ನಿಮ್ಮ ಜನ್ಮ ರಾಶಿಗೆ ಸರಿಹೊಂದುವ ಗರ್ಲ್‌ ಫ್ರೆಂಡ್ ಆಯ್ಕೆ ಮಾಡಿಕೊಳ್ಳಿ!

By: Arshad
Subscribe to Boldsky

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಜನ್ಮರಾಶಿಯ ಹೊರತಾಗಿ ತಮ್ಮ ಸ್ನೇಹಿತರ ಮತ್ತು ಕುಟುಂಬವರ್ಗದವರ ಜನ್ಮರಾಶಿಯ ಬಗ್ಗೆ ಕುತೂಹಲವಿದ್ದೇ ಇರುತ್ತದೆ. ಜನ್ಮರಾಶಿಯಿಂದ ವ್ಯಕ್ತಿಯೊಬ್ಬರ ಲಕ್ಷಣಗಳಲ್ಲಿ ಕೇವಲ 20%ರಷ್ಟನ್ನು ಮಾತ್ರವೇ ಸ್ಥೂಲವಾಗಿ ಅಂದಾಜಿಸಬಹುದು. ಆದರೆ ಕಲವು ವ್ಯಕ್ತಿಗಳು ಜನ್ಮರಾಶಿಗೂ ಹೊರತಾಗಿ ಇತರ ಲಕ್ಷಣಗಳನ್ನು ತಮ್ಮ ಜನ್ಮರಾಶಿಗೆ ಹೊಂದಿಸಿಕೊಂಡು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಾರೆ. 

ನಿಮ್ಮವರ ಮೋಸದ ಗುಣ, ಅರಿಯಬೇಕೇ? ಹಾಗಾದರೆ ಈ ರಾಶಿಚಕ್ರ ಓದಿ...

ಇಂತಹ ಕೆಲವು ಅಮೂಲ್ಯ ಮಾಹಿತಿಯನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಜನ್ಮರಾಶಿಗೆ ಅನುಗುಣವಾಗಿ ನಿಮಗೆ ಅನುರೂಪರಾದ ಹಾಗೂ ನಿಮಗೆ ಕೊಂಚವೂ ಸಲ್ಲದ ಸ್ನೇಹಿತೆಯರನ್ನು ಆರಿಸಿಕೊಳ್ಳುವ ಬಗ್ಗೆ ಒಂದು ಕೋಷ್ಟಕವನ್ನು ತಯಾರಿಸಿದೆ. ಈ ಕೋಷ್ಟಕವನ್ನು ನೀವು ಅತ್ಯುತ್ಸುಕತೆಯಿಂದ ಪರಿಶೀಲಿಸಿ ನಿಮ್ಮ ಜನ್ಮರಾಶಿಯೊಂದಿಗೆ ತಕ್ಷಣವೇ ಹೋಲಿಸಿಕೊಂಡು ಈ ಮಾಹಿತಿ ಸರಿ ಇದೆಯೇ ಒಂದು ಒರೆಹಚ್ಚುತ್ತೀರಿ ಎಂಬ ನಂಬಿಕೆ ನಮಗಿದೆ. ಈ ಪಟ್ಟಿಯು ನಿಮಗೆ ಕೊಂಚವೂ ಸಲ್ಲದ ಸ್ನೇಹಿತೆಯರಿಂದ ಪ್ರಾರಂಭಿಸಿ ನಿಮ್ಮ ಸ್ನೇಹಕ್ಕೆ ಅತ್ಯುತ್ತಮರಾದ ವ್ಯಕ್ತಿಗಳನ್ನು ಆರಿಸುವಲ್ಲಿ ಕೊನೆಗೊಳ್ಳುತ್ತದೆ..ಮುಂದೆ ಓದಿ... 

ವೃಶ್ಚಿಕ

ವೃಶ್ಚಿಕ

ನೀವು ಮೊದಲೇ ಊಹಿಸಿದಂತೆ ವೃಶ್ಚಿಕ ರಾಶಿಯವರು ಕೊಂಚ ಅಪಾಯಕಾರಿಗಳು! ಈ ರಾಶಿಯ ಮಹಿಳೆಯರ ಬಗ್ಗೆ ಉಳಿದೆಲ್ಲಾ ರಾಶಿಯ ವ್ಯಕ್ತಿಗಳಿಗಿಂತಲೂ ಹೆಚ್ಚು ಎಚ್ಚರಿಕೆ ವಹಿಸಬೇಕು. ಈ ಮಹಿಳೆಯರ ಪ್ರಾಮಾಣಿಕತೆಯನ್ನು ಒಮ್ಮೆಲೇ ನಂಬದೇ ಬಹಳಷ್ಟು ಎಚ್ಚರಿಕೆ ಹಾಗೂ ಅನುಮಾನದ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಈ ರಾಶಿಯ ಮಹಿಳೆಯರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ ಹಾಗೂ ಪುರುಷನು ಹಿಂದೆಂದೂ ಕಂಡಿಲ್ಲದ ರೀತಿಯ ಪ್ರೀತಿಯನ್ನು ನೀಡುತ್ತಾರೆ. ಆದರೆ ಆಕೆಯ ನಿರೀಕ್ಷೆಗೆ ತಕ್ಕಂತೆ ಪುರುಷನ ಪ್ರತಿಕ್ರಿಯೆ ಇಲ್ಲದೇ ಇದ್ದರೆ ಆಕೆ ಪುರುಷನನ್ನು ಆಧೋಗತಿಗೆ ಇಳಿಸಲೂ ಹಿಂದೆಮುಂದೆ ಯೋಚಿಸಲಾರಳು. ಆದರೆ ಆಕೆಯ ನಿರೀಕ್ಷೆಯನ್ನು ನಿಜವಾಗಿಸಿದರೆ ಈ ಜಗತ್ತಿನಲ್ಲಿಯೇ ಆಕೆಯಷ್ಟು ಶ್ರೇಷ್ಠ ಪತ್ನಿ ಇನ್ನೊಬ್ಬಳಿರಲಾರಳು.

ಕನ್ಯಾ

ಕನ್ಯಾ

ಈ ಪಟ್ಟಿಯಲ್ಲಿ ಎರಡನೆಯ ಸ್ಥಾನವನ್ನು ಕನ್ಯಾರಾಶಿಯ ಮಹಿಳೆಯರು ಪಡೆಯುತ್ತಾರೆ. ಇವರೊಂದಿಗೆ ಹೊಂದಿರುವ ಸಂಬಂಧದಲ್ಲಿ ಅನಿಶ್ಚಿತತೆಯೇ ಪ್ರಮುಖ ಪಾತ್ರ ವಹಿಸುತ್ತದೆ. ಪುರುಷನು ಎಷ್ಟೇ ಪ್ರಾಮಾಣಿಕವಾಗಿ ಈ ಮಹಿಳೆಯನ್ನು ಪ್ರೀತಿಸಿದರೂ ಆಕೆ ಇದರಲ್ಲಿ ಏನಾದರೊಂದು ಕುಂದನ್ನು ಕೆದಕಿ ತೆಗೆದು ಸಂಬಂಧವನ್ನೇ ಶಿಥಿಲವಾಗಿಸುತ್ತಾಳೆ. ಅಲ್ಲದೇ ಹೊಟ್ಟೆಕಿಚ್ಚು ಮತ್ಸರ ಈ ಮಹಿಳೆಯರಲ್ಲಿ ಸುಲಭವಾಗಿ ಮನೆಮಾಡುವ ಲಕ್ಷಣಗಳಾಗಿವೆ.

ಮೇಷ

ಮೇಷ

ಈ ರಾಶಿಯ ಮಹಿಳೆಯರೊಂದಿಗಿನ ಸಂಬಂಧವನ್ನು ಕನಿಷ್ಟ ಪದಗಳಲ್ಲಿ ಬಣ್ಣಿಸುವುದಾದರೆ 'ತೀವ್ರ ಭಾವಕ್ಕೆ ಒಳಗಾಗುವ' ಎಂದು ವಿವರಿಸಬಹುದು. ಏಕೆಂದರೆ ಈ ಮಹಿಳೆಯರು ಯಾವುದೇ ವಿಷಯದಲ್ಲಿಯಾದರೂ ತಳಹದಿಯವರೆಗೆ ಕೆದಕುವ ಗುಣ ಹೊಂದಿರುತ್ತಾರೆ. ಅಲ್ಲದೇ ಇವರು ಪ್ರಾರಂಭದಲ್ಲಿಯೇ ಅತಿ ಹೆಚ್ಚನ್ನು ತಕ್ಷಣ ಬಯಸುವವರಾಗಿದ್ದು ಇದಕ್ಕಾಗಿ ಪಡಬೇಕಾದ ಶ್ರಮ ಪುರುಷನಲ್ಲಿ ಭಯ ಹುಟ್ಟಿಸಬಹುದು. ಅಲ್ಲದೇ ಒಂದು ವೇಳೆ ಆಕೆಯನ್ನು ತ್ಯಜಿಸುವ ಬಗ್ಗೆ ಕೊಂಚವೇ ಮಾಹಿತಿ ದೊರಕಿದರೂ ಆಕೆಯೇ ಮೊದಲುಗೊಂಡು ಪುರುಷನನ್ನು ಯಾವುದೇ ಮುಲಾಜಿಲ್ಲದೇ ತ್ಯಜಿಸಿಬಿಡುತ್ತಾಳೆ. ಒಂದು ವೇಳೆ ಆಕೆ ತನ್ನ ಪುರುಷನನ್ನು ತನ್ನವನೆಂದು ಒಪ್ಪಿಕೊಂಡಿದ್ದೇ ಆದಲ್ಲಿ ಪುರುಷನಿಗೆ ಈ ಜಗತ್ತೇ ಸ್ವರ್ಗದಂತೆ ಭಾಸವಾಗುವಂತೆ ಮಾಡಲು ತನ್ನ ಗರಿಷ್ಟ ಪ್ರಯತ್ನವನ್ನು ಮಾಡುತ್ತಾಳೆ.

ವೃಷಭ

ವೃಷಭ

ಈ ರಾಶಿಯ ಮಹಿಳೆಯರು ತಮ್ಮ ಸ್ವಾತಂತ್ರ್ಯದ ಬಗ್ಗೆ ಅತಿ ಹೆಚ್ಚು ಕಳಕಳಿಯುಳ್ಳವರಾಗಿದ್ದು ಇದೇ ಕಾರಣಕ್ಕೆ ಇವರ ವೈವಾಹಿಕ ಸಂಬಂಧ ಪ್ರಾರಂಭದಲ್ಲಿ ನಿಧಾನವಾಗಿ ಚಿಗುರೊಡೆಯುತ್ತದೆ. ತನ್ನ ಪುರುಷ ತನ್ನ ಪ್ರೀತಿಗೆ ನಿಜವಾಗಿಯೂ ಅರ್ಹ ಎಂದು ಕಂಡುಕೊಂಡ ಬಳಿಕವೇ ಇವರು ತಮ್ಮ ನಿಜವಾದ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಒಂದು ವೇಳೆ ಪುರುಷ ಆಕೆಯ ಹೃದಯವನ್ನು ಗೆಲ್ಲಲು ಯಶಸ್ವಿಯಾದರೆ ಆಕೆ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಆದರೆ ಪುರುಷನಿಂದ ಆಗುವ ಒಂದು ಚಿಕ್ಕ ತಪ್ಪು ಸಹಾ ಆಕೆಯ ಪ್ರೀತಿಯನ್ನು ಒಂದೇ ಕ್ಷಣದಲ್ಲಿ ಕಳೆದುಕೊಳ್ಳಲು ಕಾರಣವಾಗಬಹುದು.

ಕಟಕ

ಕಟಕ

ಈ ರಾಶಿಫಲದ ಮಹಿಳೆಯರಿಂದ ಪುರುಷನು ಸಾಕಷ್ಟು ಕಾಳಜಿ ಮತ್ತು ಪ್ರೀತಿಯನ್ನು ನಿರೀಕ್ಷಿಸಬಹುದು. ತನ್ನ ಪುರುಷನಿಗಾಗಿ ಯಾವ ತ್ಯಾಗಕ್ಕೂ ಸಿದ್ಧಳಿರುತ್ತಾಳೆ. ಆಕೆ ತನ್ನ ಪುರುಷನ ಬಗ್ಗೆ ಯಾವ ಭಾವನೆ ಹೊಂದಿದ್ದಾಳೆ ಎಂಬುದನ್ನು ಸ್ಪಷ್ಟವಾಗಿ ಹೇಳಬಲ್ಲವಳಾಗಿದ್ದರೂ ಕೆಲವೊಮ್ಮೆ ತನ್ನ ಪುರುಷನಿಂದ ಆಗುವ ಚಿಕ್ಕ ಪುಟ್ಟ ಪ್ರಮಾದಗಳನ್ನೂ ಕ್ಷಮಿಸಲಾರದ ಕಠೋರತೆಯನ್ನೂ ಹೊಂದಿರುತ್ತಾಳೆ. ಆದರೆ ಈ ಮಹಿಳೆಯರನ್ನು ಸಂಪೂರ್ಣವಾಗಿ ನಂಬಬೇಕಾದರೆ ದೀರ್ಘಕಾಲದ ಸಾಂಗತ್ಯ ಅಗತ್ಯ. ಆದರೆ ಸಂಬಂಧ ಕಳೆದುಕೊಳ್ಳಲು ಇವರಿಗೆ ಕ್ಷುಲ್ಲುಕ ಕಾರಣವೇ ಸಾಕಾಗುತ್ತದೆ. ಎಷ್ಟೋ ಬಾರಿ ಇವರ ಚರ್ಯೆಗಳು ಗೊಂದಲ ಮೂಡಿಸಿದರೂ ಇದರ ಕಾರಣಗಳು ಸರಿಯೆಂದು ಕಾಲಕ್ರಮೇಣ ಗೊತ್ತಾಗುತ್ತದೆ. ಯಾವಾಗ ಪುರುಷ ತನ್ನ ಬದ್ಧತೆಯನ್ನು ಪ್ರಕಟಿಸುತ್ತಾನೋ ಆ ಬಳಿಕ ತನ್ನ ಪುರುಷನ ಹೃದಯ ಒಡೆಯದಂತೆ ನೋಡಿಕೊಳ್ಳಲು ಆಕೆ ತನ್ನೆಲ್ಲಾ ಪ್ರಯತ್ನ ನಡೆಸುತ್ತಾಳೆ.

ಸಿಂಹ

ಸಿಂಹ

ಒಂದು ವೇಳೆ ಪುರುಷ ಪ್ರೇಮಪ್ರಕರಣದಲ್ಲಿ ಹೆಚ್ಚು ಉತ್ಸುಕನಾಗಿದ್ದರೆ ಈ ರಾಶಿಯ ಮಹಿಳೆಯರನ್ನು ಆಯ್ದುಕೊಳ್ಳುವುದು ಒಳಿತು. ಈ ಮಹಿಳೆಯರೊಂದಿಗಿನ ಸಂಬಂಧದಲ್ಲಿ ಮೋಡಿ ಹಾಗೂ ಒಂದು ರೀತಿಯ ಅಮಲು ಆವರಿಸುತ್ತದೆ. ಈ ರಾಶಿಯ ಮಹಿಳೆಯರನ್ನು ಒಲಿಸಿಕೊಳ್ಳುವುದು ಹೆಚ್ಚು ಕಷ್ಟಕರವಲ್ಲದಿದ್ದರೂ ವಿವಾಹದ ಬಳಿಕ ಆಕೆಗೆ ಬೇಕಾದುದನ್ನು ಪಡೆಯಲು ತನ್ನ ಪುರುಷನೊಂದಿಗೆ ಜಗಳ ಕಾಯಲೂ ಹಿಂಜರಿಯುವುದಿಲ್ಲ. ಈ ಮಹಿಳೆಯರು ಸಾಮಾನ್ಯವಾಗಿ ತಮ್ಮ ಅಭೀಷ್ಠೆಗಳನ್ನು ಈಡೇರಿಸಲು ಒಬ್ಬರಿಗಿಂತ ಹೆಚ್ಚು ಪುರುಷರನ್ನು ಆಯ್ಕೆಯ ಪಟ್ಟಿಯಲ್ಲಿರಿಸಿ ತುಲನೆ ಮಾಡುವ ವ್ಯಕ್ತಿತ್ವ ಹೊಂದಿರುತ್ತಾರೆ.

ಕುಂಭ

ಕುಂಭ

ಈ ರಾಶಿಯ ಮಹಿಳೆಯರು ಸ್ನೇಹಿತೆಯರಾಗಲು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಇವರು ನಂಬಲರ್ಹ ಮತ್ತು ನಂಬಲನರ್ಹ ವ್ಯಕ್ತಿಗಳಲ್ಲಿ ನಟ್ಟ ನಡುವೆ ಇರುತ್ತಾರೆ. ಅಂದರೆ ಸಂಬಂಧದ ವಿಷಯ ಬಂದಾಗ ಇವರು ಅತಿ ಹೆಚ್ಚು ಬದ್ದತೆ ವ್ಯಕ್ತಪಡಿಸುವವರಾಗಿದ್ದು ಇದೇ ವೇಳೆ ಇವರು ತಮ್ಮ ವ್ಯಕ್ತಿತ್ವವನ್ನು ಅತಿ ಗಂಭೀರವಾಗಿ ಪರಿಗಣಿಸುವವರೂ ಆಗಿರುತ್ತಾರೆ. ಈ ಮಹಿಳೆಯರು ಸ್ವತಂತ್ರ ಮನೋಭಾವದವರಾಗಿದ್ದು ಕೊಂಚ ವಿಲಕ್ಷಣ ಸ್ವಭಾವದವರಂತೆ ಕಾಣಿಸಿಕೊಳ್ಳುತ್ತಾರೆ. ಏಕೆಂದರೆ ಇವರ ಮನೋಭಾವ ಮತ್ತು ಯೋಚನಾಲಹರಿಯನ್ನು ಉಳಿದವರು ತಕ್ಷಣಕ್ಕೆ ಅರಿತುಕೊಳ್ಳಲು ವಿಫಲರಾಗುತ್ತಾರೆ. ಆದರೆ ಯಾವಾಗ ಇವರ ಯೋಚನಾಲಹರಿ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೋ ಆಗ ಈ ಮಹಿಳೆಯರು ತಮ್ಮ ಭಾವನೆಗಳನ್ನು ಸಿದ್ಧಪಡಿಸಲು ಹೆಚ್ಚು ಉತ್ಸುಕತೆ ತೋರುತ್ತಾರೆ.

ಮಿಥುನ

ಮಿಥುನ

ಈ ರಾಶಿಯ ಮಹಿಳೆಯರು ಧನಾತ್ಮಕ ಹಾಗೂ ಋಣಾತ್ಮಕ ಚಿಂತನೆಗಳ ಸಂತುಲಿತ ಮನೋಭಾವ ಪಡೆದಿರುತ್ತಾರೆ. ಇವರು ತಮಾಷೆ, ಉದ್ವೇಗ ಹಾಗೂ ಉಲ್ಲಾಸವನ್ನು ಹೆಚ್ಚು ಇಷ್ಟಪಡುವವರಾಗಿದ್ದರೂ ಜೀವನದಲ್ಲಿ ಮುನ್ನಡೆಯಲು ಕೊಂಚ ಹೆಚ್ಚೇ ಕಷ್ಟಪಡುವವರಾಗಿರುತ್ತಾರೆ. ಹೆಚ್ಚಿನ ಸಮಯದಲ್ಲಿ ಈ ಮಹಿಳೆಯರು ವಿನೋದವನ್ನು ಇಷ್ಟಪಡುವ, ಸಾಹ ಪ್ರವೃತ್ತಿಯ ಮತ್ತು ಎಲ್ಲರೊಂದಿಗೂ ಸುಲಭವಾಗಿ ಬೆರೆಯುವ ಮನೋಭಾವವುಳ್ಳವರಾಗಿರುತ್ತಾರೆ. ಆದರೆ ಈ ಮಹಿಳೆಯರ ಜೀವನದ ಇತಿಹಾಸದಲ್ಲಿ ಕರಾಳತೆಯೂ ಇದ್ದು ಸೂಕ್ತ ಸಂದರ್ಭದಲ್ಲಿ ಮಾತ್ರವೇ ಪ್ರಕಟಿಸುತ್ತಾರೆ.

ತುಲಾ

ತುಲಾ

ಈ ರಾಶಿಯ ಮಹಿಳೆಯರೊಂದಿಗೆ ಸ್ನೇಹ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲಾ ರಾಶಿಗಳಲ್ಲಿ ಈ ರಾಶಿಯ ಮಹಿಳೆಯರೇ ಅಪ್ಪಟ ಸ್ನೇಹಕ್ಕೆ ಅರ್ಹರಾದ ವ್ಯಕ್ತಿಗಳಾಗಿರುತ್ತಾರೆ. ಈ ಮಹಿಳೆಯರು ಎಲ್ಲಾ ಕಾಲಕ್ಕೂ ಧನಾತ್ಮಕ ಧೋರಣೆಯನ್ನು ವ್ಯಕ್ತಪಡಿಸುವವರಾಗಿದ್ದು ಇವರು ತಮ್ಮ ಸುತ್ತಮುತ್ತಲಿರುವ ವ್ಯಕ್ತಿಗಳು ಸದಾ ಸಂತೋಷವಾಗಿಯೇ ಇರಬೇಕೆಂದು ಬಯಸುತ್ತಾರೆ. ವ್ಯತಿರಿಕ್ತವಾಗಿ ಇವರು ಚಿಕ್ಕ ವಿಷಯಕ್ಕೂ ಅತಿ ಸುಲಭವಾಗಿ ನೋವು ಅನುಭವಿಸುತ್ತಾರೆ. ಇವರು ತಮ್ಮ ಆಪ್ತರೊಂದಿಗೆ ಎಂದಿಗೂ ವಿರಸ, ಭಿನ್ನಾಭಿಪ್ರಾಯಗಳನ್ನು ಹೊಂದಬಯಸುವುದಿಲ್ಲ. ಒಂದು ವೇಳೆ ಪುರುಷರಲ್ಲಿ ಹೊಟ್ಟೆಕಿಚ್ಚಿನ ಭಾವನೆ ಇದ್ದರೆ ಈ ಮಹಿಳೆಯರು ತದ್ವಿರುದ್ಧವಾಗಿ ಸಾಮಾಜಿಕ ಹಾಗೂ ವರ್ಚಸ್ಸಿನಿಂದ ಕೂಡಿದವರಾಗಿರುತ್ತಾರೆ.

ಮಕರ

ಮಕರ

ಈ ರಾಶಿಯ ಮಹಿಳೆಯರು ಯಾವುದೇ ವಿಷಯದಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲು ತಮ್ಮ ಗರಿಷ್ಟ ಪ್ರಯತ್ನವನ್ನು ನಡೆಸುತ್ತಾರೆ. ಸಂಬಂಧದ ವಿಷಯ ಬಂದಾಗ ಇವರು ಬದ್ಧತೆಗೆ ತಮ್ಮ 100% ವಿಶ್ವಾಸವನ್ನು ಸಮರ್ಪಿಸುತ್ತಾರೆ. ಈ ಮಹಿಳೆಯರಿಗೆ ಎಷ್ಟೇ ಕಷ್ಟ ಎದುರಾದರೂ ದಿಟ್ಟತನದಿಂದ ಹೋರಾಡುವ ಎದೆಗಾರಿಕೆಯಿಂದ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುತ್ತಾಳೆ. ಈ ವ್ಯಕ್ತಿತ್ವವೇ ಸಂಬಂಧವನ್ನು ಅತ್ಯಂತ ಸುಂದರವಾಗಿಸಿ ಆಕೆ ಇಲ್ಲದಿದ್ದರೆ ಜೀವನವೇ ಬರಡಾಗುವಂತೆ ಮಾಡುತ್ತದೆ.

ಮೀನ

ಮೀನ

ಈ ರಾಶಿಯ ಮಹಿಳೆಯರು ಪ್ರಾರಂಭದಲ್ಲಿ ಅತಿ ಹೆಚ್ಚಿನ ಸಂಕೋಚವನ್ನು ವ್ಯಕ್ತಪಡಿಸಿದರೂ ಕ್ರಮೇಣ ಇವರು ತಮ್ಮ ತಾಳ್ಮೆ ಹಾಗೂ ಶ್ರದ್ದೆಗಳಿಂದ ಜಗತ್ತಿನ ಉತ್ತಮ ವ್ಯಕ್ತಿಗಳೆಂದು ಪ್ರಮಾಣಿಸಿ ತೋರಿಸುತ್ತಾರೆ. ಈ ಮಹಿಳೆಯರು ಅತಿ ಹೆಚ್ಚು ನಂಬಲರ್ಹ ವ್ಯಕ್ತಿಗಳಾಗಿದ್ದು ಪುರುಷ ತನ್ನ ಹೃದಯದಾಳದ ಮಾತುಗಳನ್ನು ಇವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದು. ಆದರೆ ಈ ಮಹಿಳೆಯರು ಅತಿ ಸೂಕ್ಷ್ಮಪ್ರವೃತ್ತಿಯವರಾಗಿದ್ದು ವಾಕ್ಯಗಳಲ್ಲಿ ಪ್ರಯೋಗಿಸುವ ಒಂದು ಚಿಕ್ಕ ಪದವೂ ಇವರ ನಂಬಿಕೆಯನ್ನು ಅಲ್ಲಾಡಿಸಬಹುದು.

ಧನು

ಧನು

ಈ ರಾಶಿಯ ಮಹಿಳೆಯರು ಸಾಮಾನ್ಯವಾಗಿ ಸುಲಭವಾಗಿ ಸೋಲದ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರ ಹೃದಯವನ್ನು ಗೆಲ್ಲಲು ಸಾಧ್ಯವಾದರೆ ಮಾತ್ರ ಆಕೆಯ ಹೃದಯ ವಲಯದ ಆಪ್ತ ವ್ಯಕ್ತಿಗಳಲ್ಲಿ ಒಬ್ಬರಾಗಲು ಸಾಧ್ಯ. ಯಾವಾಗ ಇದು ಸಾಧ್ಯವಾಯಿತೋ ಆ ಬಳಿಕ ತನ್ನ ಪುರುಷನನ್ನು ಅತ್ಯಂತ ಯಶಸ್ವಿ ಪುರುಷನನ್ನಾಗಿಸಲು ಆಕೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಾಳೆ. ಇದೇ ಕಾರಣಕ್ಕೆ ಈ ರಾಶಿಯ ಮಹಿಳೆಯರು ಸ್ನೇಹಿತೆಯರಾಗಲು ಅತ್ಯಂತ ಸೂಕ್ತ ವ್ಯಕ್ತಿಗಳಾಗಿದ್ದಾರೆ. ಇವರು ನಿಃಸ್ವಾರ್ಥಿ ಹಾಗೂ ದಯಾಳುಗಳೂ ಆಗಿರುತ್ತಾರೆ. ಈ ಮಹಿಳೆಯರಿಗೆ ತನ್ನ ಕುಟುಂಬದ ವ್ಯಕ್ತಿಗಳ ಬೇಕು ಬೇಡಗಳು ತನ್ನ ಆದ್ಯತೆಗಿಂದಲೂ ಹೆಚ್ಚಾಗಿದ್ದು ಮನೆಯವರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.

English summary

The Best Girlfriends According To Zodiac Signs

We at Boldsky have jotted down the list of the best and worst girlfriends based on zodiac signs. We bet, the list is something that you would check out of curiosity to find out where your girl stands or even to find out about where exactly you stand! Check out the list, as we start the list with the worst zodiac based girlfriend. The list starts from the worst to best. Read on.
Subscribe Newsletter