For Quick Alerts
ALLOW NOTIFICATIONS  
For Daily Alerts

  ಭಾನುವಾರದ ದಿನ ಭವಿಷ್ಯ

  By Divya Pandith
  |

  ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ. ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ.

  ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಅರಿಯಿರಿ...

  ಮೇಷ

  ಮೇಷ

  ನೀವು ಮಾಡುತ್ತಿರುವ ಉದ್ಯಮದಲ್ಲಿ ಲಾಭ ಉಂಟಾಗುವುದು. ಅಂದುಕೊಂಡ ವಿಚಾರದಲ್ಲಿ ಯಶಸ್ಸು ಕಾಣುವಿರಿ. ಮನೆಯಲ್ಲಿ ಖುಷಿಯ ವಾತಾವರಣ ಮನಸ್ಸಿಗೆ ನೆಮ್ಮದಿ ನೀಡುವುದು. ಕಲಾವಿದರಿಗೆ ಹೊಸ ಅವಕಾಶ ಹಾಗೂ ಲಾಭ ಉಂಟಾಗುವುದು. ಹೆಚ್ಚಿನ ಯಶಸ್ವಿ ಬದುಕಿಗಾಗಿ ಸೂರ್ಯನ ಆರಾಧನೆ ಮಾಡಿ.

  ವೃಷಭ

  ವೃಷಭ

  ಅಷ್ಟು ಉತ್ತಮವಾದ ದಿನವಲ್ಲ. ಹಾಗಂತ ಭಯ ಬೇಡ. ಮಾನಸಿಕ ಕಿರಿಕಿರಿ ಮುಂದುವರಿಯುವುದು. ಸಹೋದರಿಯರಿಂದ ಅವಮಾನ ಉಂಟಾಗುವುದು. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಒಂದಿಷ್ಟು ಅಶುಭ ಫಲಗಳನ್ನೇ ನೀವು ನಿರೀಕ್ಷೆ ಮಾಡಬೇಕಾಗುವುದು. ಸಂಕಷ್ಟಗಳ ನಿವಾರಣೆಗೆ ಹನುಂತ ಚಾಲೀಸ್ ಪಠಣೆ ಮಾಡಿ.

  ಮಿಥುನ

  ಮಿಥುನ

  ಸಾಮಾನ್ಯವಾದಂತಹ ದಿನ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ದೂರದ ಪ್ರಯಾಣ ಕೈಗೊಳ್ಳುವಿರಿ. ಬಂಧು ಮಿತ್ರರು ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸುವರು. ಚಿತ್ರೋದ್ಯಮದಲ್ಲಿ ಅನುಕೂಲಕರ ವಾತಾವರಣ ಹಾಗೂ ಸಂಗೀತಗಾರರಿಗೆ ಲಾಭಾಂಶ ತಂದುಕೊಡುವುದು. ವೈದ್ಯರಿಗೂ ಉತ್ತಮ ಲಾಭ ಉಂಟಾಗುವುದು. ಉತ್ತಮ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಪ್ರಾರ್ಥನೆ ಮಾಡಿ.

  ಕರ್ಕ

  ಕರ್ಕ

  ನಿಮಗೆ ಇಂದು ಉತ್ತಮ ದಿನ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ಪ್ರೇಮಿಗಳಿಗೆ ಪ್ರೇಮ ವೈಫಲ್ಯತೆ ಉಂಟಾಗುವ ಸಾಧ್ಯತೆ ಇದೆ. ಶತ್ರುಗಳು ಮಾಡಿರುವ ತಪ್ಪಿನ ಬಗ್ಗೆ ನಿಮ್ಮಲ್ಲಿ ಕ್ಷಮೆ ಯಾಚಿಸುವರು. ಆರ್ಥಿಕವಾಗಿ ಉತ್ತಮವಾದ ದಿನ. ಇಂದು ನೀವು ಆಸ್ತಿ ಖರೀದಿಗೆ ಮುಂದಾದರೆ ಒಳ್ಳೆಯ ಫಲಿತಾಂಶ ಲಭ್ಯವಾಗುವುದು. ಮೂರನೇ ವ್ಯಕ್ತಿಗೆ ಹಣ ನೀಡಲು ಮುಂದಾಗದಿರಿ. ಉತ್ತಮ ಭವಿಷ್ಯಕ್ಕಾಗಿ ಆಂಜನೇಯ ಮತ್ತು ವಿಷ್ಣುವಿನ ಆರಾಧನೆ ಮಾಡಿ.

  ಸಿಂಹ

  ಸಿಂಹ

  ನಿಮಗೆ ಕಿರಿಕಿರಿ ಮುಂದುವರಿಯುವುದು. ವಿಪರೀತವಾದ ಆರೋಗ್ಯದ ಏರುಪೇರು. ಮಕ್ಕಳಿಂದ ಉಂಟಾಗುವ ಸಮಸ್ಯೆಗಳು ನಿಮಗೆ ಇನ್ನೊಂದಿಷ್ಟು ಆಯಾಸ ಹಾಗೂ ಅಸಮಧಾನ ಉಂಟುಮಾಡುವುದು. ಸಮಸ್ಯೆಗಳ ನಿವಾರಣೆಗೆ ಬಡವರಿಗೆ ಧಾನ ಹಾಗೂ ಈಶ್ವರನ ಆರಾಧನೆ ಮಾಡಿ.

  ಕನ್ಯಾ

  ಕನ್ಯಾ

  ಮಕ್ಕಳು ನಿದಿಷ್ಟ ಗುರಿಯನ್ನು ತಲುಪಿರುವ ವಿಷಯವು ಹೆಚ್ಚು ಖುಷಿಯನ್ನು ನೀಡುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ. ಬಂಧು ಮಿತ್ರರಿಂದ ಸಹಕಾರ ದೊರೆಯುವುದು. ಕಲಾವಿದರಿಗೆ ಅನುಕೂಲ ಹಾಗೂ ವೈದ್ಯರಿಗೆ ನೆಮ್ಮದಿಯ ದಿನವಾಗಲಿದೆ. ಸ್ಥಿರ ಆಸ್ತಿಯಿಂದ ಲಾಭ ಉಂಟಾಗುವುದು. ಕೆಲವರಿಗೆ ದೂರದ ಪ್ರಯಾಣ ಕೈಗೊಳ್ಳುವ ಅವಕಾಶ ಕೂಡಿ ಬರುವುದು. ನೆಮ್ಮದಿಯ ಬದುಕಿಗೆ ಗಣೇಶನ ಆರಾಧನೆ ಹಾಗೂ ಶಿವ ಸ್ತುತಿಯನ್ನು ಮಾಡಿ.

  ತುಲಾ

  ತುಲಾ

  ನೆಮ್ಮದಿಯ ದಿನ. ಬಂಧು ಮಿತ್ರರಿಂದ ಸಹಕಾರ. ಅಂದುಕೊಂಡ ಕಾರ್ಯ ಸುಲಭವಾಗಿ ನೆರವೇರುವುದು. ಹಣಕಾಸಿನ ವ್ಯವ್ಥೆಯಲ್ಲೂ ಅನುಕೂಲಕರ ವಾತಾವರಣ ಸೃಷ್ಟಿಯಾಗುವುದು. ಮಾನಸಿಕ ಕಾಮನೆಗಳು ಕೈಗೂಡಿ ಬರುವುದು. ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಉತ್ತಮವಾದ ದಿನ. ಉತ್ತಮ ಬದುಕಿಗೆ ಶಿವನ ಆರಾಧನೆ ಮಾಡಿ.

  ವೃಶ್ಚಿಕ

  ವೃಶ್ಚಿಕ

  ಅನುಕೂಲಕರವಾದಂತಹ ವಾತಾವರಣ ಸೃಷ್ಟಿಯಾಗುವುದು. ಮನೆಯಲ್ಲಿ ನೆಮ್ಮದಿ ಸಿಗುವುದು. ಅಂದುಕೊಂಡ ಕರ್ಯಗಳು ನಿರ್ವಿಘ್ನವಾಗಿ ನೆರವೇರುವುದು. ಸ್ತ್ರೀಯರಿಂದ ಅವಮಾನ ಉಂಟಾಗುವ ಸಾಧ್ಯತೆ ಇದೆ. ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಈಶ್ವರನ ಆರಾಧನೆ ಮಾಡಿದರೆ ಸಂತೋಷ ಹಾಗೂ ಸುಖ ಕೈಗೂಡಿ ಬರುವುದು.

  ಧನು

  ಧನು

  ಇಂದು ನಿಮಗೆ ಅದೃಷ್ಟದ ದಿನವಲ್ಲ. ಬಂಧು ಮಿತ್ರರಿಂದ ನಿರೀಕ್ಷಿತ ಮಟ್ಟದ ಸಹಾಯ ಉಂಟಾಗದು. ಆರೋಗ್ಯದ ಸಮಸ್ಯೆಗಳು ಹಾಗೂ ಆರ್ಥಿಕ ಸ್ಥಿತಿಯಲ್ಲಿ ಉಂಟಾಗುವ ನಷ್ಟವು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳುಮಾಡುವುದು. ಕಬ್ಬಿಣ, ಸಿಮೆಂಟ್ ಮತ್ತು ತೈಲದ ವ್ಯಾಪಾರಕ್ಕೆ ಮುಂದಾಗದಿರಿ. ನಷ್ಟ ಅನುಭವಿಸುವ ಸಾಧ್ಯತೆ ಇದೆ. ಸುಂದರ ಬದುಕಿಗಾಗಿ ಕುಲದೇವರ ಆರಾಧನೆ ಹಾಗೂ ಇಷ್ಟ ದೇವರ ಸ್ಮರಣೆಯನ್ನು ಮಾಡಿ.

  ಮಕರ

  ಮಕರ

  ಇಂದು ನಿಮಗೆ ಕಷ್ಟಕರವಾದ ದಿನ. ಬಂಧು ಮಿತ್ರರಿಂದ ಕಿರಿಕಿರಿ ಉಂಟಾಗುವುದು. ನಿರೀಕ್ಷಿತ ಮಟ್ಟದ ಯಶಸ್ಸು ಲಭಿಸದು. ಸ್ತ್ರೀಯರ ಮಾತನ್ನು ಮೀರಿ ನಡೆಯದಿರಿ. ನಷ್ಟ ಅನುಭವಿಸುವ ಸಾಧ್ಯತೆ ಇದೆ. ಸಮಸ್ಯೆಗಳ ನಿವಾರಣೆಗೆ ಕುಲದೇವರ ಆರಾಧನೆ ಮಾಡಿ.

  ಕುಂಬ

  ಕುಂಬ

  ಕಲಾವಿದರಿಗೆ ಇಂದು ಉತ್ತಮ ಪ್ರಗತಿ ಉಂಟಾಗುವುದು. ಮನೆಯಲ್ಲಿ ಸಂತೋಷದ ವಾತಾವರಣ. ಬಂಧು ಮಿತ್ರರ ಸಹಕಾರ ದೊರೆಯುವುದು. ವಿದೇಶ ಪ್ರವಾಸದ ಕನಸು ನನಸಾಗುವುದು. ಆರ್ಥಿಕವಾಗಿ ಹೆಚ್ಚು ಲಾಭ ಉಂಟಾಗುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಶಿವ ಮತ್ತು ಗಣೇಶನ ಆರಾಧನೆ ಮಾಡಿ.

  ಮೀನ

  ಮೀನ

  ಇಂದು ನಿಮಗೆ ಅದೃಷ್ಟದ ದಿನ. ನೀವು ಅಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನೆರವೇರುವುದು. ಕೆಲಸದ ಯಶಸ್ಸಿಗೆ ಭಗವಂತನ ಆಶೀರ್ವಾದ ದೊರೆಯುವುದು. ಆಥಿಕವಾಗಿ ಲಾಭ ಹಾಗೂ ಸಂತೋಷದ ಬದುಕನ್ನು ಅನುಭವಿಸುವಿರಿ. ಇನ್ನಷ್ಟು ಉತ್ತಮ ಭವಿಷ್ಯಕ್ಕಾಗಿ ಗಣೇಶ ಮತ್ತು ಶಿವ ಸ್ತುತಿಯನ್ನು ಮಾಡಿ.

  English summary

  rashi-bhavishya-november-19th

  ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ. ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more