ಇದು ನಿಜ ಜೀವನದ ಕಥೆ: ಆಕೆ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಮಾಜಿ ಗಂಡನನ್ನು ಕೊಂದಳು

Posted By: Divya pandith
Subscribe to Boldsky

ಅತ್ಯಾಚಾರ, ಕಿರುಕುಳ, ಹಲ್ಲೆ, ಅಪಹರಣ ಎನ್ನುತ್ತಾ ಮಹಿಳೆಯರ ಮೇಲೆ ಗಣನೀಯವಾಗಿ ದೌರ್ಜನ್ಯಗಳು ನಡೆಯುತ್ತಲೇ ಇದೆ. ಈ ವಿಚಾರದಡಿ ದೇಶವೇ ಚರ್ಚಿಸುತ್ತಿರುವ ಸಮಯ. ಹೀಗಿರುವಾಗ ತಮಿಳುನಾಡಿನ ಮಹಿಳೆ ಇವೆಲ್ಲದಕ್ಕೂ ವಿರುದ್ಧ ಎನ್ನುವ ಹಾಗೆ ತನ್ನ ಕುಟುಂಬದ ರಕ್ಷಣೆಗಾಗಿ ಮಾಜಿ ಪತಿಯನ್ನು ಕೊಲೆ ಮಾಡಿದ್ದಾಳೆ...

ಹೌದು, ಮಧುರೈ ಬ್ಯಾಂಕ್ ಒಂದರ ಸಮಾಲೋಚಕಿಯಾಗಿ ಕೆಲಸ ಮಾಡುತ್ತಿದ್ದ ಈಕೆಯ ಹೆಸರು ಉಷಾ ರಾಣಿ. 49 ವರ್ಷದ ಈ ಮಹಿಳೆ ತನ್ನ ಮಾಜಿ ಗಂಡನನ್ನು ಕೊಂದಿದ್ದಾಳೆ. ಅಂದು 2012 ಫೆಬ್ರುವರಿ 9. ನಾಲ್ಕು ಮಕ್ಕಳ ತಾಯಿಯಾದ ಉಷಾ ಸಿಟ್ಟಿನಿಂದ ಮಕ್ಕಳ ಬ್ಯಾಟ್‍ಅನ್ನು ಹಿಡಿದು ಮಾಜಿ ಗಂಡನಿಗೆ ಹೊಡೆದಿದ್ದಾಳೆ. ಆ ಬಲವಾದ ಹೊಡೆತಕ್ಕೆ ಗಂಡ ಸ್ಥಳದಲ್ಲೇ ಮೃತನಾಗಿದ್ದಾನೆ...

ಆಕೆಗೆ ಮದುವೆ ಇಷ್ಟವಿರಲಿಲ್ಲ...

ಆಕೆಗೆ ಮದುವೆ ಇಷ್ಟವಿರಲಿಲ್ಲ...

ವರದಿಯ ಪ್ರಕಾರ ಉಷಾ ಕೇವಲ 18ನೇ ವರ್ಷದಲ್ಲಿರುವಾಗಲೇ ವಿವಾಹವಾದಳು. ಅವಳ ಮದುವೆಯು ಬಲವಂತದ ಮದುವೆಯಾಗಿತ್ತು. ಉಷಾಳ ತಂದೆ ತಾಯಿ ತಮಗೆ ಪರಿಚಯವಿದ್ದ ಕುಟುಂಬವೊಂದಕ್ಕೆ ಮದುವೆ ಮಾಡಲು ನಿರ್ಧರಿಸಿದರು. ಆದರೆ ಉಷಾ ತಾನು ಉದ್ಯೋಗ ಮಾಡಿ ತನ್ನ ಕಾಲಮೇಲೆ ನಿಂತುಕೊಳ್ಳಬೇಕು ಎಂಬ ಆಸೆಯನ್ನು ಹೊಂದಿದ್ದಳು. ಅವಳ ಆಸೆಯನ್ನು ನೆರವೇರಿಸಬೇಕೆಂದು ಉಷಾಳ ವಿವಾಹ ಆಗುವ ಹುಡುಗನಿಗೆ ಹೇಳಿದ್ದರು. ಉಷಾ ತನ್ನ ತಂದೆ ತಾಯಿಯ ಮನೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ. ಸಹೋದರರ ಜೊತೆ ಕಬ್ಬಡಿ, ಬೈಸಿಕಲ್ ಚಾಲನೆ ಹೀಗೆ ಅನೇಕ ಆಟಗಳನ್ನು ಆಡುತ್ತಾ ಹುಡುಗರಿಗೆ ಸರಿ ಸಮನಾಗಿ ಬೆಳೆದಿದ್ದಳು.

ಮಾಜಿ ಗಂಡನ ವಿಚಾರ

ಮಾಜಿ ಗಂಡನ ವಿಚಾರ

ಅವರ ಶಿಕ್ಷಣದ ಕುರಿತು ಹೇಳಬೇಕೆಂದರೆ ಜ್ಯೋತಿಬಸು ತನ್ನ ವಿದ್ಯಾಭ್ಯಾಸವನ್ನು 8ನೇ ತರಗತಿಯಲ್ಲಿಯೇ ನಿಲ್ಲಿಸಿದನು. ಕಾರಣ ಆತನ ಮನೆಯವರನ್ನು ನೋಡಿಕೊಳ್ಳಬೇಕಾಗಿತ್ತು. ಆತ ಒಬ್ಬನೇ ಮಗನಾಗಿದ್ದನು. ಉಷಾ ಅವರ ತಂದೆಯ ಸಹಾಯದಿಂದ ಸ್ವಂತ ಬಿಸಿನೆಸ್ ಮಾಡಲು ಬ್ಯಾಂಕ್‍ನಿಂದ ಹಣವನ್ನು ಸಾಲವಾಗಿ ಪಡೆದುಕೊಂಡರು. ಅವರು ಸ್ವಂತ ಉದ್ಯೋಗ ಮಾಡಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದರು. ನಂತರ ಮನಿಫ್ಯಾಕ್ಚರಿಂಗ್ ಬಿಸ್‍ನೆಸ್ ಪ್ರಾರಂಭಿಸಿದರು. ಈ ವಿಚಾರದಲ್ಲಿ ಜ್ಯೋತಿಬಸು ಅಷ್ಟು ಆಸಕ್ತಿಯನ್ನು ಹೊಂದಿರಲಿಲ್ಲ. ಇವರ ವ್ಯವಹಾರದಲ್ಲಿ ಉಷಾ ಕೂಡ ಸಹಾಯ ಮಾಡುತ್ತಿದ್ದಳು. ಆದರೆ ಅಷ್ಟು ಲಾಭ ಇಲ್ಲದ ಕಾರಣ ಕುಟುಂಬಕ್ಕೆ ಸಾಕಾಗುತ್ತಿರಲಿಲ್ಲ. ಆ ಸಮಯದಲ್ಲಿ ಉಷಾಳ ಅಣ್ಣ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ತಮ್ಮ ಎಮ್‍ಪಿಲ್ ಓದುತ್ತಿದ್ದರು.

ಉಷಾಗೆ ಹಿಂಸೆ

ಉಷಾಗೆ ಹಿಂಸೆ

ಉಷಾ ಕುಟುಂಬದಲ್ಲಿ ಆಕೆಯನ್ನು ತಿರಸ್ಕರಿಸುತ್ತಿರುವುದು ಅವಳಿಗೆ ಹಿಂಸೆಯನ್ನುಂಟುಮಾಡುತ್ತಿತ್ತು. ಆಗ ಉಷಾ ನಾಲ್ಕು ಮಕ್ಕಳ ತಾಯಿಯಾಗಿದ್ದಳು. ಮನೆಮಂದಿ ಹಾಗೂ ಸಂಬಂಧಿಕರಿಂದ ಆಕೆಗೆ ಹಿಂಸೆ ಉಂಟಾಗುತ್ತಿತ್ತು. ಜೊತೆಗೆ ಆಕೆಯ ಸಹೋದರರ ತಲೆಗೆ ಕೆಟ್ಟ ವಿಚಾರವನ್ನು ಬಿಟ್ಟು, ಮನಸ್ಸನ್ನು ಹಾಳುಮಾಡುತ್ತಿದ್ದರು.

ತನ್ನ ನಾಲ್ಕು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಳು

ತನ್ನ ನಾಲ್ಕು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಳು

ಕಾಟೇಜ್ ಇಂಡಸ್ಟ್ರೀಯನ್ನು ಉಷಾ ಒಂಟಿಯಾಗಿಯೇ ನಿರ್ವಹಿಸುತ್ತಿದ್ದಳು. ನಿತ್ಯವೂ ವರದಕ್ಷಿಣೆಯ ವಿಚಾರವಾಗಿ ಉಷಾಗೆ ಹಿಂಸೆ ನೀಡಲಾಗುತ್ತಿತ್ತು. ಉಷಾ ಮಗಳು 14 ವರ್ಷ ವಯಸ್ಸಿಗೆ ಬಂದಾಗ ಅವಳ ಅತ್ತೆ ಮಟನ್ ಅಂಗಡಿಯಿಟ್ಟುಕೊಂಡಿರುವವನಿಗೆ ವಿವಾಹ ಮಾಡಲು ಮುಂದಾಗಿದ್ದಳು. ಆ ಸಂದರ್ಭದಲ್ಲಿ ಸಂಬಂಧಿಕರು ಸಹ ಆಕೆ ಹೆಚ್ಚು ಓದಿದರೆ ವಿವಾಹ ಮಾಡುವುದು ಕಷ್ಟವಾಗುತ್ತದೆ ಎಂದು ಹೇಳಲು ಪ್ರಾರಂಭಿಸಿದ್ದರು. ಆದರೆ ತನ್ನ ಮಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಮನಸ್ಸು ಮಾಡಿ, ಅದಕ್ಕೆ ಬೇಕಾದ ಅನುವುಗಳನ್ನು ಮಾಡಿಕೊಟ್ಟಿದ್ದಳು.

ಅವಳ ಕಾಲು ಮುರಿದಾಗ

ಅವಳ ಕಾಲು ಮುರಿದಾಗ

ತಮ್ಮ ಮನೆಯ ಪರಂಪರೆಯನ್ನು ಮುರಿಯುತ್ತಿದ್ದಾಳೆ ಸೊಸೆ ಎಂದು ಅತ್ತೆ ಆಕೆಯ ಕಾಲನ್ನು ಮುರಿದಳು. ಆ ಸಂದರ್ಭದಲ್ಲಿ ಅವಳ ಎರಡು ವರ್ಷದ ಮಗ ತಡೆಯಲು ಬಂದಿದ್ದನು. ಆ ಸಂದರ್ಭದಲ್ಲಿ ಮಗನನ್ನು ಗೋಡೆಗೆ ದೂಡಿದರು. ಉಷಾಳ ಕೂಗನ್ನು ಕೇಳಿದ ನೆರೆಹೊರೆಯರು ಪೋಲೀಸರಿಗೆ ಕರೆ ನೀಡಿದರು. ನಂತರ ಉಷಾ ವರದಕ್ಷಿಣೆಯ ಕಿರುಕುಳದ ಬಗ್ಗೆ ಧ್ವನಿ ಎತ್ತಿದರು. ಈ ವಿಷಯದಡಿಯಲ್ಲಿಯೇ ಪತಿಯ ಮನೆಯವರ ವಿರುದ್ಧ ಮೊಕದ್ದಮೆಯನ್ನು ಹೂಡಿದಳು.

ಉಷಾ ಸ್ವತಂತ್ರಳಾದಳು

ಉಷಾ ಸ್ವತಂತ್ರಳಾದಳು

ಈ ಘಟನೆಯ ನಂತರ ಉಷಾ ತನ್ನ ತವರು ಮನೆಗೆ ಹೋದಳು. ಆಕೆಯ ತವರು ಮನೆಯವರೆಲ್ಲರೂ ಆಕೆಗೆ ಪ್ರೋತ್ಸಾಹ ನೀಡಿದರು. ನಂತರ ಆಕೆಯ ಅಣ್ಣ ಅವಳನ್ನು ಓದಿಸಿ, ದುಡಿದು ಹಣ ಗಳಿಸುವಂತೆ ಮಾಡುವುದಾಗಿ ಮಾತು ನೀಡಿದನು. ನಂತರ ಆಕೆಯ ಆಭರಣ ಹಾಗೂ ವಸ್ತ್ರಗಳನ್ನು ಹಿಂದಿರುಗಿಸಬೇಕು ಎಂದು ಮೊಕದ್ದಮೆ ಹೂಡಿದಳು. ಕೆಲವೇ ತಿಂಗಳಲ್ಲಿ 2007ರಲ್ಲಿ ತಮಿಳುನಾಡಿನ ವಿವಿಯಲ್ಲಿ ಪ್ರವೇಶಾಧಿಕಾರಿಗಳ ಆಡಳಿತಾಧಿಕಾರಿಯಾಗಿ ಸ್ಥಾನ ಪಡೆದುಕೊಂಡಳು.

ಇನ್ನೂ ಮುಗಿದಿಲ್ಲ

ಇನ್ನೂ ಮುಗಿದಿಲ್ಲ

ಉಷಾ ಮತ್ತು ಜ್ಯೋತಿಬಸು ವಿಚ್ಛೇದನ ಪಡೆದರು. ನಂತರದಲ್ಲಿ ಜ್ಯೋತಿಬಸು ಅವರ ವ್ಯವಹಾರ ಆರ್ಥಿಕವಾಗಿ ಕುಸಿಯ ತೊಡಗಿತು. ಕೆಲವು ವರ್ಷಗಳ ಬಳಿಕ ಜ್ಯೋತಿಬಸು ಉಷಾಳ ಕಾಲಿಗೆ ಎರಗಿ ಕ್ಷಮೆ ಯಾಚಿಸಿದಳು. ಅನಾರೋಗ್ಯದಿಂದ ಬಳಲುತಿದ್ದ ಆತ ಉಷಾ ನೀನಿಲ್ಲದೆ ಬದುಕಿಲ್ಲ ಎಂದು ಹೇಳಿದನು. ಉಷಾ ಮತ್ತು ಮಕ್ಕಳು ಆತನ ಜೊತೆ ಹೋಗಲು ನಿರ್ಧರಿಸಿದರು. ಆದರೆ ತಮ್ಮ ಮನೆಯ ವಿರುದ್ಧ ಹೂಡಿದ್ದ ಮೊಕದ್ದಮೆಯನ್ನು ಹಿಂದೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಬೇರೆಯೇ ನಡೆಯಿತು

ಬೇರೆಯೇ ನಡೆಯಿತು

ಜ್ಯೋತಿಬಸು ಜೊತೆ ಮನೆಗೆ ಹಿಂತಿರುಗಿರುಗಿದ ನಂತರ. ಮರುದಿನವೇ ಕಂಠ ಪೂರ್ತಿ ಕುಡಿದು ಬಂದಿದ್ದ. ತನ್ನ ಚಟವನ್ನು ತೀರಿಸಿಕೊಳ್ಳಲು ಹಣಕ್ಕಾಗಿ ಪತ್ನಿಯ ಸೀರೆಯನ್ನು ಕೊಂಡೊಯ್ಯುತ್ತಿದ್ದ. ಹೀಗಿರುವಾಗ ಒಂದು ದಿನ ಜ್ಯೋತಿಬಸು ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ, ಆತನಿಗೆ ಈಗ ಏಡ್ಸ್ ಇದೆ ಎನ್ನುವ ವೈದ್ಯಕೀಯ ಪ್ರಮಾಣ ಪತ್ರ ದೊರೆಯಿತು. ಒಂದು ದಿನ ಆತನ ಕಾಮದ ಆಸೆ ತೀರಿಸಿಕೊಳ್ಳಲು ಮಗಳನ್ನು ರೂಮಿಗೆ ಕರೆದೊಯ್ದು ಕಿರುಕುಳ ನೀಡಲು ಪ್ರಾರಂಭಿಸಿದ ಇದನ್ನು ಕಂಡ ಉಷಾ ಮಗಳನ್ನು ರಕ್ಷಿಸುವ ಉದ್ದೇಶದಿಂದ ಆತನಿಗೆ ಹೊಡೆಯಲು ಮುಂದಾದಳು.

ಅವಳು ಕೊಲೆ ಮಾಡಲು ನಿರ್ಧರಿಸಿದಳು

ಅವಳು ಕೊಲೆ ಮಾಡಲು ನಿರ್ಧರಿಸಿದಳು

ಮಗನ ಮುರಿದ ಬ್ಯಾಟ್ ತೆಗೆದುಕೊಂಡು ಕಿಟಕಿಯಿಂದ ರೂಮ್ ಒಳಗೆ ಹೋಗಿ ಗಂಡನಿಗೆ ಹೊಡೆಯಲು ಆರಂಭಿಸಿದಳು. ಅವನು ಮಾಡುತ್ತಿರುವ ಕಾರ್ಯವನ್ನು ನಿಲ್ಲಿಸುವ ತನಕ ಬಡಿದಳು. ಆ ಹೊಡೆತದಿಂದಲೇ ಜ್ಯೋತಿಬಸು ಜೀವಬಿಟ್ಟನು. ಸೆಕ್ಷನ್ 100ರ ಪ್ರಕಾರ ಆತ್ಮರಕ್ಷಣೆಗಾಗಿ ಅಥವಾ ಖಾಸಗಿ ರಕ್ಷಣೆಯ ಪ್ರಯತ್ನದಲ್ಲಿ ಎದುರು ವ್ಯಕ್ತಿ ಮರಣ ಹೊಂದಿದರೆ ಅದು ಕೊಲೆ ಎನಿಸಿಕೊಳ್ಳುವುದಿಲ್ಲ ಎಂದು ಸಾಬೀತಾಯಿತು. ಇದೀಗ ಉಷಾ ಹೂಡಿಕೆದಾರರಿಗೆ ಆರ್ಥಿಕ ಸಲಹೆ ಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ.

English summary

She Killed Her Ex-Husband In Order To Save Her Family

With numerous murder and rape cases taking place around the country, another chilling story which is recently circulating around the internet is that of a Tamil Nadu woman who killed her ex-husband in order to save her family. 49-year-old Usha Rani, who works as an investment consultant with a bank in Madurai, had murdered her ex-husband five years ago. The spine-chilling incident happened on 9th February, 2012, when a mother of four, Usha picked up a cricket bat and chocked his ex-husband to death.