Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಅಬ್ಬಬ್ಬಾ! ಮೈ ಜುಂ ಎನಿಸುವ 'ಸೆಲ್ಫಿ'ಗಳು ಇಲ್ಲಿವೆ ನೋಡಿ!!
ಇಂದಿನ ಯುವಜನಾಂಗವು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದು, ಸೆಲ್ಫಿ ಕ್ರೇಜ್ ಇಂದು ಹೆಚ್ಚು ಹೆಚ್ಚು ಅವರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಂದಿನ ದಿನಗಳಲ್ಲಿ ಸೆಲ್ಫಿ ಕ್ರೇಜ್ ಎಷ್ಟು ಅತಿಯಾಗಿದೆ ಎಂದರೆ ಯುವಜನರು ಸೆಲ್ಫಿ ತೆಗೆಯುತ್ತಲೇ ಸಾಹಸಗಳನ್ನು ಮಾಡಿಕೊಂಡು ತಮ್ಮ ಜೀವಕ್ಕೆ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ.
ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಅತಿ ಹೆಚ್ಚು ಲೈಕ್‌ಗಳನ್ನು ತಾವು ಪಡೆದುಕೊಳ್ಳಬೇಕೆಂಬ ಹಂಬಲದಿಂದಲೋ ಅಥವಾ ಖ್ಯಾತಿಯನ್ನು ಪಡೆದುಕೊಳ್ಳಬೇಕೆಂಬ ಆಸೆಯಿಂದ ಇಂತಹ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಅದರಲ್ಲೂ ಇದನ್ನು ಮೀರಿ ಜೀವವನ್ನು ಪಣವೊಡ್ಡಿ ಸೆಲ್ಫಿ ತೆಗೆಸಿಕೊಳ್ಳುವ ಸಾಹಸಿಗರು ಪ್ರಪಂಚದಲ್ಲಿ ಇದ್ದಾರೆ ಎಂದರೆ ನೀವು ನಂಬಲೇಬೇಕು. ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ಸಾಹಸಮಯಿ ಸೆಲ್ಫಿಗಳ ಪೂರ್ವ ಚಿತ್ರಣವನ್ನು ಇಲ್ಲಿ ನೀಡುತ್ತಿದ್ದು ಇದು ನಿಮ್ಮ ಮೈ ಮನವನ್ನು ನವಿರೇಳಿಸುವುದು ಖಂಡಿತ. ಬನ್ನಿ ಹಾಗಿದ್ದರೆ ಈ ಸೆಲ್ಫಿಯತ್ತ ಒಂದು ನೋಟ ಹರಿಸೋಣ....

#1
ಎತ್ತರದಲ್ಲಿ ವಿಮಾನಯಾವನ್ನು ಮಾಡುತ್ತಿರುವ ಈ ವ್ಯಕ್ತಿ ಅಲ್ಲಿಂದಲೇ ಸೆಲ್ಫಿಯನ್ನು ತೆಗೆದು ಪೋಸ್ಟ್ ಮಾಡಿದ್ದಾರೆ.

#2
ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ತಲೆಹೊರಗೆ ಹಾಕಿ ಈಕೆ ತೆಗೆದಿರುವ ಸೆಲ್ಫಿ ನಿಜಕ್ಕೂ ಎಂತಹವರನ್ನೂ ಭಯಗೊಳಿಸುತ್ತದೆ. ಟ್ರಾಫಿಕ್ ಪೊಲೀಸರು ಏನಾದರೂ ನೋಡುತ್ತಿದ್ದರೆ ಈಕೆಗೆ ದಂಡ ಖಂಡಿತ!

#3
ಅತ್ಯಂತ ಎತ್ತರದ ಸ್ಥಳದಿಂದ ಈ ಹುಡುಗಿ ಅದೂ ತನ್ನ ಹೈಹೀಲ್ಡ್ ಶೂನಲ್ಲಿ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿರುವ ಭಂಗಿ ನಿಜಕ್ಕೂ ಪ್ರಶಂಸನೀಯ.

#4
ಸರ್ಫಿಂಗ್ ಮಾಡುತ್ತಿರುವಾಗ ಬ್ಯಾಲೆನ್ಸ್ ಮಾಡಿಕೊಂಡು ಸೆಲ್ಫಿ ಕ್ಲಿಕ್ಕಿಸಿರುವ ಈ ಸಾಹಸಿ ನಿಜಕ್ಕೂ ಅಭಿನಂದನಾರ್ಹ

#5
ಇಂಡೋನೇಷ್ಯಾದ ಆಕ್ಟೀವ್ ಬ್ರೊಮೊ ಜ್ವಾಲಾಮುಖಿ ಇರುವ ಸೇತುವೆಯ ಮೇಲ್ಭಾಗದಲ್ಲಿ ನಿಂತುಕೊಂಡು ಈತ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿರುವುದು ನಿಜಕ್ಕೂ ಭಯಭೀತಗೊಳಿಸುತ್ತದೆ.

#6
ಹಿಂದಿನಿಂದ ಅಟ್ಟಿಸಿಕೊಂಡು ಬರುತ್ತಿರುವ ಹೋರಿಯನ್ನು ಗಮನಿಸಿಕೊಂಡೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಈ ಹುಡುಗ ನಿಜಕ್ಕೂ ಸಾಹಸಿ.

#7
ವೋಟೀವ್ ಚರ್ಚ್‌ನ ಮೇಲ್ಭಾಗದಲ್ಲಿ ಏರಿ ನಿಂತು ಈತ ಸೆಲ್ಫಿಯನ್ನು ತೆಗೆಯಿಸಿಕೊಳ್ಳುತ್ತಿರುವುದು ನಿಜಕ್ಕೂ ಗ್ರೇಟ್.

#8
ಪ್ಲೇನ್ ಕ್ರ್ಯಾಶ್ ನಡುವೆಯೂ ಈತ ಸೆಲ್ಫಿಯನ್ನು ತೆಗೆದುಕೊಂಡಿರುವುದು ನಿಜಕ್ಕೂ ದುಸ್ಸಾಹಸ ಎಂದೆನಿಸಿದೆ.

#9
ಕ್ರೈಸ್ಟ್‌ದ ರಿಡೀಮರ್‌ನ ಮೇಲ್ಭಾಗದಲ್ಲಿರುವ ರಿಯೊ ಡೆ ಜೇನಿರಿಯೊ ಪ್ರತಿಮೆಯ ಮೇಲೆ ತೆಗೆದ ಪ್ರಥಮ ಸೆಲ್ಫಿ ಇದಾಗಿದೆ.

#10
ಹಸಿದ ಒಂಟೆಯೊಂದು ಹುಡುಗಿಯ ತಲೆಯನ್ನು ಆಹಾರವೆಂದು ಭಾವಿಸಿ ಕಚ್ಚುತ್ತಿರುವ ದೃಶ್ಯ

#11
ಇಷ್ಟು ಎತ್ತರದಿಂದ ಈತ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಎಂತವರಿಗೂ ಭಯವನ್ನು ಉಂಟುಮಾಡಲಿದೆ.

#12
ಅಬ್ಬಾ ಈತ ತನ್ನ ಬೆನ್ನಿಗೆ ಬೆಂಕಿಯನ್ನು ಹಚ್ಚಿಕೊಂಡು ಸೆಲ್ಫಿ ತೆಗೆಸಿಕೊಳ್ಳುತ್ತಿರುವುದು ಸೆಲ್ಫಿ ಹುಚ್ಚಿನ ಪರಮಾವಧಿಯನ್ನು ತಿಳಿಸುತ್ತಿದೆ.

#13
ಸಿಂಹಗಳೊಂದಿಗೆ ಆಡಿಕೊಂಡು ಅದರ ಬಾಯೊಳಗೆ ಕೈಹಾಕಿಕೊಂಡು ಈತ ಸೆಲ್ಫಿ ತೆಗೆಸಿಕೊಳ್ಳುತ್ತಿರುವುದು ನಿಜಕ್ಕೂ ಭಯಾನಕ.

#14
ಶಾರ್ಕ್‌ನೊಂದಿಗೆ ಈತ ತೆಗೆಸಿಕೊಂಡಿರುವ ಸೆಲ್ಫಿ ನಿಜಕ್ಕೂ ಭಯಾನಕವಾಗಿದೆ.



Click it and Unblock the Notifications