ಭಾನುವಾರದ ದಿನ ಭವಿಷ್ಯ

Posted By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 26-11-2017 - Your Day Today - Oneindia Kannada

ಜೀವನದಲ್ಲಿ ಶ್ರೀಮಂತರಾಗಲು ಏನು ಮಾಡಬೇಕು? ಯಾವೆಲ್ಲಾ ಕೆಲಸವನ್ನು ಕೈಗೊಂಡರೆ ನಮ್ಮ ಗುರಿ ಸಾಧಿಸಲು ಸಹಾಯವಾಗುವುದು? ಎನ್ನುವುದನ್ನು ಆಗಾಗ ಯೋಚಿಸುತ್ತಲೇ ಇರುತ್ತೇವೆ. ನಾವು ಶ್ರೀಮಂತರಾಗಲು ಕೇವಲ ಹಣ ಮತ್ತು ಆಸ್ತಿಯಿದ್ದರಷ್ಟೇ ಸಾಲದು ಅದಕ್ಕೂ ಮಿಗಿಲಾದ ಹಿರಿಯರ ಹಾರೈಕೆ, ನಮ್ಮ ಒಳಿತನ್ನು ಬಯಸುವ ಆತ್ಮೀಯ ಗೆಳೆಯ/ಗೆಳತಿ, ಪ್ರೀತಿಸುವ ಬಂಧು ಬಾಂಧವರು ನಮ್ಮೊಡನೆ ಇರಬೇಕು. ಆಗ ನಾವು ಹಣವಿರುವುವರಿಗಿಂತ ಹೆಚ್ಚಿನ ಶ್ರೀಮಂತರಾಗಿ ಬದುಕಲು ಸಾಧ್ಯವಾಗುವುದು.

ವಿರಾಮಕ್ಕಾಗಿಯೇ ವಿಶೇಷವಾಗಿ ಸಿಗುವ ಭಾನುವಾರವಾದ ಇಂದು ನಿಮ್ಮ ಬದುಕಲ್ಲಿ ಯಾವೆಲ್ಲಾ ಹೊಸ ಸಂಗತಿಗಳನ್ನು ಸಂಭವಿಸುವಂತೆ ಮಾಡುವುದು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಬೋಲ್ಡ್ ಸ್ಕೈ ತಿಳಿಸಿಕೊಡುವ ಇಂದಿನ ದಿನ ಭವಿಷ್ಯವನ್ನು ಅರಿಯಿರಿ.

ಮೇಷ

ಮೇಷ

ವಿವಾಹ ಅಪೇಕ್ಷಿತರಿಗೆ ವಿವಾಹಯೋಗ ಕೂಡಿ ಬರುವುದು. ಕೈಗೊಳ್ಳುವ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು. ಜಮೀನು ಮತ್ತು ಮನೆ ಖರೀದಿ ಮಾಡುವಂತಹ ಶುಭ ಸಮಯ ನಿಮ್ಮದು. ಹಲವಾರು ಉತ್ತಮ ಕೆಲಸಗಳನ್ನು ಕೈಗೊಳ್ಳುವ ಅವಕಾಶ ನಿಮ್ಮದಾಗಿರುತ್ತದೆ. ಅಷ್ಟಮ ಶನಿ ದೂರವಾಗಿರುವುದರಿಂದ ನಿಮಗೆ ಅತ್ಯಂತ ಶುಭ ಸಮಯವಿದು ಎಂದು ಹೇಳಬಹುದು. ವಿದ್ಯಾರ್ಥಿಗಳಿಗೂ ಇಂದು ಶುಭ ದಿನ. ಇನ್ನಷ್ಟು ಒಳಿತಿಗಾಗಿ ಗಣೇಶನ ಆರಾಧನೆ ಮತ್ತು ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ.

ವೃಷಭ

ವೃಷಭ

ಕೈಗೊಂಡ ಕಾರ್ಯ ಸುಗಮವಾಗಿ ನೆರವೇರುವುದು ಕಷ್ಟ. ಮಾನಸಿಕವಾಗಿ ಬೇಸರ ಉಂಟಾಗುವುದು. ಮೋಸ ಹೋಗುವುದು ಹಾಗೂ ಸ್ತ್ರೀಯರಿಂದ ಅವಮಾನಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಆದಷ್ಟು ಜಾಗ್ರತರಾಗಿರಿ. ಸಹೋದರರ ನಡುವೆ ಭಿನ್ನಾಭಿಪ್ರಾಯ ಉಂಟಾಗುವುದು. ಆಸ್ತಿಗಾಗಿ ಕಿತ್ತಾಟ ನಡೆಸುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೂ ಹಿನ್ನಡೆ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ರುಧ್ರ ಪಠಣೆ ಹಾಗೂ ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿಯ ಪಠಣೆ ಮಾಡಿ. ಶಿವನ ಆಶೀರ್ವಾದ ಲಭಿಸುವುದು.

ಮಿಥುನ

ಮಿಥುನ

ಮನೆಯಲ್ಲಿ ನೆಮ್ಮದಿಯ ಬದುಕು ಕಾಣುವಿರಿ. ಸ್ತ್ರೀಯರಿಂದ ಸಂಪೂರ್ಣವಾದ ಸಹಕಾರ ಲಭಿಸುವುದು. ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ಸಮೃದ್ಧಿ ಉಂಟಾಗುವದು. ನಿಮ್ಮ ಜೀವನದಲ್ಲಿ ಇನ್ನಷ್ಟು ಯಶಸ್ಸು ಹಾಗೂ ಸಮೃದ್ಧಿಗಾಗಿ ದೇವಿ ಮತ್ತು ಶಿವನ ಆರಾಧನೆ ಮಾಡಿ.

 ಕರ್ಕ

ಕರ್ಕ

ಇಂದು ನೀವು ಸಮೃದ್ಧಿಯನ್ನು ಪಡೆದುಕೊಳ್ಳುವಿರಿ. ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತವೆ. ತಂದೆ ಮಕ್ಕಳ ನಡುವೆ ಇದ್ದ ಭಿನಾಭಿಪ್ರಾಯಗಳು ದೂರವಾಗುತ್ತವೆ. ವ್ಯಾಪಾರ ವಹಿವಾಟುಗಳಲ್ಲಿ ಸಮೃದ್ಧಿ ಉಂಟಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಹೊಂದುವಿರಿ. ಸರಕಾರಿ ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯುವುದು. ಸ್ಥಿರಾಸ್ತಿಯಿಂದ ಅನುಕೂಲ ಉಂಟಾಗುವುದು. ರೈತಾಪಿ ವರ್ಗದವರಿಗೆ ಸಮಾಧಾನ ದೊರೆಯುತ್ತದೆ. ಇನ್ನಷ್ಟು ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಸಿಂಹ

ಸಿಂಹ

ನೀವು ಇಂದು ಆದಷ್ಟು ಜಾಗ್ರತರಾಗಿರಬೇಕು. ಬಂಧು ಮಿತ್ರರಿಂದ ಆರೋಪ ಹಾಗೂ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ತಂದೆ ತಾಯಿಗಳ ನಡುವೆ ವೈಮನಸ್ಸು ಉಂಟಾಗುವುದು. ಅನೇಕ ಸಮಸ್ಯೆಗಳು ಒಟ್ಟಿಗೆ ಬರುವುದು. ಸ್ಟೀಲ್ ಮತ್ತು ತೈಲ ಉದ್ಯಮದವರು ಅತ್ಯಂತ ಕಾಳಜಿಯಿಂದ ವ್ಯಾಪಾರ ನಡೆಸಬೇಕು. ನಿಮ್ಮ ಆಂತರ್ಯದ ವಿಚಾರವನ್ನು ಇತರರಲ್ಲಿ ಹೇಳಿಕೊಳ್ಳದಿರಿ. ವಿದ್ಯಾರ್ಥಿಗಳ ಕನಸು ನನಸಾಗದು. ಉತ್ತಮ ಭವಿಷ್ಯಕ್ಕಾಗಿ ಹನುಮಂತ ಚಾಲೀಸ್‍ಅನ್ನು ಪಠಿಸಿ.

ಕನ್ಯಾ

ಕನ್ಯಾ

ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಅತಿಯಾದ ಸಿಹಿ ಭೋಜನ ಹಾಗೂ ಮಾಂಸಹಾರವನ್ನು ಸ್ವೀಕರಿಸದಿರಿ. ಸಹೋದರಿಯಿಂದ ಹಣಕಾಸಿನ ಸಹಾಯ ದೊರೆಯದು. ಮಾಡುತ್ತಿರುವ ಉದ್ಯಮದಲ್ಲಿ ಅಧಿಕ ಲಾಭ ಉಂಟಾಗದೆ ಇರಬಹುದು. ಆದರೆ ಕೆಲಸವನ್ನು ಮುಂದುವರಿಸಿ. ಉತ್ತಮ ಭವಿಷ್ಯಕ್ಕಾಗಿ ಶಿವ ಮತ್ತು ಶಕ್ತಿಯ ಆರಾಧನೆ ಮಾಡಿ.

ತುಲಾ

ತುಲಾ

ತುಂಬಾ ಸಮಾಧಾನದ ಬದುಕು ನಿಮ್ಮದಾಗಿರುತ್ತದೆ. ಮಾಡುತ್ತಿರುವ ಉದ್ಯೋಗದಲ್ಲಿ ಲಾಭಾಂಶ ದೊರೆಯುವುದು. ರಫ್ತು ಮತ್ತು ಆಮದು ವಿಚಾರದಲ್ಲಿ ಅಧಿಕ ಲಾಭ ಉಂಟಾಗುವುದು. ನೀವು ಕಂಡ ಕನಸುಗಳು ನನಸಾಗುತ್ತವೆ. ನಿಮ್ಮ ನಿರೀಕ್ಷೆಗೂ ಮಿಗಿಲಾದ ಯಶಸ್ಸನ್ನು ಪಡೆಯುವಿರಿ. ಮಕ್ಕಳಿಗೆ ಕಪ್ಪು ಬಟ್ಟೆ ತೊಡಿಸದಿರಿ. ಅತಿಯಾದ ಸಿಹಿ ಭೂಜನ ಮಾಡದಿರಿ. ಯಶಸ್ವಿ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಶನಿ ಪ್ರಭಾವ ಮುಂದುವರಿಯುವುದರಿಂದ ಮಾನಸಿಕ ಕಿರಿಕಿರಿ ಉಂಟಾಗುವುದು. ಅನೇಕ ದಿನಗಳಿಂದ ಅಂದುಕೊಂಡ ವಿಚಾರದಲ್ಲೂ ಏರು ಪೇರು ಉಂಟಾಗುವುದು. ಬಂಧು ಮಿತ್ರರಿಂದ ಅಪಮಾನ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಆಲಸ್ಯದ ತೀರ್ಮಾನದಿಂದ ನಷ್ಟ ಅನುಭವಿಸುವ ಸಾಧ್ಯತೆ ಇದೆ. ನಿಮ್ಮ ಜೀವನದ ನಿರ್ದಿಷ್ಟ ಗುರಿ ತಲುಪಲು ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಧನು

ಧನು

ಅಂದುಕೊಂಡ ಕೆಲಸ ಅಷ್ಟು ಸುಲಭವಾಗಿ ನೆರವೇರದು. ಮಕ್ಕಳಿಗಾಗಿ ಹಣವನ್ನು ವ್ಯಯಿಸಬೇಕಾಗುವುದು. ಬಂಧು ಮಿತ್ರರಿಂದಲೂ ಕಿರಿಕಿರಿ ಉಂಟಾಗುವುದು. ನಿಮ್ಮ ತೀರ್ಮಾನದಲ್ಲಿ ಉಂಟಾಗುವ ಏರು ಪೇರು ಅಸಮಧಾನವನ್ನು ಉಂಟುಮಾಡುವುದು. ವಾಹನ ಚಲಾಯಿಸುವಾಗ ಆದಷ್ಟು ಕಾಳಜಿಯಿಂದ ಇರಿ. ರಾಹುಕಾಲದಲ್ಲಿ ಪ್ರಯಾಣ ಮಾಡದಿರಿ. ವಾಹನಕ್ಕಾಗಿ ಹಣವನ್ನು ವ್ಯಯಮಾಡ ಬೇಕಾಗುವ ಸಂದರ್ಭ ಉಂಟಾಗುವುದು. ಉತ್ತಮ ಭವಿಷ್ಯಕ್ಕಾಗಿ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

 ಮಕರ

ಮಕರ

ಸ್ತ್ರೀಯರಿಗೆ ಇಂದು ಅನುಕೂಲಕರವಾದ ದಿನ. ಮಾನಸಿಕವಾಗಿ ನೆಮ್ಮದಿ ದೊರೆಯುವುದು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ನಿಮ್ಮ ಕನಸುಗಳೆಲ್ಲಾ ನನಸಾಗುವುದು. ಸ್ಥಿರಾಸ್ತಿಯಿಂದ ಲಾಭ ಉಂಟಾಗುವುದು. ಇನ್ನಷ್ಟು ಸಮೃದ್ಧಿ ಹಾಗೂ ಉತ್ತಮ ಭವಿಷ್ಯಕ್ಕಾಗಿ ದೇವಿ ಆರಾಧನೆ ಮಾಡಿ.

 ಕುಂಬ

ಕುಂಬ

ನಿಮಗೆ ಇಂದು ಹಿರಿಯರ ಆಶೀರ್ವಾದ ಲಭ್ಯವಾಗುವುದು. ಸುಂದರ ಕನಸು ನನಸಾಗುವುದು. ಮನೆಯಲ್ಲಿ ಸಂತೋಷ ಹಾಗೂ ಸಮಾಧಾನಕರ ವಾತಾವರಣ ಇರುವುದು. ಈಗಾಗಲೇ ಮಾಡಬೇಕೆಂದುಕೊಂಡ ಕೆಲಸ ನಿಂತಿರುವುದು ಪುನಃ ಪ್ರಾರಂಭ ಕಾಣುವುದು. ಸಿಹಿ ಭೋಜನವನ್ನು ಮಾಡುವಿರಿ. ಸಂತೋಷದ ಕ್ಷಣಗಳಿಂದಾಗಿ ಹಿಗ್ಗುವಿರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಶುಭವಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ಗಣೇಶನ ಆರಾಧನೆ ಮಾಡಿ.

ಮೀನ

ಮೀನ

ಸುಂದರವಾದ ಜೀವನಕ್ಕೆ ನೀವಿಂದು ಸಾಕ್ಷಿಯಾಗುತ್ತೀರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಸ್ತ್ರೀಯರಿಗೆ ಪ್ರಗತಿ ಉಂಟಾಗುವುದು. ಕಲಾವಿದರಿಗೆ ಹಾಗೂ ಚಿತ್ರೋದ್ಯಮ ಸೇರಿದಂತೆ ಕ್ರಿಯಾತ್ಮಕ ಕೆಲಸದಲ್ಲಿರುವವರಿಗೆ ಲಾಭ ಉಂಟಾಗುವುದು. ಇನ್ನಷ್ಟು ಯಶಸ್ಸು ಹಾಗೂ ಸಂತೋಷದ ಜೀವನಕ್ಕೆ ವಿಷ್ಣು ಮತ್ತು ಗಣೇಶನ ಆರಾಧನೆ ಮಾಡಿ.

English summary

rashi bhavishya november-26th

Know what astrology and the planets have in store for you today. Choose your zodiac sign and read the details...