ಇವರು ಮಹಾತ್ಮ ಗಾಂಧೀಜಿಯವರ 'ಮಾಡರ್ನ್‌' ಮರಿ ಮೊಮ್ಮಗಳು!

By: manu
Subscribe to Boldsky

ಸ್ವಾತಂತ್ರ್ಯೋತ್ಸವ ಕಳೆದು ಕೆಲವೇ ದಿನಗಳು ಆಗಿವೆ. ಆಗಸ್ಟ್‌ನಲ್ಲಿ ಬರುವ ಸ್ವತಂತ್ರ ದಿನಾಚರಣೆಯೊಂದಿಗೆ ತಿಂಗಳಿಡಿ ದೇಶಪ್ರೇಮವು ಪ್ರತಿಯೊಬ್ಬ ಭಾರತೀಯನಲ್ಲಿ ಇದ್ದೇ ಇರುತ್ತದೆ. ಬ್ರಿಟಿಷರಿಂದ ನಮ್ಮನ್ನು ಬಂಧಮುಕ್ತಗೊಳಿಸಿದ ವೀರಯೋಧರನ್ನು ಈ ದಿನಗಳಲ್ಲಿ ನೆನೆಸಿಕೊಳ್ಳಲಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಪ್ರತಿಯೊಬ್ಬ ಹೋರಾಟಗಾರನ ಪಾಲು ಇದೆ. ಅದರಲ್ಲೂ ಶಾಂತಿಯಿಂದಲೇ ಹೋರಾಡಿದ ಮಹಾತ್ಮ ಗಾಂಧಿಯನ್ನು ನೆನೆಯದೇ ಇರಲು ಸಾಧ್ಯವೇ ಇಲ್ಲ. 

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗೆಗಿನ ಇಂಟರೆಸ್ಟಿಂಗ್ ಸಂಗತಿ

ಮಹಾತ್ಮ ಗಾಂಧಿ ಅವರು ಬ್ರಿಟಿಷರ ವಿರುದ್ಧ ಶಾಂತಿಯಿಂದಲೇ ಹೋರಾಡಿ ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಈ ಲೇಖನದಲ್ಲಿ ಗಾಂಧಿ ಅವರ ಕುಟುಂಬದ ಬಗ್ಗೆ ತಿಳಿಯುವ ಪ್ರಯತ್ನ ಮಾಡಲಾಗಿದೆ. ಗಾಂಧಿ ಅವರ ಸಂತತಿ ನಕ್ಷೆಯ ಪ್ರಕಾರ ಒಟ್ಟು 154 ಮಂದಿ ಇದ್ದಾರೆ. ಇವರೆಲ್ಲರೂ ವಿಶ್ವದ ಆರು ವಿವಿಧ ರಾಷ್ಟ್ರಗಳಲ್ಲಿ ವಾಸವಾಗಿದ್ದಾರೆ. ಗಾಂಧಿ ಅವರ ಮರಿಮೊಮ್ಮಗಳು ಎಂದು ಕರೆಯಲ್ಪಡುವ, ಅಮೆರಿಕಾದಲ್ಲೇ ಹುಟ್ಟಿ ಬೆಳೆದಿರುವ ಮೇಧಾ ಗಾಂಧಿ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ....

ಆಕೆ ಗಾಂಧಿ ಅವರ ದೊಡ್ಡಮೊಮ್ಮಗಳು

ಮೇಧಾ ಗಾಂಧಿ ಅವರು ಮಹಾತ್ಮ ಗಾಂಧಿ ಅವರ ದೊಡ್ಡ ಮೊಮ್ಮಗಳು. ಮಹಾತ್ಮ ಗಾಂಧಿ ಅವರ ಹಿರಿಯ ಮಗ ಹೀರಾಲಾಲ್‌ನ ಮಗ ಕಾಂತಿಲಾಲ್ ಅವರ ಮಗಳು. ಭಾರತಕ್ಕೆ ಸ್ವಾತಂತ್ರ ಸಿಕ್ಕಿದ ಬಳಿಕ ಆಕೆಯ ತಂದೆ ಅಮೆರಿಕಾಗೆ ಸ್ಥಳಾಂತರಗೊಂಡರು.

ಆಕೆ ಅಮೆರಿಕಾ ಪ್ರಜೆ

ಆಕೆಯ ತಂದೆ 1948ರಲ್ಲಿ ತನ್ನ ಸಂಪೂರ್ಣ ಕುಟುಂಬದೊಂದಿಗೆ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು. ಮೇಧಾ ಅಮೆರಿಕಾದಲ್ಲೇ ಹುಟ್ಟಿ ಬೆಳೆದಿರುವಾಕೆ. ಆಕೆ ಈಗಲೂ ಅಲ್ಲಿಯೇ ವಾಸವಾಗಿದ್ದಾಳೆ.

ಆಕೆಗೆ ಹಲವಾರು ಗರಿಮೆಗಳಿವೆ

ಮೇಧಾ ಗಾಂಧಿ ಬೋಸ್ಟನ್‌ನಲ್ಲಿ ಡಿಜೆಯಲ್ಲಿ ಕೆಲಸ ಮಾಡಿರುವುದು ಮಾತ್ರವಲ್ಲದೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಆಕೆ ನಿರ್ಮಾಪಕಿಯಾಗಿದ್ದಾಳೆ. ಆಕೆ ತುಂಬಾ ಪ್ರತಿಭಾವಂತೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧೆ

ಮೇಧಾ ಗಾಂಧಿ ತನ್ನ ಜೀವನದ ಆಗುಹೋಗುಗಳ ಬಗ್ಗೆ ಹೆಚ್ಚಾಗಿ ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ಹೇಳುತ್ತಾ ಇರುತ್ತಾರೆ. ಒಳ್ಳೆಯ ಸಾಮಾಜಿಕ ಹಿನ್ನೆಲೆಯುಳ್ಳ ಆಕೆ ತನ್ನ ಸುಖ ಹಾಗೂ ದುಃಖದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾಳೆ.ಮೇಧಾ ಗಾಂಧಿ ತನ್ನ ಜೀವನದ ಆಗುಹೋಗುಗಳ ಬಗ್ಗೆ ಹೆಚ್ಚಾಗಿ ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ಹೇಳುತ್ತಾ ಇರುತ್ತಾರೆ. ಒಳ್ಳೆಯ ಸಾಮಾಜಿಕ ಹಿನ್ನೆಲೆಯುಳ್ಳ ಆಕೆ ತನ್ನ ಸುಖ ಹಾಗೂ ದುಃಖದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾಳೆ.

ಆಕೆಯದ್ದು ಗ್ಲ್ಯಾಮರಸ್ ಜೀವನ

ಬೇಬಿ ಹಾಟ್ ಸಾಸ್ ಎನ್ನುವುದು ಆಕೆಯ ಇನ್ ಸ್ಟಾ ಗ್ರಾಮ್ ಖಾತೆಯ ಹೆಸರು. ಆಕೆಯ ಸಾಮಾಜಿಕ ಜಾಲತಾಣಗಳಿಂದ ಜೀವನವು ತುಂಬಾ ಗ್ಲ್ಯಾಮರಸ್ ಆಗಿದೆ ಎಂದು ತಿಳಿದುಬರುವುದು. ಇದನ್ನು ಹೊರತುಪಡಿಸಿ ಆಕೆ ಹಾಸ್ಯ ಲೇಖಕಿ ಹಾಗೂ ಒಳ್ಳೆಯ ನಿರ್ಮಾಪಕಿ ಕೂಡ.

All Image Source

 

English summary

She Is The Great Granddaughter Of Mahatma Gandhi

With Independence day just gone by, August is the month where most of the Indians feel truly patriotic and also thank those freedom fighters from the bottom of their hearts, without whom we could not achieve any independence. However, have you ever imagined or even tried to learn about the descendants of our freedom fighters? Do you know about Gandhijis' family lineage?
Subscribe Newsletter