ಸಾಕ್ಷಾತ್ ಬಾಲಾಜಿ ಮಹಿಮೆ: ವೀಸಾ ಕೊಡಿಸುವ 'ವೀಸಾ ಬಾಲಾಜಿ ಮಂದಿರ'

By: Hemanth
Subscribe to Boldsky

ವಿದೇಶಕ್ಕೆ ಹೋಗಬೇಕು, ಅಲ್ಲಿ ಸುತ್ತಾಡಿಕೊಂಡು ಬರಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಹೆಚ್ಚಿನವರು ಸಣ್ಣ ಸಣ್ಣ ದೇಶಗಳಿಗೆ ಸುತ್ತಾಡಲು ಹೋಗುವುದನ್ನು ಇಷ್ಟಪಡುತ್ತಾರೆ. ಇಲ್ಲಿ ಖರ್ಚು ಕೂಡ ಕಡಿಮೆ ಇರುವುದು ಮತ್ತು ವೀಸಾ ಕೂಡ ಬೇಗನೆ ಲಭ್ಯವಾಗುವುದು. ಆದರೆ ಕೆಲವರಿಗೆ ಒಳ್ಳೆಯ ಪ್ರವಾಸಿ ತಾಣಗಳು ಇರುವ ದೇಶಗಳಿಗೆ ಸುತ್ತಾಡಲು ಹೋಗಬೇಕೆಂಬ ಆಸೆ ಇರುವುದು. ಆದರೆ ಇಂತಹ ದೇಶಗಳಿಗೆ ಹೋಗಲು ಅಷ್ಟು ಸುಲಭವಾಗಿ ವೀಸಾ ಸಿಗುವುದಿಲ್ಲ. ಕೆಲಸಕ್ಕಾಗಿಯೂ ಇಂತಹ ದೇಶಗಳಿಗೆ ಹೋಗುವುದು ತುಂಬಾ ಕಠಿಣ.

ವೀಸಾ ಪಡೆಯಲು ತುಂಬ ಕಷ್ಟಪಡಬೇಕಾಗುತ್ತದೆ. ಆದರೆ ಕೆಲವು ಭಾರತೀಯ ಮಂದಿರಗಳಲ್ಲಿ ವೀಸಾ ಪಡೆಯಲೆಂದು ಪ್ರಾರ್ಥನೆ ಮಾಡಲಾಗುತ್ತದೆ. ಇಂತಹ ಮಂದಿರಗಳಲ್ಲಿ ಪ್ರಾರ್ಥನೆ ಮಾಡಿದರೆ ವೀಸಾ ಬೇಗನೆ ಸಿಗುವುದು ಎನ್ನುವ ನಂಬಿಕೆಯಿದೆ. ಹೈದ್ರಾಬಾದ್‍ನ ಹೊರವಲಯದಲ್ಲಿರುವ ಚಿಲ್ಕೂರಿನ ಉಸ್ಮಾನ್ ಸಾಗರದ ತೀರದಲ್ಲಿ ನೆಲೆಸಿರುವ 'ವೀಸಾ ಬಾಲಾಜಿ ಮಂದಿರ'ವು ಇದರಲ್ಲಿ ಒಂದಾಗಿದೆ. ಇದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಮತ್ತಷ್ಟು ಮಾಹಿತಿಯನ್ನು ನೀಡಲಿದೆ....

ದೇವಸ್ಥಾನದ ಬಗ್ಗೆ

ದೇವಸ್ಥಾನದ ಬಗ್ಗೆ

ಈ ಪ್ರಸಿದ್ಧ ಮಂದಿರದಲ್ಲಿ ವೆಂಕಟೇಶ್ವರ ದೇವರು ಪ್ರಮುಖವಾಗಿ ಪೂಜಿಸಲ್ಪಡುತ್ತಾರೆ. ಇವರನ್ನು ವೀಸಾ ಒದಗಿಸುವ ಬಾಲಾಜಿ ಎಂದು ಕರೆಯಲಾಗುತ್ತದೆ. ಈ ಮಂದಿರವು ಒಸ್ಮಾನ್ ಸಾಗರ ಸರೋವರದ ಸಮೀಪದಲ್ಲಿದೆ.

ಮಂದಿರದ ಇತಿಹಾಸ

ಮಂದಿರದ ಇತಿಹಾಸ

1980ರಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಚೆನ್ನೈಯಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿಯಲ್ಲಿ ವೀಸಾ ಸಿಗುತ್ತಾ ಇರಲಿಲ್ಲ. ಇವರೆಲ್ಲರೂ ಜತೆಯಾಗಿ ಬಂದು ಬಾಲಾಜಿಯಲ್ಲಿ ವೀಸಾಕ್ಕಾಗಿ ಪ್ರಾರ್ಥಿಸಿದರು.

ವೀಸಾ ಸಿಕ್ಕೇ ಬಿಟ್ಟಿತು!

ವೀಸಾ ಸಿಕ್ಕೇ ಬಿಟ್ಟಿತು!

ಅವರ ಅದೃಷ್ಟದಂತೆ ಪ್ರಾರ್ಥನೆಯು ಫಲಿಸಿತು. ಅಂದಿನಿಂದ ಅಮೆರಿಕಾ ವೀಸಾ ಪಡೆಯಲು ಈ ಮಂದಿರದಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಇಲ್ಲಿ ಪ್ರಾರ್ಥನೆ ಮಾಡಿದರೆ ವೀಸಾ ಕಾರ್ಯಗಳು ಸರಾಗವಾಗಿ ಆಗುತ್ತದೆ ಎಂದು ನಂಬಲಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?

ವೀಸಾ ಬಯಸುವವರಿಗೆ ಇಲ್ಲಿ ಬಾಲಾಜಿಯ ಆಶೀರ್ವಾದವಿದೆ. ವೀಸಾಕ್ಕಾಗಿ ಸಂದರ್ಶನ ನೀಡಲು ಹೋಗುವಂತಹ ಪ್ರತಿಯೊಬ್ಬರು ಚಿಲ್ಕೂರು ವೀಸಾ ಬಾಲಾಜಿ ಮಂದಿರಕ್ಕೆ ಭೇಟಿ ನೀಡಿಯೇ ಮುಂದೆ ಹೋಗುವುದು.

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?

ವೀಸಾ ಪ್ರಾರ್ಥನೆಯೊಂದಿಗೆ ಮಂದಿರಕ್ಕೆ ಬರುವ ಭಕ್ತರು ಮೂರು ಸುತ್ತು ಪ್ರದಕ್ಷಿಣೆ ಹಾಕಬೇಕು. ವೀಸಾ ಪಡೆದ ಬಳಿಕ 108 ಸುತ್ತು ಪ್ರದಕ್ಷಿಣೆ ಹಾಕುವುದಾಗಿ ಪ್ರಾರ್ಥಿಸಿಕೊಳ್ಳಬೇಕು. ಇದು ವೀಸಾ ದೇವರಲ್ಲಿ ಪ್ರಾರ್ಥಿಸುವ ವಿಧಾನ.

ಹಣ ಬೇಕಿಲ್ಲ

ಹಣ ಬೇಕಿಲ್ಲ

ಈ ಮಂದಿರಕ್ಕೆ ಭೇಟಿ ನೀಡಲು ಹೆಚ್ಚು ಸಮಸ್ಯೆಯಿಲ್ಲ. ಇಲ್ಲಿ ಪ್ರತಿಯೊಂದು ಉಚಿತವಾಗಿದೆ ಮತ್ತು ಯಾವುದೇ ರೂಪದಲ್ಲಿ ಹಣ ಸ್ವೀಕರಿಸದೆ ಇರಲು ಮಂದಿರವು ಕಟು ನಿಯಮ ಪಾಲಿಸಿದೆ. ಈ ಮಂದಿರವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬೆಳೆಯುತ್ತಾ ಇದೆ.

English summary

Temple Where People Pray To Get Visa Clearance

Going abroad is a dream for many, but most of the time, the dream remains a dream, as most people face hurdles of not getting their Visa approvals on time. But if you are an Indian, then fret not my friend, we do have special temples for you and offering prayers in one of these temples will surely help you get through the Visa clearance. So, what are you waiting for?
Subscribe Newsletter