ಈ ಸ್ಮಶಾನದ ನೆಲದಲ್ಲಿ ವೇಶ್ಯೆಯರು ನರ್ತಿಸುತ್ತಾರಂತೆ! ಯಾಕೆ ಗೊತ್ತೇ?

By: Arshad
Subscribe to Boldsky

ಭಾರತ ವೈವಿಧ್ಯತೆಗಳ ನೆಲ. ಇಲ್ಲಿ ಸಾವಿರಾರು ಸಂಸ್ಕೃತಿಗಳಿದ್ದು ಲಕ್ಷಾಂತರ ಸಂಪ್ರದಾಯಗಳನ್ನು ಇಂದಿಗೂ ಪಾಲಿಸಲಾಗುತ್ತಿದೆ. ಈ ಸಂಪ್ರದಾಯಗಳ ವೈವಿಧ್ಯತೆ ಎಷ್ಟು ಹೆಚ್ಚಿವೆ ಎಂದರೆ ಇದನ್ನು ಒಂದು ಊರಿನಲ್ಲಿ ಅನುಸರಿಸುತ್ತಿದ್ದರೆ ಪಕ್ಕದ ಊರಿನವರಿಗೇ ಈ ಬಗ್ಗೆ ತಿಳಿದಿರುವುದಿಲ್ಲ. ಅದರಲ್ಲಿ ಕೆಲವು ಸಂಪ್ರದಾಯಗಳು ವಿಚಿತ್ರವೆನಿಸುತ್ತದೆ.

ಇದು ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ವೇಶ್ಯೆಯ ಕಣ್ಣೀರ ಕಥೆ

ಇಂತಹ ಒಂದು ಸಂಪ್ರದಾಯದಲ್ಲಿ ಸ್ಮಶಾನದಲ್ಲಿ ಉರಿಯುತ್ತಿರುವ ಚಿತೆಗಳ ಸುತ್ತ ವೇಶ್ಯೆಯರು ನರ್ತಿಸುತ್ತಾರೆ. ಈ ಕ್ರಮ ಅಸಹ್ಯ ಎಂದು ಹೆಚ್ಚಿನವರಿಗೆ ಅನ್ನಿಸಿದರೂ ಈ ಸಂಪ್ರದಾಯವನ್ನು ಅನುಸರಿಸುವವರು ಇದಕ್ಕೆ ನೀಡುವ ಕಾರಣ ನಿಮ್ಮನ್ನು ಬೆಚ್ಚಿ ಬೀಳಿಸಬಹುದು. ಇದು ಎಲ್ಲಿ ನಡೆಯುತ್ತದೆ ಎಂಬ ಕುತೂಹಲ ಮೂಡಿತೇ? ಮುಂದೆ ಓದಿ....

ಈ ಸಂಪ್ರದಾಯ ತುಂಬಾ ಹಳೆಯದು

ಈ ಸಂಪ್ರದಾಯ ತುಂಬಾ ಹಳೆಯದು

ಈ ವಿಚಿತ್ರ ಸಂಪ್ರದಾಯಕ್ಕೆ ಸುಮಾರು 450 ವರ್ಷಗಳ ಇತಿಹಾಸವಿದೆ. ಆ ಸಮಯದಲ್ಲಿ ರಾಜಾ ಮಾನ್ ಸಿಂಗ್ ರವರ ಆಳ್ವಿಕೆ ಇತ್ತು. ಬಳಿಕ ಆಳ್ವಿಕೆಯನ್ನು ಸ್ಮಶಾನದ ದೇವರು ಎಂದೇ ಪ್ರಖ್ಯಾತರಾಗಿದ್ದ ಬಾಬಾ ಶಂಶಾನ್ ನಾಥ್ ರವರು ಪುನ:ಸ್ಥಾಪಿಸಿದರು. ಅಂದಿನಿಂದ ಪ್ರತಿ ವರ್ಷದ ನವರಾತ್ರಿಯ ಸಮಯದಲ್ಲಿ ಈ ಸಂಪ್ರದಾಯವನ್ನು ಆಚರಿಸಲಾಗುತ್ತಿದೆ.

ಈ ಸಂಪ್ರದಾಯಕ್ಕೆ ಕಾರಣ

ಈ ಸಂಪ್ರದಾಯಕ್ಕೆ ಕಾರಣ

ಈ ಸಂಪ್ರದಾಯಕ್ಕೆ ಪ್ರಮುಖ ಕಾರಣವೆಂದರೆ "ಸಂಶಾನೇಶ್ವರ ಮಹಾದೇವನ ಶೃಂಗಾರ" ಅಥವಾ ಈ ದೇವನನ್ನು ಒಲಿಸಿಕೊಳ್ಳುವ ಮೂಲಕ ಮುಂದಿನ ಜನ್ಮದಲ್ಲಿಯಾದರೂ ಒಳ್ಳೆಯ ಜೀವನ ದೊರಕಲಿ ಎಂದು ಶಿವದಾಸಪುರ, ಮಂದುವಾಯಿಧ್, ಚುನಾರ್ ಮಾತು ದಾಲ್ ಮಂಡಿ ಮೊದಲಾದ ಸ್ಥಳಗಳಲ್ಲಿರುವ ಕೆಂಪುದೇಪದ ಪ್ರದೇಶದ ವೇಶ್ಯೆಯರು ಇಲ್ಲಿ ಪೂಜೆಯ ರೂಪದಲ್ಲಿ ನರ್ತಿಸುತ್ತಾರೆ.

ಈ ನರ್ತನ ಎಲ್ಲಿ ನಡೆಯುತ್ತದೆ?

ಈ ನರ್ತನ ಎಲ್ಲಿ ನಡೆಯುತ್ತದೆ?

ವಾರಣಾಸಿಯ ಪ್ರಮುಖ ಸ್ಮಶಾನದಲ್ಲಿ ಈ ಸಂಪ್ರದಾಯ ನಡೆಯುತ್ತದೆ. ಈ ಸ್ಮಶಾನಕ್ಕೆ 'ಮಹಾಸ್ಮಶಾನಂ' ಎಂದೂ ಕರೆಯಲಾಗುತ್ತದೆ. ಬೇರೆ ಸ್ಮಶಾನಗಳಿಗೆ ಇವರು ಹೋಗದಿರಲು ಕಾರಣವೇನೆಂದರೆ ಇಲ್ಲಿ ಸದಾ ಒಂದಲ್ಲಾ ಒಂದು ಚಿತೆ ಉರಿಯುತ್ತಲೇ ಇರುತ್ತದೆ ಹಾಗೂ ಪ್ರತಿದಿನ ಮುಸ್ಸಂಜೆಯ ಹೊತ್ತಿನಲ್ಲಿ ಈ ನರ್ತನ ಸರಿಸುಮಾರು ಪ್ರತಿದಿನ ನಡೆಯುತ್ತದೆ.

ಈ ನರ್ತನ ಎಲ್ಲಿ ನಡೆಯುತ್ತದೆ?

ಈ ನರ್ತನ ಎಲ್ಲಿ ನಡೆಯುತ್ತದೆ?

ಈ ನರ್ತನವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕುತೂಹಲಿಗರು ಆಗಮಿಸುತ್ತಾರೆ. ಈ ನರ್ತನದ ಬಳಿಕ ನಡೆಯುವ ಪೂಜೆಯಲ್ಲಿ ಪ್ರಸಾದದ ರೂಪದಲ್ಲಿ ಮಾಂಸ, ಭಾಂಗ್, ಗಾಂಜಾ, ಹಣ ಮತ್ತು ಮದ್ಯದ ಬಾಟಲಿಗಳನ್ನೂ ದೇವರಿಗೆ ಅರ್ಪಿಸಲಾಗುತ್ತದೆ.

ಈ ಬಗ್ಗೆ ವೇಶ್ಯೆಯರೇನು ಹೇಳುತ್ತಾರೆ?

ಈ ಬಗ್ಗೆ ವೇಶ್ಯೆಯರೇನು ಹೇಳುತ್ತಾರೆ?

ವೇಶ್ಯೆಯರು ತಿಳಿಸುವ ಪ್ರಕಾರ ಈ ಪೂಜೆ ಮತ್ತು ನರ್ತನದ ಮೂಲಕ ಬಾಬಾರವರ ಅನುಗ್ರಹವನ್ನು ಪಡೆದು ಮುಂದಿನ ಜನ್ಮದಲ್ಲಿ ಒಳ್ಳೆಯ ಜೀವನವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಬಗ್ಗೆ ವೇಶ್ಯೆಯರೇನು ಹೇಳುತ್ತಾರೆ?

ಈ ಬಗ್ಗೆ ವೇಶ್ಯೆಯರೇನು ಹೇಳುತ್ತಾರೆ?

ಮುಂದಿನ ಜನ್ಮದ ಜೀವನ ಒಳ್ಳೆಯದಾಗಲಿ ಎಂದೇ ಈ ಜನ್ಮದಲ್ಲಿ ಚಿತೆಗಳ ಸುತ್ತ ನರ್ತಿಸುವುದು ವಿಚಿತ್ರವಾದರೂ ನಿಜವಾಗಿರುವ ಸಂಪ್ರದಾಯವಾಗಿದೆ. ಈ ಮಾಹಿತಿ ನಿಮ್ಮಲ್ಲಿ ಕುತೂಹಲ ಮೂಡಿಸಿದರೆ ನಿಮ್ಮ ಪರಿಚಿತರು ಸ್ನೇಹಿತರಲ್ಲಿಯೂ ಹಂಚಿಕೊಳ್ಳಿ.

English summary

Sex Workers Dance At Cremation Grounds Here…

India is a rich country with a vast variety of rituals that are followed. There are so many rituals that Indians practice, and yet we, living in the same country, do not know about most of these. One such ritual is when sex workers dance around the dead in a crematorium/the burial grounds.
Subscribe Newsletter