ನಂಬುತ್ತೀರೋ ಬಿಡುತ್ತೀರೋ, ಆದರೆ ಇದು ಮಾತ್ರ ನಿಜ ಫಟನೆ!

By: manu
Subscribe to Boldsky

ಕೆಲವೊಮ್ಮೆ ಏನೋ ಮಾಡಲು ಹೋಗಿ ಏನೋ ಆಗುವುದು ಇದೆ. ಸಾಹಸ ಮಾಡಲು ಹೋಗಿ ಹಲವಾರು ರೀತಿಯ ಸಮಸ್ಯೆಯನ್ನು ಎದುರಿಸಿದಂತೆ ಉದಾಹರಣೆಗಳು ಇವೆ. ಸಾಹಸ ಮಾಡುವ ಮೊದಲು ಅದರ ಬಗ್ಗೆ ಹೆಚ್ಚಿನ ತಿಳುವಳಿಕೆ ಅತ್ಯಗತ್ಯ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಬಹುದು. ಕೆಲವರು ಪ್ರಾಣಿಗಳೊಂದಿಗೆ ಕಾಳಗ ನಡೆಸುತ್ತಾರೆ. ಇನ್ನು ಕೆಲವರು ಪ್ರಾಣಿಗಳು ಹಸಿ ಮಾಂಸವನ್ನೇ ತಿನ್ನುತ್ತಾರೆ.  ಶ್‌...ಎಚ್ಚರಿಕೆ! ಬಹಳ ಖತರ್ನಾಕ್ ಪ್ರಾಣಿಗಳಿವು....

ಆದರೆ ಜೀವಂತ ಪ್ರಾಣಿಗಳನ್ನು ನುಂಗುವ ಮಂದಿಯೂ ಇದ್ದಾರೆ. ಆದರೆ ಇದು ತುಂಬಾ ಅಪಾಯಕಾರಿ... ಜೀವಂತವಾಗಿ ಹೊಟ್ಟೆ ಸೇರುವ ಪ್ರಾಣಿಗಳು ಅಲ್ಲಿ ಜೀವ ಕಳೆದುಕೊಳ್ಳುವುದೇ ಹೆಚ್ಚು. ಕೆಲವು ಪ್ರಾಣಿಗಳು ಮಾತ್ರ ಹೊಟ್ಟೆಯಲ್ಲಿ ಹಾಗೆಯೇ ಜೀವಂತವಾಗಿರುವಂತಹ ಉದಾಹರಣೆಗಳು ಇವೆ. ಇದು ಸ್ವಲ್ಪ ವಿಚಿತ್ರವೆನಿಸುವುದು ಇದೆ. ವಿಶ್ವದೆಲ್ಲಡೆಯಲ್ಲಿ ಇಂತಹ ಘಟನೆಗಳು ನಡೆದಿದೆ. ಪ್ರಾಣಿಗಳು ಮಾನವ ದೇಹದಲ್ಲಿ ಜೀವಂತವಾಗಿರುವುದನ್ನು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.... 

ಜೇಡ...

ಜೇಡ...

ಮಹಿಳೆಯೊಬ್ಬಳ ಕಿವಿಯೊಳಗೆ ಗೀರಿಕೊಳ್ಳುವಂತಹ ಶಬ್ಧ ಯಾವಾಗಲೂ ಬರುತ್ತಾ ಇತ್ತು. ಇದರ ಬಗ್ಗೆ ಆಕೆ ವೈದ್ಯರಲ್ಲಿಗೆ ಹೋಗಿ ಪರೀಕ್ಷಿಸಿದಾಗ ಕಿವಿಯೊಳಗೆ ಜೇಡ ಬಲೆ ಕಟ್ಟುತ್ತಾ ಇರುವುದು ಪತ್ತೆಯಾಗಿದೆ. ಜೇಡನನ್ನು ಹೊರೆಗೆ ತೆಗೆಯುವ ಮೊದಲು ಅದಕ್ಕೆ ಅಮಲು ಪದಾರ್ಥ ನೀಡಲಾಯಿತು.

ಜೀವಂತ ಜಿರಳೆ

ಜೀವಂತ ಜಿರಳೆ

ಇದು ಭಾರತದಲ್ಲೇ ನಡೆದಿರುವಂತಹ ಘಟನೆ. ಮಹಿಳೆಯೊಬ್ಬಳಿಗೆ ತನ್ನ ಮೂಗಿನಲ್ಲಿ ತೀವ್ರ ನೋವು ಕಾಣಿಸಿಕೊಳ್ಳಲು ಆರಂಭವಾಯಿತು. ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಆಕೆಯ ತಲೆಬರುಡೆಯಲ್ಲಿ ಜೀವಂತ ಜಿರಳೆಯೊಂದು ವಾಸ ಮಾಡುತ್ತಾ ಇತ್ತು. ಶಸ್ತ್ರಚಿಕಿತ್ಸೆ ನಡೆಸಿ ಜಿರಳೆಯನ್ನು ಹೊರತೆಗೆಯಲಾಯಿತು.ಮಹಿಳೆಯ ಮೂಗಿನಲ್ಲಿ ಜಿರಲೆ ಪತ್ತೆ! ವಿಡಿಯೋ ವೈರಲ್....

ಮೀನು

ಮೀನು

ಇದು ತುಂಬಾ ವಿಚಿತ್ರವೆನಿಸುವಂತಹ ಘಟನೆ. 14ರ ಹರೆಯದ ಹುಡುಗನೊಬ್ಬ ಮೀನಿನ ಟಾಂಕಿಯನ್ನು ಸ್ವಚ್ಛ ಮಾಡುತ್ತಾ ಇದ್ದ. ತಕ್ಷಣ ಅವನಿಗೆ ಮೂತ್ರ ಮಾಡಬೇಕೆಂದಿನಿಸಿತು. ಹೀಗೆ ಮಾಡುತ್ತಾ ಇರುವಾಗ ಒಂದು ಮೀನು ಆತನ ಮೂತ್ರನಾಳದೊಳಗೆ ಪ್ರವೇಶಿಸಿತು. ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ ಮೀನನ್ನು ಹೊರತೆಗೆಯಲಾಯಿತು.

ಹುಳ

ಹುಳ

75ರ ಹರೆಯದ ವ್ಯಕ್ತಿಯೊಬ್ಬರು ತನ್ನ ಕಣ್ಣು ತುರಿಸುತ್ತಿದೆಯೆಂದು ಹೇಳಿ ವೈದ್ಯರಲ್ಲಿಗೆ ಪರೀಕ್ಷೆಗೆ ಹೋದರು. ವೈದ್ಯರು ಅವರನ್ನು ಪರೀಕ್ಷೆ ನಡೆಸಿ ಸುಮಾರು ಐದು ಇಂಚು ಉದ್ದದ ಹುಳ ಇರುವುದನ್ನು ಪತ್ತೆ ಮಾಡುತ್ತಾರೆ. ಶಸ್ತ್ರ ಚಿಕಿತ್ಸೆ ಮೂಲಕ ಇದನ್ನು ಹೊರತೆಗೆಯಲಾಯಿತು.

ಹಾವು ಮೀನು

ಹಾವು ಮೀನು

ಇದು ಕೂಡ ಸ್ವಲ್ಪ ವಿಲಕ್ಷಣವಾಗಿರುವ ಘಟನೆಯಾಗಿದೆ. ಸ್ಪಾದಲ್ಲಿ ಹಾವು ಮೀನುಗಳನ್ನು ಬಳಸಿ ಮಸಾಜ್ ಮಾಡಲಾಗುತ್ತಿತ್ತು. ಯುವಕನೊಬ್ಬ ಇದನ್ನು ಆನಂದಿಸುತ್ತಿದ್ದ. ಆದರೆ ದುರಾದೃಷ್ಟದಿಂದ ಆತನ ಜನನಾಂಗದ ಮೂಲಕ ಒಂದು ಹಾವು ಮೀನು ದೇಹದೊಳಗೆ ಪ್ರವೇಶಿಸುತ್ತದೆ. ಆತ ತಕ್ಷಣ ಆಸ್ಪತ್ರಗೆ ಹೋಗಿ ವೈದ್ಯರಲ್ಲಿ ಪರೀಕ್ಷಿಸಿ ಶಸ್ತ್ರಚಿಕಿತ್ಸೆ ಮಾಡಿಕೊಂಡ. ಹಾವು ಮೀನು ಕೂಡ ಜೀವಂತವಾಗಿ ಇತ್ತು.

 
English summary

Shocking Cases of Animals Found Alive In People!

Finding animals being alive in humans is creepy and these cases just prove the same. Check out these scary cases of animals being found in humans and that too alive!
Please Wait while comments are loading...
Subscribe Newsletter