For Quick Alerts
ALLOW NOTIFICATIONS  
For Daily Alerts

ಸೌದಿ ಅರೇಬಿಯಾದಲ್ಲಿ 'ಮಹಿಳೆಯರು' ಅಪ್ಪಿತಪ್ಪಿಯೂ ಹೀಗೆಲ್ಲಾ ಮಾಡಬಾರದು!!

By Divya Pandith
|

ವಿಜ್ಞಾನ ತಂತ್ರಜ್ಞಾನದಲ್ಲಿ ಗಣನೀಯವಾಗಿ ಸಾಧನೆ ಗೈದು, ಆಧುನಿಕ ಪ್ರಪಂಚದಲ್ಲಿ ನಾವು ಬದುಕುತ್ತಿದ್ದೇವೆ. ಹೀಗಿದ್ದರೂ ಇಂದಿಗೂ ಕೆಲವು ದೇಶಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಗದಿರುವುದು ಶೋಚನೀಯ. ಪುರುಷರ ಅಧೀನದಲ್ಲಿಯೇ ಬದುಕಬೇಕು. ಕೆಲವು ಕಟ್ಟಪ್ಪಣೆಗಳನ್ನು ನಿರ್ಲಕ್ಷಿಸಿ ಬದುಕಬಾರದು ಎನ್ನುವ ನೀತಿಯಡಿಯಲ್ಲಿಯೇ ಮಹಿಳೆಯರ ಜೀವನ ಸಾಗಬೇಕಿದೆ. ಅಂತಹ ಒಂದು ಸೀಮಿತ ಸ್ವಾತಂತ್ರ್ಯದಲ್ಲಿ ಬದುಕುತ್ತಿರುವವರಲ್ಲಿ ಸೌದಿ ಅರೇಬಿಯಾದ ಮಹಿಳೆಯರು ಸೇರಿಕೊಳ್ಳುತ್ತಾರೆ.

ಕೇವಲ ಪುರುಷರಿಗಷ್ಟೇ ಸ್ವಾತಂತ್ರ್ಯ ಇರುವ ಈ ದೇಶದಲ್ಲಿ ಮಹಿಳೆಯರು ಅಪ್ಪಿತಪ್ಪಿಯೂ 6 ಕೆಲಸಗಳನ್ನು ಮಾಡುವಂತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇದೀಗ ಎಲ್ಲರ ಹುಬ್ಬೇರಿಸುವಂತಹ ಸಂಗತಿಯೊಂದು ಬಹಿರಂಗಗೊಂಡಿದೆ. ಹೌದು, ಇಷ್ಟು ದಿನ ಸೌದಿಯಲ್ಲಿ ಕೇವಲ ಪುರುಷರಷ್ಟೇ ಕಾರು ಚಲಾಯಿಸುವ ಅಧಿಕಾರ ಹೊಂದಿದ್ದರು. ಇದೀಗ ಮಹಿಳೆಯರೂ ಸಹ ಕಾರನ್ನು ಓಡಿಸಬಹುದು ಎನ್ನುವ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಮೊದಲು ಮಹಿಳೆಯರಿಗೆ ವಾಹನ ಚಲಾವಣೆಯ ಪರವಾನಗಿ ನೀಡಲು ನಿಷೇಧಿಸಲಾಗಿತ್ತು. ಇದೀಗ ರಾಜ ಸಲ್ಮಾನ್ ಮಹಿಳೆಯರು ವಾಹನ ಚಲಾಯಿಸಬಹುದು ಎನ್ನುವ ಅನುಮತಿಯನ್ನು ನೀಡಿದ್ದಾರೆ.

ಮುಸಲ್ಮಾನ್ ಸ್ನೇಹಿತರಿದ್ದರೆ, ಭೂರಿ ಭೋಜನಕ್ಕೆ ಮೋಸವಿಲ್ಲ!

ಸೌದಿ ಅರೇಬಿಯಾದ ಪುರುಷರ ಪ್ರಕಾರ ಮಹಿಳೆಯರು ಶಾಪಿಂಗ್ ಅಥವಾ ಹೊರಗಡೆ ಪ್ರಪಂಚಕ್ಕೆ ಹೋದಾಗ ಅವರ ಮಿದುಳು ಪುರುಷರ ಮಿದುಳಿಗಿಂತ ಕಾಲು ಭಾಗ ಕುಗ್ಗುತ್ತದೆ, ಚಿಂತನೆಯ ಶಕ್ತಿ ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ. ಹಾಗಾಗಿಯೇ ಅವರಿಗೆ ವಾಹನ ಚಲಾಯಿಸುವ ಅಧಿಕಾರವನ್ನು ನೀಡಿರಲಿಲ್ಲ ಎಂದು ಹೇಳುತ್ತಾರೆ. ಸೌದಿಯ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ಸಹ ಇರಲಿಲ್ಲ 2015ರ ವೇಳೆ ಪುರಸಭೆಯ ಚುನಾವಣೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಿದರು.

ಈ ದೇಶದಲ್ಲಿ ಮಹಿಳೆಯರಿಗೆ ಸಾರ್ವಜನಿಕ ನಡವಳಿಕೆಯಲ್ಲಿ ಇನ್ನೂ ತೀವ್ರವಾದ ನಿರ್ಬಂಧಗಳಿವೆ. ಪ್ರಮುಖವಾಗಿ ಆರು ವಿಷಯಗಳಿಗೆ ಮಹಿಳೆಯರು ತಗ್ಗಿ ಬಗ್ಗಿ ನಡೆಯಲೇ ಬೇಕು. ಅಲ್ಲಿ ಯಾವುದೇ ರೀತಿಯ ಸ್ವಾತಂತ್ರ್ಯ ಹಾಗೂ ಹಕ್ಕಿನ ಬಗ್ಗೆ ಮಾತನಾಡುವ ಅಧಿಕಾರವನ್ನು ಪಡೆದುಕೊಂಡಿರುವುದಿಲ್ಲ. ಹಾಗಾದರೆ ಆ ಆರು ವಿಷಯಗಳು ಯಾವವು ಎನ್ನುವ ಕುತೂಹಲವಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಪುರುಷರ ಅನುಮತಿ ಇಲ್ಲದೆ ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವಂತಿಲ್ಲ

ಪುರುಷರ ಅನುಮತಿ ಇಲ್ಲದೆ ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವಂತಿಲ್ಲ

ಸೌದಿಯಲ್ಲಿ ಮಹಿಳೆಯರು ಮನಬಂದಂತೆ ನಿರ್ಧಾರಗಳನ್ನು ಅಥವಾ ಕೆಲಸಗಳನ್ನು ಕೈಗೊಳ್ಳುವಂತಿಲ್ಲ. ಯಾವುದೇ ಬಗೆಯ ಒಂದು ನಿರ್ದಿಷ್ಟ ವಿಚಾರದ ಕುರಿತು ನಿರ್ಧಾರ ಕೈಗೊಳ್ಳುವಾಗ ಪುರುಷರ ಪರವಾನಗಿ ಪಡೆದುಕೊಳ್ಳಬೇಕು. ಅವರ ಮಾತನ್ನು ಮೀರಿ ನಡೆಯುವಂತಿಲ್ಲ. ಇದೀಗ ವಾಹನ ಚಲಾವಣೆಗೆ ಪುರುಷರೇ ಸಮ್ಮತಿ ನೀಡಿರುವುದರಿಂದ ಮಹಿಳೆಯರು ವಾಹನ ಚಲಾವಣೆಯ ಕೆಲಸಕ್ಕೆ ಮುಂದಾಗಬಹುದಷ್ಟೆ.

ಪುರುಷರ ಅನುಮತಿ ಇಲ್ಲದೆ ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವಂತಿಲ್ಲ

ಪುರುಷರ ಅನುಮತಿ ಇಲ್ಲದೆ ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವಂತಿಲ್ಲ

ಮಹಿಳೆಯರಿಗೆ ಅಧಿಕೃತ ಕಾವಲುಗಾರರು ಅಥವಾ ರಕ್ಷಣೆ ನೀಡುವವರು ಸಾಮಾನ್ಯವಾಗಿ ತಂದೆ, ಸಹೋದರ, ಚಿಕ್ಕಪ್ಪ ಮತ್ತು ಪತಿ. ಇಲ್ಲಿಯ ಎಲ್ಲಾ ಮಹಿಳೆಯರು ಪುರುಷರನ್ನು "ವಲಿ" ಎಂದು ಪರಿಗಣಿಸುತ್ತಾರೆ. ಸಾಮಾಜಿಕವಾಗಿ ಸರ್ಕಾರಿ ಅಧಿಕಾರಿಗಳು, ನ್ಯಾಯಾಲಯಗಳು ರಕ್ಷಣೆ ನೀಡುತ್ತವೆ. ಯಾವುದೇ ಸಮಾರಂಭಗಳಿಗೆ ಭೇಟಿ ನೀಡಲು, ಪ್ರಯಾಣಿಸಲು, ಅಗತ್ಯ ಕೆಲಸಕ್ಕೆ ಮುಂದಾಗಲು ಹಾಗೂ ಇನ್ನಿತರ ಚಟುವಟಿಕೆಯನ್ನು ಕೈಗೊಳ್ಳುವ ಮೊದಲು ಪುರುಷರ ಅನುಮತಿ ಪಡೆದುಕೊಂಡಿರಬೇಕಾಗಿರುತ್ತದೆ.

ಉಡುಗೆ ಮತ್ತು ಮೇಕಪ್ ಮಾಡಿಕೊಳ್ಳಲು ನಿರ್ಬಂಧ

ಉಡುಗೆ ಮತ್ತು ಮೇಕಪ್ ಮಾಡಿಕೊಳ್ಳಲು ನಿರ್ಬಂಧ

ಇಲ್ಲಿ ಮಹಿಳೆಯರು ಸಾಂಪ್ರದಾಯಿಕವಾಗಿ ವರ್ತಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಉಡುಗೆಯನ್ನು ಮನ ಬಂದಂತೆ ಧರಿಸುವಂತಿಲ್ಲ. ಅತಿಯಾದ ಮೇಕಪ್ ಗಳ ಬಳಕೆಯೂ ಮಾಡಬಾರದು. ಮಹಿಳೆಯರು ತಮ್ಮ ಸೌಂದರ್ಯವನ್ನು ಪ್ರದರ್ಶಿಸಿದರೆ ಶೋಷಣೆಗೆ ಒಳಗಾಗಗಬೇಕಾಗುತ್ತದೆ ಎನ್ನುವ ಭಾವ ಪುರುಷರದ್ದು. ಹಾಗಾಗಿ ಮಹಿಳೆಯರು ಸದಾ ಕಪ್ಪು ಬಣ್ಣದ ಬುರಕ ಅಥವಾ ನಿಲುವಾದ ಅಂಗಿಯನ್ನು ತೊಡಬೇಕು. ಇದರಲ್ಲಿ ತಲೆಯ ಮೇಲಿನಿಂದ ಒಂದು ಹೊದಿಕೆ ಬರುತ್ತದೆ. ಅದರಲ್ಲಿ ಕೇವಲ ಕಣ್ಣುಗಳನ್ನು ಮಾತ್ರ ಕಾಣಿಸಬಹುದು. ಇದನ್ನೇ ಅವರು ಮಹಿಳೆಯರ ಧಾರ್ಮಿಕ ಉಡುಗೆ ಎಂದು ಭಾವಿಸುತ್ತಾರೆ.

ಪುರುಷರೊಂದಿಗಿನ ಸಂವಹನ

ಪುರುಷರೊಂದಿಗಿನ ಸಂವಹನ

ಮಹಿಳೆಯರು ಅಪ್ಪಿ ತಪ್ಪಿಯೂ ಅಪರಿಚಿತ ಅಥವಾ ಅನ್ಯ ಪುರುಷರೊಂದಿಗೆ ಸಂವಹನ ನಡೆಸುವಂತಿಲ್ಲ. ಕಚೇರಿ, ಬ್ಯಾಂಕ್, ವಿಶ್ವ ವಿದ್ಯಾಲಯ, ಸಾರ್ವಜನಿಕ ಕ್ಷೇತ್ರಗಳಲ್ಲಿ ವಿಭಿನ್ನ ಲಿಂಗದವರು ಕೆಲಸ ನಡೆಸುತ್ತಾರೆ. ಎಲ್ಲೆಡೆಯು ಸೀಮಿತ ವ್ಯವಹಾರವನ್ನು ನಡೆಸಬೇಕಷ್ಟೆ. ಮನರಂಜನಾ ಕ್ಷೇತ್ರ, ಉದ್ಯಾನವನ, ಕಡಲ ತೀರ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಮಹಿಳೆ ಅನ್ಯ ಪುರುಷರೊಂದಿಗೆ ಓಡಾಡುವುದು ಮಾತನಾಡುವುದನ್ನು ನಿರ್ಬಂಧಿಸಿದೆ. ಹಾಗೊಮ್ಮೆ ನಿಯಮಕ್ಕೆ ವಿರುದ್ಧವಾಗಿ ವರ್ತಿಸಿದರೆ ಶಿಕ್ಷೆಗೆ ಒಳಗಾಗಬೇಕಾಗುವುದು. ಒಟ್ಟಿನಲ್ಲಿ ಮಹಿಳೆಯರು ಸಂದಿಗ್ಧಸ್ಥಿತಿಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎನ್ನಬಹುದು.

ಈಜುಕೊಳದ ಬಳಕೆ

ಈಜುಕೊಳದ ಬಳಕೆ

ಮಹಿಳೆಯರು ಸಾರ್ವಜನಿಕ ಈಜುಕೊಳವನ್ನು ಬಳಸುವಂತಿಲ್ಲ. ಆದರೆ ಕೆಲವು ಖಾಸಗಿಯಾಗಿರುವ ಮತ್ತು ಮಹಿಳೆಯರಿಗೆ ಮಾತ್ರ ಸೀಮಿತವಾಗಿರುವಂತಹ ಜಿಮ್ ಮತ್ತು ಸ್ಪಾ ಗಳಲ್ಲಿರುವ ಈಜುಕೊಳದಲ್ಲಿ ಈಜ ಬಹುದು. ಆರ್ಲೆನ್ ಗೆಟ್ಜ್‍ನ ಸಂಪಾದಕರಾದ ರಿಯಾಯ್ಟರ್ ಅವರ ಅನುಭವ ಹೇಳುವ ಪ್ರಕಾರ "ರಿಯಾದ್ ಹೋಟೆಲ್" ಒಂದರ ಸಾರ್ವಜನಿಕ ಜಿಮ್ ಮತ್ತು ಈಜು ಕೊಳವನ್ನು ಬಳಸಿಕೊಳ್ಳಲು ಮುಂದಾದಾಗ, ಅಲ್ಲಿಯ ಸಿಬ್ಬಂದಿ ಈಜುಕೊಳದಲ್ಲಿ ಪುರುಷರಿದ್ದಾರೆ ಎಂದು ಭಯಾನಕವಾಗಿ ನೋಡಿ ಹೇಳಿದರು. ಆ ಕ್ಷಣ ಒಂದು ಬಗೆಯ ಭಯದ ಭಾವನೆ ಉಂಟಾಯಿತು ಎಂದು.

ಕ್ರೀಡೆಯಲ್ಲಿ ಪಾಲ್ಗೊಳ್ಳುವುದು

ಕ್ರೀಡೆಯಲ್ಲಿ ಪಾಲ್ಗೊಳ್ಳುವುದು

ಮಹಿಳೆಯರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅಧಿಕಾರವಿಲ್ಲ. ಮಹಿಳೆಯರು ಕ್ರೀಡಾಪಟುಗಳಾಗಬೇಕು ಎನ್ನುವ ವಿಚಾರವನ್ನು ಮುಂದಿಟ್ಟಾಗ ಒಲಿಂಪಿಕ್ಸ್ ಸಮಿತಿಯ ಸಲಹೆಗಾರರಾದ ಪ್ರಿನ್ಸ್ ಫಹಾದ್ ಬಿನ್ ಜಲಾವಿ ಅಲ್ ಸೌದ್ "ನಮ್ಮ ಸಮಾಜ ಬಹಳ ಸಂಪ್ರದಾಯವಾದಿಯಾಗಿದೆ. ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದನ್ನು ಒಪ್ಪಿಕೊಳ್ಳುವುದು ಕಷ್ಟಕರವಾದ ಸಮಯ ಎಂದು ಹೇಳಿದ್ದಾರೆ. 2012ರಲ್ಲಿ ಒಮ್ಮೆ ಒಲಂಪಿಕ್ ಮಹಿಳಾ ಕ್ರೀಡಾಪಟುಗಳಾಗಿ ಕಳುಹಿಸಿದಾಗ ಗುಮಾಸ್ತರು ಅವರನ್ನು ವೇಶ್ಯೆಯರು ಎಂದು ಖಂಡಿಸಿದರು. ಆದಾಗ್ಯೂ ಸಪ್ಟೆಂಬರ್ 2017ರಲ್ಲಿ ಸೌದಿ ಅರೇಬಿಯಾದ ಕ್ರೀಡಾಂಗಣವು ಮೊಟ್ಟ ಮೊದಲ ಬಾರಿಗೆ ಮಹಿಳಾ ಪ್ರೇಕ್ಷಕರನ್ನು ಸ್ವಾಗತಿಸಿತು.

ಶಾಪಿಂಗ್ ಮಾಡುವಾಗ ಡ್ರೆಸ್ ರೂಮ್ ಬಳಸುವಂತಿಲ್ಲ!

ಶಾಪಿಂಗ್ ಮಾಡುವಾಗ ಡ್ರೆಸ್ ರೂಮ್ ಬಳಸುವಂತಿಲ್ಲ!

ಇಲ್ಲಿಯ ಮಹಿಳೆಯರು ಶಾಪಿಂಗ್ ಮಾಡುವಾಗ ಬಟ್ಟೆಯ ಅಳತೆ ನೋಡಲು ಡ್ರೆಸ್ ಚೇಂಜಿಂಗ್ ರೂಮ್ ಬಳಸುವಂತಿಲ್ಲ. ಅದು ಪುರುಷರಿಗೆ ಮಾತ್ರ ಸೀಮಿತವಾಗಿರುತ್ತದೆ. ಸೌದಿ ಅರೇಬಿಯಾದಲ್ಲಿ ವಾಸಿಸುವ ಮಹಿಳೆಯರು ನೀವು ಯಾರು? ಯಾರೊಂದಿಗೆ ಜೀವನ ನಡೆಸುತ್ತಿದ್ದೀರಿ? ಯಾರನ್ನು ಕೇಳುತ್ತೀರಿ? ಯಾರೊಂದಿಗೆ ಇದ್ದೀರಿ? ಮತ್ತು ಎಲ್ಲಿದ್ದೀರಿ? ಎನ್ನುವ ಕಲ್ಪನೆಗೆ ಸೂಕ್ತ ಉತ್ತರದೊಂದಿಗೆ ಬದುಕಬೇಕು. ಮಹಿಳೆಯರಿಗೆ ಸ್ವಾತಂತ್ರ್ಯವೇ ಇಲ್ಲದ ದೇಶ ಸೌದಿ ಅರೇಬಿಯಾ ಎನ್ನಬಹುದು. ಇತ್ತೀಚೆಗೆ ಕೆಲವು ಆದರ್ಶ ವಾದಿಗಳಿಂದ ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯದ ಬಗ್ಗೆ ಸ್ವಲ್ಪ ಚರ್ಚೆ ನಡೆಸುತ್ತಿರುವುದು ಸಮಾಧಾನದ ವಿಚಾರ ಎನ್ನಬಹುದಷ್ಟೆ.

'ಹಿಡನ್ ಕ್ಯಾಮೆರಾ' ಪತ್ತೆ ಹಚ್ಚುವ ರಹಸ್ಯ, ತಪ್ಪದೇ ಓದಿ

English summary

Six things women in Saudi Arabia cannot do

Although women were not technically banned from driving under Saudi law, local authorities consistently refused to issue women with a driving licence, resulting in a de facto ban. Many Islamic scholars justified the ban on the grounds that allowing women the means to travel without supervision would inevitably mean contact with unrelated men, and thus would undermine the country’s strict principles of gender segregation.
X
Desktop Bottom Promotion