ಮಂಗಳವಾರದ ದಿನ ಭವಿಷ್ಯ

Posted By: Divya Pandith
Subscribe to Boldsky

ಬದುಕೇ ಹಾಗೇ ದಿನವೂ ಒಂದೊಂದು ಹೊಸ ತಿರುವನ್ನು ಪಡೆದುಕೊಳ್ಳುತ್ತಲಿರುತ್ತದೆ. ಹೊಸ ಹೊಸ ಅನುಭವಗಳು ಜೀವನದ ಸಾರ್ಥಕತೆಯನ್ನು ತೋರಿಸುತ್ತವೆ. ಕಷ್ಟಗಳು ಭದುಕಿನ ನಿಜಾರ್ಥವನ್ನು ತಿಳಿಸುತ್ತದೆಯಾದರೆ ಸಂತೋಷಗಳು ಜೀವನದ ಭರವಸೆಯನ್ನು ಹೆಚ್ಚಿಸುತ್ತವೆ. ಕಷ್ಟ-ಸುಖ ಎನ್ನುವ ಎರಡು ವಿಚಾರಗಳು ಸಹ ಬದುಕಲ್ಲಿ ಛಲದ ಭಾವವನ್ನು ಹೆಚ್ಚಿಸುತ್ತವೆ. ಪ್ರತಿ ನಿಮಿಷಗಳಲ್ಲಿ ಉಂಟಾಗುವ ಬದಲಾವಣೆಗಳು ಬದುಕಿನ ತಿರುವನ್ನೇ ಬದಲಿಸಿ ನಮ್ಮ ಭವಿಷ್ಯವನ್ನು ನಿರ್ಧರಿಸುವುದು.

ಮಂಗಳವಾರ ಎಂದರೆ ದೇವಿಯ ಆರಾಧನೆಗೆ ಶ್ರೇಷ್ಠವಾದ ದಿನ. ಇಂತಹ ಒಂದು ಶುಭದಿನ ಎಲ್ಲರ ಜೀವನದಲ್ಲೂ ಮಂಗಳಕರವಾದ ಘಟನೆ ನಡೆಯಲಿ, ಬದುಕಲ್ಲಿ ಹೆಚ್ಚು ಸಂತೋಷದ ಕ್ಷಣಗಳೇ ತುಂಬಿರಲಿ ಎನ್ನುವುದನ್ನು ಬೋಲ್ಡ್ ಸ್ಕೈನ ಆಶಯ. ನಿಮಗೆ ನಿಮ್ಮ ಭವಿಷ್ಯ ಈ ದಿನ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೆನ್ನುವ ಕುತೂಹಲ ಅಥವಾ ಆಸಕ್ತಿಯಿದ್ದರೆ ಲೇಖನದಲ್ಲಿ ವಿವರಿಸಲಾದ ರಾಶಿ ಚಕ್ರದ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಮಂಗಳವಾರವಾದ ಈ ದಿನ ದೇವಿಯು ನಿಮಗೆ ಶುಭವನ್ನು ಕೋರಿದ್ದಾಳೆ ಎಂದೇ ಹೇಳಬಹುದು. ಮನೆಯಲ್ಲಿ ಖುಷಿಯ ವಾತಾವರಣ. ಮನಸ್ಸಿಗೆ ನೆಮ್ಮದಿ ಸಿಗುವುದು. ಉತ್ತಮ ಆರೋಗ್ಯ ಸ್ಥಿತಿ ಹಾಗೂ ಹಿರಿಯರಿಂದ ಧನಾಗಮನ ಆಗುವುದನ್ನು ಸಹ ನಿರೀಕ್ಷಿಸಬಹುದು. ಉದ್ಯೋಗ ಕ್ಷೇತ್ರದಲ್ಲೂ ನಿಮಗೆ ಶುಭ ಫಲ ದೊರೆಯುವುದು. ಬಂಧುಗಳ ಸಹಕಾರವು ಸಿಗುವುದು. ಇನ್ನಷ್ಟು ಯಶಸ್ವಿ ಜೀವನಕ್ಕಾಗಿ ದೇವಿಯ ಆರಾಧನೆ ಮಾಡಿ.

ವೃಷಭ

ವೃಷಭ

ಅಷ್ಟಮ ಶನಿ ಇರುವುದರಿಂದ ವೃಷಭ ರಾಶಿಯವರಿಗೆ ಅಂದುಕೊಂಡ ವಿಚಾರಗಳು ಅಷ್ಟು ಸುಲಭವಾಗಿ ನೆರವೇರದು. ಮಾನಸಿಕವಾಗಿ ಕಿರಿಕಿರಿ ಉಂಟಾಗುವುದು. ವ್ಯಾಪಾರ ವ್ಯವಹಾರದಲ್ಲೂ ಅಡೆತಡೆಗಳು ಉಂಟಾಗುವುದು. ಸಂಸಾರದಲ್ಲೂ ಕಿರಿಕಿರಿ ಹಾಗೂ ಅಸಮಧಾನ ಉಂಟಾಗುವುದು. ವಿದ್ಯಾರ್ಥಿಗಳಿಗೂ ಓದಿನಲ್ಲಿ ಹಿನ್ನೆಡೆ ಉಂಟಾಗುವುದು. ನಿಮ್ಮ ಸಮಸ್ಯೆಗಳ ನಿವಾರಣೆಗಾಗಿ ದೇವಿಯನ್ನು ಆರಾಧಿಸಿ.

ಮಿಥುನ

ಮಿಥುನ

ಕೆಲವರಿಗೆ ಇಂದು ಮಾನಸಿಕವಾಗಿ ನೆಮ್ಮದಿ ಉಂಟಾದರೆ ಇನ್ನೂ ಕೆಲವರಿಗೆ ಮಾನಸಿಕ ಅಸಮಧಾನ ಉಂಟಾಗುವುದು. ಸ್ಥಿರಾಸ್ತಿಯಿಂದ ವಿಪರೀತ ಹಣ ಗಳಿಕೆಯು ಅಸಾಧ್ಯವಾಗುವುದು. ತಂದೆ ಮಕ್ಕಳ ನಡುವೆ ಹಾಗೂ ಬಂಧು ಮಿತ್ರರ ನಡುವೆಯೂ ವೈಮನಸ್ಸು ಹಾಗೂ ಬೇಸರ ಉಂಟಾಗುವುದು. ವಿದ್ಯಾರ್ಥಿಗಳು ಏಕಾಗೃತೆಯಿಂದ ವಿದ್ಯಾಭ್ಯಾಸ ಮುಂದುವರಿಸುವುದು ಸೂಕ್ತ. ಇನ್ನಷ್ಟು ಯಶಸ್ವಿ ಬದುಕಿಗಾಗಿ ದೇವಿಯ ಆರಾಧನೆ ಮಾಡುವುದು ಸೂಕ್ತ.

ಕರ್ಕ

ಕರ್ಕ

ಇಂದು ಈ ರಾಶಿಯವರಿಗೆ ಶುಭದಿನ ಎಂದು ಹೇಳಬಹುದು. ಆರೋಗ್ಯದಲ್ಲಿ ಚೇತರಿಕೆ ಉಂಟಾಗುವುದು. ಇಷ್ಟು ದಿನ ಅನುಭವಿಸಿದ ಅವಮಾನ ಹಾಗೂ ಮಾನಸಿಕ ಕಿರಿಕಿರಿಯು ಇಂದು ದೂರವಾಗುವುದು. ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾದ ಏರು ಪೇರುಗಳನ್ನು ಸಹ ಸೂಕ್ತ ರೀತಿಯಲ್ಲಿ ಬಗೆಹರಿಸುವಿರಿ. ನೀವು ವಿದೇಶ ಪ್ರಯಾಣ ಮಾಡಬೇಕೆನ್ನುವ ಆಸೆ ಹೊಂದಿದ್ದರೆ ಅದು ಈಡೇರುವ ದಿನ ಎಂದು ಹೇಳಬಹುದು. ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮ ಧನಲಾಭ ಉಂಟಾಗುವುದು. ಉದ್ಯೋಗ್ಯ ಕ್ಷೇತ್ರದಲ್ಲಿ ಅನುಕೂಲಕರ ಪರಿಸ್ಥಿತಿಯು ಒದಗಿ ಬರುತ್ತದೆ. ಇನ್ನಷ್ಟು ಉತ್ತಮ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಸಿಂಹ

ಸಿಂಹ

ಇಂದು ನಿಮಗೆ ವಿಪರೀತವಾದ ದೇಹದ ಆಯಾಸ, ಮಾನಸಿಕ ಕಿರಿಕಿರಿ ಹಾಗೂ ಕೈಗೊಂಡ ಕೆಲಸಗಳು ನೆರವೇರದಿರುವುದನ್ನು ಅನುಭವಿಸಬೇಕಾಗುತ್ತದೆ. ಕಬ್ಬಿಣ ಅಥವಾ ಅದಿರು ವ್ಯಾಪಾರದಲ್ಲಿ ನೀವು ಬಯಸಿದಷ್ಟು ಲಾಭ ಹಾಗೂ ವ್ಯಾಪಾರದ ಅಭಿವೃದ್ಧಿಯು ಉಂಟಾಗದು. ಕೊಂಚ ಇಳಿಮುಖದಲ್ಲೇ ಇರುವ ಪರಿಸ್ಥಿತಿಯಾಗಿರುತ್ತದೆ. ಇನ್ನಷ್ಟು ಯಶಸ್ವಿ ಬದುಕಿಗಾಗಿ ಕುಲದೇವರು ಹಾಗೂ ದೇವಿಯ ಅರಾಧನೆ ಮಾಡಿ.

ಕನ್ಯಾ

ಕನ್ಯಾ

ಇಂದು ನಿಮಗೆ ಮಧ್ಯಮ ಸಂತೋಷ ದೊರೆಯುವುದು. ಕೆಲವು ವಿಚಾರಕ್ಕೆ ಅಸಮಧಾನ ಉಂಟಾದರೆ ಇನ್ನೂ ಅನೇಕ ವಿಚಾರದ ಕುರಿತು ಸಂತೋಷ ಉಂಟಾಗುವುದು. ಸ್ತ್ರೀಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಉಂಟಾಗುವುದು. ಹಣದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗದಿರಿ. ದೇಹದಲ್ಲಿ ಉಂಟಾಗುವ ಅನಾರೋಗ್ಯ ನಿಮಗೆ ಭಯವನ್ನುಂಟುಮಾಡುವುದು. ವಿದೇಶದಿಂದ ಬಂದವರಿಂದ ಸಹಾಯ ಸಿಗುವ ಸಾಧ್ಯತೆ ಇದೆ. ಸಮೃದ್ಧ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ತುಲಾ

ತುಲಾ

ಇಂದು ನಿಮಗೆ ಶುಭದಿನ. ಲಾಭಾಂಶದ ಸುರಿಮಳೆ ನಿಮಗೆ ಸಂತೋಷವನ್ನುಂಟುಮಾಡುವುದು. ಬಂಧುಮಿತ್ರರ ಸಹಕಾರ ಸಿಗುವುದು. ಸ್ಥಿರಾಸ್ತಿಯನ್ನು ಖರೀದಿಸುವ ಯೋಗ ನಿಮ್ಮದಾಗಿರುತ್ತದೆ. ಆಂತರಿಕ ವಿಚಾರವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವಿರಿ. ಮನೆಯಲ್ಲಿ ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ವಿದೇಶ ಪ್ರಯಾಣದ ಕನಸು ನನಸಾಗುವುದು. ಧಾರ್ಮಿಕ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಗೌರವ ಸಿಗುವುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೂ ಯಶಸ್ಸು ದೊರೆಯುವದು. ಉತ್ತಮ ಬದುಕಿಗಾಗಿ ದೇವಿಯ ಉಪಾಸನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಸಂಪೂರ್ಣ ಪ್ರಮಾಣದ ಮಾನಸಿಕ ನೆಮ್ಮದಿ ನಿಮಗೆ ಸಿಗದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ತಾಂತ್ರಿಕ ವರ್ಗದಲ್ಲಿ ಕೆಲವು ಏರು ಪೇರುಗಳನ್ನು ಎದುರಿಸಬೇಕಾಗುವ ಸನ್ನಿವೇಶ ಒದಗಿ ಬರುವುದು. ಮನೋವಿಜ್ಞಾನ ಕ್ಷೇತ್ರದಲ್ಲಿರುವವರಿಗೆ ಉತ್ತಮ ಲಾಭ, ಕಲಾವಿದರಿಗೆ ಮಧ್ಯಮ ಲಾಭ ಉಂಟಾದರೆ ರೈತಾಪಿ ವರ್ಗದವರಿಗೆ ನೆಮ್ಮದಿ ದೊರೆಯುವುದು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದರ ಬಗ್ಗೆ ಹೆಚ್ಚು ಜಾಗೃತರಾಗಿರಿ. ಅಷ್ಟಾಗಿ ಲಾಭ ದೊರೆಯದು. ಯಶಸ್ವಿ ಬದುಕಿಗಾಗಿ ಶಿವ ಮತ್ತು ಶಕ್ತಿಯ ಉಪಾಸನೆ ಮಾಡಿ.

ಧನು

ಧನು

ಇಂದು ನೀವು ಅನಿವಾರ್ಯ ಕಾರಣದಿಂದ ದೂರದ ಪ್ರದೇಶಕ್ಕೆ ಪ್ರಯಾಣ ಮಾಡಬೇಕಾಗುವ ಸಾಧ್ಯತೆ ಇದೆ. ಇದರಿಂದ ವಿಪರೀತ ಆಯಾಸ ನಿಮ್ಮನ್ನು ಕಾಡುವುದು. ನಿರ್ದಿಷ್ಟ ಗುರಿಯನ್ನು ತಲುಪಲು ನಿಮಗೆ ಕಷ್ಟವಾಗುವುದು. ಬಂಧು ಮಿತ್ರರ ನಡುವೆ ವೈಮನಸ್ಸು ಉಂಟಾಗುವುದು. ಹಲವಾರು ದಿನಗಳಿಂದ ಕಟ್ಟಿಕೊಂಡ ಕನಸುಗಳು ನುಚ್ಚು ನೂರಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೂ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದು. ಇನ್ನಷ್ಟು ಉತ್ತಮ ಬದುಕಿಗಾಗಿ ಶಿವ ಮತ್ತು ಶಕ್ತಿಯ ಆರಾಧನೆ ಮಾಡಿ.

ಮಕರ

ಮಕರ

ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆ ಅಥವಾ ಅಸ್ತಕ್ಷೇಪ ಮಾಡದಿರಿ. ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವಿರಿ. ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯದು. ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುವವರಿಗೆ ಅವಮಾನ ಉಂಟಾಗುವುದು. ಸಹೋದರರ ಮಧ್ಯೆ ಕಿತ್ತಾಟ ಉಂಟಾಗುವುದು. ವ್ಯಾಪಾರ ವ್ಯವಹಾರದಲ್ಲೂ ಲಾಭ ಉಂಟಾಗದು. ಬಯಸಿದಷ್ಟು ಸಮೃದ್ಧಿಯೂ ದೊರೆಯದು. ಬದುಕಿನ ಇನ್ನಷ್ಟು ಉತ್ತಮ ಸ್ಥಿತಿಗಾಗಿ ಕುಲದೇವರು ಹಾಗೂ ದೇವಿಯ ಆರಾಧನೆ ಮಾಡಿ.

ಕುಂಬ

ಕುಂಬ

ಇಂದು ನಿಮಗೆ ಶುಭದಿನ. ಮಾನಸಿಕವಾಗಿ ನೆಮ್ಮದಿ ದೊರೆಯುವುದು. ಕೈಗೊಂಡ ಕೆಲಸದಲ್ಲಿ ಯಶಸ್ಸು ಪಡೆಯುವಿರಿ. ಬಂಧುಮಿತ್ರರ ಸಮಾಗಮನ ಉಂಟಾಗುವುದು. ಸ್ನೇಹಿತರು ಉತ್ತಮ ಸಹಕಾರ ನೀಡುವರು. ಕಲಾವಿದರಿಗೆ ಉತ್ತಮ ಲಾಭ ಹಾಗೂ ಕಾರ್ಮಿಕ ವರ್ಗದವರಿಗೆ ಸಮಾಧಾನ ದೊರೆಯುವುದು. ಹೆಣ್ಣು ಮಕ್ಕಳಿಂದ ನಿಮಗೆ ಸಹಕಾರ ದೊರೆಯುವುದು. ಯಶಸ್ವಿ ಬದುಕಿಗೆ ದೇವಿ ಆರಾಧನೆಯನ್ನು ಮಾಡಿ.

ಮೀನ

ಮೀನ

ಇಂದು ನಿಮಗೆ ಮನೆಯಲ್ಲಿ ನೆಮ್ಮದಿಯ ವಾತಾವರಣ ಉಂಟಾಗುವುದ. ಇಷ್ಟ ಮಿತ್ರರೊಂದಿಗೆ ಒಡಗೂಡಿ ದೂರದ ಪ್ರಯಾಣ ಕೈಗೊಳ್ಳಬೇಕಾಗುವುದು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ವಿದೇಶ ಪ್ರಯಾಣ ಮಾಡುವ ಯೋಗವು ಕೂಡಿ ಬರುವುದು. ವ್ಯಾಪಾರ ವ್ಯವಹಾರದಲ್ಲೂ ಉತ್ತಮ ಲಾಭ ಲಭಿಸುವುದು. ಉತ್ತಮ ಜೀವನಕ್ಕಾಗಿ ಶಿವ ಮತ್ತು ಶಕ್ತಿಯ ಆರಾಧನೆಯನ್ನು ಮಾಡಿ.

English summary

rashi-bhavishya-november-7th

ಮಂಗಳವಾರ ಎಂದರೆ ದೇವಿಯ ಆರಾಧನೆಗೆ ಶ್ರೇಷ್ಠವಾದ ದಿನ. ಇಂತಹ ಒಂದು ಶುಭದಿನ ಎಲ್ಲರ ಜೀವನದಲ್ಲೂ ಮಂಗಳಕರವಾದ ಘಟನೆ ನಡೆಯಲಿ, ಬದುಕಲ್ಲಿ ಹೆಚ್ಚು ಸಂತೋಷದ ಕ್ಷಣಗಳೇ ತುಂಬಿರಲಿ ಎನ್ನುವುದನ್ನು ಬೋಲ್ಡ್ ಸ್ಕೈನ ಆಶಯ. ನಿಮಗೆ ನಿಮ್ಮ ಭವಿಷ್ಯ ಈ ದಿನ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೆನ್ನುವ ಕುತೂಹಲ ಅಥವಾ ಆಸಕ್ತಿಯಿದ್ದರೆ ಲೇಖನದಲ್ಲಿ ವಿವರಿಸಲಾದ ರಾಶಿ ಚಕ್ರದ ವಿವರಣೆಯನ್ನು ಪರಿಶೀಲಿಸಿ.