For Quick Alerts
ALLOW NOTIFICATIONS  
For Daily Alerts

ಈ ಊರಿನಲ್ಲಿ ಹಾವುಗಳೆಂದರೆ ಮನೆಯ ಸದಸ್ಯರಿದ್ದಂತೆ, ಯಾರೂ ಭಯಪಡಲ್ಲ!!

By Arshad
|

ಭಾರತದ ಪಶ್ಚಿಮಬಂಗಾಳ ರಾಜ್ಯದ ಪ್ರದೇಶ ಸರಿಸುಮಾರು ಇಡಿಯ ವರ್ಷ ತೇವವಾಗಿರುವ ಪ್ರದೇಶವಾಗಿದ್ದು ಇಲ್ಲಿ ವರ್ಷಕ್ಕೆ ಮೂರು ಬಾರಿ ಬೆಳೆ ತೆಗೆಯಬಲ್ಲಷ್ಟು ಭೂಮಿ ಫಲವತ್ತಾಗಿದೆ. ಆ ಪ್ರಕಾರ ಭತ್ತದ ಕಣಜವೇ ಆಗಿರುವ ಈ ಪ್ರದೇಶದಲ್ಲಿ ಬೆಳೆಯನ್ನು ಹಾಳುಮಾಡಲು ಇಲಿಗಳೂ ಹೆಚ್ಚು ಹಾಗೂ ಇವನ್ನು ಆಹಾರವಾಗಿ ಸೇವಿಸುವ ನಾಗರಹಾವುಗಳೂ ಹೆಚ್ಚು.

ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ಈ ನಾಗರಹಾವುಗಳನ್ನು ಜನರು ಕೊಲ್ಲದೇ ದೇವರ ರೂಪದಲ್ಲಿಯೇ ಕಾಣುತ್ತಾರೆ. ಅದರಲ್ಲೂ ಬುರ್ದ್ವಾನ್ ಜಿಲ್ಲೆಯ ಈ ಏಳು ಗ್ರಾಮಗಳಲ್ಲಿ ನಾಗರಹಾವುಗಳು ಜನಸಂಖ್ಯೆಗಿಂತಲೂ ಹೆಚ್ಚಾಗಿಯೇ ಇದ್ದು ಮನೆಯೊಳಗೆಲ್ಲಾ ಕೋಳಿ ಬೆಕ್ಕುಗಳು ಓಡಾಡುವಷ್ಟೇ ಸಲುಗೆಯಿಂದ ಓಡಾಡುತ್ತವೆ.

ಹಾವು ಕಚ್ಚಿದರೆ, ಕೂಡಲೇ ಈ ಟಿಪ್ಸ್ ಅನುಸರಿಸಿ ವ್ಯಕ್ತಿಯ ಪ್ರಾಣ ಉಳಿಸಿ

ಮಕ್ಕಳು ಆಡುತ್ತಿರುವಾಗಲೂ ಅವರ ಮೈಮೇಲೇ ಹರಿದುಕೊಂಡು ಹೋಗುತ್ತವೆ. ಇದು ಇಂದು ನಿನ್ನೆಯ ಕಥೆಯಲ್ಲ, ಬದಲಿಗೆ ಸುಮಾರು ಐದು ಶತಮಾನಗಳಿಂದಲೂ ವಿಷಸರ್ಪಗಳು ಗ್ರಾಮದ ಪ್ರತಿ ಇಂಚಿಂಚಿನ ಜಾಗದಲ್ಲಿ ನಿರ್ಭಯವಾಗಿ ಓಡಾಡುತ್ತಿವೆ. ಗದ್ದೆ, ಅಡುಗೆ ಮನೆ, ಕೊಟ್ಟಿಗೆ, ಕೆರೆಯ ದಡದಲ್ಲಿ, ಒಟ್ಟಾರೆ ಎಲ್ಲೆಲ್ಲಿಯೂ ಇವು ಕಾಣಸಿಗುತ್ತವೆ. ಈ ಏಳು ಗ್ರಾಮಗಳೆಂದರೆ ಪೋಸ್ಲಾ, ಛೋಟೋ ಪೋಸ್ಲಾ, ಪಾಲ್ಸಾನಾ, ಬೊಡೋ ಮೊಶೊರು, ಮೊಶೊರು, ಪಾಲ್ಸನಾತೋಲಾ ಹಾಗೂ ಪೋಸ್ಲಾಹತ್, ಮುಂದೆ ಓದಿ..

ಹಾವುಗಳಿಗೆಂದೇ ಒಂದು ದೇವಸ್ಥಾನ!

ಹಾವುಗಳಿಗೆಂದೇ ಒಂದು ದೇವಸ್ಥಾನ!

ಗ್ರಾಮಸ್ಥರು ಈ ಹಾವುಗಳಿಗೆಂದೇ ಒಂದು ದೇವಸ್ಥಾನವನ್ನೂ ನಿರ್ಮಿಸಿದ್ದು ನಾಗದೇವತೆ ಜಾನಕೇಶ್ವರಿಯ ವಿಗ್ರಹವನ್ನೂ ಸ್ಥಾಪಿಸಿದ್ದಾರೆ. ಜಾನಕೇಶ್ವರಿ ಈ ಗ್ರಾಮದಲ್ಲಿ ನಾಗರೂಪದಲ್ಲಿ ನೆಲೆಸಿದ್ದು ಈಕೆ ಮನುಷ್ಯರಿಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲ, ಈಕೆ ನಾಗರೂಪ ಧರಿಸಿ ನಮ್ಮ ಗ್ರಾಮದ ಎಲ್ಲೆಲ್ಲಿಯೂ ಇರುತ್ತಾಳೆ ಹಾಗೂ ನಮ್ಮ ರಕ್ಷಣೆ ಮಾಡುತ್ತಾಳೆ, ಯಾರನ್ನೂ ಕಚ್ಚುವುದಿಲ್ಲ. ಅಕಸ್ಮಿಕವಾಗಿ ಯಾರಾದರೂ ಹಾವನ್ನು ತುಳಿದರೆ ಅಥವಾ ಇವುಗಳ ಚಟುವಟಿಕೆಗೆ ಅಡ್ಡಿಬಂದರೆ ಮಾತ್ರ ಕಚ್ಚುತ್ತವೆ.

ಹಾವು ಕಚ್ಚಿದರೂ ಏನೂ ಆಗುವುದಿಲ್ಲವಂತೆ!

ಹಾವು ಕಚ್ಚಿದರೂ ಏನೂ ಆಗುವುದಿಲ್ಲವಂತೆ!

ಅಷ್ಟಕ್ಕೂ ಹೀಗೆ ಕಚ್ಚಿದರೆ ಪವಿತ್ರ ಕೆರೆಯಲ್ಲಿ ಒಂದು ಮುಳುಗು ಹಾಕಿದರೆ ಸಾಕು, ಯಾವುದೇ ಅಪಾಯವಾಗುವುದಿಲ್ಲ. ಅಪರೂಪಕ್ಕೆ ಇವು ಕಚ್ಚುವ ಪ್ರಕರಣಗಳು ಕಂಡುಬಂದರೂ ಇವು ಜೀವ ತೆಗೆಯುವಷ್ಟು ವಿಷವನ್ನು ಸ್ರವಿಸದ ಕಾರಣ ಇದುವರೆಗೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮೊಶರು ಗ್ರಾಮದಲ್ಲಿರುವ ಜಾನಕೇಶ್ವರಿ ಮಂದಿರದ ಪೂಜಾರಿ ಶ್ಯಾಮಲಾಲ್ ಚಕ್ರಬೊರ್ತಿಯವರು ತಿಳಿಸುತ್ತಾರೆ.

ಸರ್ಪತಜ್ಞರು ಅಚ್ಚರಿಗೊಂಡಿದ್ದಾರೆ

ಸರ್ಪತಜ್ಞರು ಅಚ್ಚರಿಗೊಂಡಿದ್ದಾರೆ

ಈ ಮಾತುಗಳನ್ನು ಒಟ್ಟು ಏಳೂ ಗ್ರಾಮದ ಜನತೆ ಪುರಸ್ಕರಿಸುತ್ತಾ ಇದುವರೆಗೆ ಅಪರೂಪಕ್ಕೆಲ್ಲೋ ಒಂದು ಎಂಬುದರ ಹೊರತಾಗಿ ತಮಗೆ ಈ ಸರ್ಪಗಳು ಕಚ್ಚಿಲ್ಲ ಎಂದೇ ಹೇಳುತ್ತಾರೆ. ಈ ಮಾತನ್ನು ಸುಲಭಕ್ಕೆ ನಂಬದ ಸರ್ಪತಜ್ಞರು ಈ ಗ್ರಾಮಕ್ಕೆ ಭೇಟಿ ನೀಡಿ ಕೆಲವು ಸರ್ಪಗಳನ್ನು ಹಿಡಿದು ಪರೀಕ್ಷಿಸಿ ಈ ಸರ್ಪಗಳೆಲ್ಲವೂ ಪೂರ್ಣವಾಗಿ ವಿಷಯುಕ್ತವಾಗಿರುವುದನ್ನು ಖಚಿತಪಡಿಸಿದ್ದಾರೆ ಹಾಗೂ ಇದುವರೆಗೆ ಸರ್ಪ ಕಚ್ಚಿ ಯಾವುದೇ ಪ್ರಾಣಹಾನಿಯಾಗದೇ ಇರುವ ವಾಸ್ತವದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವೈಜ್ಞಾನಿಕ ಲೋಕಕ್ಕೇ ಸವಾಲಾಗಿದೆ!

ವೈಜ್ಞಾನಿಕ ಲೋಕಕ್ಕೇ ಸವಾಲಾಗಿದೆ!

ಭಾರತದ ವನ್ಯಜೀವಿ ಅಧ್ಯಯನ ವಿಭಾಗದ (Zoological Survey of India) ಅಧಿಕಾರಿಗಳು ಹಾಗೂ ಉರಗತಜ್ಞರು ಈ ಗ್ರಾಮಗಳಿಗೆ ಆಗಮಿಸಿ ಈ ವಿದ್ಯಮಾನದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇವು ವಿಷಪೂರಿತವಾಗಿದ್ದರೂ ಜನರಿಗೆ ಇಷ್ಟು ಹತ್ತಿರದಲ್ಲಿದ್ದೂ ಏಕಾಗಿ ತಮ್ಮ ಉಗ್ರರೂಪ ಅಥವಾ ಕಚ್ಚುವ ಸಹಜಸ್ವಭಾವವನ್ನು ವ್ಯಕ್ತಪಡಿಸುವುದಿಲ್ಲ ಎಂಬ ಬಗ್ಗೆ ಸೂಕ್ತ ವೈಜ್ಞಾನಿಕ ವಿವರಣೆ ನೀಡಲು ವಿಫಲರಾಗಿದ್ದಾರೆ. ಅಲ್ಲದೇ ಹಾವು ಕಚ್ಚಿದರೂ ಇದು ಮಾರಣಾಂತಿಕವಾಗಿ ಏಕೆ ಇರುವುದಿಲ್ಲ? ಇದಕ್ಕೆ ಈ ಸ್ಥಳದ ಮಹಾತ್ಮೆಯೇ ಇರಬಹುದು ಎಂದು ಮೊಶರು ಗ್ರಾಮದ ಮಧುಸೂಧನ ಕೊನಾರ್ ರವರು ತಿಳಿಸುತ್ತಾರೆ.

ಹಾವು ಕಚ್ಚಿದರೆ, ಕೆರೆಗೆ ಹೋಗಿ ಮುಳುಗಿದರೆ ಗುಣವಾಗುತ್ತದೆಯಂತೆ!

ಹಾವು ಕಚ್ಚಿದರೆ, ಕೆರೆಗೆ ಹೋಗಿ ಮುಳುಗಿದರೆ ಗುಣವಾಗುತ್ತದೆಯಂತೆ!

ಅಕಸ್ಮಾತ್ತಾಗಿ ಯಾರಿಗಾದರೂ ಹಾವು ಕಚ್ಚಿಯೇ ಬಿಟ್ಟರೆ ಈ ಗ್ರಾಮಸ್ಥರು ಆ ವ್ಯಕ್ತಿಯನ್ನು ತಕ್ಷಣ ಗ್ರಾಮದ ಜಾನಕೇಶ್ವರಿ ಮಂದಿರದ ಪಕ್ಕದ ಕೆರೆಗೆ ಕರೆದುಕೊಂಡು ಹೋಗಿ ಮುಳುಗು ಹಾಕಿಸುತ್ತಾರೆ ಹಾಗೂ ಆ ವ್ಯಕ್ತಿ ಅಂದಿನ ದಿನ ಪೂರ್ಣ ಉಪವಾಸ ಆಚರಿಸುವಂತೆ ಮಾಡ್ತುತಾರೆ. ಇದರಿಂದ ಹಾವು ಕಚ್ಚಿತ್ತು ಎಂದು ಗೊತ್ತೇ ಆಗದಂತೆ ವ್ಯಕ್ತಿ ತನ್ನ ಜೀವನ ಮುಂದುವರೆಸುತ್ತಾನೆ.

ಹಾವುಗಳು ಎಂದರೆ ನಮಗೆ ಭಯವೇ ಇಲ್ಲ!

ಹಾವುಗಳು ಎಂದರೆ ನಮಗೆ ಭಯವೇ ಇಲ್ಲ!

ಈ ಹಾವುಗಳು ಎಲ್ಲೆಲ್ಲೂ ಇವೆ. ನಮ್ಮ ಅಡುಗೆಮನೆಗಳಲ್ಲಿ, ನಾವು ಮಲಗುವ ಹಾಸಿಗೆಗಳಲ್ಲಿ, ಬೋರ್ ವೆಲ್, ದಾರಿ, ಗದ್ದೆ, ಎಲ್ಲೆಲ್ಲೂ ಇವೆ. ನಾವು ಯಾರೂ ಇವುಗಳ ಚಲನೆಗೆ ಅಡ್ಡಿಪಡಿಸುವುದಿಲ್ಲ. ಹಾವುಗಳೂ ತಾವಾಗಿಯೇ ಎಂದೂ ಯಾರಿಗೂ ಕಚ್ಚಿಲ್ಲ. ಅಕಸ್ಮಾತ್ ತುಳಿದರೆ ಅಥವಾ ಬೇರಾವುದೋ ಕಾರಣದಿಂದ ಇದರ ಮೇಲೆ ಬಿದ್ದರೆ ಮಾತ್ರ ಕಚ್ಚುತ್ತವೆ. ಹೀಗಾದರೆ ತಕ್ಷಣ ನಾವು ಕೆರೆಯಲ್ಲಿ ಮುಳುಗು ಹಾಕುತ್ತೇವೆ ಹಾಗೂ ಗುಣಹೊಂದುತ್ತೇವೆ. ಕೆಲವೊಮ್ಮೆ ಪೂಜಾರಿಯವರು ಹಾವು ಕಚ್ಚಿದವರ ಮೈಮೇಲೆ ಪೊರಕೆಯೊಂದನ್ನು ಆಡಿಸುತ್ತಾರೆ. ಅಷ್ಟೇ, ನಮಗೆ ಇದುವರೆಗೂ ಯಾವುದೇ ವೈದ್ಯರ ನೆರವಿನ ಅಗತ್ಯ ಬಿದ್ದಿಲ್ಲ ಎಂದು ಮೊಶರು ಗ್ರಾಮದ ಇನ್ನೋರ್ವ ನಿವಾಸಿ ಸುಚಿತಾ ದೇವಿಯವರು ತಿಳಿಸುತ್ತಾರೆ.

ಮನೆತುಂಬಾ ಹಾವುಗಳದ್ದೇ ಕಾರುಬಾರು!

ಮನೆತುಂಬಾ ಹಾವುಗಳದ್ದೇ ಕಾರುಬಾರು!

ಈ ಗ್ರಾಮದಲ್ಲಿ ಕೇವಲ ಒಂದೇ ಬಗೆಯ ಸರ್ಪಗಳಿಲ್ಲ, ಬದಲಿಗೆ ಕರಿನಾಗರ, ಗೋಧಿನಾಗರದಿಂದ ಹಿಡಿದು ಇಲಿಗಳನ್ನು ಆಹಾರವಾಗಿ ಸೇವಿಸುವ ಕೇರೆ ಮತ್ತು ಇತರ ಹಾವುಗಳೂ ನಿರ್ಭಯವಾಗಿ ಓಡಾಡುತ್ತವೆ. ಇವುಗಳಿಗೆ ಜನರ ಒಡನಾಟ ಇಷ್ಟೊಂದು ಅಭ್ಯಾಸವಾಗಿ ಹೋಗಿದೆ ಎಂದರೆ ಜನರ ನಡುವೆಯೇ ಇವು ಸರಾಗವಾಗಿ ಯಾವುದೇ ಅಳುಕಿಲ್ಲದೇ ಓಡಾಡುತ್ತವೆ. ಮನೆಯಲ್ಲಿ ತರಕಾರಿ ಹೆಚ್ಚುತ್ತಿರುವ ಗೃಹಿಣಿ ಈಗತಾನೇ ಕತ್ತರಿಸಿಟ್ಟ ತರಕಾರಿಯ ತುಂಡುಗಳ ಮೇಲೆ, ಬಲಗಾಲು ತೊಳೆದು ಎಡಗಾಲು ತೊಳೆಯುತ್ತಿರುವ ಮಗುವಿನ ಬಲಪಾದದ ಮೇಲೆ, ಇನ್ನೂ ಅಂಬೆಗಾಲಿಕ್ಕುತ್ತಿರುವ ಕಂದನ ಬೆನ್ನಿನ ಮೇಲೇ ಇವು ಹರಿದು ಹೋಗುತ್ತವೆ. ಸಾಮಾನ್ಯವಾಗಿ ಹಾವುಗಳು ತಿಂಗಳಿಗೂ ಎರಡು ತಿಂಗಳಿಗೋ ಒಮ್ಮೆ ಆಹಾರ ಸ್ವೀಕರಿಸುತ್ತವೆ ಹಾಗು ಸುಮಾರು ಆರು ತಿಂಗಳವರೆಗೂ ಆಹಾರವಿಲ್ಲದೇ ಬದುಕಬಲ್ಲುದು.

Image Courtesy

ಇದೆಲ್ಲಾ ಭಕ್ತಿಯ ಮಹಿಮೆಯಂತೆ!

ಇದೆಲ್ಲಾ ಭಕ್ತಿಯ ಮಹಿಮೆಯಂತೆ!

ಈ ಗ್ರಾಮದಲ್ಲಿ ಹಾವುಗಳ ಬಗ್ಗೆ ಭಯಕ್ಕಿಂತಲೂ ಭಕ್ತಿಯೇ ಹೆಚ್ಚಿರುವುದೇ ಈ ವಿದ್ಯಮಾನಕ್ಕೆ ಪ್ರಮುಖ ಕಾರಣ. ಈ ಗ್ರಾಮದ ಮಂದಿರದ ಸ್ಥಾಪನೆಯ ಹಿಂದೆ ಬೆಹುಲ ಮತ್ತು ಲೋಖಿಂದರ್ ಎಂಬ ದಂತಕಥೆಯ ಪಾತ್ರಗಳ ಉಲ್ಲೇಖವಿದೆ. ಲೋಖಿಂದರ್ ಎಂಬ ವ್ಯಕ್ತಿಯನ್ನು ನಾಗದೇವತೆ ಮಾನಸ ಕಚ್ಚಿದ ಬಳಿಕ ಆತನ ಪತ್ನಿ ಬೆಹುಲ ಘೋರ ತಪಸ್ಸನ್ನು ಆಚರಿಸಿ ನಾಗದೇವತೆ ತನ್ನ ವಿಷವನ್ನು ಕಳೆದುಕೊಳ್ಳುವಂತೆ ಮಾಡಿದ್ದಳಂತೆ. ನಾಗದೇವತೆಗೆ ವಿಷವೆಂದರೆ ಪ್ರಾಣಕ್ಕೆ ಸಮನಾದ ಕಾರಣ ಲೋಖಿಂದರನ ಪ್ರಾಣವನ್ನು ವಾಪಸ್ ಕೊಟ್ಟರೇನೇ ವಿಷವನ್ನೂ ಕೊಡುವುದು ಎಂಬ ಕರಾರು ಹಾಕಿದ್ದಳಂತೆ. ಆ ಪ್ರಕಾರ ಲೋಖಿಂದರನ ಪ್ರಾಣವನ್ನು ಹಿಂದೆ ಕೊಟ್ಟು ತನ್ನ ವಿಷವನ್ನು ಮಾನಸ ಪಡೆದಳಂತೆ.

Image Courtesy

ದೇವತೆಯ ಅನುಗ್ರಹ

ದೇವತೆಯ ಅನುಗ್ರಹ

ಅಷ್ಟೇ ಅಲ್ಲ, ಈ ಪ್ರದೇಶದ ಸುತ್ತ ಮುತ್ತಲ ಏಳು ಗ್ರಾಮಗಳ ಜನರಿಗೆ ನಾನು ವಿಷವುಣಿಸಿ ತೊಂದರೆ ಕೊಡಲಾರೆ ಎಂದು ಅಭಯವಚನ ನೀಡಿದಳಂತೆ. ಈ ದೇವತೆಯನ್ನು ಅಂದಿನಿಂದ ಜಾನಕೇಶ್ವರಿಯ ರೂಪದಲ್ಲಿ ಆರಾಧಿಸಲಾಗುತ್ತಿದೆ. ಇಲ್ಲಿ ಜಾನಕೇಶ್ವರಿಯ ಜನಕ ಎಂದರೆ ಸೀತೆಯ ತಂದೆ ಜನಕನಲ್ಲ, ಬದಲಿಗೆ ಬೆಹುಲ ಧರಿಸಿದ್ದ ಬಳೆಗಳ ಘನಘನ ನಾದದ 'ಝನಕ'ದಿಂದ ಬಂದಿದ್ದು ವಾಸ್ತವ ಹೆಸರು "ಝಾನಕೇಶ್ವರಿ" ದೇವಾಲಯವಾಗಿದೆ.

English summary

Snakes don't scare residents in seven villages of West Bengal

Believe it or not, seven villages in Bhatar Block of Burdwan District in West Bengal have lived with dreaded snakes for over five centuries. Be it fields, roads, kitchens or cowsheds, next to the ponds one can find the hissing creepers in the entire neighbourhood of these villages namely Posla, Choto Posla, Palsana, Bodo Mosaru, Palsanatola, Mosaru and Poslahat. Villagers have even dedicated a temple to the snake Goddess and named it Jhankeshwari Temple.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more