For Quick Alerts
ALLOW NOTIFICATIONS  
For Daily Alerts

  ಬುಧವಾರದ ದಿನ ಭವಿಷ್ಯ

  By Divya Pandith
  |

  ಪ್ರತಿಯೊಬ್ಬರೂ ತಮ್ಮ ಭವಿಷ್ಯ ಉಜ್ವಲವಾಗಿರಬೇಕು. ಸದಾ ಖುಷಿಯಿಂದ ಕೂಡಿರಲಿ. ಯಾವುದೇ ಕಷ್ಟ ನಷ್ಟಗಳು ಉಂಟಾಗದಿರಲಿ ಎಂದು ಬಯಸುತ್ತಾರೆ. ಆದರೆ ಜಾತಕದಲ್ಲಿರುವ ಗ್ರಹಗತಿಗಳು ನಮ್ಮ ಭವಿಷ್ಯದಲ್ಲಿ ಸುಖ ಸಂತೋಷ ಎನ್ನುವ ಏರಿಳಿತವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತದೆ. ಕೆಲವು ದೆಸೆ ಹಾಗೂ ಗ್ರಹಚಾರದ ಪ್ರಭಾವದಿಂದ ಕಡಿಮೆ ಪ್ರಮಾಣದ ಕಷ್ಟಗಳು ಹಾಗೂ ದೀರ್ಘ ಸಮಯದ ಸಂತೋಷಗಳು ಲಭಿಸುವವು.

  ಭವಿಷ್ಯ ಹೇಗೇ ಇದ್ದರೂ ನಾವು ಮೊದಲು ಭಗವಂತನ ಆರಾಧನೆ ಮಾಡಬೇಕು. ಆತನ ಪ್ರೀತಿಗೆ ಪಾತ್ರರಾಗಬೇಕು. ಆಗಲೇ ನಮ್ಮ ಜೀವನ ಸಾರ್ಥಕ ಹಾಗೂ ಸಂತೋಷದಿಂದ ಕೂಡಿರುತ್ತದೆ. ಬುಧವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ದಿನವಿಡೀ ಯಾವೆಲ್ಲಾ ಸಮಸ್ಯೆಗಳನ್ನು ಅನುಭವಿಸಬೇಕಾಗುವುದು ಎನ್ನುವದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಬಯಕೆಯಲ್ಲಿದ್ದರೆ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ.

  ಪ್ರತಿಯೊಬ್ಬರೂ ತಮ್ಮ ಭವಿಷ್ಯ ಉಜ್ವಲವಾಗಿರಬೇಕು. ಸದಾ ಖುಷಿಯಿಂದ ಕೂಡಿರಲಿ. ಯಾವುದೇ ಕಷ್ಟ ನಷ್ಟಗಳು ಉಂಟಾಗದಿರಲಿ ಎಂದು ಬಯಸುತ್ತಾರೆ. ಆದರೆ ಜಾತಕದಲ್ಲಿರುವ ಗ್ರಹಗತಿಗಳು ನಮ್ಮ ಭವಿಷ್ಯದಲ್ಲಿ ಸುಖ ಸಂತೋಷ ಎನ್ನುವ ಏರಿಳಿತವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತದೆ. ಕೆಲವು ದೆಸೆ ಹಾಗೂ ಗ್ರಹಚಾರದ ಪ್ರಭಾವದಿಂದ ಕಡಿಮೆ ಪ್ರಮಾಣದ ಕಷ್ಟಗಳು ಹಾಗೂ ದೀರ್ಘ ಸಮಯದ ಸಂತೋಷಗಳು ಲಭಿಸುವವು.

  ಭವಿಷ್ಯ ಹೇಗೇ ಇದ್ದರೂ ನಾವು ಮೊದಲು ಭಗವಂತನ ಆರಾಧನೆ ಮಾಡಬೇಕು. ಆತನ ಪ್ರೀತಿಗೆ ಪಾತ್ರರಾಗಬೇಕು. ಆಗಲೇ ನಮ್ಮ ಜೀವನ ಸಾರ್ಥಕ ಹಾಗೂ ಸಂತೋಷದಿಂದ ಕೂಡಿರುತ್ತದೆ. ಬುಧವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ದಿನವಿಡೀ ಯಾವೆಲ್ಲಾ ಸಮಸ್ಯೆಗಳನ್ನು ಅನುಭವಿಸಬೇಕಾಗುವುದು ಎನ್ನುವದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಬಯಕೆಯಲ್ಲಿದ್ದರೆ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ....

  ಮೇಷ

  ಮೇಷ

  ಮನೆಯಲ್ಲಿ ಸಂತೋಷದ ವಾತಾವರಣದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ವಾಹನಗಳ ವ್ಯಾಪಾರ ಹಾಗೂ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ ಉಂಟಾಗುವುದು. ನೀವು ಕೊಟ್ಟಿರುವ ಹಣವು ಇಂದು ನಿಮಗೆ ಸಿಗುವ ಸಾಧ್ಯತೆ ಇದೆ. ಆದಷ್ಟು ಸ್ತ್ರೀಯರಿಂದ ದೂರವಿರಿ. ಅವಮಾನ ಉಂಟಾಗುವ ಸಾಧ್ಯತೆಗಳು ಹೆಚ್ಚಿರುವುದು. ಬೇರೆಯವರ ನಿರ್ಧಾರದಂತೆ ನೀವು ಮುನ್ನುಗ್ಗದಿರಿ. ನಿಮ್ಮದೇ ಆಲೋಚನೆ ಹಾಗೂ ನಿರ್ಧಾರಗಳಿರಲಿ. ಇನ್ನಷ್ಟು ಯಶಸ್ವಿ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

  ವೃಷಭ

  ವೃಷಭ

  ಅಷ್ಟಮ ಶನಿಯು ನಷ್ಟದ ಸಂಖೇತವಾಗಿರುತ್ತದೆ. ಯಾವುದೇ ಕಾರಣಕ್ಕೂ ಇತರರಿಗೆ ಹಣ ನೀಡುವುದು ಅಥವಾ ಜಾಮೀನು ನೀಡುವ ಕೆಲಸಕ್ಕೆ ಮುಂದಾಗದಿರಿ.

  ಹಾಗೆಯೇ ಇತರರಿಂದ ಸಾಲವನ್ನು ಪಡೆದುಕೊಳ್ಳದಿರಿ. ವಿಪರೀತವಾದ ಅವಮಾನಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೆಣ್ಣು ಮಕ್ಕಳಿಂದಲೂ ಅವಮಾನ ಉಂಟಾಗುವುದು. ಹಿತ ಶತ್ರುಗಳಿಂದ ಬಾಧೆ ಉಂಟಾಗುವುದು. ಸ್ತ್ರೀಯರು ಆರೋಗ್ಯದ ಕುರಿತು ಹೆಚ್ಚು ಜಾಗೃತರಾಗಿರಬೇಕು. ತಂದೆಯ ಮಾತನ್ನು ಮೀರದಿರಿ. ವಿಪರೀತವಾದ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಯೂ ಹೆಚ್ಚಿದೆ. ಸಮಸ್ಯೆಗಳ ನಿವಾರಣೆಗೆ ವಿಷ್ಣು ಹಾಗೂ ಧನ್ವಂತರಿಯ ಪ್ರಾರ್ಥನೆಮಾಡುವುದು ಉತ್ತಮ.

  ಮಿಥುನ

  ಮಿಥುನ

  ನಿಮಗೆ ಇಂದು ಸಾಮಾನ್ಯವಾದ ದಿನ ಎಂದು ಹೇಳಬಹುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು. ಕೆಲವರಿಗೆ ಮಾನಸಿಕ ಕಿರಿಕಿರಿ ಹಾಗೂ ಸ್ತ್ರೀಯರಿಂದ ಅವಮಾನ ಉಂಟಾಗುವ ಸಾಧ್ಯತೆಯಿದೆ. ಸಹೋದ್ಯೋಗಿಗಳಿಂದ ಜಾಗೃತರಾಗಿರಿ. ಇವರೇ ನಿಮ್ಮ ಬಗ್ಗೆ ಪಿತೂರಿ ನಡೆಸುವ ಸಾಧ್ಯತೆಯಿದೆ. ಮನೆಯಿಂದ ಹೊರಡುವಾಗ ಹಸುವಿನ ದರ್ಶನಮಾಡಿ ಇಲ್ಲವಾದರೆ ಮನಸ್ಸಿನಲ್ಲಿ ನೆನೆಸಿಕೊಂಡು ನಮಸ್ಕರಿಸಿ. ಸಮಾಧಾನದ ಬದುಕಿಗಾಗಿ ವಿಷ್ಣುವಿನ ಸ್ಮರಣೆಯನ್ನು ಮಾಡಿ.

  ಕರ್ಕ

  ಕರ್ಕ

  ಕೆಲವು ವರ್ಷಗಳಿಂದ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದ ನಿಮಗೆ ಇದೀಗ ನೆಮ್ಮದಿಯು ಒದಗಿ ಬರುವುದು. ನಿಮಗಿದ್ದ ಆರೋಗ್ಯ ಸಮಸ್ಯೆಗಳು ದೂರವಾಗುವುದು. ನೀವು ಕಂಡುಕೊಂಡ ಸುಂದರ ಜೀವನದ ಕನಸು ನನಸಾಗುವ ಸಮಯ. ಅವಿವಾಹಿತರಿಗೆ ವಿವಾಹಯೋಗವು ಕೂಡಿ ಬರುವುದು. ಯಶಸ್ವಿ ಬದುಕಿಗಾಗಿ ಶಿವನ ಆರಾಧನೆ ಹಾಗೂ ಶಕ್ತಿಯ ಸ್ಮರಣೆಮಾಡಿ.

  ಸಿಂಹ

  ಸಿಂಹ

  ನಿಮಗೆ ಪಂಚಮಶನಿ ನಡೆಯುತ್ತಿರುವುದರಿಂದ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವುದು. ಅನಿವಾರ್ಯ ಕಾರಣಗಳಿಗೆ ದೂರದ ಪ್ರಯಾಣ ಕೈಗೊಳ್ಳಬೇಕಾಗುವುದು. ನೀವು ಕಂಡ ಸುಂದರ ಕನಸುಗಳು ನನಸಾಗದ ಸಮಯ ಎಂದೇ ಹೇಳಬಹುದು. ಸ್ಥಿರಾಸ್ತಿಗಳಿಂದ ಲಾಭ ಉಂಟಾಗದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪಜಯ ಉಂಟಾಗುವುದು. ಕಾರ್ಮಿಕ ವಲಯದಲ್ಲಿ ಏರುಪೇರು ಉಂಟಾಗುವುದು. ಸಮಸ್ಯೆಗಳ ಪರಿಹಾರಕ್ಕೆ ವಿಷ್ಣುವಿನ ಆರಾಧನೆ ಹಾಗೂ ಶಿವನ ಉಪಾಸನೆ ಮಾಡುವುದು ಒಳಿತು.

  ಕನ್ಯಾ

  ಕನ್ಯಾ

  ಇಂದು ನಿಮಗೆ ಸ್ವಲ್ಪ ಒಳಿತು, ಸ್ವಲ್ಪ ಕಷ್ಟದ ದಿನ ಎಂದು ಹೇಳಬಹುದು. ನೀವು ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆ ಭಕ್ತಿಯನ್ನು ತೋರಿ. ಬೇರೆಯವರ ಮಾತಿಗೆ ತಲೆ ಕೆಡಿಸಿಕೊಳ್ಳದಿರಿ. ವಿದ್ಯಾರ್ಥಿಗಳಿಗೆ ಇಂದು ಉತ್ತಮವಾದ ದಿನ. ಹೆಣ್ಣುಮಕ್ಕಳ ಮನಸ್ಸನ್ನು ನೋಯಿಸದಿರಿ. ಸ್ಥಿರಾಸ್ತಿಗಳಿಗೆ ಕಚ್ಚಾಟ ಹಾಗೂ ನ್ಯಾಯಿಕ ವ್ಯವಸ್ಥೆಯಲ್ಲಿ ಅಪಜಯ ಉಂಟಾಗುವುದು. ಉತ್ತಮ ಜೀವನಕ್ಕಾಗಿ ಕುಲದೇವರ ಆರಾಧನೆ ಹಾಗೂ ಇಷ್ಟದೇವರ ಪ್ರಾರ್ಥನೆಯನ್ನು ಕೈಗೊಳ್ಳಿ.

  ತುಲಾ

  ತುಲಾ

  ನೀವು ನಿರೀಕ್ಷಿಸುತ್ತಿರುವ ವಿಪರೀತ ಲಾಭಾಂಶವು ಇಂದು ನಿಮಗೆ ಲಭಿಸಲಿದೆ. ಉದ್ಯೋಗದಲ್ಲೂ ಪ್ರಗತಿ ಉಂಟಾಗುವುದು. ಸೌಂದರ್ಯ ವರ್ಧಕ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭ ಉಂಟಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವವರಿಗೂ ಉತ್ತಮ ಲಾಭ ಉಂಟಾಗುವುದು. ಹಲವಾರು ಸುಂದರ ಬದುಕಿನ ಕಾಯಕಲ್ಪ ನಿಮಗೆ ಲಭ್ಯವಾಗುವುದು. ಇನ್ನಷ್ಟು ಯಶಸ್ವಿ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಶಿವನ ಪ್ರಾರ್ಥನೆ ಮಾಡಿ.

  ವೃಶ್ಚಿಕ

  ವೃಶ್ಚಿಕ

  ಮನೆಯಲ್ಲಿ ನೆಮ್ಮದಿಯ ವಾತಾವರಣ. ಮನಸ್ಸಿಗೂ ನೆಮ್ಮದಿ. ಬಂಧುಗಳು ಅಗಲಿರುವ ದುರ್ವಾರ್ತೆಗಳನ್ನು ಕೇಳಬೇಕಾದ ಪರಿಸ್ಥಿತಿ ಒದಗಿ ಬರಬಹುದು. ಕೆಲವರಿಗೆ ಸ್ಥಿರಾಸ್ತಿಗಾಗಿ ಜಗಳ ಮಾಡಬೇಕಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ಆಂಜನೇಯನ ಉಪಾಸನೆ ಮಾಡಿ.

  ಧನು

  ಧನು

  ಈ ರಾಶಿಯವರಿಗೆ ಆರೋಗ್ಯ ಸಮಸ್ಯೆ ವಿಪರೀತವಾಗಿ ಕಾಡುವುದು. ಸ್ತ್ರೀಯರಿಗೆ ಬೆನ್ನು ಹಾಗೂ ಕಾಲಿನ ನೋವು ಹೆಚ್ಚಾಗಿ ಕಾಡುವುದು. ತಂದೆ ಮಕ್ಕಳ ನಡುವೆ ವೈಶಮ್ಯದ ಭಾವನೆ ಹಾಗೂ ಇಲ್ಲ ಸಲ್ಲದ ಆರೋಪಗಳು ನಿಮ್ಮ ಬೆನ್ನೇರುವ ಸಾಧ್ಯತೆ ಇದೆ. ಅಂದುಕೊಂಡ ಕೆಲಸವನ್ನು ಮಾಡಲು ಕಷ್ಟವಾಗುವುದು. ಹಣಕಾಸಿನ ವ್ಯವಸ್ಥೆ ದುರ್ಭಲವಾಗುವುದು. ಆದಷ್ಟು ಜಾಗೃತರಾಗಿರಿ. ಶಿವನ ಆರಧಾನೆ ಮಾಡುವುದರಿಂದ ವಿದ್ಯಾರ್ಥಿಗಳಿಗೂ ಉತ್ತಮ ಫಲಿತಾಂಶ ದೊರೆಯುವುದು.

  ಮಕರ

  ಮಕರ

  ಇಂದು ನಿಮಗೆ ಅನೇಕ ಸಮಸ್ಯೆಗಳು ಕಾಡುವುದು. ಇಲ್ಲ ಸಲ್ಲದ ಆರೋಪಗಳು ನಿಮಗೆ ಬರುವುದು. ಮಕ್ಕಳಿಗಾಗಿ ಹಣದ ಸಾಲ ಪಡೆಯಬೇಕಾಗುವುದು. ವಿದ್ಯಾಭ್ಯಾಸದ ಏರುಪೇರಿನಿಂದ ಹೈರಾಣವಾಗುವ ಪರಿಸ್ಥಿತಿ ಎದುರಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಮಾತಿನ ಚಕಮಕಿ ಉಂಟಾಗುವುದು. ನಿಮ್ಮ ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

  ಕುಂಬ

  ಕುಂಬ

  ಸ್ತ್ರೀಯರು ಮಾಡುತ್ತಿರುವ ಕೆಲಸದಲ್ಲಿ ಮೇಲುಗೈ ಸಾಧಿಸುವ ಲಕ್ಷಣವಿದೆ. ಮಾನಸಿಕವಾಗಿ ನೆಮ್ಮದಿ ದೊರೆಯುವುದು. ದಿನದಿಂದ ದಿನಕ್ಕೆ ನಿಮ್ಮ ಆರೋಗ್ಯವು ವೃದ್ಧಿಯಾಗುವುದು. ಮಕ್ಕಳಿಂದ ಶುಭವಾರ್ತೆ ಲಭಿಸುವುದು. ವಿದೇಶ ಪ್ರಯಾಣಕ್ಕೆ ಕೆಲವು ತಯಾರಿ ಮಾಡಿಕೊಳ್ಳುವಿರಿ. ಯಶಸ್ವಿ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

  ಮೀನ

  ಮೀನ

  ಮನೆಯಲ್ಲಿ ನೆಮ್ಮದಿಯ ವಾತಾವರಣ ಹಾಗೂ ಸುಂದರ ಜೀವನ ನಿಮ್ಮದಾಗಲಿದೆ. ತಂದೆ ತಾಯಿಗಳ ನಡುವೆ ಇರುವ ಭಿನ್ನಾಭಿಪ್ರಾಯಗಳು ಉಪಶಮನವಾಗುವುದು. ಕಬ್ಬಿಣ ಉದ್ಯಮದಲ್ಲಿ ಲಾಭಾಂಶ ದೊರೆಯುವುದು. ರಾಜಕೀಯ ಕ್ಷೇತ್ರದಲ್ಲೂ ಯಶಸ್ಸು ದೊರೆಯುವುದು. ವೈಜ್ಞಾನಿಕ ಕ್ಷೇತ್ರದಲ್ಲೂ ಮನ್ನಣೆ ದೊರೆಯುವುದು. ಇನ್ನಷ್ಟು ಸಮಾಧಾನಯುತ ಬದುಕಿಗೆ ವಿಷ್ಣುವಿನ ಆರಾಧನೆ ಹಾಗೂ ಶಿವನ ಸ್ಮರಣೆ ಮಾಡುವುದು ಉಳಿತು.

  English summary

  rashi-bhavishya-november-8th

  ಪ್ರತಿಯೊಬ್ಬರೂ ತಮ್ಮ ಭವಿಷ್ಯ ಉಜ್ವಲವಾಗಿರಬೇಕು. ಸದಾ ಖುಷಿಯಿಂದ ಕೂಡಿರಲಿ. ಯಾವುದೇ ಕಷ್ಟ ನಷ್ಟಗಳು ಉಂಟಾಗದಿರಲಿ ಎಂದು ಬಯಸುತ್ತಾರೆ. ಆದರೆ ಜಾತಕದಲ್ಲಿರುವ ಗ್ರಹಗತಿಗಳು ನಮ್ಮ ಭವಿಷ್ಯದಲ್ಲಿ ಸುಖ ಸಂತೋಷ ಎನ್ನುವ ಏರಿಳಿತವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತದೆ. ಕೆಲವು ದೆಸೆ ಹಾಗೂ ಗ್ರಹಚಾರದ ಪ್ರಭಾವದಿಂದ ಕಡಿಮೆ ಪ್ರಮಾಣದ ಕಷ್ಟಗಳು ಹಾಗೂ ದೀರ್ಘ ಸಮಯದ ಸಂತೋಷಗಳು ಲಭಿಸುವವು.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more