For Quick Alerts
ALLOW NOTIFICATIONS  
For Daily Alerts

ಅಚ್ಚರಿಯ ಜಗತ್ತು: ಐದು ಮಂದಿ ಸಹೋದರರನ್ನೇ ಮದುವೆಯಾದ ಮಹಿಳೆ!

By Manu
|

ಮಹಾಭಾರತದಲ್ಲಿ ದ್ರೌಪದಿಯು ಪಂಚ ಪಾಂಡವವರನ್ನು ಮದುವೆಯಾದ ಬಗ್ಗೆ ನಾವು ಪುರಾಣಗಳಲ್ಲಿ ಓದಿರುತ್ತೇವೆ. ಅಂತಹ ಘಟನೆ ಯುಗದಲ್ಲಿ ಒಂದು ಮಾತ್ರ ನಡೆಯುವುದು. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಐದು ಮಂದಿಯನ್ನು ಮದುವೆಯಾಗುವುದು ಅಸಂಭವೆನ್ನಬಹುದು.

ಆದರೆ ಇಲ್ಲೊಬ್ಬಳು ಮಹಿಳೆ ಈ ಅಸಂಭವವನ್ನು ಸಂಭವವಾಗಿಸಿದ್ದಾಳೆ. ರಾಜೋ ಎಂಬ ಮಹಿಳೆ ಐದು ಮಂದಿ ಸಹೋದರರನ್ನು ಮದುವೆಯಾಗಿದ್ದಾಳೆ. ಎಲ್ಲಾ ಪತಿಯರು ತನ್ನನ್ನು ತುಂಬಾ ಪ್ರೀತಿಸುತ್ತಿರುವ ಕಾರಣ ನಾನು ತುಂಬಾ ಅದೃಷ್ಟವಂತೆ ಎಂದು ಆಕೆ ಹೇಳಿದ್ದಾಳೆ. ಈ ಊರಿನ ಹುಡುಗಿಯರು ತಮ್ಮ ತಂದೆಯನ್ನೇ ಪತಿಯಾಗಿ ಸ್ವೀಕರಿಸಬೇಕು!

ಮಹಿಳೆ ಮತ್ತು ಆಕೆಯ ಕುಟುಂಬದ ಬಗ್ಗೆ ಇರುವ ಆಸಕ್ತಿಯ ವಿಷಯವನ್ನು ತಿಳಿದುಕೊಳ್ಳಿ. ಈಗಲೂ ಇಂತಹ ಸಂಪ್ರದಾಯಗಳು ಚಾಲ್ತಿಯಲ್ಲಿದೆಯಾ ಎನ್ನುವ ಅಚ್ಚರಿಯೂ ನಮಗೆ ಆಗುತ್ತದೆ. ಇನ್ನಷ್ಟು ತಿಳಿಯಲು ಮುಂದೆ ಕಣ್ಣು ಹಾಯಿಸಿ....

ಆಕೆ ಡೆಹ್ರಾಡೂನ್‌ನವಳು

ಆಕೆ ಡೆಹ್ರಾಡೂನ್‌ನವಳು

ಡೆಹ್ರಾಡೂನ್‌ಗೆ ಸಮೀಪದ ಹಳ್ಳಿಯೊಂದರಲ್ಲಿ ರಾಜೋ ತನ್ನ ಐದು ಮಂದಿ ಪತಿಯರೊಂದಿಗೆ ವಾಸಿಸುತ್ತಾಳೆ. ಆಕೆ ಎಲ್ಲಾ ಪತಿಯರೊಂದಿಗೂ ತುಂಬಾ ಸಂತೋಷದಿಂದ ಇದ್ದಾಳೆಂದು ಹೇಳುತ್ತಾಳೆ.

ಇದು ಕುಟುಂಬದ ಸಂಪ್ರದಾಯ

ಇದು ಕುಟುಂಬದ ಸಂಪ್ರದಾಯ

ಹಲವಾರು ಶತಮಾನಗಳಿಂದಲೂ ಈ ಸಂಪ್ರದಾಯವನ್ನು ಕುಟುಂಬವು ಪಾಲಿಸಿಕೊಂಡು ಬರುತ್ತಾ ಇದೆ ಮತ್ತು ಕುಟುಂಬದ ಸದಸ್ಯರು ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳುತ್ತಾರೆ.

ಈ ಸಂಪ್ರದಾಯಕ್ಕೆ ಪ್ರೇರಣೆ....

ಈ ಸಂಪ್ರದಾಯಕ್ಕೆ ಪ್ರೇರಣೆ....

ಈ ಸಂಪ್ರದಾಯಕ್ಕೆ ಪಂಚಪಾಂಡವರು ಪ್ರೇರಣೆಯಂತೆ! ಮಹಾಭಾರತದಲ್ಲಿ ಐದು ಮಂದಿ ಪಾಂಡವರು ದ್ರೌಪದಿಯನ್ನು ಮದುವೆಯಾಗಿದ್ದರು.

ಈ ಸಂಪ್ರದಾಯಕ್ಕೆ ಮತ್ತೊಂದು ಕಾರಣ

ಈ ಸಂಪ್ರದಾಯಕ್ಕೆ ಮತ್ತೊಂದು ಕಾರಣ

ಗಂಡು ಹಾಗೂ ಹೆಣ್ಣಿನ ನಡುವಿನ ಸಂಖ್ಯಾನುಪಾತವು ಈ ಸಂಪ್ರದಾಯಕ್ಕೆ ಮತ್ತೊಂದು ಕಾರಣವಾಗಿದೆ. ಈ ಪ್ರದೇಶದಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆ ಇರುವ ಕಾರಣದಿಂದಾಗಿ ಐದು ಮಂದಿ ಒಬ್ಬಳನ್ನೇ ಮದುವೆಯಾಗಿದ್ದಾರೆ.

ಆಕೆಯ ಮಕ್ಕಳು

ಆಕೆಯ ಮಕ್ಕಳು

ರಾಜೋಗೆ ಈಗ 18 ತಿಂಗಳ ಮಗುವಿದೆ. ಆದರೆ ಈ ಮಗುವಿಗೆ ತಂದೆ ಯಾರು ಎನ್ನುವ ಬಗ್ಗೆ ಇದುವರೆಗೆ ತಿಳಿದಿಲ್ಲ.

ಆಕೆಯ ಪತಿಯರ ವಯಸ್ಸು 18ರಿಂದ 34

ಆಕೆಯ ಪತಿಯರ ವಯಸ್ಸು 18ರಿಂದ 34

ರಾಜೋ ಮದುವೆಯಾಗಿರುವ ಸಹೋದರರ ವಯಸ್ಸು 18ರಿಂದ 34ರ ನಡುವೆ ಇದೆ. ಯಾರಿಗೂ ಇದರ ಬಗ್ಗೆ ಹೊಟ್ಟೆಕಿಚ್ಚು ಇಲ್ಲ. ರಾಜೋ ಎಲ್ಲಾ ಪತಿಯರೊಂದಿಗೂ ಸಮಾನವಾಗಿ ಸಮಯ ಕಳೆಯುತ್ತಾಳೆ. ಇಂತಹ ಸಂಪ್ರದಾಯಗಳಿಗೆ ಕೊನೆ ಹಾಡಲು ಇನ್ನು ಎಷ್ಟು ಸಮಯ ಬೇಕೋ? ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್‌ಗೆ ಹಾಕಿಬಿಡಿ.

ಇಲ್ಲಿ ಗಂಡನ ತಮ್ಮನೊಂದಿಗೂ ಹಾಸಿಗೆ ಹಂಚಿಕೊಳ್ಳಬೇಕಂತೆ! ಎಲ್ಲಿದೆ ನ್ಯಾಯ?

English summary

Shocking! This Woman Is Married To 5 Brothers!!

When the world is fighting for the rights of 'Triple talak' and other moral issues, there are a few practices, which seem like people are no sooner going to leave! Here, in this article, we are sharing the story of a woman named 'Rajo' who is married to 5 siblings and claims that she is the luckiest woman in her neighbourhood, as all her husbands love her equally.
X
Desktop Bottom Promotion