For Quick Alerts
ALLOW NOTIFICATIONS  
For Daily Alerts

ಐದು ವರ್ಷ ವಯಸ್ಸಿಗೇ ಈ ಹೆಣ್ಣುಮಗು ಋತುಮತಿಯಾದಳು! ಅಯ್ಯೋ!

By Lekhaka
|

ಮುಟ್ಟು ಅಥವಾ ಖುತುಚಕ್ರದ ಅವಧಿ ಮಹಿಳೆಯರಲ್ಲಿ ಕಾಣುವ ಪ್ರಕೃತಿದತ್ತವಾದ ವಿಧಾನ. ಈ ವೇಳೆ ಮಹಿಳೆಯರು ಅಪಾರ ನೋವು ಅನುಭವಿಸಿದರೂ, ಮುಟ್ಟು ಸಮಯಕ್ಕೆ ಸರಿಯಾಗಿ ಆಗಬೇಕಾಗಿರುವುದು ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಅತ್ಯವಶ್ಯಕ. ಮುಟ್ಟಿನ ಸಮಯದಲ್ಲಿ ಮಹಿಳೆಯರು ನಾನಾ ವಿಧದ ನೋವನ್ನು ಅನುಭವಿಸುತ್ತಾರೆ. ಇಂತಹ ಸಮಯದಲ್ಲಿ ಕೆಳ ಹೊಟ್ಟೆಯಲ್ಲಿ ನೋವುಂಟಾಗುವುದು ಸಾಮಾನ್ಯ. ಸಾಮಾನ್ಯವಾಗಿ ಮಾಸಿಕ ಮುಟ್ಟು ಆಗುವ ಮುಂಚೆ ಅಥವಾ ಮುಟ್ಟಾದ ನಂತರ ನೋವು ಕಂಡುಬರುತ್ತದೆ.

ಇನ್ನು ಕೆಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ನಾನಾ ವಿಧದ ನೋವನ್ನು ಅನುಭವಿಸುತ್ತಾರೆ. ಇಂತಹ ಸಮಯದಲ್ಲಿ ಕೆಳ ಹೊಟ್ಟೆಯಲ್ಲಿ ನೋವುಂಟಾಗುವುದು ಸಾಮಾನ್ಯ. ಸಾಮಾನ್ಯವಾಗಿ ಮಾಸಿಕ ಮುಟ್ಟು ಆಗುವ ಮುಂಚೆ ಅಥವಾ ಮುಟ್ಟಾದ ನಂತರ ನೋವು ಕಂಡುಬರುತ್ತದೆ. ನೋವಿನ ತೀವ್ರತೆ ಮತ್ತು ಅದರ ರೀತಿ ಎರಡೂ ಭಿನ್ನವಾಗಿರುತ್ತದೆ, ಈ ನೋವು ಒಬ್ಬೊಬ್ಬರಲ್ಲಿ ಒಂದೊಂದು ತರಹ ಕಾಣಿಸಿಕೊಳ್ಳುತ್ತದೆ.

ಇಡೀ ಜಗತ್ತಿಗೆಯೇ ಸವಾಲು! ಈಕೆಯ ಹೃದಯ ದೇಹದಿಂದ ಹೊರಗಡೆ ಇದೆ!!

ಇದೇ ಕಾರಣಕ್ಕೆ ಹದಿಹರೆಯಕ್ಕೆ ಕಾಲಿಡುವುದು ಕೆಲವರಿಗೆ ಇದೆಲ್ಲಾ ಇಷ್ಟವಾಗುವುದಿಲ್ಲ. ಏಕೆಂದರೆ ಈ ವಯಸ್ಸಿನಲ್ಲಿ ಎದುರಾಗುವ ಮೊಡವೆಗಳು, ಗಡ್ಡಮೀಸೆ, ಇತ್ಯಾದಿ. ಆದರೆ ಆರೋಗ್ಯವಂತ ವಯಸ್ಕರಾಗಲು ಈ ಬದಲಾವಣೆಗಳು ಅನಿವಾರ್ಯವಾಗಿದೆ. ಒಂದು ವೇಳೆ ಈ ಗಡಿಯಾರದ ಮುಳ್ಳು ಶರವೇಗದಲ್ಲಿ ತಿರುಗುತ್ತಾ ಕೇವಲ ಎರಡನೇ ವಯಸ್ಸಿಗೆ ಹರಿಹರೆಯದ ಸೂಚನೆಗಳನ್ನೆಲ್ಲಾ ಪ್ರಕಟಿಸಿದರೆ?

ಇದು ಹುಚ್ಚುತನದ ಕಲ್ಪನೆಯ ಪರಮಾವಧಿ ಎಂದು ನಾವೆಲ್ಲಾ ಉಪೇಕ್ಷಿಸಿಬಿಡುತ್ತೇವೆ. ವಾಸ್ತವವಾಗಿ ಈಗ ಐದು ವರ್ಷ ವಯಸ್ಸಾಗಿರುವ ಬಾಲೆಯೊಬ್ಬಳು ಎರಡನೆಯ ವಯಸ್ಸಿಗೇ ಹದಿಹರೆಯದ ಸೂಚನೆಗಳನ್ನು ಪ್ರಕಟಿಸಿ ನಾಲ್ಕನೆಯ ವಯಸ್ಸಿಗೇ ಮೈನೆರೆದು ಐದನೆಯ ವಯಸ್ಸಿಗೇ ರಜೋನಿವೃತ್ತಿಯ ಸೂಚನೆಗಳನ್ನು ಪ್ರಕಟಿಸಿದ್ದಾಳೆ. ಬನ್ನಿ, ಸೃಷ್ಟಿಯ ವ್ಯಂಗ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಅಂಬೆಗಾಲಿಕ್ಕುತ್ತಿರುವಾಗಲೇ ದೇಹದಲ್ಲಿ ಬದಲಾವಣೆ ಕಂಡುಬಂದಿತ್ತು.

ಅಂಬೆಗಾಲಿಕ್ಕುತ್ತಿರುವಾಗಲೇ ದೇಹದಲ್ಲಿ ಬದಲಾವಣೆ ಕಂಡುಬಂದಿತ್ತು.

ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್ ಪ್ರದೇಶದ ನಿವಾಸಿಯಾಗಿರುವ ದಂಪತಿಗಳ ಪುತ್ರಿಯಾದ ಎಮಿಲಿ ಡೋವರ್ ಎಂಬ ಐದು ವರ್ಷದ ಹೆಣ್ಣುಮಗು ಅಂಬೆಗಾಲಿಕ್ಕುತ್ತಿರುವಾಗಲೇ ಹದಿಹರೆಯದ ಸೂಚನೆಗಳನ್ನು ಪ್ರಕಟಿಸತೊಡಗಿದ್ದಳು. ಮುಖದಲ್ಲಿ ಮೊಡವೆ, ಸ್ಪಷ್ಟವಾದ ಸ್ತನಗಳು ಹಾಗೂ ದೇಹದ ವಾಸನೆಯನ್ನು ಪ್ರಕಟಗೊಳ್ಳತೊಡಗಿದವು. ಹದಿಹರೆಯದಲ್ಲಿ ಬರಬೇಕಾಗಿದ್ದ ಸೂಚನೆಗಳು ಇಷ್ಟು ಬೇಗ ಏಕೆ ಬಂದವು ಎಂದು ವೈದ್ಯರಿಗೂ ಅರ್ಥವಾಗದೇ ತಲೆಕೆಡಿಸಿಕೊಳ್ಳತೊಡಗಿದರು.

ನಾಲ್ಕನೆಯ ವಯಸ್ಸಿಗೇ ಋತುಸ್ರಾವ

ನಾಲ್ಕನೆಯ ವಯಸ್ಸಿಗೇ ಋತುಸ್ರಾವ

ಕೇವಲ ನಾಲ್ಕು ವರ್ಷ ವಯಸ್ಸಾಗುತ್ತಿದ್ದಂತೆಯೇ ಈಕೆಗೆ ಮಾಸಿಕ ಋತುಸ್ರಾವ ಪ್ರಾರಂಭವಾಗಿದೆ. ಒಂದೇ ವರ್ಷದಲ್ಲಿ ಗುಪ್ತಾಂಗಗಳ ರೋಮ ದಟ್ಟವಾಗಿ ಬೆಳೆದಿದೆ. ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ Addison's disease ಅಥವಾ ಆಡಿಸನ್ ಕಾಯಿಲೆ ಎಂದು ಕರೆಯುತ್ತಾರೆ.

ಪ್ರಥಮ ಬಾರಿಯ ಋತುಸ್ರಾವ

ಪ್ರಥಮ ಬಾರಿಯ ಋತುಸ್ರಾವ

ತನ್ನ ದೇಹದಿಂದ ಹೊರಹರಿಯುವ ಸ್ರಾವದ ಬಗ್ಗೆ ಈ ಎಳೆಯ ಮಗುವಿಗೆ ಏನೂ ಅರಿವೇ ಇಲ್ಲದಿದ್ದು ಏನೋ ಕೊಳೆ ಎಂದೇ ಮಗು ತಿಳಿದುಕೊಂಡಿದೆ. ಆದರೆ ತನ್ನ ದೇಹ ಇತರ ಮಕ್ಕಳಂತಿಲ್ಲ ಎಂದು ಈ ಬಾಲೆಗೆ ಸ್ಪಷ್ಟವಾಗಿ ಅರಿವಿದೆ.

ಪ್ರಸ್ತುತ ಈಕೆ ರಜೋನಿವೃತ್ತಿಯನ್ನು ಎದುರಿಸುತ್ತಿದ್ದಾಳೆ

ಪ್ರಸ್ತುತ ಈಕೆ ರಜೋನಿವೃತ್ತಿಯನ್ನು ಎದುರಿಸುತ್ತಿದ್ದಾಳೆ

ಈಗ ಈ ಮಗುವಿಗೆ ಐದು ವರ್ಷ ವಯಸ್ಸಾಗಿದ್ದು ಸಾಮಾನ್ಯವಾಗಿ ಮಹಿಳೆಯರು ತಮ್ಮ ಐವತ್ತನೆಯ ವಯಸ್ಸಿನಲ್ಲಿ ಎದುರಿಸುವ ರಜೋನಿವೃತ್ತಿಯ ಸೂಚನೆಗಳನ್ನು ಪ್ರಕಟಿಸುತ್ತಿದ್ದಾಳೆ. ಈಕೆಯ ಮಣಿಕಟ್ಟು ಹಾಗೂ ಮೊಣಕಾಲುಗಳು ಊದಿಕೊಂಡಿದ್ದು ನೋವಿನಿಂದ ಕೂಡಿವೆ. ಸ್ತನಗಳಲ್ಲಿ ಭಾರೀ ತುರಿಕೆ ಹಾಗೂ ಮೂಳೆಗಳಲ್ಲಿಯೂ ನೋವು ಕಾಣಿಸಿಕೊಂಡಿದ್ದು ಸಹಜ ಬೆಳವಣಿಗೆಯೂ ಆಗದೇ ನೋವು ಅನುಭವಿಸುತ್ತಿದ್ದಾಳೆ.

ಚಿಕಿತ್ಸೆ ಮುಂದುವರೆದಿದೆ

ಚಿಕಿತ್ಸೆ ಮುಂದುವರೆದಿದೆ

ಪ್ರಸ್ತುತ ಈ ಬಾಲೆಗೆ ಚಿಕಿತ್ಸೆ ನಡೆಯುತ್ತಿದ್ದು ಈಕೆಯನ್ನು ಸಹಜ ಆರೋಗ್ಯಕ್ಕೆ ತರಲು ವೈದ್ಯರ ತಂಡ ಶ್ರಮಿಸುತ್ತಿದೆ. ತಿಂಗಳಿಗೆ ಒಂದು ಇಂಜೆಕ್ಷನ್ ನೀಡುವ ಮೂಲಕ ಆಕೆಯ ರಜೋನಿವೃತ್ತಿಯನ್ನು ತಡವಾಗಿಸುವ ಪ್ರಯತ್ನಗಳು ನಡೆದಿವೆ. ಈಕೆ ಶೀಘ್ರವಾಗಿ ಗುಣಮುಖಳಾಗಲಿ ಎಂದು ನಾವೆಲ್ಲರೂ ಹಾರೈಸೋಣ:

English summary

She Is Just 5 Years Old & Is Already Undergoing Menopause

Hitting puberty is not always welcomed by many, as it includes acne and other bodily changes. But this is something that is very much needed to stay healthy and is a process of growing old. But what happens if the timing of hitting your puberty is just at the age of 2 years? Sounds crazy, right? But this has happened in this case, where a young girl who got her first periods at the age of 4 is already hitting her menopause at the age of 5!
X
Desktop Bottom Promotion