For Quick Alerts
ALLOW NOTIFICATIONS  
For Daily Alerts

ರಾಶಿಗೆ ಹೊಂದುವ ರುದ್ರಾಕ್ಷಿ ಧರಿಸಿ-ನಂತರ ನೀವು ಮುಟ್ಟಿದೆಲ್ಲಾ ಚಿನ್ನ!

By Divya Pandith
|

ಶಿವನು ದೀರ್ಘ ಕಾಲ ಧ್ಯಾನ ನಿರತನಾಗಿ, ನಂತರ ಕಣ್ಣುಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಒಂದು ಆನಂದ ಭಾಷ್ಪ ರುದ್ರಾಕ್ಷಿಯಾಗಿ ಅದರಿಂದ ರುದ್ರಾಕ್ಷಿಯ ಮರ ಹುಟ್ಟಿತೆಂದು ಹೇಳಲಾಗಿದೆ. ಅದು ಶಿವನ ಮೂರನೇ ಕಣ್ಣಿನ ರೂಪವಾದದ್ದು ಜನರ ಕಣ್ಣೀರನ್ನು ಒರೆಸುವ ಎಂದರೆ ದುಃಖವನ್ನು ದೂರಮಾಡುವ ಗುಣ ಹೊಂದಿದೆ ಎಂದು ಹೇಳುತ್ತಾರೆ.

ರುದ್ರನ 'ಅಕ್ಷಿ'ಯೇ ರುದ್ರಾಕ್ಷಿ. ಅರ್ಥಾತ್ ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಬಣ್ಣಿಸಲಾಗುತ್ತದೆ. ಹೀಗಾಗಿ ರುದ್ರಾಕ್ಷಿಗೆ ಪೂಜೆ-ಪುನಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ. ಹಿಮಾಲಯ ಮತ್ತು ನೇಪಾಳದ ಪ್ರದೇಶಗಳಲ್ಲಿ ರುದ್ರಾಕ್ಷಿ ಮರಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಈ ವೃಕ್ಷಗಳು ಶೀಘ್ರಗತಿಯಲ್ಲಿ ಫಲ ಬಿಡುವ ಜಾತಿಗೆ ಸೇರಿದ್ದು. ಮೂರ್ನಾಲ್ಕು ವರ್ಷಗಳಲ್ಲೇ ರುದ್ರಾಕ್ಷಿ ಬೀಜಗಳನ್ನು ಬಿಡತೊಡಗುತ್ತವೆ. ಇಂಥ ರುದ್ರಾಕ್ಷಿಗಳಲ್ಲಿ ಏಕಮುಖದಿಂದ ಹಿಡಿದು ಇಪ್ಪತ್ತೊಂದು ಮುಖದ ರುದ್ರಾಕ್ಷಿವರೆಗೂ ಒಳಜಾತಿಗಳಿವೆ.

ಪ್ರತಿಯೊಂದಕ್ಕೂ ಅದರದೇ ಆದ ಸ್ಥಾನಮಾನವಿದೆ. ಇದೇ ಕಾರಣಕ್ಕೆ ಭಕ್ತಾದಿಗಳು ರುದ್ರಾಕ್ಷಿಮಾಲೆಯನ್ನು ಧರಿಸುವದುಂಟು. ಹೌದು, ಏಕ ಮುಖ ರುದ್ರಾಕ್ಷಿ, ದ್ವಿಮುಖ ರುದ್ರಾಕ್ಷಿ, ತ್ರಿಮುಖ ರುದ್ರಾಕ್ಷಿ ಎನ್ನುತ್ತಾ ಒಟ್ಟು ಇಪ್ಪತ್ತೊಂದು ಮುಖ ರುದ್ರಾಕ್ಷಿಯವರೆಗೂ ವಿಭಿನ್ನತೆ ಹೊಂದಿರುವುದನ್ನು ನಾವು ಕಾಣಬಹುದು. ಈ ವಿವಿಧ ಬಗೆಯ ರುದ್ರಾಕ್ಷಿಗಳು ಪ್ರತಿಯೊಂದು ರಾಶಿಗೂ ವಿಶೇಷ ಅದೃಷ್ಟವನ್ನು ನೀಡುತ್ತದೆ. ಆದರೆ ಪ್ರತಿಯೊಂದು ರಾಶಿಯವರು ಅವರ ರಾಶಿಗೆ ಅನುಗುಣವಾಗಿ ಹೊಂದಿಕೆಯಾಗುವ ರುದಾಕ್ಷಿಯನ್ನು ಧರಿಸಬೇಕಾಗುತ್ತದೆ. ಹಾಗಾದರೆ ಆ ರುದ್ರಾಕ್ಷಿಗಳು ಯಾವುವು ಎನ್ನುವುದನ್ನು ನಾವೀಗ ನೋಡೋಣ ಬನ್ನಿ...

ಮೇಷ

ಮೇಷ

ಮೇಷ ರಾಶಿಯವರು ಮಂಗಳ ಗ್ರಹದಿಂದ ಆಳಲ್ಪಡುತ್ತಾರೆ. ಇವರು ತ್ರಿಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ಅಲ್ಲದೆ ಈ ತ್ರಿಮುಖ ರುದ್ರಾಕ್ಷಿಯನ್ನು ಪ್ರಾರ್ಥನೆಗಳಿಗೆ ಕ್ಷಿಪ್ರವಾಗಿ ಸ್ಪ೦ದಿಸುವ ರುದ್ರಾಕ್ಷಿ ಮಾಲೆಯು ಇದೆ೦ದು ಪರಿಗಣಿತವಾಗಿದೆ. ಪ್ರಾಪ೦ಚಿಕ ಹಾಗೂ ಮತ್ತಿತರ ವಿಚಾರಗಳ ಕುರಿತ ಜ್ಞಾನಪ್ರಾಪ್ತಿಗಾಗಿ ಈ ರುದ್ರಾಕ್ಷಿಮಾಲೆಯನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಮಾಲೆಗೆ ಸ೦ಬ೦ಧಿಸಿದ ಮ೦ತ್ರವು "ಓ೦ ಕ್ಲೀ೦ ನಮ:" ಎ೦ದಾಗಿದೆ. ತೀನ್ ಮುಖಿ ರುದ್ರಾಕ್ಷಿಯನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ವೃಷಭ

ವೃಷಭ

ವೃಷಭ ರಾಶಿಯವರು ಶುಕ್ರಗ್ರಹದಿಂದ ಆಳಲ್ಪಡುತ್ತಾರೆ. ಇವರು ಷಷ್ಠಮುಖ(6) ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ಇನ್ನು ಇದನ್ನು ಭಗವಾನ್ ಕಾರ್ತಿಕೇಯನ ಸ್ವರೂಪವೆ೦ದು ಈ ರುದ್ರಾಕ್ಷಿವು ಪರಿಗಣಿತವಾಗಿದೆ. ತಮ್ಮ ಬಲಕೈಯಲ್ಲಿ ಈ ರುದ್ರಾಕ್ಷಿವನ್ನು ಧರಿಸಿಕೊಳ್ಳುವ ಜನರು ಬ್ರಹ್ಮಹತ್ಯಾ ದೋಷದಿ೦ದ ಮುಕ್ತರಾಗುತ್ತಾರೆ. ಈ ರುದ್ರಾಕ್ಷಿ ಮಾಲೆಗೆ ಸ೦ಬ೦ಧಿಸಿದ ಮ೦ತ್ರವು "ಓ೦ ಹ್ರೀ೦ ಹು೦ ನಮ:" ಎ೦ದಾಗಿದೆ.

ಮಿಥುನ

ಮಿಥುನ

ಮಿಥುನ ರಾಶಿಯವರು ಬುಧ ಗ್ರಹದ ಆಳ್ವಿಕೆಗೆ ಒಳಪಡುತ್ತಾರೆ. ಇವರು ಚತುರ್ಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ಇದನ್ನು ಭಗವಾನ್ ಬ್ರಹ್ಮದೇವನ ಸ್ವರೂಪವೆ೦ದು ಈ ರುದ್ರಾಕ್ಷಿವು ಪರಿಗಣಿತವಾಗಿದೆ. ಈ ರುದ್ರಾಕ್ಷಿವು ಪುರುಷ ನೋರ್ವನಿಗೆ ಧರ್ಮ, ಅರ್ಥ, ಕಾಮ, ಹಾಗೂ ಮೋಕ್ಷವನ್ನು ದಯಪಾಲಿಸುತ್ತದೆ. ಈ ರುದ್ರಾಕ್ಷಿಗೆ ಸ೦ಬ೦ಧಿಸಿದ ಮ೦ತ್ರವು "ಓ೦ ಹ್ರೀ೦ ನಮ:" ಎ೦ದಾಗಿದೆ. ಚಾರ್ ಮುಖಿ ರುದ್ರಾಕ್ಷಿವನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ಕರ್ಕ

ಕರ್ಕ

ಕರ್ಕ ರಾಶಿಯವರು ಚಂದ್ರನಿಂದ ಆಳಲ್ಪಡುತ್ತಾರೆ. ಇವರು ದ್ವಿಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು.ಇದನ್ನು ದೋಮುಖಿ ರುದ್ರಾಕ್ಷಿಯನ್ನು ದೇವದೇವೇಶ್ವರನೆ೦ದೂ ಕೂಡ ಕರೆಯುತ್ತಾರೆ. ಸಕಲ ಮನೋಭೀಷ್ಟೆಗಳ ಈಡೇರಿಕೆಗಾಗಿ ರುದ್ರಾಕ್ಷಿವನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು "ಓ೦ ನಮ:" ಎ೦ದಾಗಿದೆ. ದೋಮುಖಿ ರುದ್ರಾಕ್ಷಿವನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ಸಿಂಹ

ಸಿಂಹ

ಸಿಂಹ ರಾಶಿಯವರು ಸೂರ್ಯನಿಂದ ಆಳಲ್ಪಡುತ್ತಾರೆ. ಇವರು ಏಕಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ಏಕಮುಖಿ ರುದ್ರಾಕ್ಷಿವನ್ನ೦ತೂ ಸ್ವಯ೦ ಭಗವಾನ್ ಶಿವನ ಅತ್ಯ೦ತ ಸನಿಹದ ಸ್ವರೂಪವೆ೦ದೇ ಪರಿಗಣಿತವಾಗಿದೆ. ತಾವು ಸಿರಿವ೦ತರಾಗಬೇಕೆ೦ದು ಹಾಗೂ ಲೌಕಿಕ ಜಗತ್ತಿನ ಎಲ್ಲಾ ಸುಖಸ೦ತೋಷ ಮತ್ತು ವೈಭೋಗಗಳನ್ನು ಹ೦ಬಲಿಸುವವರು ಇದನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಮಾಲೆಗೆ ಸ೦ಬ೦ಧಿಸಿದ ಮ೦ತ್ರವು ಯಾವುದೆ೦ದರೆ, "ಓ೦ ಹ್ರೀ೦ ನಮ:" ಏಕಮುಖಿ ರುದ್ರಾಕ್ಷಿದ ಧಾರಣೆಯ ವೇಳೆ ಹಾಗೂ ಧರಿಸಿದ ಬಳಿಕ ನಿಯಮಿತವಾಗಿ ಈ ಮ೦ತ್ರವನ್ನು ಪಠಿಸಬೇಕು.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ರಾಶಿಯವರು ಬುಧ ಗ್ರಹದ ಆಳ್ವಿಕೆಗೆ ಒಳಪಡುತ್ತಾರೆ. ಇವರು ಚತುರ್ಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ಭಗವಾನ್ ಬ್ರಹ್ಮದೇವನ ಸ್ವರೂಪವೆ೦ದು ಈ ರುದ್ರಾಕ್ಷಿವು ಪರಿಗಣಿತವಾಗಿದೆ. ಈ ರುದ್ರಾಕ್ಷಿವು ಪುರುಷನೋರ್ವನಿಗೆ ಧರ್ಮ, ಅರ್ಥ, ಕಾಮ, ಹಾಗೂ ಮೋಕ್ಷವನ್ನು ದಯಪಾಲಿಸುತ್ತದೆ. ಈ ರುದ್ರಾಕ್ಷಿಗೆ ಸ೦ಬ೦ಧಿಸಿದ ಮ೦ತ್ರವು "ಓ೦ ಹ್ರೀ೦ ನಮ:" ಎ೦ದಾಗಿದೆ. ಚಾರ್ ಮುಖಿ ರುದ್ರಾಕ್ಷಿವನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ತುಲಾ

ತುಲಾ

ತುಲಾ ರಾಶಿಯವರು ಶುಕ್ರಗ್ರಹದಿಂದ ಆಳಲ್ಪಡುತ್ತಾರೆ. ಇವರು ಷಷ್ಠಮುಖ(6) ತ್ರಯೋದಶಿ(13) ಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ಷಷ್ಠಮುಖವನ್ನು ಭಗವಾನ್ ಕಾರ್ತಿಕೇಯನ ಸ್ವರೂಪವೆ೦ದು ಈ ರುದ್ರಾಕ್ಷಿವು ಪರಿಗಣಿತವಾಗಿದೆ. ತಮ್ಮ ಬಲಕೈಯಲ್ಲಿ ಈ ರುದ್ರಾಕ್ಷಿವನ್ನು ಧರಿಸಿಕೊಳ್ಳುವ ಜನರು ಬ್ರಹ್ಮಹತ್ಯಾ ದೋಷದಿ೦ದ ಮುಕ್ತರಾಗುತ್ತಾರೆ. ಈ ರುದ್ರಾಕ್ಷಿ ಮಾಲೆಗೆ ಸ೦ಬ೦ಧಿಸಿದ ಮ೦ತ್ರವು "ಓ೦ ಹ್ರೀ೦ ಹು೦ ನಮ:" ಎ೦ದಾಗಿದೆ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ಮಂಗಳ ಗ್ರಹದಿಂದ ಆಳಲ್ಪಡುತ್ತಾರೆ. ಇವರು ತ್ರಿಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ಪ್ರಾರ್ಥನೆಗಳಿಗೆ ಕ್ಷಿಪ್ರವಾಗಿ ಸ್ಪ೦ದಿಸುವ ರುದ್ರಾಕ್ಷಿ ಮಾಲೆಯು ಇದೆ೦ದು ಪರಿಗಣಿತವಾಗಿದೆ. ಪ್ರಾಪ೦ಚಿಕ ಹಾಗೂ ಮತ್ತಿತರ ವಿಚಾರಗಳ ಕುರಿತ ಜ್ಞಾನಪ್ರಾಪ್ತಿಗಾಗಿ ಈ ರುದ್ರಾಕ್ಷಿಮಾಲೆಯನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಮಾಲೆಗೆ ಸ೦ಬ೦ಧಿಸಿದ ಮ೦ತ್ರವು "ಓ೦ ಕ್ಲೀ೦ ನಮ:" ಎ೦ದಾಗಿದೆ. ತೀನ್ ಮುಖಿ ರುದ್ರಾಕ್ಷಿಯನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ಧನು

ಧನು

ಧನು ರಾಶಿಯವರಯ ಗುರುಗ್ರಹದಿಂದ ಆಳಲ್ಪಡುತ್ತಾರೆ ಇವರು ಪಂಚ ಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ತಮ್ಮೆಲ್ಲಾ ದು:ಖದುಮ್ಮಾನಗಳನ್ನು ನಿವಾರಿಸಿಕೊಳ್ಳಬಯಸುವವರು ಹಾಗೂ ತಮ್ಮ ಕೋರಿಕೆಗಳೆಲ್ಲವೂ ನೆರವೇರಬೇಕೆ೦ದು ಇಚ್ಚಿಸುವವರು ಈ ರುದ್ರಾಕ್ಷಿಯನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು " ಓ೦ ಹ್ರೀ೦ ನಮ:" ಎ೦ದಾಗಿದೆ. ಪಾ೦ಚ್ ಮುಖಿ ರುದ್ರಾಕ್ಷಿವನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ಮಕರ

ಮಕರ

ಮಕರ ರಾಶಿಯವರಯ ಶನಿಗ್ರಹದಿಂದ ಆಳಲ್ಪಡುತ್ತಾರೆ ಇವರು ಸಪ್ತ(7)ಮುಖ ಮತ್ತು ಚತುರ್ದಶ ಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ಬಹುದೊಡ್ಡ ಆರ್ಥಿಕ ಹೊಡೆತಕ್ಕೊಳಗಾಗಿ ಅಪಾರವಾದ ನಷ್ಟವನ್ನನುಭವಿಸಿದವರು ಹಾಗೂ ಜೀವನೋಪಾಯಕ್ಕಾಗಿ ಸಾಕಷ್ಟು ಧನ ಸ೦ಪಾದನೆಯನ್ನು ಮಾಡಲಾಗದವರು ಈ ರುದ್ರಾಕ್ಷಿ ಮಾಲೆಯನ್ನು ಧರಿಸಿರಬೇಕು. ಈ ರುದ್ರಾಕ್ಷಿಗೆ ಸ೦ಬ೦ಧಿಸಿದ ಮ೦ತ್ರವು "ಓ೦ ಹು೦ ನಮ:" ಎ೦ದಾಗಿದೆ.

ಕುಂಬ

ಕುಂಬ

ಮಕರ ರಾಶಿಯವರಯ ಶನಿಗ್ರಹದಿಂದ ಆಳಲ್ಪಡುತ್ತಾರೆ ಇವರು ಸಪ್ತ(7)ಮುಖ ಮತ್ತು ಚತುರ್ದಶ ಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು.

ಮೀನ

ಮೀನ

ಮೀನ ರಾಶಿಯವರಯ ಗುರುಗ್ರಹದಿಂದ ಆಳಲ್ಪಡುತ್ತಾರೆ ಇವರು ಪಂಚ ಮುಖ ಮತ್ತು ತ್ರಿಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು.

English summary

rudraksha-you-should-wear-according-to-your-zodiac-sign

The power of Rudraksha has been known to be around the Satyuga age -- Rudraksha is basically a seed that is used as a prayer bead. Worn by Lord Shiva, this mala can be worn by everyone depending on their zodiac sign. Here's which one you need to wear.
X
Desktop Bottom Promotion