Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ಪ್ರತಿನಿತ್ಯ ವಿಸ್ಕಿ ಕುಡಿಯುವ ಈ ಹೋರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!!
ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಭಾಂದವ್ಯವು ಸಾವಿರಾರು ವರ್ಷಗಳಿಂದಲೂ ಸಾಗುತ್ತಾ ಬಂದಿದೆ. ಕಾಡಿನಲ್ಲಿದ್ದ ಮಾನವನು ನಾಡಿಗೆ ಬಂದ ವೇಳೆ ಕೆಲವೊಂದು ಪ್ರಾಣಿಗಳನ್ನು ತನ್ನ ಜತೆ ಕರೆದುಕೊಂಡು ಬಂದು ಅದನ್ನು ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡ. ಅಂದಿನಿಂದ ಸಾಕು ಪ್ರಾಣಿಗಳ ಕಡೆ ಮನುಷ್ಯನ ಮಮತೆಯು ಇಂದಿಗೂ ಜಾರಿಯಲ್ಲಿದೆ. ಕೆಲವರು ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಮನೆಯ ಸದಸ್ಯನಂತೆ ಅದನ್ನು ನೋಡಿಕೊಳ್ಳುತ್ತಾರೆ.
ಇನ್ನು ಕೆಲವರು ಮಗುವಿನಂತೆ ಅದನ್ನು ಸಾಕುವರು. ಕೆಲವು ಮಂದಿ ಸಾಕು ಪ್ರಾಣಿಗಳಿಂದಲೇ ಹಣ ಮಾಡುವಂತಹ ವ್ಯಾಪಾರ ನಡೆಸುತ್ತಾರೆ. ದನ, ಎಮ್ಮೆ, ಆಡು, ಕುರಿ ಇತ್ಯಾದಿಗಳಿಂದ ಹಣ ಸಂಪಾದಿಸಬಹುದು. ಕೆಲವೊಂದು ಪ್ರಾಣಿಗಳು ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಭಾರೀ ದೊಡ್ಡ ಮೊತ್ತದೊಂದಿಗೆ ಮಾರಾಟವಾಗುವುದು.
ಸುಲ್ತಾನ್ ಎನ್ನುವ ಹೋರಿಯು ಸರಿಸುಮಾರು 20 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿದೆ. ಇದು ತುಂಬಾ ವಿಶಿಷ್ಟವಾಗಿರುವ ಹೋರಿಯಾಗಿದ್ದು, ಇದರ ಬಗ್ಗೆ ಹೆಚ್ಚು ತಿಳಿಯಲು ಓದುತ್ತಾ ಸಾಗಿ. ಈ ಹೋರಿಯ ವೀರ್ಯವು ಸುಮಾರು ಒಂದು ಕೋಟಿ ರೂಪಾಯಿ ಗಳಿಸಿಕೊಡುತ್ತಿದೆ ಎಂದು ಇದರ ಮಾಲಕ ತಿಳಿಸುತ್ತಾನೆ. ಈ ವಿಶೇಷ ಹೋರಿಯ ಬಗ್ಗೆ ತಿಳಿಯಲು ಸ್ಕ್ರಾಲ್ ಡೌನ್ ಮಾಡಿ....

ಇದು 8 ವರ್ಷದ ಗೂಳಿ
ದೇಶದಲ್ಲಿರುವ ಅತ್ಯಂತ ವಿಶೇಷ ಗೂಳಿಗಳಲ್ಲಿ ಇದು ಒಂದು ಎಂದು ಪರಿಗಣಿಸಲಾಗಿದೆ. ಇದರ ಮಾಲಕನು ಇದರ ವೀರ್ಯವನ್ನು ಮಾರಿಕೊಂಡು ದಿನನಿತ್ಯ ಒಂದು ಕೋಟಿ ರೂ. ಗಳಿಸುತ್ತಿದ್ದಾನೆ. ಈ ಗೂಳಿಯು 6 ಅಡಿಯಷ್ಟು ಎತ್ತರವಿದೆ ಮತ್ತು ಒಂದು ಟನ್ ನಷ್ಟು ತೂಕವಿದೆ.

ಗೂಳಿಯ ಮೌಲ್ಯವೇನು?
ಗೂಳಿಗೆ ಸರಿಸುಮಾರು 20 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿದೆ ಎಂದು ಅದರ ಮಾಲಕನು ಹೇಳುತ್ತಿದ್ದಾನೆ. ಈ ಗೂಳಿಯ ಮತ್ತೊಂದು ವಿಶೇಷವೆಂದರೆ ಇದು ಪ್ರತಿನಿತ್ಯ ಸಂಜೆ ವೇಳೆಗೆ ವಿಸ್ಕಿ ಕುಡಿಯುತ್ತದೆ. ಆದರೆ ಮಾಲಕನಿಗೆ ಅದರ ಚಿಂತೆಯಿಲ್ಲ.

ಗೂಳಿಯ ಆಹಾರ
ಪ್ರತಿನಿತ್ಯ ಸುಲ್ತಾನ್ ಗೂಳಿಯು 15 ಕೆಜಿಯಷ್ಟು ಸೇಬು, 20 ಕೆಜಿಯಷ್ಟು ಕ್ಯಾರೆಟ್, 10ಕೆಜಿಯಷ್ಟು ಧಾನ್ಯ ತಿನ್ನುತ್ತದೆ. ಇದೆಲ್ಲವನ್ನೂ ಹಾಲಿಗೆ ಹಾಕಿ ಕೊಡಲಾಗುತ್ತದೆ. ಗೂಳಿಯ ಆಹಾರಕ್ಕೆ ತುಂಬಾ ಖರ್ಚಾಗುತ್ತಾ ಇದ್ದರೂ ಅದರ ಮಾಲಿಕನಿಗೆ ಇದರಿಂದ ಬೇಸರವಿಲ್ಲ. ವರ್ಷಕ್ಕೆ ಸುಮಾರು 96 ಲಕ್ಷ ರೂಪಾಯಿ ಗೂಳಿಯ ಆಹಾರಕ್ಕೆ ಖರ್ಚಾಗುತ್ತದೆ.

ಸ್ನಾನ ಇಷ್ಟಪಡುವ ಸುಲ್ತಾನ
ಸುಲ್ತಾನ್‌ನ್ನು ಪ್ರತಿದಿನವೂ ಸುಮಾರು ಐದು ಕಿ.ಮೀ. ನಡೆಸಲಾಗುತ್ತದೆ ಮತ್ತು ದಿನಕ್ಕೆ ಎರಡು ಸಲ ಕೆರೆಯಲ್ಲಿ ಅದಕ್ಕೆ ಸ್ನಾನ ಮಾಡಿಸಲಾಗುತ್ತದೆ. ಇದರಿಂದಾಗಿಯೇ ಸುಲ್ತಾನ್ ಚರ್ಮ ತುಂಬಾ ಕಾಂತಿಯುತ ಹಾಗೂ ಆರೋಗ್ಯವಾಗಿದೆ.

ಭಾರತದೆಲ್ಲೆಡೆ ಸುಲ್ತಾನ್ ವೀರ್ಯ ಮಾರಾಟ
ಸುಲ್ತಾನ್‌ನ ವೀರ್ಯವು ಭಾರತದ ಪ್ರತಿಯೊಂದು ರಾಜ್ಯಗಳಲ್ಲಿ ಮಾರಾಟವಾಗುತ್ತಿದೆ. ಒಂದು ಹನಿ ವೀರ್ಯಕ್ಕೆ 300 ರೂಪಾಯಿ ಇದೆ. ಒಂದು ವರ್ಷದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೀರ್ಯ ಮಾರಾಟವಾಗುತ್ತಿದೆ.

ಹುಟ್ಟುವ ಕರುಗಳು ಆರೋಗ್ಯವಾಗಿರುವುದು
ಸುಲ್ತಾನ್‌ನ ವೀರ್ಯದಿಂದ ಹುಟ್ಟಿರುವ ಕರುಗಳು ತುಂಬಾ ಆರೋಗ್ಯವಾಗಿರುತ್ತದೆ. ಆದರೆ ಸುಲ್ತಾನ್‌ನ ಕರುಗಳು ಆಲ್ಕೋಹಾಲ್ ಸೇವನೆ ಮಾಡುವುದಿಲ್ಲ ಎನ್ನುವುದು ತುಂಬಾ ಒಳ್ಳೆಯ ವಿಚಾರವಾಗಿದೆ.
ವಿಡಿಯೋ ಎಲ್ಲವನ್ನೂ ತಿಳಿಸುವುದು
ಈ ವಿಡಿಯೋ ನೋಡಿದ ಬಳಿಕ ನಿಮ್ಮ ಅನಿಸಿಕೆಗಳು ಏನು? ಇದರ ಬಗ್ಗೆ ಕಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.



Click it and Unblock the Notifications
