For Quick Alerts
ALLOW NOTIFICATIONS  
For Daily Alerts

  ಶುಕ್ರವಾರದ ದಿನ ಭವಿಷ್ಯ

  By Divya Pandit
  |
  ದಿನ ಭವಿಷ್ಯ - Kannada Astrology 24-11-2017 - Your Day Today - Oneindia Kannada

  ಪ್ರತಿಯೊಬ್ಬರ ಜೀವನವು ಸುಖಮಯವಾಗಿರಬೇಕೆಂದರೆ ಆರೋಗ್ಯದ ಜೊತೆ ಹಣದ ಹರಿವು ಚೆನ್ನಾಗಿ ಇರಬೇಕು. ನಿತ್ಯದ ಅಗತ್ಯಕ್ಕೆ ಸಾಕಾಗುವಷ್ಟು ಹಣವಿಲ್ಲವೆಂದಾದರೆ ಅನೇಕ ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ. ಹಣದ ಮೇಲೇ ನಿಂತಿರುವ ಈ ಪ್ರಪಂಚದಲ್ಲಿ ಹಣವಿಲ್ಲದೆ ಏನುಮಾಡಲೂ ಸಾಧ್ಯವಿಲ್ಲ. ಬಡತನ ಬಂದಾಗ ದುಃಖ, ಸಿರಿತನ ಬಂದಾಗ ಸಂತೋಷ ಗೊಳ್ಳುವುದು ಸಾಮಾನ್ಯ. ಆದರೆ ಈ ಎರಡು ಸಂದರ್ಭದಲ್ಲೂ ಸಮತೋಲನವನ್ನು ಕಾಯ್ದುಕೊಂಡು ಜೀವನದಲ್ಲಿ ಮುನ್ನಡೆದರೆ ಯಶಸ್ವಿಯಾದ ಬದುಕು ನಿಮ್ಮದಾಗುವುದು. ತಾಯಿ ಲಕ್ಷ್ಮಿ ದೇವಿಯು ಸದಾ ನಿಮ್ಮ ಕೈಹಿಡಿದು ನಡೆಸುವಳು.

  ಶುಭ ಶುಕ್ರವಾರವಾದ ಇಂದು ನಿಮ್ಮ ಭವಿಷ್ಯದಲ್ಲಿ ಗ್ರಹಗತಿಗಳು ಯಾವ ಬದಲಾವಣೆ ತರುತ್ತವೆ? ಅದರ ಪರಿಣಾಮ ಹೇಗಿರುವುದು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದಾದರೆ ಬೋಲ್ಡ್ ಸ್ಕೈ ನೀಡುತ್ತಿರುವ ಶುಕ್ರವಾರದ ದಿನ ಭವಿಷ್ಯವನ್ನು ಅರಿಯಿರಿ...

  ಮೇಷ:

  ಮೇಷ:

  ಇಂದು ನಿಮಗೆ ಸ್ಥರಾಸ್ತಿಯಿಂದ ಲಾಭ ಉಂಟಾಗುವುದು. ನಿಮ್ಮ ಕಾರ್ಯದಲ್ಲಿ ಯಶಸ್ಸು ತಾನಾಗಿಯೇ ಒಲಿದು ಬರುವುದು. ತಂದೆ ಮಕ್ಕಳ ನಡುವೆ ಸಾಮ್ಯತೆ ಉಂಟಾಗಿ ಹೊಸ ಉದ್ಯೋಗದಲ್ಲಿ ತೊಡಗಿಕೊಳ್ಳುವ ಅವಕಾಶ ಕೈಗೂಡಿ ಬರುವುದು. ಎಲ್ಲಾ ಕನಸುಗಳು ನನಸಾಗುವ ಲಕ್ಷಣವಿದೆ. ಉತ್ತಮವಾದ ಪ್ರಗತಿ, ವಿದ್ಯಾರ್ಥಿಗಳಿಗೆ ಯಶಸ್ಸು, ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದು. ಒಂದು ಅನುಪಾತದಲ್ಲಿ ಹೇಳುವುದಾದರೆ ನೂರಕ್ಕೆ ಶೇ.90ರಷ್ಟು ಪ್ರಗತಿಯನ್ನು ನೀವು ಕಾಣಲಿದ್ದೀರಿ. ಸಮಾಧಾನಕರ ಬದುಕಿಗಾಗಿ ಲಕ್ಷ್ಮಿ ಆರಾಧನೆ ಮಾಡಿ.

  ವೃಷಭ:

  ವೃಷಭ:

  ನೀವು ಅಂದುಕೊಂಡ ಕಾರ್ಯಗಳು ವಿಳಂಬವಾಗುವುದು. ವಿಪರೀತವಾದ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬಂಧುಗಳಿಂದ ಕಿರಿಕಿರಿ ಉಂಟಾಗುವುದು. ಉದ್ಯೋಗ ಕ್ಷೇತ್ರದಲ್ಲೂ ಹಲವಾರು ಬಗೆಯ ಅಡೆತಡೆಗಳು ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಸ್ತುತಿಯನ್ನು ಮಾಡುವುದು ಉತ್ತಮ.

  ಮಿಥುನ:

  ಮಿಥುನ:

  ಸಮಾಧಾನದ ಬದುಕನ್ನು ಕಾಣಲಿದ್ದೀರಿ. ನಿರ್ದಿಷ್ಟವಾದ ಗುರಿಯನ್ನು ತಲುಪುವಿರಿ. ಬಂಧು ಮಿತ್ರರ ಸಹಕಾರ ದೊರೆಯುವುದು. ಅನೇಕ ದಿನಗಳಿಂದ ಅಂದುಕೊಂಡ ಕೆಲಸಗಳು ನೆರವೇರುತ್ತವೆ. ಅಂದುಕೊಂಡ ಕೆಲಸ ನೆರವೇರಲು ಹೆಚ್ಚಿನ ಪರಿಶ್ರಮದಿಂದ ಮುನ್ನುಗ್ಗಿ. ಭಗವಂತನ ಕೃಪೆಗೆ ಒಳಗಾಗಗಬಹುದು. ಯಶಸ್ವಿ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆಯನ್ನು ಮಾಡಿ.

  ಕರ್ಕ:

  ಕರ್ಕ:

  ಅನೇಕ ದಿನಗಳಿಂದ ಅಂದುಕೊಂಡ ಕನಸುಗಳು ಇಂದು ನೆರವೇರುವ ಸಾಧ್ಯತೆಯಿದೆ. ಲಾಭಾಂಶದ ನಿರೀಕ್ಷೆಯನ್ನು ನೀವು ಮಾಡಬಹುದು. ತಂದೆ ತಾಯಿಯಿಂದ ಸಂಪೂರ್ಣವಾದ ಸಹಕಾರ ದೊರೆಯುವುದು. ನೀವು ಪ್ರಗತಿಯನ್ನು ಕಾಣಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲೂ ಪ್ರತಿ ಉಂಟಾಗುವುದು. ಆರ್ಥಿಕ ಸ್ಥಿತಿಯಲ್ಲೂ ಸುಧಾರಣೆ ಕಾಣುವಿರಿ. ಮೇಲಾಧಿಕಾರಿಗಳಿಂದ ಉಂಟಾಗುವ ಕಿರಿಕಿರಿಯು ದೂರವಾಗುವುದು. ಯಶಸ್ವಿ ಬದುಕಿಗಾಗಿ ದೇವಿ ಆರಾಧನೆ ಹಾಗೂ ಗಣೇಶನ ಉಪಾಸನೆಯನ್ನು ನೀವು ಮಾಡಿ.

  ಸಿಂಹ:

  ಸಿಂಹ:

  ಇಂದು ನಿಮಗೆ ಆರ್ಥಿಕ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗುವುದು. ಅಂದುಕೊಂಡ ವಿಚಾರಗಳು ಯಶಸ್ಸನ್ನು ಪಡೆದುಕೊಳ್ಳದು. ವಿಪರೀತವಾದ ಆಯಾಸ ಹಾಗೂ ಅನಾರೋಗ್ಯವು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ನಿಮಗೆ ಪಂಚಮ ಶನಿ ಇರುವುದರಿಂದ ಅನೇಕ ಸಮಸ್ಯೆಗಳು ಒಂದಾದ ಮೇಲೊಂದರಂತೆ ಬರುತ್ತಿರುತ್ತವೆ. ಇಲ್ಲಸಲ್ಲದ ಆರೋಪಗಳನ್ನು ಸಹ ನೀವು ಎದುರಿಸಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಜೀವನಕ್ಕಾಗಿ ಗಣೇಶನ ಆರಾಧನೆ ಹಾಗೂ ಕುಲದೇವರ ಸ್ಮರಣೆಯನ್ನು ಮಾಡಿ.

  ಕನ್ಯಾ:

  ಕನ್ಯಾ:

  ಇಂದು ನಿಮಗೆ ಒಳ್ಳೆಯ ದಿನ ಎನ್ನಬಹುದು. ಸಮಾಧಾನಕರವಾದ ಬದುಕನ್ನು ಕಾಣುವಿರಿ. ಬಂಧು ಮಿತ್ರರ ಸಮಾಗಮನ ಆಗುವುದು. ಸ್ಥಿರಾಸ್ತಿಯಿಂದ ಅಧಿಕ ಪ್ರಮಾಣದ ಲಾಭ ಉಂಟಾಗದಿರಬಹುದು. ಆದರೆ ನಷ್ಟವನ್ನು ಅನುಭವಿಸಬೇಕಾಗಿರುವುದಿಲ್ಲ. ತಂದೆ ಮಕ್ಕಳ ನಡುವೆ ಚಿಕ್ಕ ಮಟ್ಟದ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಯಶಸ್ವಿ ಬದುಕಿಗಾಗಿ ದೇವಿಯ ಉಪಾಸನೆ ಹಾಗೂ ಕುಲದೇವರ ಸ್ಮೆರಣೆಯನ್ನು ನೀವು ಮಾಡಿ.

  ತುಲಾ:

  ತುಲಾ:

  ಇಂದು ನಿಮಗೆ ಅದೃಷ್ಟದ ದಿನ ಎನ್ನಬಹುದು. ಸ್ಥಿರಾಸ್ತಿಯಿಂದ ಲಾಭ ಉಂಟಾಗುವುದು. ಸಹೋದರರ ನಡುವೆ ಇದ್ದ ವೈಮನಸ್ಸು ದೂರವಾಗುವುದು. ಹಣಕಾಸಿನ ಸ್ಥಿತಿಯು ಉತ್ತಮ ಸ್ಥಿತಿಯಲ್ಲಿರುವುದು. ರಾಜಕಾರಣಿಗಳಿಗೆ ಇಂದು ನೆಮ್ಮದಿಯ ದಿನ. ಅನೇಕ ಗೌರವ ಆಧರಗಳು ಅರಸಿ ಬರುವುದು. ಎಲ್ಲರಿಂದಲೂ ಪ್ರೋತ್ಸಾಹ ಹಾಗೂ ಪ್ರೀತಿ-ವಾತ್ಸಲ್ಯವನ್ನು ಪಡೆದುಕೊಳ್ಳುವಿರಿ. ಸಮಾಧಾನದ ಬದುಕು ಹಾಗೂ ಯಶಸ್ವಿ ಜೀವನಕ್ಕಾಗಿ ಗುರುವಿನ ಆರಾಧನೆ ಹಾಗೂ ದೇವಿಯ ಸ್ತುತಿಯನ್ನು ಮಾಡಿ.

  ವೃಶ್ಚಿಕ:

  ವೃಶ್ಚಿಕ:

  ಆರ್ಥಿಕ ವಲಯದಲ್ಲಿ ಏರು ಪೇರು ಉಂಟಾಗುವುದು. ನಿರ್ದಿಷ್ಟ ವಾದ ಗುರಿ ತಲುಪಲು ಸಾಧ್ಯವಾಗದು. ಕೈಗಾರಿಕಾ ಕ್ಷೇತ್ರದಲ್ಲಿ ನಷ್ಟ ಹಾಗೂ ಅಸಮಧಾನ ಉಂಟಾಗುವ ಸಾಧ್ಯತೆ ಇದೆ. ಶನಿಯ ಪ್ರಭಾವ ಇರುವುದರಿಂದ ನಿಮಗೆ ಮಾನಸಿಕವಾದ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಯಶಸ್ವಿ ಬದುಕಿಗಾಗಿ ಆಂಜನೇಯ ಮತ್ತು ಶಿವನ ಆರಾಧನೆ ಮಾಡಿ.

  ಧನು:

  ಧನು:

  ಬಟ್ಟೆ ವ್ಯಾಪಾರಿಗಳಿಗೆ ಇಂದು ಹೆಚ್ಚಿನ ಲಾಭ ಉಂಟಾಗುವುದು. ಆದರೂ ಆರ್ಥಿಕ ವಲಯದಲ್ಲಿ ಕುಸಿತವನ್ನು ಕಾಣುವಿರಿ. ಷೇರು ವ್ಯವಹಾರದಲ್ಲಿ ಹಣವನ್ನು ಹೂಡದಿರಿ. ಕೈಗಾರಿಕಾ ಕ್ಷೇತ್ರದಲ್ಲಿ ಮೋಸಗಾರರಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಆದಷ್ಟು ಎಚ್ಚರಿಕೆಯಿಂದ ಇರುವುದು ಸೂಕ್ತ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಜೀವನಕ್ಕಾಗಿ ಹನುಮಂತನ ಚಾಲೀಸವನ್ನು ಓದಿ. ಶಿವನ ಆರಾಧನೆ ಮಾಡಿ ಜೀವನದಲ್ಲಿ ಒಳ್ಳೆಯದಾಗುತ್ತದೆ.

  ಮಕರ:

  ಮಕರ:

  ಇಂದು ನಿಮಗೆ ಸ್ವಲ್ಪ ಕಷ್ಟಕರವಾದ ದಿನ ಎಂದು ಹೇಳಬಹುದು. ಆದಷ್ಟು ಕಪ್ಪು ಬಣ್ಣದ ಬಟ್ಟೆಯನ್ನು ತೊಡದಿರಿ. ಮನೆಯಿಂದ ಹೊರಡುವಾಗ ಚಿಕ್ಕ ಮಕ್ಕಳ ಮುಖ ದರ್ಶನ ಮಾಡಿ ಹೊರಡುವುದು ಸೂಕ್ತ. ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ತಂದೆ ತಾಯಿಯ ಆಶೀರ್ವಾದ ಪಡೆದು ನಿರ್ಧಾರಯುತ ಕೆಲಸವನ್ನು ಮುಂದುವರಿಸಿ. ಸೋಮಾರಿತನವನ್ನು ಬಿಟ್ಟುಬಿಡಿ. ಯುವಕರಿಗೆ ಅಪಮಾನ ಉಂಟಾಗುವ ಸಾಧ್ಯತೆ ಇದೆ. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಕುಲದೇವರ ಸ್ಮರಣೆಯನ್ನು ಮಾಡಿ.

  ಕುಂಬ:

  ಕುಂಬ:

  ಸಮಾಧಾನಯುತವಾದ ಬದುಕನ್ನು ಕಾಣಲಿದ್ದೀರಿ. ಮನೆಯಲ್ಲಿ ನೆಮ್ಮದಿ ಹಾಗೂ ಸಂತೋಷದ ವಾತಾವರಣ ಇರುವುದು. ಅನೇಕ ದಿನಗಳಿಂದ ಕಂಡ ಕನಸು ನನಸಾಗುವುದು. ಸ್ಥಿರಾಸ್ತಿಯಿಂದ ಲಾಭ ಹಾಗೂ ಮನೆಯಲ್ಲಿ ನೆಮ್ಮದಿ ಉಂಟಾಗುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

  ಮೀನ:

  ಮೀನ:

  ಅನುಕೂಲಕರವಾದ ವಾತಾವರಣ ನಿರ್ಮಾಣವಾಗುವುದು. ತಂದೆ ಮಕ್ಕಳ ನಡುವೆ ಇರುವ ವೈಮನಸ್ಸು ದೂರವಾಗುವುದು. ಮನಸ್ಸಿಗೆ ನೆಮ್ಮದಿ ದೊರೆಯುವುದು. ಮಾಡುತ್ತಿರುವ ಕೆಲಸದಲ್ಲಿ ಲಾಭ ದೊರೆಯುವುದು. ಧನಾತ್ಮಕ ಚಿಂತನೆಗಳಿಂದ ಪ್ರಗತಿ ಉಂಟಾಗುವುದು. ಇನ್ನಷ್ಟು ಉತ್ತಮ ಹಾಗೂ ಯಶಸ್ವಿ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಸ್ಮರಣೆಯನ್ನು ಮಾಡಿ.

  English summary

  rashi bhavishya november-24th

  Analyzing the projection of the position of planets, and the Sun and the Moon on the Ecliptic at the moment of birth. Astrology can give us a glimpse of a person's basic characteristics, preferences, flaws and fears.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more