ಶುಕ್ರವಾರದ ದಿನ ಭವಿಷ್ಯ

Posted By: Lekhaka
Subscribe to Boldsky

ಶುಕ್ರವಾರವೆಂದರೆ ಸಾಮಾನ್ಯವಾಗಿ ಹಿಂದೂಗಳಿಗೆ ಒಂದು ಪವಿತ್ರವಾದ ದಿನ. ಅಂದು ಲಕ್ಷ್ಮಿಯ ಆಗಮನ ಆಗುವುದು ಎನ್ನುವ ನಂಬಿಕೆ. ಹಾಗಾಗಿಯೇ ಶುಕ್ರವಾರ ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಮಾಡುತ್ತಾರೆ. ಕೆಲವರು ನಿತ್ಯ ಪೂಜೆ ಮಾಡದಿದ್ದರೂ ಶುಕ್ರವಾರದ ಮೂಜೆಯನ್ನು ತಪ್ಪಿಸುವುದಿಲ್ಲ. ಶುಕ್ರವಾರದ ಈ ಶುಭ ದಿನ ಲಕ್ಷ್ಮಿ ನಿಮಗೆ ಒಲಿಯಲಿ, ನಿಮ್ಮ ಕಷ್ಟಗಳು ದೂರವಾಗಲಿ, ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಲಿ ಎನ್ನುವುದು ಬೋಲ್ಡ್ ಸ್ಕೈ ನ ಆಶಯ.

ಜಾತಕ ಅಥವಾ ಕುಂಡಲಿಗೆ ಅನುಗುಣವಾಗಿ ಕೆಲವು ಬಗೆಯ ಒಳಿತು ಕೆಡುಕುಗಳಾಗುವುದು ಸಹಜ. ಅವು ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ, ಛಲದಿಂದ ಮುನ್ನಡೆಯುವುದು ಜಾಣತನ. ಲಕ್ಷ್ಮಿಯ ವಾರವಾದ ಇಂದು ನಿಮ್ಮ ಭವಿಷ್ಯದಲ್ಲಿ ಯಾವ ಬದಲಾವಣೆ ಉಂಟಾಗುವುದು? ಎನ್ನುವ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಪರಿಶೀಲಿಸಿ.

ಮೇಷ:

ಮೇಷ:

ಇಂದು ನಿಮಗೆ ಶುಭ ದಿನ. ಮಾನಸಿಕವಾಗಿ ನೆಮ್ಮದಿ ಹಾಗೂ ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಮನೆಯಲ್ಲಿ ನೀವು ಕೈಗೊಂಡ ಕೆಲವು ವ್ಯಾಪಾರ ವಹಿವಾಟಿನಲ್ಲಿ ಉತ್ತಮ ಲಾಭ ಗಳಿಸುವಿರಿ. ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಉತ್ತಮ ಪ್ರಗತಿ ಉಂಟಾಗುವುದು. ವಿದ್ಯಾರ್ಥಿಗಳಿಗೂ ಶುಭವಾಗುವುದು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಅವಿವಾಹಿತರಿಗೆ ವಿವಾಹ ಯೋಗವು ಉಂಟಾಗುವುದು. ಉತ್ತಮ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ವೃಷಭ:

ವೃಷಭ:

ಹಲವಾರು ಸಮಸ್ಯೆಗಳು ಇಂದು ನಿಮ್ಮ ಬೆನ್ನೇರಲಿದೆ. ವಿಪರೀತ ಆಯಾಸ ಹಾಗೂ ಅನಾರೋಗ್ಯವು ನಿಮ್ಮನ್ನು ಕಾಡುವುದು. ಮಾನಸಿಕವಾಗಿ ಕಿರಿಕಿರಿಗೆ ಒಳಗಾಗುವಿರಿ. ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಅಷ್ಟಮ ಶನಿ ಇರುವುದರಿಂದ ಅನೇಕ ನಷ್ಟಗಳು ಉಂಟಾಗುವ ಸಾಧ್ಯತೆ ಹೆಚ್ಚು. ಕಲಾವಿದರಿಗೂ ಒಳ್ಳೆಯ ದಿನವಲ್ಲ. ಆಂತರಿಕ ವಿಚಾರವನ್ನು ಯಾರೊಂದಿಗೂ ಹೇಳಿಕೊಳ್ಳಬೇಡಿ. ವಿದೇಶ ಪ್ರಯಾಣದ ಕನಸು ನನಸಾಗದು. ಮಕ್ಕಳಿಗಾಗಿ ಹಣ ವ್ಯಯ ಮಾಡುವಿರಿ. ಯಶಸ್ವಿ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಮಿಥುನ:

ಮಿಥುನ:

ಇಂದು ನಿಮಗೆ ಸಮಾಧಾನದ ವಾತಾವರಣ. ಬಂಧು ಮಿತ್ರರ ಸಹಕಾರ ದೊರೆಯುವುದು. ಮನೆಯಲ್ಲೂ ನೆಮ್ಮದಿಯ ವಾತಾವರಣ ಇರುವುದು. ಉಪನ್ಯಾಸಕ ವೃತ್ತಿಯವರಿಗೂ ಸಮಾಧಾನ ದೊರೆಯುವುದು. ವಿದ್ಯಾರ್ಥಿಗಳಿಗೆ ಸಾಧಾರಣವಾದ ದಿನ. ಮಾಡುತ್ತಿರುವ ವೃತ್ತಿಯನ್ನೇ ಮುಂದುವರಿಸಿ. ಸ್ಟೀಲ್ ಮತ್ತು ಪ್ಲ್ಯಾಸ್ಟಿಕ್ ವಸ್ತುಗಳ ಉತ್ಪಾದನೆ ಮತ್ತು ಮಾರಾಟಗಾರರಿಗೆ ಉತ್ತಮವಾದ ಲಾಭ ಉಂಟಾಗುವುದು. ಉತ್ತಮ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಕರ್ಕ:

ಕರ್ಕ:

ನಿಮ್ಮ ಸುಂದರ ಕನಸುಗಳು ಇಂದು ನೆರವೇರುತ್ತದೆ. ಮನಸ್ಸಿಗೆ ಸಂತೋಷ ಉಂಟಾಗುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಬಂಧು ಮಿತ್ರರೂ ಸಹಕಾರ ನೀಡುವರು. ನೀವು ಅಂದುಕೊಂಡ ಕೆಲಸ ಹಾಗೂ ಗುರಿಯು ನೆರವೇರುವುದು. ಹಣ್ಣು, ಸಗಟು ಹಾಗೂ ಅಣ್ಣ ಪುಟ್ಟ ವ್ಯಾಪಾರಸ್ಥರಿಗೆ ಉತ್ತಮ ಲಾಭ ಉಂಟಾಗುವುದು. ಮಕ್ಕಳಿಂದಲೂ ಶುಭವಾರ್ತೆ ಕೇಳುವಿರಿ. ಉತ್ತಮ ಬದುಕಿಗಾಗಿ ಗಣೇಶ ಮತ್ತು ಆಕ್ತಿಯ ಆರಾಧನೆ ಮಾಡಿ.

ಸಿಂಹ:

ಸಿಂಹ:

ನೀವು ಇಂದು ಆದಷ್ಟು ಜಾಗೃತರಾಗಿರಬೇಕು. ಇಲ್ಲಸಲ್ಲದ ಆರೋಪಗಳು ನಿಮ್ಮ ಬೆನ್ನೇರುವುದು. ಮಾನಸಿಕವಾಗಿ ಗೊಂದಲ ಹಾಗೂ ನೋವು ಉಂಟಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ತೊಂದರೆ ಉಂಟಾಗುವುದು. ನಿರ್ದಿಷ್ಟ ಗುರಿ ತಲುಪುವಲ್ಲಿ ವಿಫಲರಾಗುವಿರಿ. ರಾಹುಕಾಲದಲ್ಲಿ ಪ್ರಯಾಣ ಮಾಡದಿರಿ. ಮನೆಯಿಂದ ಹೊರಡುವಾಗ ದೇವರಿಗೆ ನಮಸ್ಕಾರ ಮತ್ತು ಪ್ರಸಾದವನ್ನು ಪಡೆದು ಹೊರಡಿ. ಸಮಸ್ಯೆಗಳ ನಿವಾರಣೆಗೆ ಗಣೇಶ ಮತ್ತು ಶಕ್ತಿಯ ಆರಾಧನೆ ಮಾಡಿ.

ಕನ್ಯಾ:

ಕನ್ಯಾ:

ಇಂದು ನೀವು ಭಯಪಡುವ ಅಗತ್ಯವಿಲ್ಲ. ನಿಮಗೆ ಇಂದು ಸಾಧಾರಣ ದಿನ ಎಂದು ಹೇಳಬಹುದು. ಸ್ನೇಹಿತರಿಂದ ಜಾಗ್ರತರಾಗಿರಿ. ಅಪವಾದಗಳನ್ನು ಎದುರಿಸಬೇಕಾಗುವುದು. ನಿಮ್ಮ ಕರ್ಮಗಳಿಗನುಗುಣವಾಗಿ ಮಾನಸಿಕ ಕಾಮನೆಗಳು ಈಡೇರುವುದು. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಗುರುವಿನ ಪ್ರಾರ್ಥನೆ ಮಾಡಿ.

ತುಲಾ:

ತುಲಾ:

ಇಂದು ನಿಮಗೆ ಹಣಕಾಸಿನ ವ್ಯವಸ್ಥೆಯು ಸುಗಮವಾಗಿರುವುದು. ಮಾನಸಿಕವಾಗಿಯೂ ನೆಮ್ಮದಿಯಿಂದ ಇರುವಿರಿ. ಅನೇಕ ದಿನಗಳಿಂದ ಬಗೆ ಹರಿಯದ ವ್ಯಾಜ್ಯಗಳು ತೀರ್ಮಾನಗೊಳ್ಳುವುದು. ಸಹೋದರರ ಸಹಕಾರ ದೊರೆಯುವುದು. ನಿರ್ದಿಷ್ಟ ಗುರಿಯನ್ನು ತಲುಪುವ ನಿಮ್ಮ ಆಸೆಯು ನೆರವೇರುವುದು. ಕನಸು ನನಸಾಗುವುದು. ಮಕ್ಕಳಿಂದ ಶುಭವಾರ್ತೆಯನ್ನು ನಿರೀಕ್ಷೆ ಮಾಡಬಹುದು. ಉತ್ತಮ ಬದುಕಿಗಾಗಿ ಗುರುವಿನ ಆರಾಧನೆ ಹಾಗೂ ಶಕ್ತಿಯ ಉಪಾಸನೆಯನ್ನು ಮಾಡಿ.

ವೃಶ್ಚಿಕ:

ವೃಶ್ಚಿಕ:

ಸಮಧಾನದ ಬದುಕನ್ನು ಪೂರ್ತಿ ಪ್ರಮಾಣದಲ್ಲಿ ನಿರೀಕ್ಷೆ ಮಾಡದಿರಿ. ಮಾಡುತ್ತಿರುವ ಕೆಲಸವನ್ನು ಸೂಕ್ತ ರೀತಿಯಲ್ಲಿ ಮುಂದುವರಿಸಿ. ಅನ್ಯರ ಮಾತಿಗೆ ಕಿವಿಕೊಡದಿರಿ. ಹಾಗೆಯೇ ಮೂರನೇ ವ್ಯಕ್ತಿಯ ವಿಚಾರದಲ್ಲಿ ನೀವು ಮೂಗು ತೂರಿಸುವುದು ಅಥವಾ ಮಧ್ಯಸ್ಥಿಕೆ ವಹಿಸುವ ಕಾರ್ಯಕ್ಕೆ ಹೋಗದಿರಿ. ಸ್ಟೀಲ್ ಮತ್ತು ತೈಲೋದ್ಯಮಗಳ್ಲಲಿ ಕೆಲಸ ಮಾಡುವವರಿಗೆ ತೊಂದರೆ ಹಾಗೂ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಹೆದರಿಕೆಗೆ ಒಳಗಾಗದೆ ಸಮಸ್ಯೆಗಳ ನಿವಾರಣೆಗೆ ಗಣೇಶನ ಆರಧಾನೆ ಹಾಗೂ ಲಕ್ಷ್ಮಿಯ ಉಪಾಸನೆ ಮಾಡಿ.

ಧನು:

ಧನು:

ಬೇಡದ ಆರೋಪಗಳು ನಿಮ್ಮ ಬೆನ್ನು ಹತ್ತುತ್ತದೆ. ವಿಪರೀತ ಆಯಾಸ ಹಾಗೂ ಅನಾರೋಗ್ಯವು ಮಾನಸಿಕವಾಗಿ ಕಿರಿಕಿರಿ ಉಂಟುಮಾಡುವುದು. ಕೆಲವರು ಬೆನ್ನು ಅಥವಾ ಕಾಲಿಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗುವುದು. ಪತ್ನಿಗಾಗಿ ಹಣ ವ್ಯಯಿಸುವ ಸಾಧ್ಯತೆಗಳಿರುತ್ತವೆ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಮಕರ:

ಮಕರ:

ಸಮಾಧಾನದ ಬದುಕು ನಿಮ್ಮದಾಗುವುದು. ಬಂಧುಗಳು ಶುಭ ವಾರ್ತೆಯನ್ನು ಹೊತ್ತು ತರುತ್ತಾರೆ. ನೆಮ್ಮದಿಯನ್ನು ಕಾಣುವಿರಿ. ಆಂತರಿಕ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಬ್ಯಾಂಕ್ ನೌಕರರು ಮೋಸದ ಜಾಲಕ್ಕೆ ಒಳಗಾಗುವ ಸಾಧ್ಯತೆಗಳಿವೆ. ನಿರ್ದಿಷ್ಟ ಗುರಿಯನ್ನು ತಲುಪಲಾರಿರಿ. ಹಲವಾರು ದಿನಗಳಿಂದ ಕಂಡ ಕನಸುಗಳು ನನಸಾಗದು. ಸಂತೋಷದ ಬದುಕಿಗಾಗಿ ಗಣೇಶನ ಸ್ತುತಿ, ಈಶ್ವರ ಮತ್ತು ದೇವಿಯ ಆರಾಧನೆ ಮಾಡಿ.

ಕುಂಬ:

ಕುಂಬ:

ಇಂದು ಬ್ಯಾಂಕ್ ನೌಕರರಿಗೆ ಉತ್ತಮವಾದ ದಿನ. ಅಂದುಕೊಂಡ ಕೆಲಸ ಹಾಗೂ ಗುರಿಯು ಸಫಲತೆಯನ್ನು ಕಾಣುವುದು. ಮಹಿಳೆಯರಿಗೂ ಉದ್ಯೋಗ ಕ್ಷೇತ್ರದಲ್ಲಿ ಒಳಿತಾಗುವುದು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮವಾದ ದಿನ. ಕೆಲವರಿಗೆ ಸರ್ಕಾರದಿಂದ ಭಡ್ತಿ ಸಿಗುವ ಸಾಧ್ಯತೆಗಳಿವೆ. ಇನ್ನಷ್ಟು ಒಳಿತಿಗಾಗಿ ಗಣೇಶನ ಆರಾಧನೆ ಹಾಗೂ ಕುಲದೇವರ ಸ್ಮರಣೆಯನ್ನು ಮಾಡಿ.

ಮೀನ:

ಮೀನ:

ನಿರೀಕ್ಷಿತ ಮಟ್ಟದ ಯಶಸ್ಸನ್ನು ಕಾಣುವಿರಿ. ಜೊತೆಗೆ ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಅಂತೆಯೇ ಬಂಧು ಮಿತ್ರರಿಂದ ಸಹಕಾರವೂ ದೊರೆಯುವುದು. ಮಹಿಳಾ ಉದ್ಯೋಗಿಗಳಿಗೆ ಭಡ್ತಿ ಹಾಗೂ ಪುರುಷರಿಗೆ ಸಮಾಧಾನಕರವಾದ ಲಾಭ ಉಂಟಾಗುವುದು. ಸುಂದರ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

Read more about: astrology
English summary

ಶುಕ್ರವಾರದ ದಿನ ಭವಿಷ್ಯ

rashi bhavishya november 17th
Story first published: Friday, November 17, 2017, 7:00 [IST]