For Quick Alerts
ALLOW NOTIFICATIONS  
For Daily Alerts

  ಸೋಮವಾರದ ದಿನ ಭವಿಷ್ಯ

  By Lekhaka
  |

  ಭಾನುವಾರ ಕಳೆದು ಸೋಮವಾರಕ್ಕೆ ಕಾಲಿಡುತ್ತಿದ್ದಂತೆ ಸಾಮಾನ್ಯವಾಗಿ ಎಲ್ಲರಿಗೂ ಒಂದು ಬಗೆಯ ಒತ್ತಡ. ಬಹು ಜನರಿಗೆ ಇಂದು ಯಾವೆಲ್ಲಾ ಕೆಲಸ ಮಾಡಬೇಕಾಗುತ್ತದೆ ಎನ್ನುವ ಚಿಂತೆ, ಕೆಲವರಿಗೆ ಇಷ್ಟುದಿನದಿಂದ ಮಾಡುತ್ತಿದ್ದ ಕೆಲಸವನ್ನು ಇಂದಾದರೂ ಪೂರ್ಣಗೊಳಿಸಲು ಸಾಧ್ಯವಾಗುವುದೇ? ಎನ್ನುವ ಚಿಂತೆ.

  ವಿಶ್ರಾಂತಿಯ ದಿನ ಕಳೆದು ಕೆಲಸ ಪ್ರಾರಂಭವಾಗುತ್ತದೆ ಎನ್ನುವಾಗ ಅದೇನೋ ಒಂದು ಬಗೆಯ ಕಳವಳ ಹಾಗೂ ಚಿಂತೆ ಕಾಡುವುದು ಸತ್ಯ. ಇದರ ನಡುವೆ ನಮ್ಮ ಗೃಹಗತಿಗಳು ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎನ್ನುದು ಸಹ ಮುಖ್ಯ. ಶಿವನ ವಾರವಾದ ಇಂದು ಸೋಮವಾರ ಕೆಲಸ ಆರಂಭಿಸುವ ಮುನ್ನ ನಿಮ್ಮ ಭವಿಷ್ಯದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕು, ನಂತರ ಕೆಲಸ ಹಾಗೂ ಪ್ರಯಾಣವನ್ನು ಮುಂದುವರಿಸಬೇಕು ಎಂದಾದರೆ ನಾವಿಲ್ಲಿ ನೀಡಿರುವ ದಿನ ಭವಿಷ್ಯವನ್ನು ಅರಿಯಿರಿ. ಜಾಗೃತೆಯಿಂದ ಮುಂದುವರಿಯಿರಿ...

  ಮೇಷ

  ಮೇಷ

  ಯಾವುದೇ ಕೆಲಸ ಕಾರ್ಯಗಳಿಗೆ ಮುಂದಾಗುವ ಮುನ್ನ ಧೈರ್ಯದಿಂದ ಮುನ್ನುಗ್ಗಿ. ಮನೆಯಲ್ಲಿಯೂ ನೆಮ್ಮದಿಯ ವಾತಾವರಣ ಇರುವುದು. ಮಕ್ಕಳಿಂದ ಶುಭವಾರ್ತೆ. ಸನ್ಮಾನ ಸತ್ಕಾರ್ಯಗಳು ಒದಗಿ ಬರುವುದು. ರಾಜಕೀಯ ವರ್ಗದವರಿಗೂ ಉತ್ತಮ ಫಲಿತಾಂಶ ದೊರೆಯುವುದು. ಮಿತ್ರರಿಂದಲೂ ಸಹಕಾರ. ಇನ್ನಷ್ಟು ನೆಮ್ಮದಿಯ ಬದುಕಿಗಾಗಿ ಕುಲದೇವರ ಆರಾಧನೆ ಮಾಡಿ.

  ವೃಷಭ

  ವೃಷಭ

  ನಿಮಗೆ ಸಮಾಧಾನದ ಜೀವನ ನಡೆಸಬೇಕೆಂದರೆ ಭಗವಂತನ ಕೃಪೆ ಅಗತ್ಯ. ಗಣೇಶನ ಆರಾಧನೆ ಮಾಡುವುದು ಸೂಕ್ತ. ಯಾವುದೇ ಕಾರಣಕ್ಕಾಗಿಯೂ ಬೇರೆಯವರಿಗೆ ಸಾಲ ನೀಡುವುದು ಅಥವಾ ಸಾಲ ಪಡೆಯುವ ಗೋಜಿಗೆ ಹೋಗದಿರಿ. ಬ್ಯಾಂಕ್ ವೃತ್ತಿಯಲ್ಲಿ ಕೆಲಸ ಮಾಡುವವರಿಗೆ ಮೋಸ ಅಥವಾ ವಂಚನೆ ಉಂಟಾಗುವ ಸಾಧ್ಯತೆ ಇದೆ. ಮಕ್ಕಳಿಂದ ಅಶುಭ ಸುದ್ದಿ ಕೇಳಬೇಕಾಗುವುದು. ಇಷ್ಟಗಳ ಸಿದ್ಧಿಗೆ ಕುಲದೇವರ ಆರಾಧನೆ ಹಾಗೂ ಇಷ್ಟ ದೇವರ ಸ್ಮರಣೆಯನ್ನು ಕೈಗೊಳ್ಳಿ.

  ಮಿಥುನ

  ಮಿಥುನ

  ಇಂದು ನಿಮಗೆ ಸಾಮಾನ್ಯವಾದ ದಿನ ಎಂದು ಹೇಳಬಹುದು. ಅಂದುಕೊಂಡ ಕಾರ್ಯ ಪೂರ್ಣಗೊಂಡರೂ, ಕೆಲವು ವಿಚಾರದ ಕುರಿತು ಅಸಮಧಾನ ಮುಂದುವರಿಯುತ್ತದೆ. ನಿರೀಕ್ಷಿತ ಮಟ್ಟದ ಜಯ ಹಾಗೂ ಲಾಭ ಲಭಿಸದು. ಪ್ರೇಮ ವೈಫಲ್ಯತೆಯಿಂದ ಮಾನಸಿಕವಾಗಿ ಬೇಸರ ಹಾಗೂ ಒಂಟಿತನ ಕಾಡುವುದು. ಉತ್ತಮ ಭವಿಷ್ಯಕ್ಕಾಗಿ ಶಿವನನ್ನು ಆರಾಧಿಸಿ.

  ಕರ್ಕ

  ಕರ್ಕ

  ಇಂದು ನಿಮಗೆ ವಿಶಿಷ್ಟವಾದ ಹಾಗೂ ಅದೃಷ್ಟದ ದಿನ ಎಂದು ಹೇಳಬಹುದು. ಕೆಲವು ಅನಿರೀಕ್ಷಿತ ಸಮಸ್ಯೆಗಳು ದೂರವಾಗುವುದು. ಮಾನಸಿಕ ನೆಮ್ಮದಿ ದೊರೆಯುವುದು. ಮಕ್ಕಳಿಂದ ಶುಭ ಸುದ್ದಿ ಹಾಗೂ ಅನೇಕ ವಿಚಾರದಲ್ಲಿ ಜಯ ಹಾಗೂ ಯಶಸ್ಸು ದೊರೆಯುವುದು. ಸುಂದರ ಬದುಕಿಗಾಗಿ ಗಣೇಶ ಮತ್ತು ಆಂಜನೇಯನ ಉಪಾಸನೆ ಮಾಡುವುದು ಒಳಿತು.

  ಸಿಂಹ

  ಸಿಂಹ

  ಇಂದು ನಿಮಗೆ ಕೊಂಚ ಬೇಸರವನ್ನುಂಟುಮಾಡುವ ದಿನ ಎಂದು ಹೇಳಬಹುದು. ಅಪಮಾನ, ಅನಿರೀಕ್ಷಿತ ಸೋಲು, ಸಲ್ಲದ ಆರೋಪಗಳು ನಿಮ್ಮಮೇಲೆ ಬರುವುದು. ವಿಪರೀತವಾದ ಅನಾರೋಗ್ಯದ ಸಮಸ್ಯೆ ನಿಮ್ಮನ್ನು ಕಾಡುವುದು. ಆಂತರಿಕ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ರಾಹುಕಾಲದಲ್ಲಿ ಪ್ರಯಾಣ ಮಾಡದಿರಿ. ಪ್ರಯಾಣದ ಸಮಯದಲ್ಲಿ ಆದಷ್ಟು ಜಾಗೃತರಾಗಿರಿ. ಉತ್ತಮ ಭವಿಷ್ಯಕ್ಯಾಗಿ ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿಯನ್ನು ಪಠಿಸಿದರೆ ಕಷ್ಟಗಳು ದೂರಾಗುವುದು.

  ಕನ್ಯಾ

  ಕನ್ಯಾ

  ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಯಾವುದೇ ಅನಿರೀಕ್ಷಿತ ಸಮಸ್ಯೆಗಳು ಎದುರಾಗದು. ಹಾಗೆಯೇ ನಿರೀಕ್ಷಿತ ಮಟ್ಟದ ಗೆಲುವನ್ನು ನೀವು ಸಾಧಿಸಲು ಸಾಧ್ಯವಿಲ್ಲ. ಸ್ತ್ರೀಯರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ. ಮಕ್ಕಳಿಂದ ಶುಭವಾರ್ತೆಗಳನ್ನು ನೀವು ಕೇಳುವ ಸಾಧ್ಯತೆ ಕಂಡುಬರುವುದು. ಲಾಭದಾಯಕವಾದ ದಿನವಾಗಬೇಕೆಂದರೆ ಶಿವನ ಆರಾಧನೆ ಮಾಡಿ.

  ತುಲಾ

  ತುಲಾ

  ಇಂದು ನಿಮಗೆ ಶುಭದಿನ ಎಂದು ಹೇಳಬಹುದು. ನಿಮ್ಮ ಬಯಕೆಯಂತೆಯೇ ಎಲ್ಲವೂ ನಡೆಯುವುದು. ಮನೆಯಲ್ಲೂ ನೆಮ್ಮದಿಯ ವಾತಾವರಣ ಇರುವುದು. ಲಾಭದಾಯಕವಾದ ಈ ದಿನ ನಿಮಗೆ ಒಳ್ಳೆಯದಾಗಲು ಶಿವನ ಆರಾಧನೆಮಾಡಿ.

  ವೃಶ್ಚಿಕ

  ವೃಶ್ಚಿಕ

  ಇಂದು ನಿಮಗೆ ಅತ್ಯುತ್ತಮ ರೀತಿಯಲ್ಲಿ ಶುಭವಾಗದಿದ್ದರೂ ಅವಮಾನ ಮತ್ತು ನಷ್ಟಗಳು ಉಂಟಾಗದು. ಮನೆಯಲ್ಲಿ ನೆಮ್ಮದಿಯ ವಾತಾವರಣ. ಬಂಧುಗಳ ಸಾಂತ್ವನದ ನುಡಿಯಿಂದ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಸಾಲವನ್ನು ಮರುಪಾವತಿ ಮಾಡುವ ಅವಕಾಶ ಸಿಗುತ್ತದೆ. ಮಾನಸಿಕವಾಗಿ ಎಲ್ಲಾ ಕಾರ್ಯಗಳು ಯಶಸ್ವಿಯಾಗಲು ಶಿವನ ಆರಾಧನೆ ಮಾಡಿ.

  ಧನು

  ಧನು

  ಇಂದು ನಿಮಗೆ ವಿಪರೀತವಾದ ಸಮಸ್ಯೆಗಳು ಎದುರಾಗುವುದು. ಅವುಗಳನ್ನು ಎದುರಿಸಲೇ ಬೇಕಾದ ಪರಿಸ್ಥಿತಿ ಒದಗಿ ಬರುವುದು. ಆರ್ಥಿಕವಾಗಿ ಸಂಕಷ್ಟಗಳು ಉಂಟಾಗುವುದು. ನಂಬಿದವರೇ ಮೋಸ ಮಾಡುವ ಸಾಧ್ಯತೆ ಇದೆ. ಬಂಧುಗಳು ಅಗಲಿದ ವಾರ್ತೆ ಕೇಳಬೇಕಾಗುವುದು. ನಷ್ಟ ಉಂಟಾಗುವುದು. ಎಡಗಾಲಿಗೆ ನೋವಾಗುವುದು ಕಂಡುಬರುತ್ತದೆ. ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸದಲ್ಲಿ ಅಡೆತಡೆ ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

  ಮಕರ

  ಮಕರ

  ನಿಮಗೆ ಇಂದು ಮಾನಸಿಕವಾಗಿ ಒತ್ತಡ ಉಂಟಾಗುತ್ತದೆ. ಮಾನಸಿಕವಾಗಿ ಕಿರಿಕಿರಿ ಉಂಟಾಗುವುದು. ಕೆಲವು ವಿಚಾರದಲ್ಲಿ ಅಪಜಯ. ಬಂಧುಗಳಿಂದ ಯಾವುದೇ ಸಹಕಾರ ದೊರೆಯದು. ಬದಲಿಗೆ ಪವಮಾನ ಉಂಟಾಗುವುದು. ಹಿತಶತ್ರುಗಳಿಂದ ತೊಂದರೆ. ಸಹೋದ್ಯೋಗಿಗಳಿಂದಲೂ ಕಿರಿಕಿರಿ. ಆಸ್ತಿಯಲ್ಲಿ ನಷ್ಟ ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

  ಕುಂಬ

  ಕುಂಬ

  ಸ್ತ್ರೀಯರಿಗೆ ಉದ್ಯೋಗದಲ್ಲಿ ಯಶಸ್ಸು ದೊರೆಯುವುದು. ಶಿಕ್ಷಕಿಯಾಗಿ ವೃತ್ತಿ ನಡೆಸುತ್ತಿರುವವರಿಗೆ ಗೌರವ ಸಮ್ಮಾನ ಸಲಭಿಸಲಿದೆ. ಬಂಧುಗಳಿಂದ ಸಹಕಾರ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಅನೇಕ ವಿಚಾರದಲ್ಲಿ ಯಶಸ್ಸು ದೊರೆಯುವುದು. ಸುಂದರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

  ಮೀನ

  ಮೀನ

  ಇಂದು ನೀವು ಸುಖಮಯ ಜೀವನವನ್ನು ನಡೆಸುವಿರಿ. ಬಂಧುಮಿತ್ರರ ಸಹಕಾರ ದೊರೆಯುವುದು. ನಿಮ್ಮ ನಿರೀಕ್ಷೆಗಿಂತಲೂ ಉನ್ನತ ಮಟ್ಟದ ಯಶಸ್ಸು ನಿಮ್ಮ ಪಾಲಿಗೆ ದೊರೆಯುತ್ತದೆ. ವಿಪರೀತ ಧನಾಗಮನದ ಯೋಗ, ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಉಡುಗೊರೆ ದೊರೆಯುವುದು. ಅವಿವಾಹಿತರು ವಿವಾಹದ ಶುಭ ಸುದ್ದಿಯನ್ನು ಕೇಳುವ ಅವಕಾಶವಿದೆ. ಉತ್ತಮ ಜೀವನಕ್ಕಾಗಿ ಶಿವನ ಆರಾಧನೆಮಾಡಿ.

  English summary

  rashi-bhavishya-november-6th

  ಇಂದು ಸೋಮವಾರ ಕೆಲಸ ಆರಂಭಿಸುವ ಮುನ್ನ ನಿಮ್ಮ ಭವಿಷ್ಯದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕು, ನಂತರ ಕೆಲಸ ಹಾಗೂ ಪ್ರಯಾಣವನ್ನು ಮುಂದುವರಿಸಬೇಕು ಎಂದಾದರೆ ನಾವಿಲ್ಲಿ ನೀಡಿರುವ ದಿನ ಭವಿಷ್ಯವನ್ನು ಅರಿಯಿರಿ. ಜಾಗೃತೆಯಿಂದ ಮುಂದುವರಿಯಿರಿ.
  Story first published: Monday, November 6, 2017, 7:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more