Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಕದ್ದು-ಮುಚ್ಚಿ ಅಶ್ಲೀಲ ಚಿತ್ರ ನೋಡುತ್ತೀರಾ? ಹಾಗಿದ್ದರೆ ಇಂದೇ ನಿಲ್ಲಿಸಿ
ಪ್ರಾಯಕ್ಕೆ ಬಂದ ಪ್ರತಿಯೊಂದು ಜೀವಿಯೂ ಲೈಂಗಿಕಾಸಕ್ತಿಯನ್ನು ಹೊಂದಿರುತ್ತದೆ. ಇದಕ್ಕೆ ಪ್ರಾಣಿ, ಪಕ್ಷಿ, ಮನುಷ್ಯರು ಎನ್ನುವ ಭೇದವಿಲ್ಲ. ಪ್ರತಿಯೊಂದು ಜೀವಿಗೂ ಇದೊಂದು ಸ್ವಾಭಾವಿಕ ಕ್ರಿಯೆ. ಆದರೆ ಈ ವಿಚಾರವಾಗಿಯೇ ಅಮಾನವೀಯವಾಗಿ ವರ್ತಿಸುವುದು ಉಚಿತವಲ್ಲ. ಲೈಂಗಿಕ ಆಸಕ್ತಿ ವ್ಯಕ್ತಿಯ ಅತ್ಯಂತ ವೈಯಕ್ತಿಕ ವಿಚಾರ. ಇದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚು ಪವಿತ್ರ ಸ್ಥಾನವನ್ನು ನೀಡಲಾಗಿದೆ. ಗೌಪ್ಯವಾಗಿ ಕಾಪಾಡಿಕೊಳ್ಳಬೇಕಾದ ಈ ವಿಚಾರವನ್ನು ಇಂದು ಅನೇಕ ಮಾಧ್ಯಮಗಳು ಪ್ರಸಿದ್ಧಿಪಡೆಯಲು ಉಪಯೋಗಿಸಿಕೊಳ್ಳುತ್ತಿವೆ.
ಅಶ್ಲೀಲ ಚಿತ್ರ ಮತ್ತು ಅಶ್ಲೀಲ ವೀಡಿಯೋಗಳನ್ನು ನೋಡುವುದರಿಂದ ಅನೇಕ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆರಂಭದಲ್ಲಿ ಕುತೂಹಲಕ್ಕೆ ನೋಡುವ ಕೇಳುವ ಅಶ್ಲೀಲ ವಿಚಾರಗಳು ಬರಬರುತ್ತಾ ವ್ಯಸನವಾಗಿ ತಿರುಗುತ್ತದೆ. ಇದು ವ್ಯಕ್ತಿಯ ಭಾವೋದ್ರೇಕಕ್ಕೆ ಕಾರಣವಾಗುವುದು. ನಿಧಾನವಾಗಿ ಅಪರಾಧಿ ಕೃತ್ಯಗಳನ್ನು ಎಸಗಲು ಪ್ರೋತ್ಸಾಹ ನೀಡುತ್ತದೆ. ಅದರಲ್ಲೂ ಹದಿ ಹರೆಯದವರಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುವುದು.
ಅನೇಕರಿಗೆ ಚಹಾ, ಕಾಫೀ, ಮದ್ಯ, ಸಿಗರೇಟ್‍ನಂತಹ ಚಟಗಳಂತೆ ಅಶ್ಲೀಲ ಚಿತ್ರಗಳ ವೀಕ್ಷಣೆಯೂ ಒಂದು ಚಟವಾಗಿ ಪರಿರ್ವನೆಗೊಂಡಿದೆ. ಹಾಗಾಗಿ ಈ ಬಗೆಯ ವೀಡಿಯೋಗಳನ್ನು ನೋಡುವುದು ಜನರು ನಿಲ್ಲಿಸಬೇಕು. ಸಾಮಾಜಿಕ ತಾಣಗಳಲ್ಲೂ ಇದರ ಬಗ್ಗೆ ಚರ್ಚೆ ಹಾಗೂ ವೀಡಿಯೋಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಇವುಗಳನ್ನು ನೋಡುವುದರಿಂದ ಯಾರಿಗೇನು ತೊಂದರೆ ಎನ್ನುವ ಪ್ರಶ್ನೆ ನಿಮ್ಮದಾದರೆ ಇಲ್ಲಿದೆ ವಿವರವಾದ ಉತ್ತರ.....

ಪುರುಷರಿಗೆ ಸಮಸ್ಯೆ ಇದು!
ಅಶ್ಲೀಲ ಚಿತ್ರಗಳನ್ನು ನೋಡಿದಾಗ ನಿಮಿರುವಿಕೆಯು ಪುರುಷರಿಗೊಂದು ಸಾಮಾನ್ಯ ಪ್ರಕ್ರಿಯೆ. ಪದೇ ಪದೇ ಅಶ್ಲೀಲ ಚಿತ್ರಗಳನ್ನು ನೋಡುವುದು ಮತ್ತು ಹಸ್ತಮೈಥುನ ಮಾಡಿಕೊಳ್ಳುವುದರಿಂದ ವ್ಯಕ್ತಿಯ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ಜೊತೆಗೆ ಲೈಂಗಿಕ ಆಸಕ್ತಿಯನ್ನು ಕುಗ್ಗಿಸುತ್ತಾ ಬರುವುದು. ಲೈಂಗಿಕ ಜೀವನವೂ ಅಸ್ವಸ್ಥಗೊಳ್ಳುವುದು. ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳನ್ನು ನೋಡುವುದು ನಿಲ್ಲಿಸಿದಾಗ ಈ ತೊಂದರೆಗಳಿಂದ ಪಾರಾಗಬಹುದು.

ಶಕ್ತಿ ಕುಂದುವುದು
ವ್ಯಕ್ತಿ ಪದೇ ಪದೇ ಅಶ್ಲೀಲ ಚಿತ್ರ ನೋಡಿದಾಗ ಹಸ್ತಮೈಥುನಕ್ಕೆ ಶರಣಾಗುತ್ತಾನೆ. ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ಶಕ್ತಿಯನ್ನು ಹೊರಹಾಕುವುದಕ್ಕೆ ಕಾರಣವಾಗುವುದು. ಅಶ್ಲೀಲ ಚಿತ್ರವನ್ನು ನೋಡುವುದು ಬಿಟ್ಟರೆ ಸಮಸ್ಯೆಯಿಂದ ಪಾರಾಗಬಹುದು.

ಸಂಬಂಧದಲ್ಲಿ ಬಿರುಕು
ಅಶ್ಲೀಲ ವಿಡಿಯೋದಲ್ಲಿ ಎಲ್ಲವೂ ಉತ್ಪೇಕ್ಷೆಯಾಗಿಯೇ ತೋರಿಸುತ್ತಾರೆ. ಇದನ್ನು ನೋಡುವವರ ಮನೋಭಾವವೂ ಅದೇ ರೀತಿಯಲ್ಲಿ ಬೆಳೆಯುತ್ತದೆ. ಜೊತೆಗೆ ತಮ್ಮ ಸಂಗಾತಿಯೂ ಹಾಗೇ ವರ್ತಿಸಬೇಕೆಂದು ಬಯಸುತ್ತಾರೆ. ಅದು ನಡೆಯದೇ ಇರುವಾಗ ಸಂಬಂಧದಲ್ಲಿ ಬಿರುಕು ಉಂಟಾಗುವುದು.

ಅತೃಪ್ತರಾಗುತ್ತಾರೆ
ಅಶ್ಲೀಲ ಮತ್ತು ಹಸ್ತ ಮೈಥುನ ವ್ಯಸನಿಗಳಿಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಇವರಿಗೆ ಅಶ್ಲೀಲತೆಯನ್ನು ನೋಡದೆ ಇರಲು ಸಾಧ್ಯವಾಗದೇ ಇರುವುದರಿಂದ ಅತೃಪ್ತ ಮನೋಭಾವವನ್ನು ಹೊಂದಿರುತ್ತಾರೆ. ಈ ವ್ಯಸನದಿಂದ ದೂರವಾದ ಕ್ಷಣದಿಂದ ಅವರ ಆತ್ಮವಿಶ್ವಾಸ ಬೆಳೆಯುತ್ತಾ ಹೋಗುತ್ತದೆ.

ಸ್ವಯಂ ನಿಯಂತ್ರಣ ಹೆಚ್ಚುವುದು
ಅಶ್ಲೀಲತೆ ಸೇರಿದಂತೆ ಉಳಿದೆಲ್ಲಾ ಚಟಗಳಿಂದಲೂ ದೂರವಿದ್ದರೆ, ಯಾವುದೇ ರೀತಿಯ ಪ್ರಚೋದನೆ ಉಂಟಾದರೂ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬಹುದಾದ ಶಕ್ತಿ ಇರುತ್ತದೆ. ಸೌಂದರ್ಯ ಹಾಗೂ ಅದರಾಚೆ ಇರುವ ಎಲ್ಲಾ ಬಗೆಯ ಸಂಬಂಧ ಹಾಗೂ ಭಾವನೆಗಳಿಗೆ ಗೌರವ ನೀಡುವ ವ್ಯಕ್ತಿತ್ವ ನಮ್ಮದಾಗುತ್ತದೆ.



Click it and Unblock the Notifications