ಶನಿವಾರದ ದಿನ ಭವಿಷ್ಯ

Posted By: Divya Pandith
Subscribe to Boldsky

ಸಾಮಾನ್ಯವಾಗಿ ಎಲ್ಲರೂ ಶ್ರೀಮಂತರಾಗಿರಬೇಕು ಎಂದು ಬಯಸುತ್ತಾರೆ. ಕೈ ತುಂಬಾ ಹಣ, ಅನೇಕ ಸವಲತ್ತು ಸೌಲಭ್ಯವನ್ನು ಹೊಂದಬೇಕು ಎಂದು ಭಾವಿಸುತ್ತಾರೆ. ಅನೇಕರಲ್ಲಿ ಕೆಲವರಿಗೆ ಗ್ರಹಗತಿಗಳ ಉತ್ತಮ ಸಂಚಾರದಿಂದ ಶ್ರೀಮಂತಿಕೆ ಒದಗಿ ಬರುವುದು. ಇನ್ನೂ ಕೆಲವರು ಅನಾನುಕೂಲದಿಂದ ಆರ್ಥಿಕ ಕುಸಿತ ಹಾಗೂ ನಷ್ಟವನ್ನು ಹೊಂದಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ. ಹಾಗಂತ ಜೀವನ ಪೂರ್ತಿ ಕಷ್ಟದಲ್ಲಿಯೇ ಮುಳುಗಬೇಕಾಗುವುದು ಎಂದರ್ಥವಲ್ಲ.

ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತ ಎನ್ನುವುದು ಇದ್ದೇ ಇರುತ್ತದೆ. ಒಮ್ಮೆ ಹಣದ ಹರಿವು ಹೆಚ್ಚಾಗಿದ್ದರೆ, ಇನ್ನೊಮ್ಮೆ ಹಣದ ಹರಿವು ಕಡಿಮೆಯಾಗಿರುತ್ತದೆ. ಎಲ್ಲಾ ಸಮಯದಲ್ಲೂ ಮನಸ್ಸನ್ನು ಸಮತೋಲನದಲ್ಲಿಟ್ಟುಕೊಂಡು ಜೀವನ ನಡೆಸುವುದೇ ಬದುಕು. ಶನೇಶ್ವರನ ದಿನವಾದ ಇಂದು ಯಾವೆಲ್ಲಾ ಬಗೆಯ ಭವಿಷ್ಯವನ್ನು ಎದುರು ನೋಡಬೇಕಾಗುವುದು ಎನ್ನುವ ಕುತೂಹಲ ನಿಮ್ಮದಾಗಿದ್ದರೆ ಈ ಮುಂದೆ ನೀಡಿರುವ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ

ಮೇಷ

ಸ್ತ್ರೀಯರಿಗೆ ಇಂದು ಉತ್ತಮವಾದ ದಿನ ಎಂದು ಹೇಳಬಹುದು. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಮೇಲುಗೈ ಸಾಧಿಸುವಿರಿ. ತಂದೆಯ ಸಹಕಾರದಿಂದ ಹೊಸ ಉದ್ಯೋಗಕ್ಕೆ ಕೈಹಾಕುವ ಸಾಧ್ಯತೆಗಳಿವೆ. ಸ್ಟೀಲ್ ಇಂಡಸ್ಟ್ರೀಸ್ ಗಳಲ್ಲಿರುವವರಿಗೆ ಉತ್ತಮ ಲಾಭ ಉಂಟಾಗುವುದು. ಬಂಧು ಮಿತ್ರರ ಸಹಕಾರ ದೊರೆಯುವುದು. ಮನೆಯಲ್ಲಿ ನೆಮ್ಮದಿ ಹಾಗೂ ಮನಸ್ಸಿಗೂ ಸಮಾಧಾನ ದೊರೆಯುವುದು. ಮಕ್ಕಳಿಂದ ಶುಭವಾರ್ತೆ ದೊರೆಯುವುದು. ದೂರದ ಪ್ರಯಾಣವು ನಿಮಗೆ ಸುಖಮಯವಾಗಿರುತ್ತದೆ. ಮೀನುಗಾರಿಕೆ ಮತ್ತು ಸಂಕರ್ಪ ಸಂವಹನ ಕ್ಷೇತ್ರದಲ್ಲಿರುವವರಿಗೆ ಹಣದ ಸುರಿಮಳೆ ಉಂಟಾಗುವುದು. ಯಶಸ್ವಿ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ವೃಷಭ

ವೃಷಭ

ಅಷ್ಟಮ ಶನಿಯ ಪ್ರಭಾವದಿಂದ ಅಂದುಕೊಂಡ ಕಾರ್ಯವು ಸುಲಭವಾಗಿ ನಡೆಯದು. ಇನ್ನು ಎರಡು ವರ್ಷಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಒಂದೊಂದು ದಿನ ಒಂದೊಂದು ಬಗೆಯ ಏರಿಳಿತ ಹಾಗೂ ಹೊಸ ಬಗೆಯ ಬದಲಾವಣೆಯನ್ನು ಅನುಭವಿಸಬೇಕಾಗುವುದು. ಮೂರನೇ ವ್ಯಕ್ತಿಯ ಬಗ್ಗೆ ಮಾತನಾಡಲು ಹೋಗದಿರಿ. ನಿಮಗೆ ಇಲ್ಲ ಸಲ್ಲದ ಅಪವಾದಗಳು ಬರುವ ಸಾಧ್ಯತೆ ಇದೆ. ಆದಷ್ಟು ಮೌನ ಹಾಗೂ ಜಾಗ್ರತೆಯಿಂದಿರುವುದು ಸೂಕ್ತ. ಹೆಂಡತಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ಕೆಲವು ಕುಹಕಗಳಿಗೆ ಒಳಗಾಗುವ ಸಾಧ್ಯತೆ ಇದೆ. ಇಂದು ವಾಹನ ಖರೀದಿಗೆ ಮುಂದಾಗದಿರಿ. ಮಾಡುವ ಕೆಲಸದ ಬಗ್ಗೆ ದೃಢತೆಯಿಂದ ಮುಂದುವರಿಸಿ. ದೇವರ ಕೃಪೆ ಸಿಗುವುದು. ಉತ್ತಮ ಭವಿಷ್ಯಕ್ಕಾಗಿ ಕುಲದೇವರು ಹಾಗೂ ಇಷ್ಟ ದೇವರ ಆರಾಧನೆ ಮಾಡಿ.

ಮಿಥುನ

ಮಿಥುನ

ಸಮಾಧಾನದ ಬದುಕನ್ನು ಕಾಣುವಿರಿ. ಸ್ತ್ರೀಯರಿಂದ ಶುಭವಾರ್ತೆ ದೊರೆಯುವುದು. ಸ್ನೇಹಿತರಿಂದ ಸಹಕಾರ. ಅನಿರೀಕ್ಷಿತ ತಲೆನೋವು ದೂರವಾಗುವುದು. ಅಂದುಕೊಂಡ ಕಾರ್ಯದಲ್ಲಿ ಜಯವನ್ನು ಪಡೆಯುವಿರಿ. ಬಂಧು ಮಿತ್ರರಿಂದ ಸಹಕಾರ ಮತ್ತು ಆಸ್ತಿಯನ್ನು ಖರೀದಿಸುವ ಸಾಧ್ಯತೆಗಳು ಕಂಡು ಬರುತ್ತವೆ. ಸಿಹಿ ಭೋಜನವನ್ನು ಹೊಂದುವ ಸಾಧ್ಯತೆಗಳಿವೆ. ಉತ್ತಮ ಬದುಕಿಗಾಗಿ ಗಣೇಶ ಮತ್ತು ದುರ್ಗಾ ಆರಾಧನೆಯನ್ನು ಮಾಡಿ.

ಕರ್ಕ

ಕರ್ಕ

ಅಂದುಕೊಂಡ ಕಾರ್ಯ ಸುಗಮವಾಗುವುದು. ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಆರ್ಧಿಕ ವ್ಯವಸ್ಥೆಯಲ್ಲಿ ಸಮಾಧಾನ ಹಾಗೂ ವ್ಯಾಪಾರ ವಹಿವಾಟಿನಲ್ಲಿ ಸಮೃದ್ಧಿ ಉಂಟಾಗುವುದು. ಆಮದು ರಫ್ತು ವ್ಯಾಪಾರದಲ್ಲೂ ಲಾಭ ಉಂಟಾಗುವುದು. ಮಹಿಳೆಯರು ಪುರುಷರು ಎನ್ನುವ ತಾರತಮ್ಯವಿಲ್ಲದೆ ಎಲ್ಲರಿಗೂ ಮಾನಸಿಕವಾಗಿ ನೆಮ್ಮದಿ ಉಂಟಾಗುವುದು. ಮಕ್ಕಳ ವಿದೇಶ ಪ್ರಯಾಣ ಸಾಧ್ಯತೆ ಹಾಗೂ ಅದರಿಂದ ಖುಷಿ ಉಂಟಾಗುವುದು. ಬಂಧು ಮಿತ್ರರ ಸಹಕರಾ ಬಯಸಿದರೆ ಲಭ್ಯವಾಗುವುದು. ಚಿರ ಮತ್ತು ಸ್ಥಿರಾಸ್ತಿಯನ್ನು ಖರೀದಿಸುವ ಸಾಧ್ಯತೆಗಳಿವೆ. ಯಶಸ್ವಿ ಬದುಕಿಗಾಗಿ ಗಣೇಶ ಮತ್ತು ಗುರುವಿನ ಆರಾಧನೆಮಾಡಿ.

ಸಿಂಹ

ಸಿಂಹ

ನಿಮಗಿಂದು ಅಷ್ಟು ಶುಭಕರ ದಿನವಲ್ಲ. ಹಲವಾರು ಸಮಸ್ಯೆಗಳಿಗೆ ನೀವು ಕಾರಣೀಭೂತರಾಗಿರುತ್ತೀರಿ. ಮಾನಸಿಕವಾಗಿ ನೆಮ್ಮದಿ ದೊರೆಯದು. ಉನ್ನತ ವ್ಯಾಸಂಗದ ಕನಸು ನನಸಾಗಿಯೇ ಉಳಿಯುವುದು. ಹತ್ತಿರದ ಮಿತ್ರರೆನಿಕೊಂಡವರೇ ನಿಮ್ಮ ಬಗ್ಗೆ ಶತ್ರು ಭಾವನೆ ಹುಟ್ಟುವಂತೆ ಮಾಡುವರು. ನಿರ್ಧರಿತ ಕೆಲಸಗಳನ್ನು ಎಡಬಿಡದೆ ಮಾಡಿದರೆ ಸ್ವಲ್ಪ ಪ್ರಮಾಣದ ಯಶಸ್ಸನ್ನು ಕಾಣುವಿರಿ. ಯಶಸ್ವಿ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಅಂದುಕೊಂಡ ಕಾರ್ಯ ಪೂರ್ಣಗೊಳ್ಳದಿದ್ದರೂ ಹೆದರುವ ಅಗತ್ಯವಿಲ್ಲ. ಪತ್ರಕರ್ತರಿಗೆ ನೆಮ್ಮದಿ, ವ್ಯಾಪಾರಸ್ಥರಿಗೆ ಅನುಕೂಲ ಉಂಟಾಗುವ ಸಾಧ್ಯತೆ ಇದೆ. ನಿರ್ದಿಷ್ಟ ಗುರಿಯನ್ನು ಕೆಲವರು ತಲುಪುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಇಂದು ಅನುಕೂಲವುಂಟಾಗುವುದು. ನಿಮ್ಮ ಕೆಲಸ ಯಶಸ್ವಿಯಾಗಲು ಗಣೇಶನ ಆರಾಧನೆ ಮಾಡಿ.

ತುಲಾ

ತುಲಾ

ಇಂದು ನಿಮಗೆ ನೆಮ್ಮದಿಯ ಜೀವನ ದೊರೆಯುವುದು. ಚಿರಾಸ್ತಿಯನ್ನು ಗಳಿಸುವ ಸಾಧ್ಯತೆ ಇದೆ. ನಿಮ್ಮ ನಿರ್ದಿಷ್ಟ ಗುರಿ ತಲುಪಲು ದೇವರ ಕೃಪೆ ಇರುವುದು. ಬಂಧು ಮಿತ್ರರ ಸಹಕಾರದಿಂದ ನಿರ್ದಿಷ್ಟ ಮಟ್ಟದ ಗೆಲುವು ಹಾಗೂ ಯಶಸ್ಸು ಕಾಣುವಿರಿ. ಮನೆಯಲ್ಲಿ ಸಂತೋಷದ ವಾತಾವರಣ ಉಂಟಾಗುವುದು. ಮಕ್ಕಳಿಂದ ಶುಭ ವಾರ್ತೆ ನಿರೀಕ್ಷಿಸಬಹುದು. ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ಉಂಟಾಗುವುದು. ಹಿರಿಯರ ಆಶೀರ್ವಾದ ಪಡೆಯಿರಿ. ನೆಮ್ಮದಿಯ ಬದುಕಿಗಾಗಿ ಶಿವ ಮತ್ತು ಶಕ್ತಿಯ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಪೂರ್ತಿ ಪ್ರಮಾಣದ ಸಮಾಧಾನ ನಿಮಗೆ ದೊರೆಯದು. ಸ್ಥಿರಾಸ್ತಿಗಾಗಿ ಮನೆಯಲ್ಲಿ ಸಹೋದರರೊಡನೆ ಕಿತ್ತಾಟ ನಡೆಸುವ ಸಾಧ್ಯತೆಗಳಿವೆ. ಬಂಧು ಮಿತ್ರರಿಂದ ಕಿರಿಕಿರಿಯ ಮಾತುಗಳನ್ನು ಕೇಳಬೇಕಾಗುವುದು. ಹಣಕಾಸಿನ ವ್ಯವಸ್ಥೆ ಸುಗಮವಾಗಿ ಸಾಗದು. ಕೆಲವು ವಿಚಾರಗಳು ನಿಮ್ಮನ್ನು ಹೈರಾಣಗೊಳಿಸುವುದು. ಸಮಸ್ಯೆಗಳ ನಿವಾರಣೆಗೆ ಶಿವ ಧ್ಯಾನ ಹಾಗೂ ಆಂಜನೇಯನ ಸ್ತುತಿಯನ್ನು ಓದಿ.

ಧನು

ಧನು

ಅಂದುಕೊಂಡ ಕಾರ್ಯದಲ್ಲಿ ವಿಳಂಬ ಉಂಟಾಗುವುದು. ಆರ್ಥಿಕ ಕ್ಷೇತ್ರದಲ್ಲಿ ಕುಸಿತ ಉಂಟಾಗುವುದು. ಹೂಡಿಕೆಗೆ ಸೂಕ್ತ ದಿನವಲ್ಲ. ಯಾರಿಗೂ ಜಾಮೀನು ಸಹಿ ನೀಡಲು ಮುಂದಾಗದಿರಿ. ನಿಮ್ಮ ಬಯಕೆ ಈಡೇರಲು ಕುಲದೇವರ ಆರಾಧನೆ ಹಾಗೂ ಇಷ್ಟ ದೇವರ ಸ್ಮರಣೆಯನ್ನು ಮಾಡಿ.

ಮಕರ

ಮಕರ

ಅಂದು ಕೊಂಡ ಕಾರ್ಯ ನೆರವೇರದು. ಮಾನಸಿಕ ಕಿರಿಕಿರಿ ಕಾಡುವುದು. ಕೆಲವರಿಂದ ಅವಮಾನ ಹಾಗೂ ಅಪವಾದಗಳು ಕೇಳಿಬರುವುದು. ರಾಜಕೀಯ ದಿಗ್ಗಜರಿಗೆ ಒಂದಿಷ್ಟು ಇರಿಸು ಮುರಿಸು ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವಾರಾಧನೆ ಹಾಗೂ ಆಂಜನೇಯನ ಸ್ಮರಣೆ ಮಾಡಿ.

ಕುಂಬ

ಕುಂಬ

ಮನೆಯಲ್ಲಿ ನೆಮ್ಮದಿಯ ವಾತಾವರಣ ಹಾಗೂ ಮಾನಸಿಕ ನೆಮ್ಮದಿಯನ್ನು ಪಡೆಯುವಿರಿ. ಅಂದುಕೊಂಡ ಕಾರ್ಯಗಳು ನೆರವೇರುವುದು. ಕಾರ್ಮಿಕ ವರ್ಗದವರಿಗೆ ಇಂದು ಶುಭ ದಿನ ಎಂದು ಹೇಳಬಹುದು. ಉತ್ತಮ ಹಾಗೂ ಯಶಸ್ವಿ ಬದುಕಿಗಾಗಿ ಆಂಜನೇಯನ ಉಪಾಸನೆಯನ್ನು ಮಾಡಿ. ಒಳ್ಳೆಯ ಫಲಿತಾಂಶ ದೊರೆಯುವುದು.

ಮೀನ

ಮೀನ

ಇಂದು ನಿಮಗೆ ಶುಭ ದಿನ. ನೆಮ್ಮದಿಯ ವಾತಾವರಣವನ್ನು ಅನುಭವಿಸುವಿರಿ. ಬಂಧು ಮಿತ್ರರ ಸಹಕಾರ ದೊರೆಯುವುದು. ನಿರೀಕ್ಷಿತ ಮಟ್ಟದ ಯಶಸ್ಸು ನಿಮಗೆ ದೊರೆಯುವುದು.ಇಂದು ನೀವು ನರಸಿಂಹ ಹಾಗೂ ವಿಷ್ಣುವಿನ ಆರಾಧನೆ ಮಾಡಿದರೆ ಅಂದುಕೊಂಡ ಕಾರ್ಯವು ನೆರವೇರುವುದು.

English summary

rashi-bhavishya-november-18th

ಸಾಮಾನ್ಯವಾಗಿ ಎಲ್ಲರೂ ಶ್ರೀಮಂತರಾಗಿರಬೇಕು ಎಂದು ಬಯಸುತ್ತಾರೆ. ಕೈ ತುಂಬಾ ಹಣ, ಅನೇಕ ಸವಲತ್ತು ಸೌಲಭ್ಯವನ್ನು ಹೊಂದಬೇಕು ಎಂದು ಭಾವಿಸುತ್ತಾರೆ. ಅನೇಕರಲ್ಲಿ ಕೆಲವರಿಗೆ ಗ್ರಹಗತಿಗಳ ಉತ್ತಮ ಸಂಚಾರದಿಂದ ಶ್ರೀಮಂತಿಕೆ ಒದಗಿ ಬರುವುದು. ಇನ್ನೂ ಕೆಲವರು ಅನಾನುಕೂಲದಿಂದ ಆರ್ಥಿಕ ಕುಸಿತ ಹಾಗೂ ನಷ್ಟವನ್ನು ಹೊಂದಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ. ಹಾಗಂತ ಜೀವನ ಪೂರ್ತಿ ಕಷ್ಟದಲ್ಲಿಯೇ ಮುಳುಗಬೇಕಾಗುವುದು ಎಂದರ್ಥವಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತ ಎನ್ನುವುದು ಇದ್ದೇ ಇರುತ್ತದೆ. ಒಮ್ಮೆ ಹಣದ ಹರಿವು ಹೆಚ್ಚಾಗಿದ್ದರೆ, ಇನ್ನೊಮ್ಮೆ ಹಣದ ಹರಿವು ಕಡಿಮೆಯಾಗಿರುತ್ತದೆ. ಎಲ್ಲಾ ಸಮಯದಲ್ಲೂ ಮನಸ್ಸನ್ನು ಸಮತೋಲನದಲ್ಲಿಟ್ಟುಕೊಂಡು ಜೀವನ ನಡೆಸುವುದೇ ಬದುಕು.
Story first published: Saturday, November 18, 2017, 7:01 [IST]