ಈಕೆ ತನ್ನ ಜೊಲ್ಲಿನಿಂದಲೇ ಹಲವು ಕಣ್ಣಿನ ರೋಗಗಳನ್ನು ಗುಣಪಡಿಸುತ್ತಾಳೆ!!

Posted By: Arshad
Subscribe to Boldsky

ಕೆಲವು ವೈದ್ಯರು ನೀಡುವ ಔಷಧಿಗಳು ಕೆಲಸ ಮಾಡಿದರೆ ವೈದ್ಯರ ಕೈಗುಣ ಚೆನ್ನಾಗಿದೆ ಎಂದು ಜನರು ಆಡಿಕೊಳ್ಳುತ್ತಾರೆ. ಇನ್ನೂ ಕೆಲವರ ಸ್ಪರ್ಷದಲ್ಲಿಯೇ ಕೆಲವು ರೋಗಗಳು ವಾಸಿಯಾಗುತ್ತವೆ. ಇವರು ಮಾಡುತ್ತಿರುವುದು ಮೋಸ ಎಂದು ತಿಳಿಸಲು ವಿಜ್ಞಾನಿಗಳಿಗೂ ಸಂಶೋಧಕರಿಗೂ ಸಾಧ್ಯವಾಗಿಲ್ಲ.

ಇಂತಹದ್ದೇ ಒಂದು ಪ್ರಕರಣದಲ್ಲಿ ಮಹಿಳೆಯೊಬ್ಬಳು ರೋಗಿಯ ಕಾಯಿಲೆಯಾಗಿರುವ ಕಣ್ಣುಗುಡ್ಡೆಯನ್ನು ತನ್ನ ಜೊಲ್ಲಿನಿಂದ ನೆಕ್ಕುವ ಮೂಲಕ ಚಿಕಿತ್ಸೆ ನೀಡುತ್ತಿದ್ದು ಹಲವರಿಗೆ ಚಮತ್ಕಾರದಂತೆ ಕಾಯಿಲೆ ವಾಸಿಯಾಗಿದೆ. ಇದು ನಂಬಲಿಕ್ಕೆ ಕಷ್ಟವಾದರೂ ನಿಜ. ಬೋಸ್ನಿಯಾ ಎಂದ ಪುಟ್ಟ ದೇಶದಲ್ಲಿರುವ ಈ ಮಹಿಳೆಗೆ ನಿಸರ್ಗ ನೀಡಿರುವ ಅದ್ಭುತ ಶಕ್ತಿಯ ಬಗ್ಗೆ ಕೆಲವು ಮಾಹಿತಿಗಳನ್ನು ಈಗ ನೋಡೋಣ...

ಈ ಮಹಿಳೆ ಯಾರು?

ಈ ಮಹಿಳೆ ಯಾರು?

ಹವಾ ಸೇಬಿಕ್ ಎಂಬ ಹೆಸರಿನ ಈಕೆ ಎಪ್ಪತ್ತೇಳು ವರ್ಷ ವಯಸ್ಸಿನ, ಬೋಸ್ನಿಯಾ ದೇಶದ ನಿವಾಸಿಯಾಗಿದ್ದು ಕಣ್ಣಿನ ಯಾವುದೇ ಕಾಯಿಲೆಯನ್ನು ಕೇವಲ ಕಣ್ಣುಗುಡ್ಡೆಗಳನ್ನು ನೆಕ್ಕುವ ಮೂಲಕ ವಾಸಿ ಮಾಡುತ್ತಾಳೆ ಎಂದು ಹೆಸರುವಾಸಿಯಾಗಿದ್ದಾಳೆ. ಈಕೆಯ ಈ ಶಕ್ತಿಯ ಬಗ್ಗೆ ಆಕೆಯ ಪತಿಗೇ ನಂಬಿಕೆ ಇರಲಿಲ್ಲ. ಒಂದು ದಿನ ಮರದ ಚೆಕ್ಕೆ ಸೀಳುತ್ತಿದ್ದಾಗ ಒಂದು ಚಿಕ್ಕ ಚಿಕ್ಕೆ ಹಾರಿ ಬಂದು ಈತನ ಕಣ್ಣಿಗೆ ಚುಚ್ಚಿಕೊಂಡಿತ್ತು.

ಆಗ ಈಕೆಯ ಶಕ್ತಿ ಬೆಳಕಿಗೆ ಬಂದಿತ್ತು

ಆಗ ಈಕೆಯ ಶಕ್ತಿ ಬೆಳಕಿಗೆ ಬಂದಿತ್ತು

ಚುಚ್ಚಿದ್ದ ಚೆಕ್ಕೆಯನ್ನು ನಿವಾರಿಸಿದರೂ ಅಪಾರ ನೋವು ಕಣ್ಣಿಗೆ ಆವರಿಸಿತ್ತು. ಆಗ ಆಕೆ ಗಾಯಗೊಂಡಿದ್ದ ಕಣ್ಣುಗುಡ್ಡೆಯ ಭಾಗವನ್ನು ಸುಮ್ಮನೇ ನೆಕ್ಕಿದಳು ಅಷ್ಟೇ. ನೋವು ತಕ್ಷಣವೇ ಮಾಯವಾಗಿತ್ತು ಹಾಗೂ ಕಣ್ಣು ಏನೂ ಆಗಿಲ್ಲವೆಂಬಂತೆ ಸಾಮಾನ್ಯ ಸ್ಥಿತಿಗೆ ಮರಳಿತ್ತು. ಆ ಬಳಿಕವೇ ಆತನಿಗೆ ತನ್ನ ಪತ್ನಿಯಲ್ಲಿರುವ ವಿಶೇಷ ಶಕ್ತಿಯ ಬಗ್ಗೆ ನಂಬಿಕೆ ಬಂದಿತ್ತು.

ಆಕೆಗೆ ತನ್ನಲ್ಲಿದ್ದ ಶಕ್ತಿಯ ಬಗ್ಗೆ ವರ್ಷಗಳ ಹಿಂದೆಯೇ ತಿಳಿದಿತ್ತು!

ಆಕೆಗೆ ತನ್ನಲ್ಲಿದ್ದ ಶಕ್ತಿಯ ಬಗ್ಗೆ ವರ್ಷಗಳ ಹಿಂದೆಯೇ ತಿಳಿದಿತ್ತು!

ಚಿಕ್ಕವಳಾಗಿದ್ದಾಗಲೇ ಆಕೆಗೆ ತನ್ನ ವಿಶೇಷ ಶಕ್ತಿಯ ಬಗ್ಗೆ ತಿಳಿದಿತ್ತು. ಆದರೆ ಅವರ ಸಮಾಜದಲ್ಲಿ ಮಹಿಳೆಯರು ಯಾವುದೇ ಕಾರ್ಯಕ್ಕೂ ಪತಿಯ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದ್ದರಿಂದ ಈ ಶಕ್ತಿ ಬೆಳಕಿಗೆ ಬರದೇ ಹೋಗಿತ್ತು. ಕೊನೆಗೆ ಪತಿಗೆ ಆ ಶಕ್ತಿಯ ಸಾಕ್ಷಾತ್ಕಾರವಾದ ಬಳಿಕ ಇದನ್ನು ಅಗತ್ಯ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸಲು ಅನುಮತಿ ನೀಡಿದ.

ಈ ಶಕ್ತಿ ಆಕೆಯಲ್ಲಿದ್ದುದು ಗೊತ್ತಾಗಿದ್ದು ಹೇಗೆ?

ಈ ಶಕ್ತಿ ಆಕೆಯಲ್ಲಿದ್ದುದು ಗೊತ್ತಾಗಿದ್ದು ಹೇಗೆ?

ಪುಟ್ಟ ಬಾಲಕಿಯಾಗಿದ್ದಾಗ ಈಕೆಯ ತಮ್ಮ ತನ್ನ ಕಣ್ಣುಗಳು ಒಣಗುತ್ತಿದೆ ಎಂದು ದೂರು ನೀಡುತ್ತಿದ್ದ. ಆತನ ಕಣ್ಣುಗಳಿಗೆ ಕೊಂಚ ಆರಾಮ ನೀಡಲು ಆಕೆ ಒಮ್ಮೆ ತಮ್ಮನ ಕಣ್ಣುಗುಡ್ಡೆಗಳನ್ನು ನೆಕ್ಕಿದ್ದಳು. ಆ ಬಳಿಕ ಆತನಿಗೆ ಎಂದೂ ಕಣ್ಣುಗಳು ಒಣಗುವ ತೊಂದರೆ ಕಾಡಲಿಲ್ಲ. ತಮ್ಮನ ಕಣ್ಣು ಸರಿಯಾಗಿದ್ದುದನ್ನು ಕಂಡ ಆಕೆಗೆ ತನ್ನ ಜೊಲ್ಲಿನಲ್ಲಿ ವಿಶೇಷ ಶಕ್ತಿ ಇದೆ ಎಂದು ಮನಗಂಡಿದ್ದಳು.

ಬರೆಯ ಕಣ್ಣುಗಳು ಮಾತ್ರವಲ್ಲ ಬೇರೆ ಅಂಗಗಳಿಗೂ ಸಲ್ಲುವ ಚಿಕಿತ್ಸೆ

ಬರೆಯ ಕಣ್ಣುಗಳು ಮಾತ್ರವಲ್ಲ ಬೇರೆ ಅಂಗಗಳಿಗೂ ಸಲ್ಲುವ ಚಿಕಿತ್ಸೆ

ಕಣ್ಣುಗಳಿಗೆ ಆವರಿಸುವ ಅಲರ್ಜಿ ಅಥವಾ ಕೆಂಗಣ್ಣು ಬೇನೆಯಿಂದ ಬಳಲುತ್ತಿರುವ ರೋಗಗಳು ಮಾತ್ರವಲ್ಲ, ಈಕೆಯ ನೆಕ್ಕುವಿಕೆಯಿಂದ ಗಂಭೀರ ಸ್ವರೂಪದ ಕಣ್ಣುಗಳ ತೊಂದರೆಗಳೂ ಕಡಿಮೆಯಾಗುತ್ತವೆ ಹಾಗೂ ರೋಗಿಗೆ ಆರಾಮ ದೊರಕುತ್ತದೆ.

ಈಕೆಯ ರಹಸ್ಯ

ಈಕೆಯ ರಹಸ್ಯ

ವರದಿಗಳ ಪ್ರಕಾರ ಈಕೆ ಚಿಕಿತ್ಸೆ ನೀಡುವ ಮೊದಲು ತನ್ನ ನಾಲಿಗೆಗೆ ಮದ್ಯವನ್ನು ಸವರಿಕೊಳ್ಳುತ್ತಾಳೆ. ಬಳಿಕ ಇದರಿಂದ ನೆಕ್ಕಿದಾಗ ಜೊಲ್ಲು ಮಿಶ್ರಿತ ಮದ್ಯ ತನ್ನ ಕೆಲಸ ಮಾಡುತ್ತದೆ ಎಂದು ಹಲವರು ಹೇಳಿಕೊಂಡಿದ್ದಾರೆ. ಆದರೆ ರೋಗಿಗೆ ಆರಾಮವಾಗುವುದಂತೂ ಖಚಿತ. ಈ ಬಗ್ಗೆ ನಿಮಗೇನಿನ್ನಿಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

English summary

she cures people with just her saliva

Some people are actually blessed with having a magical power and this is something that even scientists and researchers have failed to prove them wrong. One such case is of a woman who treats people's diseases by just licking the body part! It might sound gross and hard to believe, but this is a true story of an old lady from Bosnia. Check out this bizarre story of how people are getting cured with her saliva treatment!