For Quick Alerts
ALLOW NOTIFICATIONS  
For Daily Alerts

  ಈ ದೇವಸ್ಥಾನಗಳಲ್ಲಿ ಪೂಜೆ ಮಾಡುವುದು ಇಲಿ, ಮಂಗ ಮತ್ತು ನಾಯಿಗಳಿಗೆ!

  By Divya Pandith
  |

  ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವು ಅದ್ಭುತ ಆಚರಣೆಗಳು ಮತ್ತು ಅತ್ಯಾಕರ್ಷಕ ಅಭ್ಯಾಸಗಳಿಂದ ತುಂಬಿದೆ. ಭಾರತ ಹಿಂದೂ ಪ್ರಾಬಲ್ಯದ ದೇಶ. ದೇವಾಲಯಗಳು ಹಿಂದೂ ಧರ್ಮದ ಪೂಜಾ ಕೇಂದ್ರ. ಭಾರತದ ಪ್ರತಿಯೊಂದು ಭಾಗಕ್ಕೂ ಸಾವಿರಾರು ದೇವಾಲಯಗಳನ್ನು ಕಾಣಬಹುದು. ಹಿಂದೂ ಪುರಾಣಗಳ ಪ್ರಕಾರ 33 ಮಿಲಿಯನ್ ದೇವರು ಮತ್ತು ದೇವತೆ ಇದ್ದಾರೆ.

  ನಮ್ಮ ಕಲ್ಪನೆಗೂ ಸಿಗದ ವಿಶಿಷ್ಟ ಪೂಜಾ ಪದ್ಧತಿ ಹಾಗೂ ದೇವರುಗಳಿರುವುದು ಗಮನಾರ್ಹ. ಅಂತಹ ಅದ್ಭುತ ಭಾವನೆಯನ್ನು ಮೂಡಿಸಬಲ್ಲ ಸುಮಾರು 15 ದೇವಾಲಯಗಳು ಭಾರತದಲ್ಲಿದೆ. ಆ ದೇವಾಲಯಗಳನ್ನು ಒಮ್ಮೆಯಾದರೂ ನೀವು ನೋಡಲೇ ಬೇಕು. ಅಂತಹ ಅದ್ಭುತ ದೇಗುಲಗಳ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇವೆ...

  ಇಲಿ ದೇವಾಲಯ ಅಥವಾ ಕರ್ಣಿ ಮಾತಾ ದೇವಾಲಯ

  ಇಲಿ ದೇವಾಲಯ ಅಥವಾ ಕರ್ಣಿ ಮಾತಾ ದೇವಾಲಯ

  ರಾಜಸ್ಥಾನದ ಬಿಕಾರ್ನೆ ಇಂದ 30 ಕಿ.ಮೀ ದೂರದಲ್ಲಿ ದೇಶ್ನೋಕ್ ನಲ್ಲಿ ಕರ್ಣಿ ಮಾತಾ ದೇವಸ್ಥಾನವಿದೆ. ಇದನ್ನು ಇಲಿ ದೇವಾಲಯ ಎಂದು ಪರಿಗಣಿಸಲಾಗುತ್ತದೆ. ಕರ್ನಿ ಮಾತಾ ದೇವಸ್ಥಾನವು ಸುಮಾರು 20000 ಇಲಿಗಳಿಗೆ ಹೆಸರು ವಾಸಿಯಾಗಿದೆ. ಇಲ್ಲಿ ಮಾನವರ ಜೊತೆಯಲ್ಲಿ ಇಲಿಗಳು ಇರುತ್ತವೆ. ಆದರೆ ಇಲ್ಲಿಯವರೆಗೆ ಇಲಿಯಿಂದ ಬರುವ ಪ್ಲೇಗ್ ಸೇರಿದಂತೆ ಯಾವುದೇ ಬಗೆಯ ರೋಗ ಬಂದಿಲ್ಲ ಎನ್ನಲಾಗುತ್ತದೆ. ಇಲಿಯನ್ನು ಸಾಮಾನ್ಯವಾಗಿ ಗಣೇಶನ ವಾಹನವೆಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲಿ ಕರ್ನಿ ಮಾತಾ ದೇವಸ್ಥಾನದಲ್ಲಿ ಇಲಿಯನ್ನು ಕಬ್ಬಸ್ ಎಂದು ಕರೆಯಲಾಗುತ್ತದೆ. ಕರ್ನಿ ಮಾತಾ ಪುನರ್ಜನ್ಮವೆಂದು ನಂಬಲಾಗಿದೆ. ಸ್ಥಳೀಯ ಜನರು ಸಹ ತಮ್ಮ ಮರಣದ ನಂತರ ಈ ದೇವಾಲಯದ ಇಲಿಗಳಲ್ಲಿ ಒಂದಾಗಿ ಮರುಜನ್ಮವನ್ನು ಪಡೆಯುತ್ತಾರೆ ಎಂದು ನಂಬುತ್ತಾರೆ. ಇಲ್ಲಿ ಕೆ.ಜಿ ಗಟ್ಟಲೆ ಪ್ರಸಾದವನ್ನು ನೈವೇದ್ಯವನ್ನಾಗಿ ಇಡುತ್ತಾರೆ. ಪ್ರಸಾದದಲ್ಲಿ ಇಲಿ ಮತ್ತು ಮನುಷ್ಯರಿಗೆ ಸಮ ಪಾಲು. ಇಬ್ಬರೂ ಪ್ರಸಾದವನ್ನು ಒಟ್ಟಿಗೆ ಸ್ವೀಕರಿಸುತ್ತಾರೆ.

  ಕಪಿಗಳ ದೇವಾಲಯ ಅಥವಾ ಗಾಲ್ತಾಜಿ ದೇವಸ್ಥಾನ

  ಕಪಿಗಳ ದೇವಾಲಯ ಅಥವಾ ಗಾಲ್ತಾಜಿ ದೇವಸ್ಥಾನ

  ಹಿಂದೂ ಸಂಸ್ಕೃತಿಯಲ್ಲಿ ಪುನರ್ ಜನ್ಮದ ಬಗ್ಗೆ ಆಳವಾದ ನಂಬಿಕೆ ಮತ್ತು ವಿಶ್ವಾಸವಿದೆ. ಹಾಗೆಯೇ ಪ್ರಾಣಿ ಮತ್ತು ಮಾನವರ ನಡುವೆ ನಿಕಟವಾದ ಸಂಬಂಧವಿದೆ ಎನ್ನುವುದನ್ನು ನಾವು ಕಾಣಬಹುದು. ರಾಮ ರಾವಣನ ವಿರುದ್ಧ ಹೋರಾಡುವಾಗ ಕಪಿಗಳೇ ಸಹಾಯ ಮಾಡಿದವು. ಹಾಗಾಗಿಯೇ ಹನುಮಂತ ಮತ್ತು ಕಪಿಗಳಿಗೆ ಹಿಂದೂ ಧರ್ಮದಲ್ಲಿ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಈ ಉದ್ದೇಶದಿಂದಲೇ ಭಾರತದಾದ್ಯಂತ ಹನುಮಂತನ ದೇಗುಲ ಇರುವುದನ್ನು ಕಾಣಬಹುದು. ಅದೇ ರೀತಿ ಜೈಪುರದಲ್ಲಿ ಒಂದು ದೇವಾಲಯವಿದೆ. ಅದು ಮಂಗಗಳಿಗೆ ಅಥವಾ ಕಪಿಗಳಿಗೆ ಮೀಸಲಾಗಿದೆ. ಗುಲ್ತಾಜಿ ದೇವಸ್ಥಾನವು ಜೈಪುರದಿಂದ 10 ಕಿ.ಮೀ. ದೂರದಲ್ಲಿದೆ. ಇಲ್ಲಿ ವಿಶೇಷವಾದ ಮ್ಯಾಕಕ್ಯೂಸ್ ಕಪಿಗಳಿವೆ. ಅವು ನೂರಾರು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ ಎನ್ನಲಾಗುತ್ತದೆ. ಇಲ್ಲಿ ಅನೇಕ ಭಕ್ತರು ಹಾಗೂ ಪ್ರವಾಸಿಗರು ಪ್ರಾರ್ಥನೆ ಸಲ್ಲಿಸುತ್ತಾರೆ.

  ನಾಯಿಗಳ ದೇವಾಲಯ

  ನಾಯಿಗಳ ದೇವಾಲಯ

  ಕರ್ನಾಟಕದ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲ್ಲೂಕಿನಲ್ಲಿ ನಾಯಿಗಳಿಗೆ ಅರ್ಪಿತವಾದ ದೇವಾಲಯವಿದೆ. ಹಳ್ಳಿಯ ಪ್ರಕಾರ, ನಾಯಿ ಮನುಷ್ಯರ ಜೊತೆ ವಾಸಿಸುತ್ತಿದ್ದ ಮೊದಲ ಪ್ರಾಣಿಯಾಗಿದೆ. ನಾಯಿಯನ್ನು ಆರಾಧಿಸುತ್ತಿದ್ದರೆ ತಮ್ಮ ಹಳ್ಳಿಯಲ್ಲಿ ತಪ್ಪು ಸಂಭವಿಸುವುದಿಲ್ಲ ಎಂದು ಅವರು ನಂಬುತ್ತಾರೆ. ದೇವಾಲಯವನ್ನು ಗ್ರಾಮದ ದೇವತೆಗೆ ಹತ್ತಿರ ನಿರ್ಮಿಸಲಾಗಿದೆ. ಇದು ಎರಡು ನಾಯಿಗಳ ವಿಗ್ರಹಗಳನ್ನು ಹೊಂದಿದೆ.

  ಬುಲೆಟ್ ಬಾಬಾ ದೇವಸ್ಥಾನ

  ಬುಲೆಟ್ ಬಾಬಾ ದೇವಸ್ಥಾನ

  "ಹಾತಿ ಮೇರೆ ಸಾಥಿ" ಮತ್ತು "ಟೆರಿ ಮೆಹೆರ್ಬನಿಯನ್" ನಂತಹ ಚಲನಚಿತ್ರಗಳಲ್ಲಿ ಮಾಲೀಕರಿಗೆ ಪ್ರಾಣಿಗಳ ಬಗ್ಗೆ ಪ್ರೀತಿ ಇರುವುದನ್ನು ನೀವು ನೋಡಿದ್ದೀರಿ. ಹಾಗೆಯೇ ಜೋಧಪುರದ ಪಾಲಿ ಜಿಲ್ಲೆಯಲ್ಲಿ ಒಂದು ಮೋಟರ್ ಬೈಕು ತನ್ನ ಮಾಲೀಕರಿಗೆ ಪ್ರೀತಿಯಿಂದ ಪ್ರಸಿದ್ಧವಾಗಿದೆ. ಪಾಲಿ ಜಿಲ್ಲೆಯ ಬುಲೆಟ್ ಬಾಬಾ ಮಂದಿರದಲ್ಲಿ ಪ್ರತಿ ದಿನ ನೂರಾರು ಭಕ್ತರು ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸುತ್ತಾರೆ. ಈ ದೇವಸ್ಥಾನದ ಹಿಂದೆ ಒಂದು ಕಥೆ ಇದೆ. "ಓಂ ಬನ್ನಾ (ಬುಲೆಟ್ ಮಾಲೀಕ ಮೋಟರ್ ಸೈಕಲ್ ನಿಂದ ತನ್ನ ನಿಯಂತ್ರಣವನ್ನು ಕಳೆದುಕೊಂಡು, ರಸ್ತೆ ಬದಿಯಲ್ಲಿರುವ ಒಂದು ಮರಕ್ಕೆ ಡಿಕ್ಕಿ ಹೊಡೆದುಕೊಂಡರು. ಆ ಆಘಾತದದಿಂದ ಸ್ಥಳದಲ್ಲೇ ಮೃತರಾದರು. ಆ ಸ್ಥಳದಲ್ಲಿ ಬಿದ್ದ ಬೈಕ್ ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಇಟ್ಟಿದ್ದರು. ಮರುದಿನ ನೋಡವಷ್ಟರಲ್ಲಿ ಪುನಃ ಬೈಕ್ ಆ ಸ್ಥಳದಲ್ಲಿ ಬಿದ್ದಿತ್ತು. ಅದನ್ನು ಕಂಡ ಪೊಲೀಸರು ಅದರಲ್ಲಿರುವ ಪೆಟ್ರೋಲ್ಅನ್ನು ತೆಗೆದು, ಸರಪಳಿಯಲ್ಲಿ ಕಟ್ಟಿ, ಠಾಣೆಯಲ್ಲಿ ಇಟ್ಟಿದ್ದರು. ಆದರೂ ಮತ್ತೆ ಅದೇ ಸ್ಥಳದಲ್ಲಿ ಬಿದ್ದಿತ್ತು. ನಂತರ ಆ ಸ್ಥಳದಲ್ಲಿ ದೇಗುಲವನ್ನು ನಿರ್ಮಿಸಿದರು. ಓಮ್ ಬನ್ನಾ ಎನ್ನುವವರ ಆತ್ಮವು ಇಲ್ಲಿ ಸಂಚರಿಸುವವರನ್ನು ಕಾಪಾಡುತ್ತದೆ ಎನ್ನವ ನಂಬಿಕೆಯನ್ನು ಹೊಂದಿದ್ದಾರೆ ಎನ್ನಲಾಗುವುದು.

  ಈ ಊರಿನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕೇ ದೇವರು!

  ಪಂಜಾಬ್‌ನಲ್ಲಿ ಏರೋ ಪ್ಲೇನ್ ದೇವಾಲಯ

  ಪಂಜಾಬ್‌ನಲ್ಲಿ ಏರೋ ಪ್ಲೇನ್ ದೇವಾಲಯ

  ಪಂಜಾಬ್‌ ಜಲಂಧರ್ ಜಿಲ್ಲೆಯು ಏರೊ ಪ್ಲೇನ್ ವಿಶೇಷ ಕೊಡುಗೆಗಾಗಿ ಪ್ರಸಿದ್ಧವಾಗಿದೆ. ಗುರುದ್ವಾರವನ್ನು ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರದಿಂದ ಕರೆಯಲಾಗುತ್ತದೆ. ಆದರೆ ಸ್ಥಳೀಯರು ಅದನ್ನು "ಹವಾಯಿ ಜಾಹಸ್ ಗುರುದ್ವಾರ" ಅಥವಾ "ಏರ್ಪ್ಲೇನ್ ಗುರುದ್ವಾರಾ" ಎಂದು ಉಲ್ಲೇಖಿಸುತ್ತಾರೆ. ಇಲ್ಲಿ ಪ್ರಾರ್ಥನೆ ಮಾಡಿಕೊಂಡರೆ ವಿದೇಶಕ್ಕೆ ಹೋಗುವ ಯೋಗ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಇಲ್ಲಿಗೆ ಭೇಟಿ ನೀಡುವ ಜನರು ಹತ್ತಿರದ ಅಂಗಡಿಗಳಿಂದ ವಿಮಾನ ಆಟಿಕೆಗಳನ್ನು ಖರೀದಿಸುತ್ತಾರೆ ಮತ್ತು ದೇವಸ್ಥಾನಕ್ಕೆ ನೀಡುತ್ತಾರೆ.

  ಸಚಿನ್ ತೆಂಡೂಲ್ಕರ್ ದೇವಸ್ಥಾನ!

  ಸಚಿನ್ ತೆಂಡೂಲ್ಕರ್ ದೇವಸ್ಥಾನ!

  ಭಾರತದ ಕ್ರಿಕೆಟ್ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಅವರ ಕೊಡುಗೆ ಸ್ಮರಣೀಯವಾದದ್ದು. ಅದನ್ನು ಯಾರೂ ನಿರಾಕರಿಸುವಂತಿಲ್ಲ. ವಿವಿಧ ಕ್ರಿಕೆಟ್ ತಜ್ಞರು ಸಚಿನ್ ಅವರನ್ನು ಕ್ರಿಕೆಟ್ ದೇವರು ಎಂದು ಪರಿಗಣಿಸುತ್ತಾರೆ. ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ನಿರ್ಮಿಸಲಾದ ದೇವಾಲಯವಿದೆ. ದೇವಸ್ಥಾನದೊಳಗೆ ಭಾರತದಲ್ಲಿ 2011 ರಲ್ಲಿ ಜಯಗಳಿಸಿದ, ವಿಶ್ವಕಪ್ ಟ್ರೋಫಿಯನ್ನು ಹೊಂದಿರುವ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ಆಟಗಾರ ನೀಲಿ ಜರ್ಸಿಯಲ್ಲಿ ನಿಂತಿರುವ ಪ್ರತಿಮೆ ಇದೆ. ಗ್ರಾಮಸ್ಥರು ಸಚಿನ್ ತೆಂಡೂಲ್ಕರ್ ಅವರಿಗೆ ಗೌರವಾರ್ಥವಾಗಿ ಒಂದು ಪ್ರಾರ್ಥನೆ/ಹಾಡನ್ನು ಹೇಳಿ, ಪೂಜೆ ಮಾಡುತ್ತಾರೆ.

  ಸೋನಿಯಾ ಗಾಂಧಿ ದೇವಾಲಯ

  ಸೋನಿಯಾ ಗಾಂಧಿ ದೇವಾಲಯ

  ಭಾರತದ ರಾಜ್ಯ ತೆಲಂಗಾಣದಲ್ಲಿ ಮಲ್ಲಿಯಾಲ್ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಸಕ್ತ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮೀಸಲಾಗಿ ದೇವಾಲ ನಿರ್ಮಿಸಲಾಗಿದೆ. ತೆಲಂಗಾಣ ರಾಜ್ಯ ರಚನೆ ವಿಚಾರವಾಗಿ ಸೋನಿಯಾ ಗಾಂಧಿಯವರಿಗೆ ಧನ್ಯವಾದ ಸಲ್ಲಿಸಲು ಸ್ಥಳೀಯ ಕಾಂಗ್ರೆಸ್ ನಾಯಕರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯದೊಳಗೆ ಸೋನಿಯಾ ಗಾಂಧಿಯ ಬಿಳಿ ಮಾರ್ಬಲ್ ಪ್ರತಿಮೆ ಇದೆ. ದೇವಾಲಯದ ಗೋಡೆಗಳ ಮೇಲೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಭಾವಚಿತ್ರಗಳಿವೆ. ನಾಯಕರು ಮತ್ತು ಸ್ಥಳೀಯರು ಈ ದೇವಾಲಯವನ್ನು ನಿರ್ಮಿಸಲು ಭೂಮಿ, ಹಣ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಸೋನಿಯಾ ಗಾಂಧಿ ಇರಲಿಲ್ಲವೆಂದಾಗಿದ್ದರೆ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂದು ಸ್ಥಳೀಯರು ನಂಬಿದ್ದಾರೆ.

  ನಾಗ ದೇವಸ್ಥಾನ/ಮನ್ನಾರಸಲ ದೇವಸ್ಥಾನ

  ನಾಗ ದೇವಸ್ಥಾನ/ಮನ್ನಾರಸಲ ದೇವಸ್ಥಾನ

  "ದಿ ಕಿಂಗ್ ಕೋಬ್ರಾ" ಎಂಬ ವಿಶ್ವದಲ್ಲಿ ವಿಷಯುಕ್ತ ಹಾವುಗಳಲ್ಲಿ ಒಂದಾಗಿ ನೆಲೆಯಾಗಿದೆ. ಭಾರತದ ಹಲವು ಭಾಗಗಳಲ್ಲಿ ನಾಗ ನನ್ನು ಪೂಜಿಸಲಾಗುತ್ತದೆ. ಹಾವುಗಳನ್ನು ನಾಗ ಪಂಚಮಿ ಮತ್ತು ಮಹಾ ಶಿವರಾತ್ರಿ ಮುಂತಾದ ಹಬ್ಬಗಳಲ್ಲಿ ಪೂಜಿಸಲಾಗುತ್ತದೆ. ಮನ್ನಾರಸಲ ದೇವಸ್ಥಾನವು ಹಾವುಗಳನ್ನು ಪೂಜಿಸುವ ಒಂದು ದೇವಾಲಯವಾಗಿದೆ. ಇದು ಕೇರಳದ ಆಲಪುಳ ಜಿಲ್ಲೆಯಲ್ಲಿದೆ. ಈ ದೇವಾಲಯದ ಹಾದಿಯುದ್ದಕ್ಕೂ ಸುಮಾರು 30,000 ಹಾವುಗಳ ವಿಗ್ರಹಗಳಿರುವುದನ್ನು ಕಾಣಬಹುದು. ಇಲ್ಲಿ ನಡೆಯುವ ಪ್ರಮುಖ ಉತ್ಸವವಾಗಿದೆ ಮತ್ತು ಈ ದಿನ ಎಲ್ಲಾ ವಿಗ್ರಹಗಳನ್ನು ಹಾಲಿನೊಂದಿಗೆ ತೊಳೆದು ಪೂಜಿಸಲಾಗುತ್ತದೆ. ಮಹಿಳೆಯರು ದಲ್ಲಿ ಎಲ್ಲಾ ನಾಗರ ಕಲ್ಲಿಗೂ ಹಾಲನ್ನು ಎರೆದು ಪೂಜಿಸಲಾಗುವುದು. ಮಹಿಳೆಯರು ಸಂತಾನ ಪ್ರಾಪ್ತಿಗೆ ಹಾಗೂ ಕೆಲವು ದೋಷಗಳ ನಿವಾರಣೆಯನ್ನು ಪ್ರಾರ್ಥಿಸಿಕೊಂಡು ಪೂಜೆ ಸಲ್ಲಿಸುತ್ತಾರೆ.

  ಮಹಾತ್ಮ ಗಾಂಧಿ ದೇವಾಲಯ

  ಮಹಾತ್ಮ ಗಾಂಧಿ ದೇವಾಲಯ

  ಭಾರತೀಯರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿಯವರ ಕೊಡುಗೆಗಳನ್ನು ಪ್ರತಿಯೊಬ್ಬರು ತಿಳಿದಿದ್ದಾರೆ. ಅವರ ಅಹಿಂಸಾ ವಿಧಾನವು ಪ್ರಪಂಚದಾದ್ಯಂತ ಇನ್ನೂ ಪ್ರಸಿದ್ಧವಾಗಿದೆ. ಭಾರತದಲ್ಲಿ ಅವರನ್ನು "ರಾಷ್ಟ್ರದ ಪಿತಾಮಹ" ಎಂದು ಪರಿಗಣಿಸಲಾಗಿದೆ. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ

  ಹೋರಾಡಿದರು ಮಾತ್ರವಲ್ಲದೆ, ಭಾರತದಲ್ಲಿ ಸಾಮಾಜಿಕ ಸಮಾನತೆಯ ವಿರುದ್ಧ ಯುದ್ಧವನ್ನು ನಡೆಸಿದರು. ಅಸ್ಪ್ರಶ್ಯರು ಎಂದು ದೂರ ಇಟ್ಟವರನ್ನು ಹರಿಜನ ಎಂದು ಕರೆಯುವುದರ ಮೂಲಕ ಅವರಿಗೆ ಸಮಾಜದಲ್ಲಿ ಉತ್ತಮ ಸ್ಥಾನ ನೀಡಿದರು. ಅವರ ಕೆಲಸಕ್ಕೆ ಗೌರವಾರ್ಪಣೆ ಮಾಡಲು ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿಯವರಿಗೆ ಅರ್ಪಿತವಾದ ದೇವಾಲಯವಿದೆ. ಈ ದೇವಾಲಯದಲ್ಲಿ ಗಾಂಧೀಜಿಯ ವಿಗ್ರಹವು ಮೂರು ಬಣ್ಣಗಳ ಅಡಿಯಲ್ಲಿ ಇದೆ. ಸ್ವಾತಂತ್ರ್ಯ ದಿನ, ರಿಪಬ್ಲಿಕ್ ದಿನ ಮತ್ತು ಗಾಂಧಿ ಜಯಂತಿ ಮುಂತಾದ ರಾಷ್ಟ್ರೀಯ ಉತ್ಸವಗಳ ದಿನಗಳಲ್ಲಿ ದೊಡ್ಡ ಆಚರಣೆಗಳು ನಡೆಯುತ್ತವೆ.

  ಬ್ರಹ್ಮ ದೇವಸ್ಥಾನ

  ಬ್ರಹ್ಮ ದೇವಸ್ಥಾನ

  ದೇವತೆಗಳಲ್ಲಿ ಅಂದರೆ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಶಿವ ದೇವತೆಗಳು ಮುಖ್ಯವಾದುದು. ಭಾರತದಾದ್ಯಂತ ವಿಷ್ಣು ಮತ್ತು ಶಿವನಿಗೆ ಮೀಸಲಾಗಿರುವ ಅನೇಕ ದೇವಾಲಯಗಳನ್ನು ನಾವು ನೋಡಬಹುದು.ಆದರೆ ಬ್ರಹ್ಮ ದೇವರಿಗೆ ರಾಜಸ್ಥಾನದ ಪುಷ್ಕರ್ನಲ್ಲಿರುವ ಒಂದೇ ಒಂದು ದೇವಾಲಯವಿದೆ.ಈ ದೇವಾಲಯ ಪುಷ್ಕರ್ ಸರೋವರದ ಸಮೀಪದಲ್ಲಿ. ಬ್ರಹ್ಮ ದೇವಸ್ಥಾನವು ವಿಶ್ವದ ಅತ್ಯಂತ ಹತ್ತು ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಹಿಂದೂಗಳ ಐದು ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದು ಆಪ್ತೇಶ್ವರ ದೇವಸ್ಥಾನವಾಗಿದ್ದು ಬ್ರಹ್ಮ ದೇವಸ್ಥಾನಕ್ಕೆ ಸಮೀಪದಲ್ಲಿದೆ. ಪುಷ್ಕರ್ ದೇವಸ್ಥಾನವು ಬ್ರಹ್ಮ ದೇವರಿಗೆ ಸಮರ್ಪಿತವಾದ ದೇವಸ್ಥಾನವಾಗಿದ್ದರೂ, ಅವನು ಇತರ ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ. ಉದಾಹರಣೆಗೆ ತಮಿಳುನಾಡಿನ ಬ್ರಹ್ಮಪುರೀಶ್ವರರ್ ದೇವಾಲಯವು ಬ್ರಹ್ಮದ ವಿಗ್ರಹವನ್ನು ಹೊಂದಿದೆ ಆದರೆ ಈ ದೇವಾಲಯವು ಶಿವನಿಗೆ ಮುಖ್ಯವಾಗಿ ಮತ್ತು ಭಗವಾನ್ ಶಿವನೊಂದಿಗೆ ಪ್ರಾರ್ಥಿಸಲಾಗಿದೆ.

  ಚಿಲ್ಕುರ್ ಬಾಲಾಜಿ ದೇವಸ್ಥಾನ ಅಥವಾ ವೀಸಾ ಬಾಲಾಜಿ ದೇವಸ್ಥಾನ

  ಚಿಲ್ಕುರ್ ಬಾಲಾಜಿ ದೇವಸ್ಥಾನ ಅಥವಾ ವೀಸಾ ಬಾಲಾಜಿ ದೇವಸ್ಥಾನ

  ಚಿಲ್ಕುರ್ ಬಾಲಾಜಿ ದೇವಾಲಯ ಪುರಾತನ ಹಿಂದೂ ದೇವಾಲಯವಾಗಿದ್ದು, ಇದು ಬಾಲಾಜಿಗೆ ಸಮರ್ಪಿಸಲಾಗಿದೆ. ಈ ದೇವಾಲಯವು ಹೈದರಾಬಾದ್ ನ ಉಸ್ಮಾನ್ ಸಾಗರ್ ಕೆರೆಯ ದಡದಲ್ಲಿದೆ. ಈ ದೇವಾಲಯದ ಗಮನಾರ್ಹ ಲಕ್ಷಣವೆಂದರೆ ವೀಸಾಗಳ ಅನುಮೋದನೆಗೆ ಭಕ್ತರಲ್ಲಿ ಪ್ರಸಿದ್ಧವಾಗಿರುವುದು. ಅವರ ವೀಸಾ ಅನುಮೋದನೆ ಪಡೆಯಬೇಕೆಂದು ಬಯಸುವವರು ಇಲ್ಲಿ ಪ್ರಾರ್ಥಿಸಬಹುದು ಮತ್ತು ಶೀಘ್ರದಲ್ಲೇ ಅವರು ಒಳ್ಳೆಯ ಸುದ್ದಿ ಪಡೆಯುತ್ತಾರೆ ಎಂದು ನಂಬಲಾಗಿದೆ. ವೀಸಾವನ್ನು ಹುಡುಕುವ ವ್ಯಕ್ತಿಯು ಸಂದರ್ಶನ ಮತ್ತು ದಾಖಲೆಯ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ.

  ಸಾಕ್ಷಾತ್ ಬಾಲಾಜಿ ಮಹಿಮೆ: ವೀಸಾ ಕೊಡಿಸುವ 'ವೀಸಾ ಬಾಲಾಜಿ ಮಂದಿರ'

  ವೈನ್ ನೀಡಲಾಗುವ ದೇವಾಲಯ

  ವೈನ್ ನೀಡಲಾಗುವ ದೇವಾಲಯ

  ಮಧ್ಯಪ್ರದೇಶ ರಾಜ್ಯದಲ್ಲಿರುವ ಉಜ್ಜಯಿನಿ ನಗರದಲ್ಲಿ ಶ್ರೀ ಕಾಳ ಭೈರವ ದೇವಾಲಯವಿದೆ. ಈ ದೇವಸ್ಥಾನದಲ್ಲಿರುವ ದೇವರಿಗೆ ಭಕ್ತರು ಮದ್ಯವನ್ನು ನೈವೇದ್ಯವಾಗಿ ನೀಡುತ್ತಾರೆ. ಪ್ರವಾಸಿಗರು ಮತ್ತು ಭಕ್ತರು ಕಾಳ ಭೈರವನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಮದ್ಯವನ್ನು ನೈವೇದ್ಯವಾಗಿ ದೇವತೆಯ ಬಾಯಿಗೆ ಸುರಿಯುತ್ತಾರೆ.

  ನರೇಂದ್ರ ಮೋದಿ ದೇವಸ್ಥಾನ

  ನರೇಂದ್ರ ಮೋದಿ ದೇವಸ್ಥಾನ

  ಗುಜರಾತ್ ಅಹಮದಾಬಾದ್‌ನಿಂದ 130 ಕಿಮೀ ದೂರದಲ್ಲಿ ಸ್ಥಿತವಾಗಿರುವ ಈ ದೇವಸ್ಥಾನವನ್ನು ನರೇಂದ್ರ ಮೋದಿ ದೇವಸ್ಥಾನ ಎಂದೇ ಕರೆಯುತ್ತಾರೆ. ಧನ ಸಹಾಯದ ಮೂಲಕ ಈ ದೇವಳವನ್ನು ಕಟ್ಟಲಾಗಿದೆ. ಅದೂ ಮೋದಿ ಭಕ್ತರೇ ಚಂದಾ ಸಂಗ್ರಹಿಸಿ ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ.

  English summary

  Temple for Monkey, Rat and Dog: Unusual Temples in India

  India’s culture and tradition is full of amazing rituals and exciting practices. India is a Hindu dominated country and temples are center of worship in Hinduism. Thousands of temples can be found in every part of India. According to Hindu mythology there are 33 million god and goddess and there are temples that are dedicated to these gods. But in India there are many temples that are not dedicated to god or goddess but to animals, non-living creatures and even to demons. Here is a list of some of interesting temples in India.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more