ನೀವು ನಂಬಲೇಬೇಕು! ಭುಜಗಳೇ ನಮ್ಮ ವ್ಯಕ್ತಿತ್ವದ ಹೆಗ್ಗುರುತುಗಳು!

By: Deepak
Subscribe to Boldsky

ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಹಲವಾರು ಬಗೆಯಲ್ಲಿ ಅನಾವರಣಗೊಳ್ಳುತ್ತದೆ. ಮುಖವನ್ನು ನೋಡಿ ವ್ಯಕ್ತಿತ್ವ ಹೇಳುವುದು, ಜಾತಕ ನೋಡಿ ವ್ಯಕ್ತಿತ್ವ ಹೇಳುವುದು ಹೀಗೆ ನಾನಾ ಬಗೆಯಲ್ಲಿ ವ್ಯಕ್ತಿತ್ವವನ್ನು ಹೇಳುತ್ತಾರೆ. ಆದರೆ ಭುಜವನ್ನು ನೋಡಿ ವ್ಯಕ್ತಿತ್ವವನ್ನು ಹೇಳುತ್ತಾರೆ ಎಂಬುದು ಅಚ್ಚರಿಯಾದರೂ ಸತ್ಯ. ಭುಜಗಳು ನಮ್ಮ ವ್ಯಕ್ತಿತ್ವದ ಹೆಗ್ಗುರುತುಗಳು ಎಂದರೆ ತಪ್ಪಾಗಲಾರದು.

ಭುಜದ ಮೇಲೆ ಅಥವಾ ಹೆಗಲ ಮೇಲೆ ಜವಾಬ್ದಾರಿಯನ್ನು ಹೊತ್ತುಕೊಂಡೆ ಎಂಬ ನುಡಿಗಟ್ಟನ್ನು ನಾವು ಬಳಸಿರುತ್ತೇವೆ ಇಲ್ಲವೇ ಕೇಳಿರುತ್ತೇವೆ. ಅದೇ ಭಾರ ಹೊರುವ ಮತ್ತು ನಿಮ್ಮ ತಲೆಯನ್ನು ನೆಟ್ಟಗೆ ನಿಲ್ಲಿಸಲು ಸಹಾಯ ಮಾಡುವ ಆ ಭುಜಗಳೇ ನಿಮ್ಮ ಕುರಿತು ಬಹಳಷ್ಟು ಮಾಹಿತಿಗಳನ್ನು ನೀಡುತ್ತವೆ. ಮುಂದೆ ಓದಿ!....

ನಿಮ್ಮ ಭುಜ ಸ್ವಲ್ಪ ಮಟ್ಟಿಗೆ ಬಾಗಿದ್ದಾಗ!

ನಿಮ್ಮ ಭುಜ ಸ್ವಲ್ಪ ಮಟ್ಟಿಗೆ ಬಾಗಿದ್ದಾಗ!

ಯಾವಾಗ ವ್ಯಕ್ತಿಯು ಸ್ವಲ್ಪ ಮಟ್ಟಿಗೆ ಬಾಗಿರುತ್ತಾನೋ ಆ ವ್ಯಕ್ತಿಯು ಸ್ವಲ್ಪ ಅಂತರ್ಮುಖಿ ಎಂದು ಹೇಳಲಾಗುತ್ತದೆ. ಇವರು ಸಾಮಾಜಿಕ ಜೀವನದಿಂದ ತಮ್ಮನ್ನು ತಾವು ದೂರವರಿಸಿಕೊಳ್ಳುತ್ತಾರೆ. ಇವರು ಮೊದಲು ಮೆದುಳಿಗೆ ಕೆಲಸ ಕೊಡುತ್ತಾರೆ ಮತ್ತು ನಂತರ ದೇಹಕ್ಕೆ ಕೆಲಸ ಕೊಡುತ್ತಾರೆ. ಇವರು 40 ವರ್ಷಕ್ಕೆ ಬಂದ ಕೂಡಲೆ ಆರೋಗ್ಯದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಇವರಿಗೆ ಆಪ್ತ ಸ್ನೇಹಿತರು ಇರುವುದು ಅಪರೂಪ. ಇವರಿಗೆ ಹಲವಾರು ಮಾನಸಿಕ ಸಮಸ್ಯೆಗಳು ಇರುತ್ತವೆ.

ನಿಮ್ಮ ಭುಜಗಳು ತುಂಬಾ ಬಾಗಿದಾಗ

ನಿಮ್ಮ ಭುಜಗಳು ತುಂಬಾ ಬಾಗಿದಾಗ

ಈ ಭಂಗಿಯು ಆರೋಗ್ಯಕ್ಕೆ ಮಾರಕ ಎಂದು ಹೇಳಲಾಗುತ್ತದೆಯಲ್ಲದೆ, ವ್ಯಕ್ತಿತ್ವದ ಪರವಾಗಿ ಸಹ ಇದು ದುರದೃಷ್ಟದ ಸಂಕೇತ ಎಂದು ಹೇಳಬಹುದು. ಈ ಭಂಗಿಯನ್ನು ಬಳಸುವವರು ಸಂಬಂಧಗಳನ್ನು ಕಾಪಾಡಿಕೊಳ್ಳುವುದರಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೊತೆಗೆ ತಮ್ಮ ಆತ್ಮೀಯರ ಜೊತೆಗೆ ಹಾಗು ಸಂಗಾತಿಗಳ ಜೊತೆಗೆ ಸಹ ಇವರ ಸಂಬಂಧ ಚೆನ್ನಾಗಿರುವುದಿಲ್ಲ. ಬುದ್ಧಿವಂತಿಕೆ ಇದ್ದರೂ ಸಹ ಇವರು ವೃತ್ತಿಪರವಾಗಿ ಏಳಿಗೆ ಹೊಂದಲು ಕಷ್ಟಪಡುತ್ತಾರೆ.

ಅಂಗೈಯ ಹುಟ್ಟು ಮಚ್ಚೆ-ವ್ಯಕ್ತಿಯ ವ್ಯಕ್ತಿತ್ವ ಹೇಳುವ ಭವಿಷ್ಯವಾಣಿ!

ಭುಜಗಳು ಬಾಗಿರುವುದು ಮತ್ತು ಕತ್ತು ಹೊರ ಚಾಚಿರುವುದು

ಭುಜಗಳು ಬಾಗಿರುವುದು ಮತ್ತು ಕತ್ತು ಹೊರ ಚಾಚಿರುವುದು

ಈ ಆಕಾರದಲ್ಲಿರುವ ಭುಜಗಳನ್ನು ಹೊಂದಿರುವವರು ನಡೆಯುವಾಗ ತಮ್ಮ ಕಾಲುಗಳನ್ನು ಎಳೆದುಕೊಂಡು ನಡೆಯುತ್ತಾರೆ. ಇದು ಒಳ್ಳೆಯ ಭಂಗಿ ಅಲ್ಲ. ಏನೋ ಕಾಯಿಲೆ ವ್ಯಕ್ತಿಯ ಹಾಗೆ ಕಾಣಲು ಆರಂಭಿಸುತ್ತಾರೆ ಇವರು ಈ ಅಭ್ಯಾಸದಿಂದಾಗಿ. ಇವರು ಜೀವನದ ಎಲ್ಲಾ ಘಟ್ಟದಲ್ಲಿ ಕಷ್ಟ ಅನುಭವಿಸುತ್ತಾರೆ. ಇವರ ತಾಳ್ಮೆಯು ಯಾವಾಗಲೂ ಕಡಿಮೆ ಇರುತ್ತದೆ.

ವ್ಯಕ್ತಿಯ ವ್ಯಕ್ತಿತ್ವ ತಿಳಿಯಲು ಮಲಗುವ ಭಂಗಿ ಸಾಕು!

ಭುಜಗಳು ಮೇಲಕ್ಕೆ ಎತ್ತಿಕೊಂಡಾಗ

ಭುಜಗಳು ಮೇಲಕ್ಕೆ ಎತ್ತಿಕೊಂಡಾಗ

ಯಾವಾಗ ಭುಜಗಳು ಮೇಲಕ್ಕೆ ಎತ್ತಿಕೊಂಡಿರುತ್ತವೆಯೋ, ಆಗ ಆ ವ್ಯಕ್ತಿಯು ನೇರವಾದ ಹೊಟ್ಟೆ ಕಾಣುವ ಹಾಗೆ ಓಡಾಡುತ್ತಿರುತ್ತಾನೆ. ಇವರಿಗೆ ಮದುವೆ ನಿಧಾನವಾಗಿ ಆಗುತ್ತದೆ, ವೈವಾಹಿಕ ಸಮಸ್ಯೆಗಳು ಬರುತ್ತವೆ ಮತ್ತು ಕೆಲಸವನ್ನು ಕಳೆದುಕೊಂಡು ಸುಮ್ಮನೆ ಮನೆಯಲ್ಲಿ ಕೂರುತ್ತಾರೆ. ತಮ್ಮ ಅಹಂ ಅನ್ನು ಬಿಟ್ಟುಕೊಡಲು ಸಾಧ್ಯವಾಗದೆ ಇವರು ಇತರರ ಮೇಲೆ ಕೋಪದಿಂದ ವರ್ತಿಸುತ್ತಾರೆ.

ಆರಾಮವಾದ ಭುಜಗಳು

ಆರಾಮವಾದ ಭುಜಗಳು

ಈ ಬಗೆಯ ಭುಜಗಳನ್ನು ಹೊಂದಿರುವವರು ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುತ್ತಾರೆ. ಇವರಿಗೆ ಯಾವಾಗ ಮತ್ತು ಹೇಗೆ ಭಾವನೆಗಳನ್ನು ನಿಯಂತ್ರಣ ಮಾಡಬೇಕೆಂಬ ಅರಿವು ಇರುತ್ತದೆ. ಇವರು ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ತರಲು ಹೆಣಗಾಡುತ್ತಾರೆ. ಇವರಿಗೆ 36 ವರ್ಷಗಳ ಅವಧಿಯಲ್ಲಿ ಯಶಸ್ಸು ಕೈಗೆಟುಕುತ್ತದೆ.

ಯಾವಾಗ ನಿಮ್ಮ ಭುಜಗಳು ಆರಾಮವಾಗಿ ತಿರುಚಿದ ಸ್ನಾಯುಗಳನ್ನು ಹೊಂದಿದ್ದಲ್ಲಿ

ಯಾವಾಗ ನಿಮ್ಮ ಭುಜಗಳು ಆರಾಮವಾಗಿ ತಿರುಚಿದ ಸ್ನಾಯುಗಳನ್ನು ಹೊಂದಿದ್ದಲ್ಲಿ

ಈ ಬಗೆಯ ಭಂಗಿಯನ್ನು ಹೊಂದಿರುವವರ ಜಾತಕದಲ್ಲಿ "ಶನಿ" ದುರ್ಬಲನಾಗಿರುತ್ತಾನೆ. ಇವರು ಬೆನ್ನು ಮೂಳೆ, ಹೃದಯ ಹಾಗು ರಕ್ತದ ಕುರಿತಾದ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳಿಂದಾಗಿ ಇವರು ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಹಿನ್ನಡೆಯನ್ನು ಕಾಣುತ್ತಾರೆ.

ಭುಜಗಳು ಹೊರ ಮುಖವಾಗಿ ಹಿಗ್ಗಲ್ಪಟ್ಟಿದ್ದಲ್ಲಿ

ಭುಜಗಳು ಹೊರ ಮುಖವಾಗಿ ಹಿಗ್ಗಲ್ಪಟ್ಟಿದ್ದಲ್ಲಿ

ಈ ಬಗೆಯ ಭಂಗಿಯಲ್ಲಿ ನಡೆದಾಡುವವರು ತುಂಬಾ ಭಾವುಕರಾಗಿರುತ್ತಾರೆ ಮತ್ತು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಇವರು ಮುಂದೆ ಪಶ್ಚಾತ್ತಾಪಪಡುತ್ತಾರೆ. ಇದರ ಜೊತೆಗೆ ಇವರು ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಹೆಚ್ಚು ತೊಡಗಿಸಿಕೊಳ್ಳುವುದಿಲ್ಲ.

ಹೌದು ಸ್ವಾಮಿ! ಮೂಗು ನೋಡಿ, ವ್ಯಕ್ತಿತ್ವ ತಿಳಿಯಬಹುದಂತೆ!

English summary

Shoulder Shape Reveals A Lot About You

Shoulders play a crucial part in our body by providing the much needed stability and strength to our spine and the rest of the body. A look at it can help reveal as to how much strength a person has and how hardworking the person is in reality. So, check out on what the shape of your shoulders reveals about you. Read on!
Subscribe Newsletter