ದಂತಕಥೆ ಎನಿಸುವ ನೈಜ ಕಥೆಗಳು: ಪ್ರಾಣಿಗಳೇ ರಕ್ಷಿಸಿ ಬೆಳೆಸಿದ ಮಕ್ಕಳು!

Posted By: Arshad
Subscribe to Boldsky

ಕಾರ್ಟೂನು ಚಿತ್ರಗಳ ಮೂಲಕ ಮಕ್ಕಳ ಮನಗೆದ್ದಿರುವ ಜಂಗಲ್ ಬುಕ್ ಎಂಬ ಟೀವಿ ಶೃಂಖಲೆಯ ಬಾಲನಾಯಕನಾದ ಮೋಗ್ಲಿಯನ್ನು ಕಾಡುಪ್ರಾಣಿಗಳೇ ಸಾಕಿರುತ್ತವೆ. ಈ ಕಥೆ ರೋಚಕವಾದರೂ ಮನುಷ್ಯರ ಮಕ್ಕಳನ್ನು ಪ್ರಾಣಿಗಳು ಸಾಕುವುದು ಅಸಂಭವ, ಅದರಲ್ಲೂ ಮಾಂಸಾಹಾರಿ ಕಾಡುಪ್ರಾಣಿಗಳು ಅಸಾಹಕವಾಗಿ ಸಿಗುವ ಮಕ್ಕಳನ್ನು ತಿನ್ನದೇ ಬಿಡುತ್ತವೆಯೇ?

ಆದರೆ ಕಥೆಯೆಂದು ಅನ್ನಿಸುವ ಈ ಪ್ರಸಂಗ ನಿಜವಾಗಿಯೂ ನಡೆದಿದೆ! ಬನ್ನಿ, ನಿಜಜೀವನದಲ್ಲಿ ಪ್ರಾಣಿಗಳು ಕಾಪಾಡಿ ಬೆಳೆಸಿದ ಮಕ್ಕಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ....

ಮಂಗಗಳ ನಡುವೆ ಬೆಳೆದ ಬಾಲಕಿ

ಮಂಗಗಳ ನಡುವೆ ಬೆಳೆದ ಬಾಲಕಿ

1954ರಲ್ಲಿ ಅಪಹರಣ ಪ್ರಕರಣವೊಂದರಲ್ಲಿ ದುರುಳರು ನಾಲ್ಕು ವರ್ಷದ ಮರೀನಾ ಚಾಪ್ಮನ್ ಎಂಬ ಬಾಲಕಿಯನ್ನು ಕೊಲಂಬಿಯಾ ದೇಶದ ಕಾಡುಗಳಲ್ಲಿ ತ್ಯಜಿಸಿದ್ದರು. ಈ ಮಗುವನ್ನು ಅಲ್ಲಿನ ಮಂಗಗಳು ರಕ್ಷಿಸಿ ಬೆರ್ರಿ ಹಣ್ಣುಗಳು, ಕೆಲವು ಸಸ್ಯಗಳ ಬೇರು ಹಾಗೂ ಬಾಳೆಹಣ್ಣುಗಳನ್ನು ತಿನ್ನಿಸಿ ಬೆಳೆಸಿದವು. ದಿನಗಳೆದಂತೆ ಈ ಬಾಲಕಿ ಮರದ ಮೇಲಿನ ಶಾಖೆಗಳ ಮಲೆ ಮಲಗುತ್ತಾ, ಕೈಗಳನ್ನೇ ಬಳಸಿ ನಡೆಯುತ್ತಾ ಮರ ಹತ್ತುತ್ತಾ ಮಂಗಗಳಂತಹ ನಡವಳಿಕೆಗಳನ್ನು ಆಕೆ ಕಲಿತುಕೊಂಡಳು. ಹೀಗೇ ಸುಮಾರು ಮುಂದಿನ ಐದು ವರ್ಷಗಳ ಕಾಲ ಆಕೆ ಅರಣ್ಯದಲ್ಲಿ ಮಂಗಗಳ ನಡುವೆ ಜೀವಿಸಿದ್ದಳು. ಆಕೆಗೆ ಒಂಭತ್ತು ವರ್ಷವಾದಾಗ ಆ ಅರಣ್ಯಕ್ಕೆ ಬಂದ ಬೇಟೆಗಾರರ ಕೈಗೆ ಸಿಕ್ಕಿಬಿದ್ದಳು. ಆಕೆಯನ್ನು ಮಂಗಗಳಿಂದ ರಕ್ಷಿಸಿ ನಗರಕ್ಕೆ ತಂದು ಸೂಕ್ತ ಚಿಕಿತ್ಸೆಗೆ ಕಳಿಹಿಸಲಾಯ್ತು. ಎರಡು ವರ್ಷಗಳ ಸತತ ಚಿಕಿತ್ಸೆಯ ಬಳಿಕ ಆಕೆ ತನ್ನ ಮಾತನಾಡುವ ಶಕ್ತಿಯನ್ನು ಪಡೆದುಕೊಂಡಳು. ಕೆಲವು ವರ್ಷಗಳ ಬಳಿಕ ಈಕೆ ತನ್ನ ಬಾಲ್ಯದ ಕಥೆಯನ್ನು ಪುಸ್ತಕರೂಪದಲ್ಲಿ ಬರೆದು ಪ್ರಕಟಿಸಿದಳು. "A Girl Without a Name" ಎಂಬ ಹೆಸರಿನ ಈ ಪುಸ್ತಕದ ಮೂಲಕ ಈಕೆ ಖ್ಯಾತಿ ಗಳಿಸಿದಳು.

ಚಿಂಪಾಂಜಿ ಬೆಳೆಸಿದ ಬಾಲಕ

ಚಿಂಪಾಂಜಿ ಬೆಳೆಸಿದ ಬಾಲಕ

ಬೆಲ್ಲೋ ಎಂಬ ಪುಟ್ಟ ಗಂಡು ಮಗುವನ್ನು ವಿಕಲಾಂಗ ಎಂಬ ಕಾರಣಕ್ಕೆ ಆತನ ಹೆತ್ತವರು ಅರಣ್ಯದಲ್ಲಿ ತ್ಯಜಿಸಿದ್ದರು. ಅಳುತ್ತಿರುವ ಮಗುವನ್ನು ಅಲ್ಲಿದ್ದ ಚಿಂಪಾಂಜಿಯೊಂದು ಹೊತ್ತು ಸಾಕಿತ್ತು. ಈ ಮಗುವಿಗೆ ಕೆಲವಾರು ನ್ಯೂನ್ಯತೆಗಳಿದ್ದವು. ಬಲಭುಜ ಕಮಾನಿನಂತೆ ಬಾಗಿತ್ತು, ಒಳಭಾಗ ಹೀರಿಕೊಂಡಂತಿದ್ದ ಎದೆಗೂಡು ಹಾಗೂ ವಿರೂಪಗೊಂಡ ಹಣೆ ಮೊದಲಾದ ವಿಕಲತೆಗಳಿದ್ದವು. ಮಗುವಿಗೆ ಸುಮಾರು ಎರಡೂವರೆ ವರ್ಷವಾದ ಬಳಿಕ ಈತನನ್ನು ರಕ್ಷಿಸಲಾಯ್ತು.

ತೋಳದ ಬಿಲದಿಂದ ರಕ್ಷಿಸಲ್ಪಟ್ಟ ಬಾಲಕ

ತೋಳದ ಬಿಲದಿಂದ ರಕ್ಷಿಸಲ್ಪಟ್ಟ ಬಾಲಕ

1867ರಷ್ಟು ಹಿಂದೆ 'ದೀನಾ ಸನಿಚರ್' ಎಂಬ ಬಾಲಕನನ್ನು ತೋಳದ ಬಿಲದಿಂದ ರಕ್ಷಿಸಿ ಹೊರತೆಗೆಯಲಾಗಿತ್ತು. ಆ ಸಮಯದಲ್ಲಿ ಆತನ ವಯಸ್ಸು ಸುಮಾರು ಆರು ವರ್ಷಗಳಾಗಿತ್ತು. ಭಾರತದ ಬುಲಂದ್ ಶಹೆರ್ ಎಂಬ ಸ್ಥಳದಲ್ಲಿನ ಕಾಡಿನಲ್ಲಿ ಈ ಬಿಲ ಪತ್ತೆಯಾಗಿತ್ತು. ಈತನಿಗೆ ಚಿಕಿತ್ಸೆ ನೀಡುವ ಪ್ರಾರಂಭಿಕ ಹಂತದಲ್ಲಿ ಈತ ಯಥಾವತ್ ತೋಳದಂತೆಯೇ ವರ್ತಿಸುತ್ತಿದ್ದ. ಈತನಿಗೆ ಬಟ್ಟೆ ತೊಡಿಸಿದರೆ ಹರಿದು ಹಾಕುತ್ತಿದ್ದ. ಆಹಾರವನ್ನು ನೆಲದಿಂದ ನೇರವಾಗಿ ಬಾಯಿ ಹಾಕಿ ತಿನ್ನುತ್ತಿದ್ದ ಹಾಗೂ ಎರಡೂ ಕೈ ಹಾಗೂ ಎರಡೂ ಕಾಲುಗಳಿಂದ ಚತುಪ್ಪಾದಿಗಳಂತೆ ಚಲಿಸುತ್ತಿದ್ದ. ಈತ ಹಸಿಮಾಂಸವನ್ನೂ ಸೇವಿಸುತ್ತಿದ್ದ. ಆದರೆ ಈತನ ಕಾಳಜಿ ವಹಿಸಿದ ವ್ಯಕ್ತಿಗಳು ಎಷ್ಟು ಪ್ರಯತ್ನ ಪಟ್ಟರೂ ಈತನಿಗೆ ಮಾತು ಕಲಿಸಲು ಸಾಧ್ಯವೇ ಆಗಿರಲಿಲ್ಲ. ಆತ ಬದುಕಿದ್ದಷ್ಟೂ ದಿನ ಮನುಷ್ಯರಂತೆ ಇರಲು ಬಲುಕಷ್ಟದಲ್ಲಿ ಕಲಿತ ಎರಡೇ ಕಲೆಗಳೆಂದರೆ ನೆಟ್ಟಗೆ ನಿಲ್ಲುವುದು ಹಾಗೂ ಬಟ್ಟೆ ಹಾಕಿಕೊಳ್ಳುವುದು.

ತೋಳಗಳು ಸಾಕಿದ ಇನ್ನೊಬ್ಬ ಬಾಲಕ

ತೋಳಗಳು ಸಾಕಿದ ಇನ್ನೊಬ್ಬ ಬಾಲಕ

ಈ ಪ್ರಕರಣವೂ ಭಾರತದಲ್ಲಿಯೇ ನಡೆದಿದೆ. ರಾಮ ಎಂಬ ಐದು ವರ್ಷದ ಬಾಲಕ ಬಾಲಕನನ್ನು ಕಾಡಿನಲ್ಲಿ ರಕ್ಷಿಸಲಾಗಿತ್ತು. ಈತನನ್ನೂ ತೋಳಗಳು ಸಾಕಿ ಬೆಳೆಸಿದ್ದವು. ಈತನಿಗೆ ಹರಿತವಾದ ಹಲ್ಲುಗಳು ಹಾಗೂ ಚೂಪಾದ ಉರುಗುಗಳೂ ಇದ್ದವು. ಸತತವಾಗಿ ಮೊಣಕೈಗಳ ಮೇಲೆ ಭಾರ ಹಾಕಿ ನಡೆದ ಕಾರಣ ಮೊಣಕೈಗಳ ಭಾಗದಲ್ಲಿ ಹಾಗೂ ಮೊಣಕಾಲು ಮತ್ತು ಹಸ್ತಗಳ ಚರ್ಮ ದಪ್ಪನಾಗಿ ಚರ್ಮದ ಅಟ್ಟೆಯಂತಾಗಿತ್ತು. ಈತನನ್ನು ರಕ್ಷಿಸಿದ ಬಳಿಕವೂ ಈತ ತನಗೆ ಬಡಿಸಿದ ಆಹಾರವನ್ನು ಬಯಸದೇ ಕೋಳಿಗಳನ್ನು ಬೇಟೆಯಾಡುವತ್ತ ಹೆಚ್ಚಿನ ಗಮನ ಹರಿಸುತ್ತಿದ್ದ. ಆದರೆ ದೀನಾ ಸನಿಚರ್ ನಂತೆ ಆಗದೇ ಈತ ನಿಧಾನವಾಗಿ ತನಗೆ ಕಲಿಸಿದ್ದನ್ನೆಲ್ಲಾ ಕಲಿತುಕೊಳ್ಳುತ್ತಾ ಈಜಾಡಲು, ಯಾರದೇ ಸಹಾಯವಿಲ್ಲದೇ, ಪರಿಚಾರಿಕೆಯರ ನಿಗಾದೊಂದಿಗೆ ಬಟ್ಟೆ ಹಾಕಿಕೊಳ್ಳುವ ಮಟ್ಟಕ್ಕೆ ಮನುಷ್ಯರಂತೆ ಕಾಣಿಸಿಕೊಂಡ ಆದರೆ ಈತ ಎಂದಿಗೂ ಮಾತನಾಡಲು ಶಕ್ತನಾಗಲೇ ಇಲ್ಲ.

ಮಂಗಗಳು ಬೆಳೆಸಿದ ಇನ್ನೊಬ್ಬ ಬಾಲಕ

ಮಂಗಗಳು ಬೆಳೆಸಿದ ಇನ್ನೊಬ್ಬ ಬಾಲಕ

ಆಫ್ರಿಕಾದ ಕಾಡುಗಳಲ್ಲಿ ಬೆಳೆದ ಇನ್ನೊಬ್ಬ ಬಾಲಕನಾದ ಜಾನ್ ಜೆಬುನ್ಯಾ ಸಮಾರು ಮೂರು ವರ್ಷಗಳಾಗುವವರೆಗೂ ಮಂಗಗಳ ಆರೈಕೆಯಲ್ಲಿಯೇ ಕಳೆದ. ಉಗಾಂಡಾದಲ್ಲಿ ನಡೆದ ದಂಗೆಯಲ್ಲಿ ಈತನ ತಂದೆತಾಯಿಯರು ಹತರಾದ ಬಳಿಕ ಈತ ಅನಾಥನಾಗಿದ್ದ. ಪುಟ್ಟ ಮಗುವನ್ನು ಮಂಗಗಳೇ ರಕ್ಷಿಸಿ ಬೆಳೆಸಿದವು. ಈತ ಬೆರ್ರಿ ಹಣ್ಣುಗಳು, ಒಣಫಲಗಳು ಮೊದಲಾದವುಗಳನ್ನೇ ತಿನ್ನುತ್ತಿದ್ದ. ಒಂದು ದಿನ ಈತನನ್ನು ಕಾಡಿಗೆ ಬಂದಿದ್ದ ಗ್ರಾಮಸ್ಥರು ಕಂಡು ಮಂಗಗಳಿಂದ ರಕ್ಷಿಸಿ ತಮ್ಮ ಗ್ರಾಮಕ್ಕೆ ಕರೆತಂದರು. ಈತನನ್ನು ಪುನಃ ಮನಷ್ಯನಾಗಿಸಲು ಕ್ರಮಗಳನ್ನು ಕೈಗೊಳ್ಳಲಾಯ್ತು. ನಿಧಾನವಾಗಿ ಈತ ಮಾತನಾಡಲು ಕಲಿತು ನಿಧಾನವಾಗಿ ಇತರ ಮಕ್ಕಳೊಂದಿಗೆ ಹಾಡು ಗುನುಗುನಿಸುವುದನ್ನೂ ಕಲಿತ.

ಕಾಡುನಾಯಿಗಳೊಂದಿಗೆ ಜೀವಿಸಿದ್ದ ಬಾಲಕ

ಕಾಡುನಾಯಿಗಳೊಂದಿಗೆ ಜೀವಿಸಿದ್ದ ಬಾಲಕ

ತಮ್ಮ ವಯಸ್ಸಿಗೂ ಮೀರಿದ ತೂಕದ ಮೂಲಕ ತಮ್ಮನ್ನು ಗುರುತಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಅಂತೆಯೇ ತೀರಾ ಚಿಕ್ಕವರಂತೆ ನಡೆಸಿಕೊಳ್ಳುವುದನ್ನೂ ಇಷ್ಟಪಡುವುದಿಲ್ಲ. ಇದು ಮನಃಶಾಸ್ತ್ರ ವಿವರಿಸುವ ಮನುಷ್ಯರ ನಡವಳಿಕೆಯಾಗಿದೆ. ಬೆಳೆಯುತ್ತಿರುವ ಮಕ್ಕಳು ಕೆಲವೊಮ್ಮೆ ತಮ್ಮ ವಯಸ್ಸಿಗೆ ಅನುಗುಣವಾದ ತೂಕವಿರದೇ ಹೆಚ್ಚು ಅಥವಾ ಕಡಿಮೆ ಇರಬಹುದು. ನಾವಿಂದು ವಿಶ್ವದ ಅತಿ ಸ್ಥೂಲ ಮಗುವಿನ ಬಗ್ಗೆ ವಿವರಿಸುತ್ತಿದ್ದೇವೆ. ಈ ಮಗುವಿಗೆ ಕೇವಲ ಹತ್ತು ತಿಂಗಳಾಗಿದ್ದರೂ ನೋಡಲಿಕ್ಕೆ ಎರಡು ವರ್ಷದ ಮಗುವಿನಂತೆ ಕಾಣಿಸಿಕೊಳ್ಳುತ್ತಾನೆ ಹಾಗೂ ಈತನ ತೂಕ ಸುಮಾರು ಒಂಭತ್ತು ವರ್ಷದ ಮಗುವಿನಷ್ಟಿದೆ!

ಮೋಗ್ಲಿ ಬಾಲಕಿ

ಮೋಗ್ಲಿ ಬಾಲಕಿ

ತೋಳಗಳು ಕಾಪಡಿದ ಬಾಲಕ ಮೋಗ್ಲಿಯ ಕಥೆಯನ್ನು ಹೋಲುವ ಇನ್ನೊಂದು ಕಥೆಯೂ ಇದೆ. ಭಾರತದ ಕಟಾರ್ನಿಯಾ ಘಾಟ್ ಎಂಬ ಸುರಕ್ಷಿತ ಅರಣ್ಯದಲ್ಲಿ 'ಎಹ್ಸಾಸ್' ಎಂಬ ಎಂಟು ವರ್ಷದ ಬಾಲಕಿಯೊಬ್ಬಳನ್ನು ರಕ್ಷಿಸಲಾಗಿತ್ತು. ಈಕೆಯನ್ನು ಮಂಗಗಳು ರಕ್ಷಿಸಿ ಬೆಳೆಸಿದ್ದ ಕಾರಣ ಈಕೆಗೆ 'ಮೋಗ್ಲಿ ಗರ್ಲ್' ಅಥವಾ ಮೋಗ್ಲಿ ಬಾಲಕಿ ಎಂಬ ಅನ್ವರ್ಥನಾಮವನ್ನು ನೀಡಲಾಯ್ತು. ಈಕೆ ಮಂಗಗಳಂತೆಯೇ ನಾಲ್ಕು ಕಾಲುಗಳ ಮೇಲೆ ನಡೆಯುತ್ತಾ ಹಣ್ಣು,ಫಲಗಳನ್ನು ತಿನ್ನುತ್ತಿದ್ದಳೂ ಹಾಗೂ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಈಕೆಯೂ ನೆಲದಿಂದ ಆಹಾರವನ್ನು ನೇರವಾಗಿ ತಿನ್ನುತ್ತಿದ್ದಳು ಹಾಗೂ ಕೈಗಳನ್ನು ಉಪಯೋಗಿಸುತ್ತಿರಲಿಲ್ಲ. ಈಕೆಯನ್ನು ರಕ್ಷಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಯಿತಾದರೂ ಈಕೆ ಎರಡು ಕಾಲುಗಳ ಮೇಲೆ ನಿಲ್ಲಲು ಒಪ್ಪುತ್ತಲೇ ಇಲ್ಲ. ಆದರೆ ಬೇರೆ ವಿಷಯಗಳಲ್ಲಿ ಕೊಂಚವೇ ಪರಿವರ್ತನೆ ಕಂಡುಬಂದಿದೆ. ಇಂತಹ ಆಶ್ಚರ್ಯಕರ ಕಥೆಗಳು ಇನ್ನಷ್ಟು ಓದಲು ಇಷ್ಟವೇ, ಹಾಗಾದರೆ ನಮ್ಮ ತಾಣವನ್ನು ಸತತವಾಗಿ ಗಮನಿಸುತ್ತಿರಿ.

ಕಾಡುನಾಯಿಗಳೊಂದಿಗೆ ಜೀವಿಸಿದ್ದ ಬಾಲಕ

ಕಾಡುನಾಯಿಗಳೊಂದಿಗೆ ಜೀವಿಸಿದ್ದ ಬಾಲಕ

ರೋಮಾನಿಯಾ ದೇಶದಲ್ಲಿ ಟ್ರಾಯಿಯನ್ ಕ್ಯಾಲಾಡರಾರ್ ಎಮ್ಬ ಬಾಲಕನನ್ನು ಕಾಡುನಾಯಿಗಳು ರಕ್ಷಿಸಿದ್ದವು. ಈತನನ್ನು ಕಾಡುನಾಯಿಗಳಿಂದ ರಕ್ಷಿಸಿದ್ದಾ ಈತ ಹೆಚ್ಚೂ ಕಡಿಮೆ ಮೂಳೆಚಕ್ಕಳವಾಗಿ ಸಾಯುತ ಸ್ಥಿತಿಯಲ್ಲಿದ್ದ. ಈತನ ರಕ್ತಪರಿಚಲನಾ ವ್ಯವಸ್ಥೆ ಕುಸಿಯುವ ಹಂತದಲ್ಲಿತ್ತು. ಈತನನ್ನು ಕಾಡುನಾಯಿಯ ಶವದ ಬಳಿ ಕಂಡಿದ್ದರು. ಈತ ಹಸಿವಾದಾದ ಆ ನಾಯಿಯ ಶವದ ಮಾಂಸವನ್ನೇ ತಿನ್ನುತ್ತಿದ್ದ. ಕಾಡುಪ್ರಾಣಿಗಳಂತೆಯೇ ಈತನಿಗೆ ಹಸಿವಾದಾಗ ಗುರುಗುಟ್ಟುವುದು ಹಾಗೂ ತನ್ನ ಆಹಾರದ ಬಳಿ ಯಾರಾದರೂ ಬಂದರೆ ವ್ಯಗ್ರನಾಗುತ್ತಿದ್ದ. ಮಲಗಲು ಹಾಸಿಗೆ ಹಾಸಿದರೆ ಈತ ಹಾಸಿಗೆಯಡಿ ನುಸುಳುತ್ತಿದ್ದ. ಈತನನ್ನು ರಕ್ಷಿಸಿದ ಎರಡು ತಿಂಗಳ ಬಳಿಕವೇ ನಾಗರಿಕನಾಗುವತ್ತ ಪ್ರಥಮ ಸೂಚನೆಯನ್ನು ನೀಡಿದ್ದ. ಆದರೆ ಸತತ ಪ್ರಯತ್ನದ ಬಳಿಕವೂ ಈತ ಕೆಲವೇ ಪದಗಳನ್ನು ಮಾತನಾಡಲು ಕಲಿತಿದ್ದ.

ಚಿತ್ರ - ಕಾಲ್ಪನಿಕ

English summary

Real-life Stories: Children Who Were Grown By Animals!

When you think of Mowgli, from the Jungle book, it is fascinating to imagine how the little boy grows up amidst wild animals and assume that this can happen only in fantasy! But do you know that there are a few cases of human kids who have been raised by the wild animals in REAL? Here, we bring to you the real-life cases of kids who were raised by wild animals in real. Check it out...