಂದು ದೇವಾಲಯಗಳಲ್ಲಿ ಈಗಲೂ ಬಲಿ ಸಂಪ್ರದಾಯ ಇದೆ. ಆದರೆ ನಿಮಗೆ ಅಚ್ಚರಿ ಮೂಡಿಸುವಂತಹ ದೇವಾಲಯವೊಂದರಲ್ಲಿ ಬೋರೋದೇವಿ ದೇವಾಲಯದಲ್ಲಿ ಮನುಷ್ಯರ ರಕ್ತವನ್ನು ಅರ್ಪಿಸಲಾಗುತ್ತದೆ. ಇದು ಹೇಗೆಂದು ತಿಳಿಯಲು ಓದುತ್ತಾ ಸಾಗಿ...

ಪ್ರಾಣಿಗಳನ್ನು ಬಲಿ ಕೊಡದೆ ಮನುಷ್ಯರನ್ನು....

ಪ್ರಾಣಿಗಳನ್ನು ಬಲಿ ಕೊಡದೆ ಮನುಷ್ಯರನ್ನು....

ಇತರ ದೇವಾಲಯಗಳಿಗೆ ಹೋಲಿಸಿದರೆ ಇದು ತುಂಬಾ ಭಿನ್ನವಾಗಿ ಕಾಣಿಸುತ್ತದೆ. ಇಲ್ಲಿ ಭಕ್ತರು ದೇವರಿಗೆ ಮನುಷ್ಯರ ರಕ್ತವನ್ನು ಅರ್ಪಿಸುತ್ತಾರೆ. ಮನುಷ್ಯರನ್ನು ಬಲಿ ನೀಡುವಂತಹ ಸಂಪ್ರದಾಯ ಸುಮಾರು 250 ವರ್ಷಗಳ ಹಿಂದೆಯೇ ಕೊನೆಗೊಂಡಿದೆ. ಅಲ್ಲಿಯ ತನಕ ಮನುಷ್ಯರನ್ನು ಬಲಿ ನೀಡುತ್ತಾ ಇದ್ದರು.

ಮನುಷ್ಯರ ರಕ್ತ ಅರ್ಪಣೆ

ಮನುಷ್ಯರ ರಕ್ತ ಅರ್ಪಣೆ

ಈ ದೇವಾಲಯದಲ್ಲಿ ಪೂಜೆಯನ್ನು ಮಾಡುವಂತಹ 52ರ ಹರೆಯದ ಶಿಬೇಂದ್ರನಾಥ್ ರಾಯ್ ಎಂಬವರು ತುಂಬಾ ಅಚ್ಚರಿಯ ಸಂಪ್ರದಾಯದಂತೆ ಪ್ರತೀ ಅಷ್ಟಮಿಯ ರಾತ್ರಿಯಂದು ದೇವಸ್ಥಾನದ ಮುಚ್ಚಿದ ಬಾಗಿಲುಗಳ ಹಿಂದೆ ಮನುಷ್ಯರ ರಕ್ತವನ್ನು ಅರ್ಪಿಸುತ್ತಾರೆ. ಮನುಷ್ಯರ ರಕ್ತದ ಹೊರತಾಗಿ ಪೂಜೆಯು ಸಂಪೂರ್ಣವಾಗುವುದಿಲ್ಲವೆಂದು ಭಕ್ತರು ಅಭಿಪ್ರಾಯಪಡುತ್ತಾರೆ.

ಈ ಸಂಪ್ರದಾಯಕ್ಕೆ ಅಂತ್ಯ

ಈ ಸಂಪ್ರದಾಯಕ್ಕೆ ಅಂತ್ಯ

ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಪರಿಶೀಲಿಸಲು ರಾಜನು ಭಕ್ಷಿ ಎಂಬಾತನನ್ನು ಆಯ್ಕೆ ಮಾಡಿದ್ದ. ಆತ ಈ ಸಂಪ್ರದಾಯವನ್ನು ಕೊನೆಗೊಳಿಸಬೇಕು ಎಂದು ರಾಜನಿಗೆ ಹೇಳಿದ್ದ. ಅದರ ಬಳಿಕ ಮನುಷ್ಯರ ಬಲಿ ಕೊನೆಗೊಂಡಿದೆ.

ಕೇವಲ ಮೂರು ಹನಿ ರಕ್ತ

ಕೇವಲ ಮೂರು ಹನಿ ರಕ್ತ

ಮನುಷ್ಯರನ್ನು ಬಲಿ ಕೊಡುವ ಸಂಪ್ರದಾಯವು ನಿಂತ ಬಳಿಕ ಭಕ್ತರು ಮೂರು ಹನಿ ರಕ್ತವನ್ನು ಅರ್ಪಿಸಲು ನಿರ್ಧರಿಸಿದರು. ಮನುಷ್ಯರ ರಕ್ತವನ್ನು ಅರ್ಪಿಸದರೆ ಇದ್ದರೆ ಪೂಜೆಯು ಪೂರ್ಣಗೊಳ್ಳುವುದಿಲ್ಲವೆಂದು ಪಂಡಿತರು ಹೇಳುತ್ತಾರೆ. ಈ ಮಂದಿರಕ್ಕೆ ಭೇಟಿ ನೀಡಲು ಬಯಸುತ್ತೀರಾ? ನಿಮ್ಮ ಅನಿಸಿಕೆಗಳು ಇದ್ದರೆ ಅದನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿ ಬಿಡಿ.

English summary

The Borodevi Temple Where Human Blood Is Offered!

There is an ancient temple where the practice of offering human blood still exists. This is a bizarre practice that has been followed here since centuries and it is something that has still not been banned, as people can be still seen following it. Check out the history behind the Borodevi temple and the bizarre offering of human blood.
Story first published: Tuesday, June 6, 2017, 10:10 [IST]