ಭಯ ಹುಟ್ಟಿಸುವ ಆ ಅಲ್ಟ್ರಾಸೌಂಡ್ ಸ್ಕ್ಯಾನ್ ಚಿತ್ರಗಳು!!

Posted By: Arshad
Subscribe to Boldsky

ತಾನು ಗರ್ಭಿಣಿ ಎಂದು ಅರಿವಾದ ಕ್ಷಣದಿಂದಲೇ ತಾಯಿಯಾಗುವವಳಿಗೆ ತನ್ನ ಒಡಲಿನ ಮಗುವಿನ ಬಗ್ಗೆ ವಾತ್ಸಲ್ಯ ಮೂಡತೊಡಗುತ್ತದೆ. ಈ ಮಗುವಿನ ಮುಖ ಹೇಗಿರಬಹುದು ಎಂಬ ಕುತೂಹಲ ತಣಿಸಲು ಒಂಭತ್ತು ತಿಂಗಳ ದೀರ್ಘ ಕಾಲ ಕಾಯುವುದು ಅನಿವಾರ್ಯ. ಆದರೆ ಇಂದಿನ ವಿಜ್ಞಾನ ಗರ್ಭದಲ್ಲಿರುವ ಮಗುವಿನ ಆರೋಗ್ಯ ಹಾಗೂ ಆಕಾರವನ್ನು ಕಂಡುಕೊಳ್ಳಲು ಅಲ್ಟ್ರಾಸೌಂಡ್ ತಂತ್ರಜ್ಞಾನವನ್ನು ಬಳಸುತ್ತಿದೆ.

ಶಬ್ದದ ಅಲೆಗಳ ಪ್ರತಿಫಲನವನ್ನು ಗ್ರಹಿಸಿ ಕಂಪ್ಯೂಟರ್ ಪರದೆಯ ಮೇಲೆ ತ್ರಿಕೋನಾಕೃತಿಯ ಆಕಾರದೊಳಗೆ ಗರ್ಭದಲ್ಲಿರುವ ಮಗುವಿನ ಆಕಾರ ಹಾಗೂ ಇತರ ಮಾಹಿತಿಗಳನ್ನು ವೈದ್ಯರು ಗಮನಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಈ ಚಿತ್ರವನ್ನು ಗರ್ಭಿಣಿ ಸಹಾ ನೋಬಹುದಾದುದರಿಂದ ತನ್ನ ಮಗುವಿನ ಮುಖ ಹೇಗಿರಬಹುದು ಎಂಬ ಕುತೂಹಲ ಆಕೆಯಲ್ಲಿ ಕೊಂಚ ಭಯವನ್ನೂ ಹುಟ್ಟಿಸಿರುತ್ತದೆ.

ಒಂದು ವೇಳೆ ಇಲ್ಲಿ ಮುದ್ದುಮಗುವಿನ ಮುಖದ ಬದಲು ಭಯಾನಕ ಆಕಾರ ಕಂಡುಬಂದರೆ? ಹೆದರಿಕೆಯಾಗುತ್ತದೆ ಅಲ್ಲವೇ? ಕೇವಲ ಕಲ್ಪಿಸಿದ ನಮಗೇ ಹೀಗಾದರೆ ಆ ಆಕಾರವನ್ನು ಕಂಡ ತಾಯಿಗೆ ಹೇಗಾಗಬೇಡ? ಇಂತಹ ಕೆಲವು ಅಚ್ಚರಿಯ ಮತ್ತು ಭಯ ಹುಟ್ಟಿಸುವ ಅಲ್ಟ್ರಾಸೌಂಡ್ ಚಿತ್ರಗಳನ್ನು ನೋಡೋಣ...  

ಚಿತ್ರ#1 ಅನ್ಯಗ್ರಹದ ಮಗುವೇ ಇದು?

ಚಿತ್ರ#1 ಅನ್ಯಗ್ರಹದ ಮಗುವೇ ಇದು?

ಈ ಚಿತ್ರದಲ್ಲಿ ಕಾಣುವ ಮಗುವಿನ ಚಿತ್ರ ಯಥಾವತ್ತಾಗಿ ಒಂದು ಅನ್ಯಗ್ರಹ ಜೀವಿಯ ಮುಖದಂತೆ ಕಾಣುತ್ತಿದೆ ಅಲ್ಲವೇ? ಇದು ಎಷ್ಟು ನಿಜವಾಗುತ್ತದೆ ಎಂಬುದನ್ನು ಹೆರಿಗೆಯ ಬಳಿಕವೇ ಖಚಿತಪಡಿಸಬೇಕಷ್ಟೇ. ಈ ಮಗು ಎಲ್ಲರಂತೆ ಮುದ್ದು ಮುಖವನ್ನೇ ಹೊಂದಿರಲಿ ಎಂದು ನಾವೆಲ್ಲಾ ಹಾರೈಸೋಣ. ಈ ಚಿತ್ರವನ್ನು ಯಾವಾಗ ಮಹಿಳೆಯ ಸದಸ್ಯರೊಬ್ಬರು ತೆಗೆದು ಸಾಮಾಜಿಕ ತಾಣದಲ್ಲಿ ಪ್ರಕಟಿಸಿದರೋ, ಆಗಿನಿಂದ ಲಕ್ಷಾಂತರ ಮೊಬೈಲುಗಳಲ್ಲಿ ಇದು ಹರಿದಾಡುತ್ತಿದೆ.

ಚಿತ್ರ#2 ಈ ಮಗು ನಿಮ್ಮನ್ನೇ ದುರುಗುಟ್ಟುತ್ತಿದೆಯೇ?

ಚಿತ್ರ#2 ಈ ಮಗು ನಿಮ್ಮನ್ನೇ ದುರುಗುಟ್ಟುತ್ತಿದೆಯೇ?

ಕೆಲವರಿಗೆ ಚಿತ್ರ ತೆಗೆಯುವಾಗ ಕ್ಯಾಮೆರಾ ಕಡೆ ದುರುಗುಟ್ಟಿ ನೋಡುವ ಅಭ್ಯಾಸವಿರುತ್ತದೆ. ಈ ಮಗು ಈ ಕಲೆಯನ್ನು ಹುಟ್ಟುವುದಕ್ಕಿಂತಲೂ ಮೊದಲೇ ಕಲಿತುಕೊಂಡಿದೆಯೇ ಎಂದು ಈ ಚಿತ್ರವನ್ನು ನೋಡಿದಾಗ ಅನ್ನಿಸುತ್ತದೆ. ಅದರಲ್ಲೂ ಮಗುವಿನ ಕಣ್ಣುಗಳು ನಿಮ್ಮನ್ನೇ ದಿಟ್ಟಿಸಿ ನೋಡುತ್ತಿರುವಂತೆ ಕಾಣಿಸುತ್ತದೆ. ಈ ಚಿತ್ರವನ್ನು ಅಂದು ನೇರವಾಗಿ ನೋಡಿದವರಿಗೆ ಒಂದೆರಡು ದಿನವಾದರೂ ಈ ಮಗುವಿನ ಕಣ್ಣುಗಳು ಖಂಡಿತಾ ಕಾಡಿರಬಹುದು.

ಚಿತ್ರ #3 ಅಸಾಧ್ಯ ಗಾತ್ರದ ಮಗು

ಚಿತ್ರ #3 ಅಸಾಧ್ಯ ಗಾತ್ರದ ಮಗು

ತನಗೆ ಇಲ್ಲಿ ಸ್ಥಳಾವಕಾಶ ಸಾಕಾಗುತ್ತಿಲ್ಲ, ನನಗೆ ತಕ್ಷಣ ಹೊರಬರಬೇಕು ಎಂದು ಹೇಳುತ್ತಿರುವಂತಿದೆ ಈ ಚಿತ್ರ. ಈ ಮಗುವಿನ ಗಾತ್ರ ಸಾಮಾನ್ಯಕ್ಕಿಂತಲೂ ತುಂಬಾ ಹೆಚ್ಚಾಗಿದ್ದು ಚಿತ್ರದ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿರುವ ಕಾರಣ ಈ ಬಗೆಯ ಯೋಚನೆ ನಿಮ್ಮಲ್ಲೂ ಮೂಡಿರಬಹುದು.

ಚಿತ್ರ#4 ಚಿತ್ರಕ್ಕೆ ಭಂಗಿ ನೀಡುತ್ತಿದೆಯೇ?

ಚಿತ್ರ#4 ಚಿತ್ರಕ್ಕೆ ಭಂಗಿ ನೀಡುತ್ತಿದೆಯೇ?

ಚಿತ್ರ ತೆಗೆಯುವವರು ಬಂದಾಗ ಎಲ್ಲರೂ ಇದಕ್ಕೆ ಸೂಕ್ತ ಭಂಗಿ ನೀಡಲು ಕೊಂಚ ಮುಗುಳ್ನಗುತ್ತಾರಲ್ಲಾ, ಈ ಕಲೆಯನ್ನು ಈ ಮಗು ಗರ್ಭದಲ್ಲಿಯೇ ಕಲಿತು ಕೊಂಡಂತಿದೆ. ಈ ಚಿತ್ರದಲ್ಲಿ ಬಾಯಿಯನ್ನು ಪೂರ್ಣವಾಗಿ ತೆರೆದು ಚಿತ್ರಕ್ಕೆ ಭಂಗಿ ನೀಡುವಂತೆ ಕಾಣುತ್ತಿದೆ. ಈ ಮಗುವಿನ ಚಿತ್ರ ತೆಗೆದಾದ ಬಳಿಕ ಬಾಯಿ ಮುಚ್ಚಿದ್ದರಿಂದ ಇನ್ನೊಂದು ಚಿತ್ರದಲ್ಲಿ ಹಾಗೇ ಮೂಡಿಬಂದಿದೆ.

ಚಿತ್ರ#5 ಈ ಮಗುವಿನ ಅಸ್ಥಿಪಂಜರ ಕಾಣಿಸುತ್ತಿದೆ

ಚಿತ್ರ#5 ಈ ಮಗುವಿನ ಅಸ್ಥಿಪಂಜರ ಕಾಣಿಸುತ್ತಿದೆ

ಈ ಚಿತ್ರ ನೋಡಲಿಕ್ಕೆ ಮಗುವಿನಂತೆಯೇ ಇದ್ದರೂ ಇದು ನಿಜವಾದ ಚಿತ್ರವೇ ಅನ್ನುವುದು ಮಾತ್ರ ಅನುಮಾನ. ನಿಮಗೇನೆನಿಸುತ್ತದೆ? ಹುಟ್ಟದ ಮಗುವಿಗೆ ಹಲ್ಲೇ ಇರುವುದಿಲ್ಲ. ಹಾಗಾಗಿ ಇದು ನಿಜವೋ ಅಲ್ಲವೋ ಎಂಬ ನಿಷ್ಕರ್ಷೆಗೂ ಮುನ್ನ ಮುಂದಿನ ಚಿತ್ರಗಳನ್ನು ನೋಡೋಣ...

ಚಿತ್ರ#6 ಈ ಚಿತ್ರದಲ್ಲಿ ಮಗುವೆಲ್ಲಿದೆ?

ಚಿತ್ರ#6 ಈ ಚಿತ್ರದಲ್ಲಿ ಮಗುವೆಲ್ಲಿದೆ?

ಈ ಚಿತ್ರದಲ್ಲಿ ಏನೋ ತೊಂದರೆ ಇರಬಹುದು, ಕೊಂಚ ಖಾಲಿಯಾಗಿರಬಹುದು ಅನ್ನಿಸುತ್ತದೆ. ಆದರೆ ಕೊಂಚ ಗಮನವಿಟ್ಟು ನೋಡಿದರೆ ಮಗುವೊಂದು ತನ್ನ ಬಾಯಿಯನ್ನು ಅಸಾಧ್ಯವಾಗಿ ತೆರೆದಿದ್ದು ಅಂಡಾಕೃತಿಯ ನೀಳವಾದ ಬಾಯಿ ಭಯ ಹುಟ್ಟಿಸುತ್ತದೆ.

ಚಿತ್ರ #7 ಹ್ಯಾಲೋವೀನ್ ಮಗು

ಚಿತ್ರ #7 ಹ್ಯಾಲೋವೀನ್ ಮಗು

ಈ ಚಿತ್ರದಲ್ಲಿ ಕಾಣುವ ಮಗು ತೊಟ್ಟಿಲಲ್ಲಿ ನಿದ್ದೆಯಿಂದ ಈಗತಾನೇ ಎದ್ದು ಮೈಮುರಿದು ಆಕಳಿಸುತ್ತಿರುವಂತಿದೆ. ಎರಡೂ ಕೈಗಳನ್ನು ನೀಳವಾಗಿ ಚಾಚಿರುವ ವಿವರ ಸ್ಪಷ್ಟವಾಗಿ ಮೂಡಿಬಂದಿದ್ದು ಗರ್ಭದಲ್ಲಿ ಮಗುವಿಗೆ ಕೈ ಚಾಚುವಷ್ಟು ಸ್ಥಳವಿರುತ್ತದೆಯೇ ಎಂದು ಅಚ್ಚರಿಯ ಜೊತೆಗೇ ಭಯವನ್ನೂ ಹುಟ್ಟಿಸಬಹುದು.

ಚಿತ್ರ #8 ಠಕ್ಕಮಗುವಿನ ಚಿತ್ರ

ಚಿತ್ರ #8 ಠಕ್ಕಮಗುವಿನ ಚಿತ್ರ

ಈ ಚಿತ್ರ ನೋಡಲಿಕ್ಕೆ ಮಗುವೊಂದು ನಿಮ್ಮನ್ನು ಹೆದರಿಸಿ ನೀವು ಹೆದರಿದ ಬಳಿಕ ನಿಮ್ಮನ್ನು ನೋಡಿ ನಗುತ್ತಿರುವಂತಿದೆ. ಆದರೆ ಇದು ಸ್ಕ್ಯಾನ್ ತೆಗೆಯುವ ತಂತ್ರಜ್ಞನ ಕೈಚಳಕದಿಂದ ಮೂಡಿದ ಠಕ್ಕ ಚಿತ್ರವೇ ಹೊರತು ಮಗುವಿನ ನಿಜಚಿತ್ರವಲ್ಲ! ಈ ಚಿತ್ರಗಳು ಭಯ ಹುಟ್ಟಿಸಿದವೇ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

English summary

Scary Ultrasound Scans That Can Give You Goosebumps

When a woman realizes she is pregnant, she connects to the unborn child instantly. The span of waiting for the new member in the family seems to be the longest. Amidst all the happiness around, when the woman goes in for her ultrasound, she would surely be nervous. But what happens if a little monster is captured during the scans? Sounds scary, right? Here are some of the ultrasound images which will make you realize that even a tiny cute foetus can look really SCARY! Check them out...