ಐದು ತಲೆಗಳ ಶೇಷನಾಗ ಸರ್ಪ! ಭೂಮಿಯಲ್ಲಿ ಕಂಡುಬಂದಿದ್ದು ನಿಜವೇ?

By: jaya
Subscribe to Boldsky

ಶೇಷನಾಗವು ಹಿಂದೂಗಳಿಗೆ ಪವಿತ್ರ ದೇವರವಾಗಿದ್ದು ಸರ್ಪದ ರೂಪದಲ್ಲಿದ್ದರೂ ಇದನ್ನು ಹಿಂದೂಗಳು ಪೂಜಿಸುತ್ತಾರೆ ಅಂತೆಯೇ ನಾಗರಪಂಚಮಿ ಯಂತಹ ಶುಭ ಸಂದರ್ಭದಲ್ಲಿ ಹಾಲನ್ನು ಅರ್ಪಿಸಿ, ಕುಂಕುಮ ಅರಿಶಿನದ ಸಿಂಗಾರವನ್ನು ಮಾಡಿ ನೈವೇದ್ಯವನ್ನು ಅರ್ಪಿಸಿ ವ್ರತಗಳನ್ನು ಮಾಡಿ ತಮ್ಮ ಮನದ ಅಭಿಲಾಶೆಗಳನ್ನು ಪೂರೈಸಿಕೊಳ್ಳುತ್ತಾರೆ. ಶೇಷನಾಗದ ಸ್ವರೂಪ ಹೇಗಿರುತ್ತದೆಂದರೆ ಐದು ತಲೆಗಳನ್ನು ಹೊಂದಿರುವ ಹಾವು ಇದಾಗಿದೆ. ಈ ಹಾವಿನ ಕುರಿತಾದ ಕೆಲವೊಂದು ರಹಸ್ಯಗಳು ಹಿಂದೂ ಧರ್ಮಗ್ರಂಥದಲ್ಲಿದ್ದು ಇಂದಿನ ಲೇಖನದಲ್ಲಿ ಆ ರಹಸ್ಯಗಳೇನು ಎಂಬುದನ್ನು ಕುರಿತು ಅರಿತುಕೊಳ್ಳೋಣ.

ವಿಷ್ಣುವು ಶೇಷನಾಗನ ಮೇಲೆಯೇ ಪವಡಿಸಿದ್ದು ಸರ್ಪದ ಐದು ತಲೆಗಳನ್ನು ವಿಷ್ಣುವಿನ ತಲೆಯ ಮೇಲೆ ನಿಮಗೆ ಕಾಣಬಹುದಾಗಿದೆ. ಆದ್ದರಿಂದಲೇ ವಿಷ್ಣುವು ಸರ್ಪದ ಮೇಲೆ ಪವಡಿಸಿರುವುದರಿಂದ ಹಿಂದೂ ಧರ್ಮದಲ್ಲಿ ಇದನ್ನು ದೇವ ಸ್ವರೂಪದಲ್ಲಿ ಪೂಜಿಸಲಾಗುತ್ತದೆ.

ವಿಷ್ಣುವಿನ ಅವತಾರವಾದ ಕೃಷ್ಣನು ದೇವಕಿ ಮತ್ತು ವಸುದೇವರ ಪುತ್ರನಾಗಿ ಬಿರುಗಾಳಿಯಿಂದ ಕೂಡಿದ ರಾತ್ರಿಯಲ್ಲಿ ಜನ್ಮತಾಳುತ್ತಾರೆ. ವಸುದೇವನು ಮಗುವನ್ನು ಭೀಕರ ಮಳೆಯಲ್ಲಿ ಹೊತ್ತೊಯ್ಯುತ್ತಿದ್ದಾಗ ಗೋಕುಲದ ಮಧ್ಯೆ ಹರಿಯುವ ನೀರನ್ನು ವಸುದೇವನು ದಾಟುತ್ತಿರುತ್ತಾನೆ.

5 head Sheshnag

ತನ್ನ ತಲೆಯ ಮೇಲಿರುವ ಕೃಷ್ಣನಿಗೆ ಶೇಷನಾಗ ಹಡೆಯನ್ನು ಬಿಚ್ಚಿ ಮಳೆಯಿಂದ ರಕ್ಷಣೆಯನ್ನು ನೀಡುತ್ತಾರೆ. ಮಗುವಿಗೆ ಕೊಡೆಯ ರೂಪದಲ್ಲಿ ಶೇಷನಾಗ ನದಿಯನ್ನು ದಾಟುವವರೆಗೆ ರಕ್ಷಣೆಯನ್ನು ನೀಡುತ್ತಾರೆ. ದೇವತೆಗಳು ಮತ್ತು ಅಸುರರು ಅಮೃತಕ್ಕಾಗಿ ಸಮುದ್ರ ಮಂಥನವನ್ನು ನಡೆಸಲು ತೀರ್ಮಾನಿಸಿದಾಗ ಶೇಷನಾಗವನ್ನು ಹಗ್ಗದ ರೂಪದಲ್ಲಿ ಬಳಸಿ ಮಂಥನವನ್ನು ಮಾಡುತ್ತಾರೆ.

ಕರ್ನಾಟಕದಲ್ಲಿ ಶೇಷನಾಗ

ಇಷ್ಟೆಲ್ಲಾ ಧಾರ್ಮಿಕ ಅಂಶಗಳನ್ನು ಹೊಂದಿರುವ ಶೇಷನಾಗನನ್ನು ಹಿಂದೂಗಳು ಅದು ಇರುವ ಸ್ವರೂಪದಲ್ಲಿಯೇ ಕಂಡು ಪೂಜೆಯನ್ನು ಮಾಡುತ್ತಾರೆ. ಐದು ತಲೆಗಳಿರುವ ಸರ್ಪವು ಇದೆ ಎಂಬುದು ಇವರ ನಂಬಿಕೆಯಾಗಿದೆ. ಅಂತರ್ಜಾಲದಲ್ಲಿ ಐದು ಹೆಡೆಗಳಿರುವ ಸರ್ಪದ ಫೋಟೋವನ್ನು ಬಿತ್ತರಗೊಂಡಿದ್ದು ಹಿಂದೂಗಳಲ್ಲಿ ನಿಜಕ್ಕೂ ಪುಳಕವನ್ನೇ ಉಂಟುಮಾಡಿತ್ತು. ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಸರ್ಪವು ಕಂಡುಬಂದಿತ್ತು ಎಂಬುದು ವರದಿಯಾದ ಮಾಹಿತಿಯಾಗಿದೆ.

ಈ ಸರ್ಪದ ಕುರಿತಾದ ಮಾಹಿತಿ ಸುಳ್ಳೇ, ನಿಜವೇ ಎಂಬುದು ತಿಳಿದು ಬಂದಿಲ್ಲ. ಆದರೆ ವೈಜ್ಞಾನಿಕವಾಗಿ ಇದು ಸಾಧ್ಯವಿಲ್ಲದ ಮಾತಾಗಿದೆ ಎಂಬ ಸುದ್ದಿಯೂ ಇದೆ. ಈ ಕುರಿತು ವೈಜ್ಞಾನಿಕ ಹೇಳಿಕೆಗಳನ್ನು ನಾವಿಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಸರ್ಪವು ಹೆಚ್ಚಾಗಿ 2 ಅಥವಾ 3 ತಲೆಗಳನ್ನು ಮಾತ್ರ ಹೊಂದಿರುತ್ತದೆ. ಇದಕ್ಕೆ ವೈಜ್ಞಾನಿಕ ಪುರಾವೆಗಳೂ ಇವೆ.

ಆದರೆ ಐದು ತಲೆಗಳಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಹಾವುಗಳೂ ಕೆಲವೊಮ್ಮೆ ಬಹುತಲೆಗಳನ್ನು ಹೊಂದಿಕೊಂಡು ಜನ್ಮತಾಳುತ್ತವೆ. ಇದು ಫಾಲೆಸಫಾಲಿ ಎಂದು ಹೇಳಲಾದ ಅನುವಂಶಿಕ ವಿರೂಪತೆಯಾಗಿದ್ದು ಮನುಷ್ಯರಲ್ಲಿ ಕೂಡ ಈ ರೀತಿಯಿಂದಾಗಿ 2 ತಲೆ ಒಂದು ದೇಹ ಮೊದಲಾದ ರೀತಿಯಲ್ಲಿ ಹುಟ್ಟುತ್ತಾರೆ. ಇದೇ ರೀತಿ ಹಾವುಗಳಲ್ಲಿ ಕೂಡ ಕಂಡುಬರುವ ಸಾಧ್ಯತೆ ಇರುತ್ತದೆ.

ಇನ್ನು ಚಿತ್ರದಲ್ಲಿ ಕಾಣಿಸಿಕೊಂಡಿರುವ ಐದು ತಲೆಯ ಹಾವು ನೇರವಾಗಿ ಹೆಡೆ ಎತ್ತಿ ನಿಂತುಕೊಂಡಿದೆ. ಅದರೆ ಸತ್ಯತೆಯನ್ನು ಪರಿಶೀಲಿಸಿದಾಗ ಐದು ಹೆಡೆಗಳ ಭಾರದಿಂದ ಅದಕ್ಕೆ ನೇರವಾಗಿ ನಿಲ್ಲಲು ಸಾಧ್ಯವಾಗುವುದಿಲ್ಲ. ಇನ್ನು ಈ ಬಗೆಯ ಹಾವು ಇದೆಯೇ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಶೇಷನಾಗವನ್ನು ಹಿಂದೂಗಳು ದೈವೀ ಸ್ವರೂಪದಲ್ಲಿ ಪೂಜಿಸುತ್ತಾರೆ. ಆದರೆ ಭೂಮಿಯ ಮೇಲೆ ಇದು ಕಂಡುಬಂದಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಭೂಮಿಯಲ್ಲಿ ಈ ಬಗೆಯ ಹಾವು ಇದೆ ಎಂಬುದನ್ನು ನೀವು ನಂಬುತ್ತೀರಾ?

English summary

Sheshnag (5 Headed Snake): Myth Or Reality

Snakes are considered holy by Hindus. They are revered through festivals like Nag Panchami and worshipped via the Snake-goddess Manasa. The Sheshnag is basically a 5 headed snake that plays a very important role in Hindu mythology. There are various myths surrounding this snake and here are some of the most important ones.
Story first published: Monday, July 31, 2017, 23:45 [IST]
Subscribe Newsletter