Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಚ್ಚರಿಯ ಲೋಕ: ಹೊಟ್ಟೆ ಪಾಡಿಗಾಗಿ ಇವರು 'ಇಲಿಗಳನ್ನು' ತಿಂದು ಬದುಕುತ್ತಾರೆ!
ನಮ್ಮ ಕರ್ನಾಟಕದಲ್ಲಿ ಅಲೆಮಾರಿಗಳಾಗಿ ಜೀವನ ಸಾಗಿಸುವ ಹಾವಾಡಿಗರು ತಮ್ಮ ಆಹಾರದಲ್ಲಿ ಇಲಿಗಳನ್ನೂ ಸೇವಿಸುತ್ತಾರೆ. ಆದರೆ ಬಿಹಾರದ ಒಂದು ಪಂಗಡ ಬಡತನದ ದಟ್ಟ ದಾರಿದ್ಯದಲ್ಲಿ ಇಂದಿಗೂ ಬದುಕುತ್ತಿದ್ದು ಇವರಿಗೆ ಬದುಕಿ ಉಳಿಯ ಸಲುವಾಗಿ ಇಲಿಗಳನ್ನು ತಿನ್ನದೇ ನಿರ್ವಾಹವೇ ಇಲ್ಲವೆನ್ನುವಷ್ಟು ಇವರ ಬದುಕು ಹದಗೆಟ್ಟಿದೆ.
ಇವರ ನೆರವಿಗೆ ಸರ್ಕಾರ ತನ್ನ ಸಹಕಾರ ನೀಡುತ್ತಿದೆ ಎಂದು ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿದ್ದರೂ ಇದರ ಫಲ ಮಾತ್ರ ಮಧ್ಯವರ್ತಿಗಳ ಜೇಬಿಗೇ ಹೋಗುವ ಮೂಲಕ ಇವರಿಗೆ ಇನ್ನೂ ಅನ್ಯಭಾಗ್ಯ ದೊರಕಿಲ್ಲ. ಪರಿಣಾಮವಾಗಿ ದಟ್ಟದಾರಿದ್ರ್ಯ ಈ ಪಂಗಡದಲ್ಲಿ ನೆಲೆಯೂರಿದ್ದು ಇವರ ಬದುಕನ್ನು ಊಹಿಸಲೂ ಅಸಾಧ್ಯವೆನ್ನುವಷ್ಟು ಕಷ್ಟವಾಗಿಸಿದೆ. ಬನ್ನಿ, ಈ ಬಡವರ ಬಗ್ಗೆ ಕೆಲವರು ಮಾಹಿತಿಗಳನ್ನು ಅರಿಯೋಣ...

ಇಲಿ ಖಾದ್ಯ ತಯಾರಿಗೆ ಹದಿನೈದು ನಿಮಿಷ
ಇಲಿಗಳನ್ನು ಹಿಡಿಯಲು ಇವರು ತಮ್ಮದೇ ಆದ ತಂತ್ರಗಳನ್ನು ಉಪಯೋಗಿಸುತ್ತಾರೆ. ಬಿಲಗಳಿಂದ ಹೊರಬರುವ ಇಲಿಗಳ ತಲೆಯ ಮೇಲೆ ದೊಣ್ಣೆಯಿಂದ ಹೊಡೆದು ಕೊಲ್ಲುತ್ತಾರೆ. ಬಳಿಕ ಇದರ ಖಾದ್ಯವನ್ನು ಸುಮಾರು ಹದಿನೈದು ನಿಮಿಷಗಳಲ್ಲಿ ತಯಾರು ಮಾಡಲಾಗುತ್ತದೆ.

ಈ ಪಂಗಡದ ಜನರು ಯಾರು?
ಬಿಹಾರದಲ್ಲಿರುವ ಮುಸಾಹರ್ ಎಂಬ ಪಂಗಡದ ಜನರನ್ನು ಇತರರು 'ಇಲಿ ತಿನ್ನುವವರು' ಎಂದೇ ಪರಿಗಣಿಸುತ್ತಾರೆ. ಈ ಪಂಗಡದ ಜನ ಭಾರತದ ಅತಿ ಕಡಿಮೆ ಸಂಖ್ಯೆಯ ಪಂಗಡವಾಗಿದೆ. ಜಾತೀಯತೆಯ ಪಟ್ಟಿಯಲ್ಲಿ ಕೆಳಮಟ್ಟದಲ್ಲಿ ಬರುವ ದಲಿತರೂ ಇವರನ್ನು ಇವರ ಆಹಾರಾಭ್ಯಾಸಗಳನ್ನು ದೂರುವ ಮೂಲಕ ತುಚ್ಛವಾಗಿ ಕಾಣುತ್ತಾರೆ.

ಇವರೇಕೆ ಇಲಿ ತಿನ್ನುತ್ತಾರೆ?
ಈ ಪ್ರಶ್ನೆಯನ್ನು ಪತ್ರಿಕಾ ಪ್ರತಿನಿಧಿಯೊಬ್ಬರು ಈ ಪಂಗಡದ ಪ್ರಮುಖರಲ್ಲಿ ಕೇಳಿದಾಗ ಇದಕ್ಕೆ ಪಡೆದ ಉತ್ತರ ಬೆರಗು ಮೂಡಿಸುತದೆ. ಈ ಪ್ರಮುಖರು ಕೊಟ್ಟ ಉತ್ತರದ ಪ್ರಕಾರ ಇವರಿಗೆ ಸ್ವಂತ ಭೂಮಿಯೇ ಇಲ್ಲ, ಅಲ್ಲಲ್ಲಿ ಕೆಲಸ ಮಾಡಿಕೊಂಡೇ ಜೀವನ ಸಾಗಿಸಬೇಕು. ಕೆಲಸವಿಲ್ಲದಿದ್ದರೆ ಮನೆಯಲ್ಲಿಯೇ ಕುಳಿತು ಕಾಲ ಕಳೆಯಬೇಕು. ಆಗ ಹಸಿವನ್ನು ಇಂಗಿಸಿಕೊಳ್ಳಲು ಏನು ಸಿಗುತ್ತದೋ ಅದನ್ನು ತಿನ್ನುವ ಮನಃಸ್ಥಿತಿಗೆ ತಲುಪಿರುತ್ತಾರೆ. ಇದರಲ್ಲಿ ಇಲಿಗಳೂ ಒಂದು ಭಾಗವೇ ಹೊರತು ಇವರ ಆಯ್ಕೆಯಂತೂ ಖಂಡಿತಾ ಅಲ್ಲ!

ಮುಖ್ಯಮಂತ್ರಿಗಳ ಸ್ಪಷ್ಟನೆ
ಮಾಜಿ ಮುಖ್ಯಮಂತ್ರಿಗಳಾದ ಮಾಂಝಿಯವರು ನೀಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಬಿಹಾರದ ಈ ಪಂಗಡ ಬಗ್ಗೆ ಹೀಗೆ ಹೇಳಿದ್ದಾರೆ: "ಈ ಜನರ ಸಂಖ್ಯೆಯ ಬಗ್ಗೆ ಸರ್ಕಾರಿ ದಾಖಲೆಗಳಲ್ಲಿ ಯಾವುದೇ ವಿವರಗಳಿಲ್ಲದಿರುವುದೇ ಇವರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಇರುವ ಅಡ್ಡಿಯಾಗಿದೆ. ಆದರೆ ಇವರ ಸಂಖ್ಯೆ ಸರಿಸುಮಾರು ಎಂಭತ್ತು ಲಕ್ಷ ಇರಬಹುದು"

ಇವರು ತಮ್ಮ ಜೀವನಕ್ರಮವನ್ನು ಬದಲಿಸಿಕೊಳ್ಳಲು ಸಿದ್ಧರಿಲ್ಲ
ಇವರ ಆಹಾರಾಭ್ಯಾಸ ಇವರ ಆಯ್ಕೆಯಲ್ಲದಿದ್ದರೂ ಇದನ್ನು ಬಿಡಲು ಮಾತ್ರ ಇವರು ಸಿದ್ಧರಿಲ್ಲ. ಇದೇ ಕಾರಣಕ್ಕೇ ಇವರು ಇನ್ನೂ ದಾರಿದ್ರ್ಯದಿಂದ ಹೊರಬಂದಿಲ್ಲ. ಮಾಂಝಿಯವರ ಪ್ರಕಾರ ಇವರು ತಿನ್ನುವ ಇಲಿಗಳು ಬೇರೆ ಯಾವುದೇ ಆಹಾರದಷ್ಟೇ ಇವರಿಗೆ ಸ್ವಾಭಾವಿಕ ಹಾಗೂ ರುಚಿಕರವಾಗಿರುತ್ತದೆ. ಆದರೆ ಇಂದಿನ ಯುವಜನರು ಇಲಿಗಳನ್ನು ಸೇವಿಸುತ್ತಿಲ್ಲ.

ಇವರು ತಮ್ಮ ಜೀವನಕ್ರಮವನ್ನು ಬದಲಿಸಿಕೊಳ್ಳಲು ಸಿದ್ಧರಿಲ್ಲ
ಇವರು ನಾಗರೀಕತೆಯೊಂದಿಗೆ ಮುಂದುವರೆಯುತ್ತಾ ಬದಲಾವಣೆ ಪಡೆಯಲು ಇಚ್ಛಿಸುತ್ತಾರೆ. ಮುಂದಿನ ದಿನಗಳಲ್ಲಿ ಇವರ ಬದುಕೂ ನಿಧಾನವಾಗಿ ಬದಲಾಗಬಹುದು.ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.



Click it and Unblock the Notifications











