Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇವರು ವಿಶ್ವವನ್ನೇ ನಿಬ್ಬೆರಗಾಗಿಸಿದ ಮಹಾನ್ ತಾಯಂದಿರು!
ಅಮ್ಮ ಎಂಬ ಪದವನ್ನು ಅನುಭವಿಸಲು ಮಾತ್ರ ಸಾಧ್ಯ, ವರ್ಣಿಸಲು ಅಸಾಧ್ಯ. ಅವಳ ಪ್ರೀತಿ, ತ್ಯಾಗಕ್ಕೆ ಸಮಾನ ಪದಗಳನ್ನು ಹುಡುಕುವುದಾದರೂ ಹೇಗೆ? ಅಲ್ಲವೇ?
ಅಮ್ಮ ಎಂದರೆ ಏನೋ ಹರುಷವು ನಮ್ಮ ಪಾಲಿಗೆ ಅವಳೇ ದೈವವು ಎಂಬ ಜನಪ್ರಿಯ ಹಾಡನ್ನು ನೀವು ಕೇಳಿರುತ್ತೀರಿ. ಹೌದು ಅಮ್ಮನ ಪ್ರೀತಿ ಎಂಬುದು ಅತ್ಯಮೂಲ್ಯ ಹಾಗೂ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳ ಒಳಿತಿಗಾಗಿ ತನ್ನ ಸುಖ ಸಂತೋಷವನ್ನು ತ್ಯಾಗ ಮಾಡುವ ಸಹನಾ ಮೂರ್ತಿ ಆಕೆ.
ತಾಯಿ ನಿಮ್ಮ ಮೇಲೆ ಎಷ್ಟೇ ಕೋಪಗೊಂಡಿದ್ದರೂ ಅದರಲ್ಲಿ ಮಕ್ಕಳ ಸುಖವಿದೆ ಎಂದು ಅರಿತ ಒಡನೆಯೇ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡು ನಿಮ್ಮ ಜೊತೆಯಾಗುತ್ತಾರೆ. ಅದುವೇ ತಾಯಿ ಪ್ರೀತಿ. ಇಂದಿನ ಲೇಖನದಲ್ಲಿ ತಾಯಿ ದೈವೀ ಸ್ವರೂಪರು ಎಂಬುದನ್ನು ತೋರಿಸುವ ಮಹಾನ್ ತಾಯಿಯರ ಪರಿಚಯವನ್ನು ನಾವು ಮಾಡುತ್ತಿದ್ದು ಅವರ ಮಾಡಿರುವ ಕಾರ್ಯದಿಂದ ಅಮ್ಮನ ಸ್ಥಾನ ಇಂದು ಮತ್ತಷ್ಟು ಎತ್ತರಕ್ಕೇರಿದೆ.....

ಎಲಿಜಬೆತ್ ಅನ್ನಾ ಬಟಲ್
ತಮ್ಮ ಎರಡು ಮಕ್ಕಳ ನಡುವೆ ಸಾಕಷ್ಟು ಅಂತರವನ್ನು ಹೊಂದಿ ಈಕೆ ಅವರನ್ನು ಹಡೆದಿದ್ದಾರೆ. ತಮ್ಮ ಮೊದಲ ಹೆಣ್ಣು ಮಗುವಿನ ಜನ್ಮದ ಸಮಯದಲ್ಲಿ ಎಲಿಜಬೆತ್ 19 ರ ಹರೆಯದವರಾಗಿದ್ದರು ಅಂತೆಯೇ ಎರಡನೆ ಮಗುವಿಗೆ ಜನ್ಮ ನೀಡಿದ್ದು ಆಕೆ ತಮ್ಮ 60 ರ ಹರೆಯದಲ್ಲಿ.
Image source

ಕ್ಯಾರೊಲಿನಾ ಕಿರಿಂಡಜಾ
ಈಕೆಯನ್ನು ಟ್ರಿ ಲೇಡಿ ಎಂದೇ ಕರೆಯುತ್ತಾರೆ. ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನೆರೆಯಿಂದಾಗಿ ಆಕೆ ಮರದ ಆಶ್ರಯದಲ್ಲಿ ಕಾಲ ಕಳೆದಿದ್ದರು. ಅದಾಗ್ಯೂ ಆಕೆ ಮಗುವಿಗೆ ಜನ್ಮ ನೀಡಿದ್ದರು. ಈಗ ಆ ಮಗುವಿಗೆ 19 ವರ್ಷ.
Image source

ಮಹಾಜಾಬೀನ್ ಶಯೀಕ್
8.6 ಔನ್ಸ್ ಇರುವ ಮಗು ರುಮೈಸಾನಿಗೆ ಮಹಾಜಾಬೀನ್ ಜನ್ಮ ನೀಡಿದ್ದರು. ಅದರಲ್ಲೂ ಇದು ಅವಳಿ ಜವುಳಿ ಹೆರಿಗೆಯಾಗಿತ್ತು. ಈ ಮಕ್ಕಳು ಅತಿ ಸಣ್ಣ ಕಂದಮ್ಮಗಳಾಗಿಯೂ ಬದುಕಿಕೊಂಡಿದ್ದಾರೆ.
Image courtesy

ಸ್ಟೇಟಿ ಹೆರಾಲ್ಡ್
ಬರೇ 2 ಇಂಚು ಉದ್ದದ ಸ್ಟೇಸಿ ವಿಶ್ವದಲ್ಲೇ ಅತ್ಯಂತ ಕುಳ್ಳ ತಾಯಿ ಎಂದೇ ಪ್ರಸಿದ್ಧರು. ಹಲವಾರು ಕಾಯಿಲೆಗಳನ್ನು ಆಕೆ ಎದುರಿಸಿದ್ದರೂ ಮೂರು ಮಕ್ಕಳ ತಾಯಿಯಾಗಿದ್ದಾರೆ.
Image courtesy

ಅಡ್ರಿನಾ ಇಲೆಸ್ಕು
ವಿಶ್ವದಲ್ಲೇ ತಮ್ಮ ಇಳಿಪ್ರಾಯದಲ್ಲಿ ಜನನ ನೀಡಿದ ಮೊದಲ ಮಹಿಳೆಯಾಗಿದ್ದಾರೆ ಅಡ್ರಿನಾ. 2005 ರಲ್ಲಿ ತಮ್ಮ ಮೊದಲ ಮಗಳಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಇವರಿಗೆ 66 ವರ್ಷ ವಯಸ್ಸಾಗಿತ್ತು. ಈಗ ತಮಗೆ 78ರ ಹರೆಯವಾಗಿದ್ದರೂ ಇನ್ನು ಹಡೆಯಬೇಕು ಎಂಬುದು ಇವರ ಆಸೆಯಾಗಿದೆ.
Image courtesy

ಜೋನ್ನಾ ಕ್ರೆಜಾಟೋನಿಕ್
ಬರೇ 22 ವಾರಗಳಲ್ಲಿ ಈಕೆ ತನ್ನ ತ್ರಿವಳಿ ಮಕ್ಕಳನ್ನು ಕಳೆದುಕೊಂಡಿದ್ದರು. ತದನಂತರ ತಲೆಕೆಳಗಾಗಿ 30 ಡಿಗ್ರಿಯಲ್ಲಿ ಎರಡು ತಿಂಗಳುಗಳಿಗಿಂತ ಹೆಚ್ಚು ಕಾಲ ಇವರು ಮಲಗಿದ್ದರು. ಇದರಿಂದ ಪ್ರಸವ ಕೋಣೆಗೆ ಹೋಗುವುದಕ್ಕೆ ಇವರಿಗೆ ಆಗಲಿಲ್ಲ. ಅದಾಗ್ಯೂ ಎರಡು ಆರೋಗ್ಯವಂತ ಮಕ್ಕಳ ತಾಯಿ ಇವರಾಗಿದ್ದಾರೆ.
Image courtesy

ಹೆದರ್ ಟೌನ್
ಸಾಮಾನ್ಯವಾಗಿ ಇವರು ಮಗಳಿಗೆ ಜನ್ಮ ನೀಡಿದ್ದರೂ ಸುಂಟರ ಗಾಳಿಯಲ್ಲಿ ತಾಯಿ ಮಗಳಿಬ್ಬರೂ ಸಿಲುಕಿಕೊಂಡರು. ತಮ್ಮ ಮೂರರ ಹರೆಯದ ಮಗಳನ್ನು ರಕ್ಷಿಸುವುದಕ್ಕಾಗಿ ಇವರು ಅಡ್ಡ ಮಲಗಿದ ಸಾಹಸಿ. ಆದರೆ ದುರಾದೃಷ್ಟವಶಾತ್ ಘಟನೆಯಲ್ಲಿ ಇವರು ಬದುಕುಳಿಯಲಿಲ್ಲ.
Image courtesy

ನಟಾಲಿ ಸುಲೇಮನ್
ಎಂಟು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಇವರಾಗಿದ್ದಾರೆ. ತಮ್ಮ ಈಗಾಗಲೇ ಇದ್ದ ಆರು ಮಕ್ಕಳಲ್ಲಿ ಇದೂ ಸೇರ್ಪಡೆಯಾಗಿದೆ.
Image courtesy



Click it and Unblock the Notifications











