ಸೌದಿ ದೊರೆಯಿಂದ ಹದ್ದುಗಳಿಗೂ ವಿಮಾನಯಾನ ಭಾಗ್ಯ! ವಿಡಿಯೋ ನೋಡಿ

By: manu
Subscribe to Boldsky

ಸೌದಿ ಅರೇಬಿಯಾದ ಕೆಲವು ಜನರು ಅಗಾಧ ಸಂಪತ್ತು ಹೊಂದಿದ್ದು ಅದ್ದೂರಿ ಖರ್ಚು ಮತ್ತು ಐಷಾರಾಮಿ ಜೀವನಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಕೆಲವು ವ್ಯಕ್ತಿಗಳು ಜನರಿಗೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಿದರೆ ಇನ್ನು ಕೆಲವರು ಸುಲಲೋಲುಪತೆಯ ಹಿಂದೆ ಭಾರೀ ಹಣ ಚೆಲ್ಲುತ್ತಾರೆ.  ಹೃದಯ ಪಂಜರದಲ್ಲಿ ಲವ್ ಬರ್ಡ್ಸ್ ಕಲರವ

ಆದರೆ ಕೆಲವರು ಇವರಿಬ್ಬರಿಗೂ ವ್ಯತಿರಿಕ್ತರಾಗಿ ತಮ್ಮ ಸಂಪ್ರದಾಯವನ್ನು ಮೆರೆಯಲು ಹಿಂದೆಂದೂ ಯಾರೂ ಯೋಚಿಸದ ಮಾರ್ಗಗಳ ಮೂಲಕ ಜಗತ್ತಿನ ಗಮನ ಸೆಳೆಯುತ್ತಾರೆ. ಇದಕ್ಕಾಗಿ ಭಾರೀ ಪ್ರಮಾಣದ ಹಣವನ್ನೂ ಖರ್ಚು ಮಾಡುತ್ತಾರೆ.

ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಇತ್ತೀಚೆಗೆ ವಿಮಾನವೊಂದರಲ್ಲಿ ತನ್ನ ಎಂಬತ್ತು ಹದ್ದುಗಳನ್ನು ಸೌದಿಯ ಈ ರಾಜಕುಮಾರ ಟಿಕೇಟ್ ತೆಗೆಸಿ ಪ್ರಯಾಣ ಮಾಡಿಸಿದ್ದು. ಇವರ ಕ್ರಮ ತಿಳಿಗೇಡಿತನದ್ದು ಎಂದು ಒಂದೇ ಮಾತಿನಲ್ಲಿ ಇವರ ಕ್ರಮವನ್ನು ಖಂಡಿಸುವ ಮೊದಲು ಇದರ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯುವುದು ಮುಖ್ಯ.  ಶ್‌...ಎಚ್ಚರಿಕೆ! ಬಹಳ ಖತರ್ನಾಕ್ ಪ್ರಾಣಿಗಳಿವು....

ಹದ್ದು ಸಾಕಣೆ ಅರಬ್ ಜನರ ಪ್ರಮುಖ ಹವ್ಯಾಸ ಹದ್ದುಗಳಲ್ಲಿಯೇ ಕೊಂಚ ಚಿಕ್ಕದಾದ ಹದ್ದುಗಳು ಅಥವಾ ಡೇಗೆಗಳು (Falcon) ಅರಬ್ ಜನರ ಅತ್ಯಂತ ಅಚ್ಚುಮೆಚ್ಚಿನ ಪಕ್ಷಿಯಾಗಿದೆ. ಈ ಪಕ್ಷಿ ಅರಬ್ ಸಂಯುಕ್ತ ಸಂಸ್ಥಾನದ ರಾಷ್ಟ್ರಲಾಂಚನದಲ್ಲಿಯೂ ಸ್ಥಾನ ಪಡೆದಿದೆ. ಇದರೊಂದಿಗೆ ಕತರ್, ಕುವೇಟ್, ಸೌದಿ ಅರೇಬಿಯಾ, ಬಹರೇನ್ ಮೊದಲಾದ ರಾಷ್ಟ್ರಗಳೂ ಇಂತಹ ಹಕ್ಕಿಗಳನ್ನು ತಮ್ಮ ಲಾಂಛನವನ್ನಾಗಿ ಬಳಸುತ್ತಿವೆ.

ಏಕಾಗಿ ಈ ಹಕ್ಕಿಗೆ ಇಷ್ಟೊಂದು ಮಹತ್ವ ಎಂದರೆ ಬಹಳ ಹಿಂದೆ, ಇಲ್ಲಿ ಎಣ್ಣೆ ಸಿಗುವ ಮೊದಲು ಇಲ್ಲಿನ ಜನರು ಕೇವಲ ಖರ್ಜೂರಗಳನ್ನು ತಿಂದು ಬದುಕುತ್ತಿದ್ದಾಗ ಖರ್ಜೂರ ಸಿಗದ ಸಮಯದಲ್ಲಿ ಈ ಹದ್ದುಗಳು ಚಿಕ್ಕ ಪುಟ್ಟ ಪ್ರಾಣಿಗಳನ್ನು ಬೇಟೆಯಾಡಿ ತಮ್ಮ ಒಡೆಯನಿಗೆ ತಂದು ಒಪ್ಪಿಸಿ ಆಹಾರ ನೀಡುತ್ತಿದ್ದವು. ಇದೇ ಕಾರಣಕ್ಕೆ ಇಂದಿಗೂ ಹದ್ದುಗಳು ಅರಬ್ ಜನರಿಗೆ ಅಮೂಲ್ಯವಾಗಿದ್ದು ಇದಕ್ಕಾಗಿ ಇವರು ಭಾರೀ ಪ್ರಮಾಣದಲ್ಲಿ ಖರ್ಚನ್ನೂ ಮಾಡುತ್ತಾರೆ....  

ಇವುಗಳಿಗೆ ತಮ್ಮದೇ ಆದ ಪಾಸ್ ಪೋರ್ಟ್ ಸಹಾ ಇದೆ!

ಇವುಗಳಿಗೆ ತಮ್ಮದೇ ಆದ ಪಾಸ್ ಪೋರ್ಟ್ ಸಹಾ ಇದೆ!

ಪಾಸ್ ಪೋರ್ಟ್ ಎಂದರೆ ಮನುಷ್ಯರಿಗೆ ಮಾತ್ರ ಮಾಡಿಸಬೇಕಾದ ದಾಖಲೆ ಎಂದು ಇದುವರೆಗೆ ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ ಅರಬ್ ರಾಷ್ಟ್ರಗಳಲ್ಲಿ ಪ್ರಾಣಿಗಳಿಗೂ ಪಾಸ್ ಪೋರ್ಟ್ ಇದ್ದು ಇದು ಪ್ರತಿ ಮೂರು ವರ್ಷಕ್ಕೊಮ್ಮೆ ನವೀಕರಿಸಲ್ಪಡುತ್ತದೆ. ಡೇಗೆಗಳ ಜನಪ್ರಿಯತೆ ಕಂಡುಕೊಂಡು ಇವುಗಳನ್ನು ಕದ್ದು ಮಾರುವವರನ್ನು ಮಟ್ಟ ಹಾಕಲೆಂದೇ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಈ ಪಕ್ಷಿಗಳಿಗೂ ಇತರರಂತೆಯೇ ಸುರಕ್ಷಾ ತಪಾಸಣೆಯೂ ಆಗುತ್ತದೆ

ಈ ಪಕ್ಷಿಗಳಿಗೂ ಇತರರಂತೆಯೇ ಸುರಕ್ಷಾ ತಪಾಸಣೆಯೂ ಆಗುತ್ತದೆ

ವಿಮಾನ ಪ್ರಯಾಣದ ವೇಳೆ ನಡೆಸುವ ಸುರಕ್ಷಾ ತನಿಖೆಯನ್ನು ಈ ಪಕ್ಷಿಗಳಿಗೂ ನಡೆಸಲಾಗುತ್ತದೆ. ಇವುಗಳೊಂದಿಗೆ ಇವುಗಳ ಪಾಸ್ ಪೋರ್ಟ್ ಅನ್ನೂ ಪರಿಶೀಲಿಸಿ ಮನುಷ್ಯರ ಪಾಸ್ ಪೋರ್ಟ್ ನಂತೆಯೇ ಇವುಗಳಿಗೂ ವೀಸಾ, ಸ್ಟಾಂಪ್ ಮೊದಲಾದ ಪ್ರಕ್ರಿಯೆಗಳನ್ನು ನಿರ್ವಹಿಸಲಾಗುತ್ತದೆ.

 ಈ ಪಕ್ಷಿಗಳು ವೀಸಾ ಇಲ್ಲದೇ ಈ ದೇಶಗಳಿಗೆ ಹೋಗಬಹುದು

ಈ ಪಕ್ಷಿಗಳು ವೀಸಾ ಇಲ್ಲದೇ ಈ ದೇಶಗಳಿಗೆ ಹೋಗಬಹುದು

ಈ ಪಕ್ಷಿಗಳು ವೀಸಾ ಇಲ್ಲದೇ ಈ ದೇಶಗಳಿಗೆ ಹೋಗಬಹುದು

ಈ ಪಕ್ಷಿಗಳನ್ನು ಕೆಲವು ದೇಶಗಳು ಮುಕ್ತವಾಗಿ ಆಹ್ವಾನಿಸುತ್ತವೆ. ಅಂದರೆ ಪಾಸ್ ಪೋರ್ಟ್ ಇದ್ದರೆ ಸಾಕು, ಇವುಗಳಿಗೆ ವೀಸಾ ಅಥವಾ ಆ ದೇಶದಲ್ಲಿ ವಾಸ್ತವ್ಯವಿರಲು ಪರವಾನಿಗೆ ದೊರಕುತ್ತದೆ. ಬಹರೇನ್, ಕುವೈಟ್, ಒಮಾನ್, ಕತರ್, ಸೌದಿ ಅರೇಬಿಯಾ, ಪಾಕಿಸ್ತಾನ, ಮೊರೊಕ್ಕೋ ಮತ್ತು ಸಿರಿಯಾ ದೇಶಗಳಿಗೆ ಈ ಪಕ್ಷಿಗಳು ವಿಮಾನದೊಳಗೆ ಕುಳಿತೇ ಹಾರಿಕೊಂಡು ಹೋಗಬಹುದು.

ಅಚ್ಚರಿಯ ಮೇಲೆ ಅಚ್ಚರಿ!

ಅಚ್ಚರಿಯ ಮೇಲೆ ಅಚ್ಚರಿ!

ಅಚ್ಚರಿಯ ಮೇಲೆ ಅಚ್ಚರಿ ಮೂಡಿಸುವ ಈ ಹಕ್ಕಿಗಳು ಅದೃಷ್ಟವನ್ನು ನೋಡುವ ಇಚ್ಛೆಯಿದ್ದರೆ ಕೆಳಗಿನ ವೀಡಿಯೋವನ್ನು ವೀಕ್ಷಿಸಬಹುದು. ವಿಮಾನದೊಳಗೆ ಈ ಪಕ್ಷಿಗಳು ಹೇಗೆ ಆರಾಮವಾಗಿ, ಯಾವುದೇ ಆತಂಕವಿಲ್ಲದೇ ಕುಳಿತಿವೆ ನೋಡಿ.

 
English summary

A Saudi Prince Booked 80 Seats for Eagles in Flight!

This is all about a prince from Saudi who had bought 80 flight tickets for his Eagles to fly safely! Check out this interesting story of falcons flying around!
Please Wait while comments are loading...
Subscribe Newsletter