ಒಂದೇ ಕ್ಷಣದ ನಿರ್ಲಕ್ಷ್ಯ ದುರಂತಕ್ಕೆ ಕಾರಣವಾಗಬಹುದು!! ಎಚ್ಚರ...

By: Arshad
Subscribe to Boldsky

ಯಾವುದೇ ವ್ಯಕ್ತಿಗೆ ಮಕ್ಕಳ ಪಾಲನೆ ಅತಿ ಕಷ್ಟದ ಕೆಲಸವಾಗಿದೆ. ಸದಾ ಮಕ್ಕಳ ಕಡೆಗೆ ಒಂದು ಗಮನವಿಟ್ಟೇ ಇರಬೇಕಾದುದರಿಂದ ಸದಾ ತುದಿಗಾಲ ಮೇಲೇ ಇರಬೇಕಾಗುತ್ತದೆ. ಯಾವುದೋ ಒಂದು ಕ್ಷಣದ ನಿರ್ಲಕ್ಷ್ಯ ದುರಂತಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಇದು ಸಾವಿಗೂ ಅಥವಾ ಭರಿಸಲಾಗದ ನಷ್ಟಕ್ಕೂ ಕಾರಣವಾಗಬಹುದು.

ಇಂದಿನ ಲೇಖನದಲ್ಲಿ ನಾವೊಂದು ವಿಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಇದು ಎಲ್ಲರೂ ಕಡ್ಡಾಯವಾಗಿ ನೋಡಬೇಕಾದ ಚಿತ್ರವಾಗಿದ್ದು ಮನೆಯಲ್ಲಿ ಪುಟ್ಟಮಕ್ಕಳು ಅಥವಾ ಶಿಶುಗಳನ್ನು ದೊಡ್ಡ ಮಕ್ಕಳೊಂದಿಗೆ ಒಬ್ಬರೇ ಬಿಟ್ಟು ಹೋಗಬಾರದು ಎಂಬ ಪಾಠವನ್ನು ಕಲಿಸುತ್ತದೆ. ಸಾಮಾನ್ಯವಾಗಿ ಮಕ್ಕಳು ತಮ್ಮ ಹಿರಿಯರನ್ನು ಅನುಕರಿಸುತ್ತಾರೆ. ದೊಡ್ಡವರು ಪುಟ್ಟ ಮಕ್ಕಳನ್ನು ಎತ್ತುವಂತೆ ಇವರೂ ಮಗುವನ್ನು ಎತ್ತಲು ಹೋಗಿ ಕೆಳಗೆ ಬೀಳಿಸುವ ಮೂಲಕ ಅಪಾಯವನ್ನು ಎದುರು ಹಾಕಿಕೊಳ್ಳುತ್ತಾರೆ....   

ಇಬ್ಬರು ಪುಟ್ಟ ಮಕ್ಕಳು...

ಇಬ್ಬರು ಪುಟ್ಟ ಮಕ್ಕಳು...

ನೀವು ನೋಡಬಹುದು, ಇಲ್ಲಿ ಇಬ್ಬರು ಪುಟ್ಟ ಮಕ್ಕಳು ನೆಲದ ಮೇಲಿನ ಹಾಸಿಗೆಯ ಮೇಲೆ ಮಲಗಿದ್ದಾರೆ ಹಾಗೂ ಇವರ ಹಿರಿಯ ಸಹೋದರಿಯೊಬ್ಬಳು ಇವರನ್ನು ಗಮನಿಸುತ್ತಿದ್ದಾಳೆ.

ಚಿಕ್ಕ ಮಗು ಅಳುತ್ತಿದೆ

ಚಿಕ್ಕ ಮಗು ಅಳುತ್ತಿದೆ

ಇಬ್ಬರು ಮಕ್ಕಳಲ್ಲಿ ಕಿರಿಯ ಮಗು ಅಳಲು ಪ್ರಾಂಭಿಸುತ್ತದೆ. ಇದು ಹಿರಿಯ ಸಹೋದರಿಯ ಗಮನ ಸೆಳೆಯುತ್ತದೆ.

ಈಕೆ ಮಗುವನ್ನು ಸಾಂತ್ವಾನಗೊಳಿಸಲು ಯತ್ನಿಸುತ್ತಾಳೆ

ಈಕೆ ಮಗುವನ್ನು ಸಾಂತ್ವಾನಗೊಳಿಸಲು ಯತ್ನಿಸುತ್ತಾಳೆ

ಹಿರಿಯ ಸಹೋದರಿ ಮಗುವನ್ನು ಸಂತೈಸಲು ಹಿರಿಯರು ಮಾಡಿದಂತೆಯೇ ಎತ್ತಿಕೊಳ್ಳುತ್ತಾಳೆ. ಸಾಮಾನ್ಯವಾಗಿ ಆಕೆಯ ತಾಯಿ ಎತ್ತಿ ಎದೆಗವಚಿಕೊಳ್ಳುವಂತೆಯೇ ಈಕೆಯೂ ಮಗುವನ್ನು ಅವಚಿಕೊಳ್ಳಲು ಯತ್ನಿಸುತ್ತಾಳೆ. ಆದರೆ ಈ ಪ್ರಯತ್ನ ಒರಟಾಗಿದೆ.

ಈಗ ದುರಂತ ಸಂಭವಿಸಿದೆ.

ಈಗ ದುರಂತ ಸಂಭವಿಸಿದೆ.

ಎದೆಗವಚಿಕೊಳ್ಳಲು ಎತ್ತಿಕೊಂಡ ಈಕೆಯ ಶಕ್ತಿ ಮಗುವನ್ನು ಎತ್ತಿಕೊಳ್ಳಲು ಸಾಕಷ್ಟಿಲ್ಲದ ಕಾರಣ ಮಗು ಈಕೆಯ ಭುಜದ ಹಿಂಭಾಗದಿಂದ ಜಾರಿ ಧಡ್ ಎಂಬ ಶಬ್ಧದೊಂದಿಗೆ ಕೆಳಗೆ ಬಿದ್ದಿದೆ. ನೋವಿನಿಂದ ಮಗು ಜೋರಾಗಿ ಕಿರಿಚಿಕೊಳ್ಳುತ್ತಿದೆ. ಮಗುವನ್ನು ಸಂತೈಸಲು ಈ ಸಹೋದರಿ ಯತ್ನಿಸುತ್ತಿದ್ದಾಳೆ.

ಇದು ಮತ್ತೊಮ್ಮೆ ಸಂಭವಿಸಿತು

ಇದು ಮತ್ತೊಮ್ಮೆ ಸಂಭವಿಸಿತು

ಕೆಲವು ಸೆಕೆಂಡುಗಳ ನಂತರ ಮಗುವಿನ ಅಳುವಿನ ಶಬ್ಧ ಕೇಳಿ ಮಗುವಿನ ತಾಯಿ ಓಡೋಡಿ ಬರುತ್ತಾಳೆ. ಮಗುವಿನ ಅಳುವಿಗೆ ಈ ಹಿರಿಯ ಸಹೋದರಿಯೇ ಕಾರಣ ಎಂದುಕೊಂಡು ಆಕೆಯನ್ನು ಗದರಿಸುತ್ತಾಳೆ. ಈ ಗದರಿಕೆಗೆ ಹೆದರಿದ ಬಾಲಕಿ ಕೈಯಲ್ಲಿದ್ದ ಮಗುವನ್ನು ಕೆಳಕ್ಕೆ ಬೀಳಿಸಿ ಹೊರಗೋಡುತ್ತಾಳೆ. ಈ ಮಗು ಮತ್ತೊಮ್ಮೆ ಕೆಳಕ್ಕೆ ಬಿದ್ದು ನೋವಿನಿಂದ ಚೀರುತ್ತದೆ.

ಬೆಚ್ಚಿಬೀಳಿಸುವ ಈ ವಿಡಿಯೋವನ್ನು ನೋಡಿ

ನಿಮ್ಮ ಪ್ರೀತಿಪಾತ್ರರಲ್ಲಿ ಈ ವೀಡಿಯೋವನ್ನು ಹಂಚಿಕೊಂಡು ಈ ಬಗೆಯ ಪ್ರಮಾದಗಳು ಆಗದಂತೆ ಎಚ್ಚರವಹಿಸಲು ಎಲ್ಲರಲ್ಲಿಯೂ ಕೋರಿಕೊಳ್ಳಿ.

 
English summary

Shocking Video: Why Kids Should Not Be Left Alone With Babies!

Here, in this article, we've shared a video that is a must watch for all, as it reminds us that toddlers should not be left with kids alone. Since kids learn to imitate their elders, it shows how the kids can lift their younger sibling to just drop them down that can be quite ddangerous!
Story first published: Thursday, March 30, 2017, 23:32 [IST]
Please Wait while comments are loading...
Subscribe Newsletter