ಗುರುವಾರದ ದಿನ ಭವಿಷ್ಯ

Posted By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 07-12-2017 - Your Day Today - Oneindia Kannada

ಜೀವನದಲ್ಲಿ ಉತ್ತಮ ಸ್ಥಾನ ಮಾನ ಪಡೆದುಕೊಳ್ಳಬೇಕೆಂದರೆ ನಮ್ಮ ವೈಯಕ್ತಿಕ ಜೀವನ ಹಾಗೂ ವರ್ತನೆಯೂ ಪ್ರಮುಖ ಸ್ಥಾನವನ್ನು ವಹಿಸುತ್ತದೆ. ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಇರಬೇಕು. ಯಾವ ಸಂಬಂಧವಾದರೂ ಸರಿ ನಮ್ಮ ಅನಿವಾರ್ಯತೆಗಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡಬಾರದು.

ಹಾಗೊಮ್ಮೆ ಮಾಡಿದರೆ ನಮ್ಮೊಡನೆ ಆ ಸಂಬಂಧ ಹೆಚ್ಚು ದಿನಗಳಕಾಲ ಉಳಿಯದು. ಮುಗ್ಧ ಮನಸ್ಸಿನಿಂದ ತೋರುವ ಪ್ರೀತಿ ಹಾಗೂ ನಿಷ್ಕಲ್ಮಶವಾದ ಕಾಳಜಿ ಸದಾ ನಮ್ಮನ್ನು ರಕ್ಷಿಸುತ್ತವೆ. ಗುರುವಾರವಾದ ಈ ಶುಭದಿನದಂದು ನಿಮ್ಮ ಸಂಬಂಧಗಳು ಯಾವೆಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತವೆ? ನಿಮ್ಮ ಭವಿಷ್ಯದ ಬದಲಾವಣೆಗಳು ಯಾವವು? ಎನ್ನುವುದನ್ನು ಸಂಕ್ಷಿಪ್ತವಾಗಿ ಅರಿಯಬೇಕೆಂದರೆ ಈ ಮುಂದೆ ನೀಡಿರುವ ವಿವರಣೆಯನ್ನು ಗಮನಿಸಿ...

ಮೇಷ

ಮೇಷ

ಇಂದು ನಿಮಗೆ ಸಮಾಧಾನಕರವಾದ ದಿನ. ಮಹಿಳೆಯರಿಗೆ ಮಾಡುತ್ತಿರುವ ಉದ್ಯೋಗದಲ್ಲಿ ಯಶಸ್ಸು ದೊರೆಯುವುದು. ಸೌಂದರ್ಯವರ್ಧಕ ಉತ್ಪನ್ನಗಳ ತಯಾರಕರಿಗೆ ಲಾಭ ಉಂಟಾಗುವುದು. ವಿದೇಶ ಯಾನದ ಕನಸು ಹಲವರಿಗೆ ನೆರವೇರುವುದು. ಇಂಜಿನೀಯರ್ ವೃತ್ತಿ ಹುಡುಕುತ್ತಿರುವವರಿಗೆ ಉದ್ಯೋಗ ಪ್ರಾಪ್ತಿಯಾಗುವುದು. ಪತ್ರಕರ್ತರಿಗೆ ಅನುಕೂಲವುಂಟಾಗುವುದು. ಇನ್ನಷ್ಟು ಯಶಸ್ಸು ಹಾಗೂ ಸಂತೋಷಕರವಾದ ಜೀವನಕ್ಕೆ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ವೃಷಭ

ವೃಷಭ

ನಿಮ್ಮ ಮನಸ್ಸಿನ ಆಳದ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ಮಾನ ಹರಾಜು ಆಗುವ ಸಾಧ್ಯತೆಗಳಿವೆ. ಆದಷ್ಟು ಎಚ್ಚರಿಕೆಯಿಂದ ಇರಿ. ಸ್ತ್ರೀಯರ ವಿಚಾರದಲ್ಲಿ ಜಾಗರೂಕರಾಗಿರಿ. ರಾಜಕಾರಣಿಗಳಿಗೆ ಹಿನ್ನಡೆ. ಇಲ್ಲಸಲ್ಲದ ಆರೋಪ ಕೇಳಿಬರುವುದು. ಒಂದಿಷ್ಟು ಮಟ್ಟದ ಸಮಾಧಾನ ಪಡೆದುಕೊಳ್ಳಲು ವಿಫಲ ರಾಗುವಿರಿ. ಕಬ್ಬಿಣ, ಬಟ್ಟೆ ಸೇರಿದಂತೆ ಎಲ್ಲಾ ಬಗೆಯ ವ್ಯಾಪಾರ ವಹಿವಾಟಿನಲ್ಲಿ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಹಲವಾರು ಬಗೆಯ ಅಡೆತಡೆಗಳನ್ನು ಅನುಭವಿಸಬೇಕಾಗುವುದು. ಸ್ನೇಹಿತರೊಂದಿಗೆ ಘರ್ಷಣೆ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆಗೆ ಶಿವ ಹಾಗೂ ಗುರುವಿನ ಆರಾಧನೆ ಮಾಡಿ.

ಮಿಥುನ

ಮಿಥುನ

ನಿಮಗೆ ಇಂದು ಸಾಮಾನ್ಯವಾದಂತಹ ದಿನ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ಬಂಧು ಮಿತ್ರರ ನಡುವೆ ಇದ್ದ ಕಲಹಗಳು ದೂರಾಗುವ ಸಾಧ್ಯತೆಗಳಿವೆ. ಮಕ್ಕಳಿಂದ ಶುಭ ಸಮಾಚಾರ ಕೇಳುವಿರಿ. ಅನೇಕ ದಿನಗಳಿಂದ ನಿರ್ಧರಿಸಲ್ಪಟ್ಟ ವಿಚಾರಗಳು ನಿಮ್ಮನ್ನು ಹೈರಾಣಗೊಳಿಸುವುದು. ಜೀವನದಲ್ಲಿರುವ ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಶಿವ ಮತ್ತು ಗುರುವಿನ ಆರಾಧನೆ ಮಾಡಿ.

ಕರ್ಕ

ಕರ್ಕ

ಇಂದು ನಿಮಗೆ ಶುಭ ದಿನ. ವಿವಾಹಕ್ಕೆ ಇದ್ದ ಅಡೆತಡೆಗಳು ದೂರ ಆಗುವವು. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ನ್ಯಾಯಾಂಗ ಕ್ಷೇತ್ರದಲ್ಲಿ ಜಯ ಗಳಿಸುವಿರಿ. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭ ಉಂಟಾಗುವುದು. ಖಾಸಗಿ ಮತ್ತು ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಉತ್ತಮ ಲಾಭ ಉಂಟಾಗುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ಸಿಂಹ

ಸಿಂಹ

ನಿಮಗೆ ಇಂದು ಮಾನಸಿಕ ಕಿರಕಿರಿ ಉಂಟಾಗುವುದು. ಸ್ಥಿರಾಸ್ತಿಯಿಂದ ಲಾಭ ಉಂಟಾಗದು. ಅನೇಕ ದಿನಗಳಿಂದ ಅಂದುಕೊಂಡ ಕಾರ್ಯಗಳು ನೆರವೇರದೆ ಕಿರಿಕಿ ಉಂಟಾಗುವುದು. ಮನೆಯಲ್ಲಿ ಸಮಾಧಾನ ಸಿಗದು. ನೀವು ಮಾಡುತ್ತಿರುವ ಉದ್ಯೋಗವನ್ನು ಬದಲಿಸದಿರಿ. ಆ ಕೆಲಸದಲ್ಲಿಯೇ ಮುಂದುವರಿಯಿರಿ. ಮಾಡುವ ಕೆಲಸದಲ್ಲಿ ಪರಿಶ್ರಮವನ್ನು ತೋರಿ. ಆಧ್ಯಾತ್ಮಿಕ ಚಿಂತಕರಿಗೂ ಅಪಮಾನ ಉಂಟಾಗುವ ಸಾಧ್ಯತೆಗಳಿವೆ. ಜೀವನದಲ್ಲಿ ಕಷ್ಟಗಳ ನಿವಾರಣೆ ಹಾಗೂ ಸಂತೋಷದಾಯಕ ಬದುಕಿಗಾಗಿ ವಿಷ್ಣು ಮತ್ತು ವೆಂಟಕೇಶ್ವರನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಸಮಾಧಾನಕರವಾದ ಬದುಕನ್ನು ನೀವು ಕಾಣುವಿರಿ. ಬಂಧುಮಿತ್ರರ ಸಹಕಾರವನ್ನು ನೀವು ನಿರೀಕ್ಷಿಸಬಹುದು. ನಿರ್ಧರಿಸಿದ ವಿಚಾರಗಳನ್ನು ಕೈಬಿಡದಿರಿ. ಮಾಡುತ್ತಿರುವ ಕೆಲಸವನ್ನು ಮುಂದುವರಿಸಿ. ಪ್ರಗತಿಯತ್ತ ಹೆಜ್ಜೆ ಇಡಿ. ಇನ್ನಷ್ಟು ಪ್ರಗತಿಯುತ ಜೀವನಕ್ಕಾಗಿ ವಿಷ್ಣುವಿನ ಆರಾಧನೆ ಮಾಡಿ.

ತುಲಾ

ತುಲಾ

ಇಂದು ನಿಮಗೆ ಅದೃಷ್ಟಕರವಾದ ದಿನ. ಯಾವುದೇ ಕೆಲಸವನ್ನು ಕೈಗೊಂಡರೂ ಯಶಸ್ಸು ಹಾಗೂ ಲಾಭವನ್ನು ಪಡೆದುಕೊಳ್ಳುವಿರಿ. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಮತ್ತು ಧಾರ್ಮಿಕ ಚಿಂತಕರಿಗೆ ಅನುಕೂಲವುಂಟಾಗುವುದು. ಅನಿರೀಕ್ಷಿತವಾದ ದೂರದ ಪ್ರಯಾಣ ಕೈಗೊಳ್ಳಬೇಕಾಗುವ ಸಾಧ್ಯತೆಗಳಿರುತ್ತವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯುತ ಜೀವನಕ್ಕಾಗಿ ವಿಷ್ಣುವಿನ ಆರಾಧನೆ ಹಾಗೂ ಗುರುವಿನ ಸ್ಮರಣೆಯನ್ನು ಮಾಡಿ.

ವೃಶ್ಚಿಕ

ವೃಶ್ಚಿಕ

ನಿಮಗೆ ಶನಿ ಪ್ರಭಾವ ಮುಂದಿವರಿಯುತ್ತಿದೆ. ಆದಷ್ಟು ಜಾಗರೂಕತೆಯಲ್ಲಿರಬೇಕು. ಯಾವುದೇ ಜಗಳಕ್ಕೆ ಮುಂದಾಗದಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ನೀಡಿ. ಬಂಧು ಮಿತ್ರರಿಂದ ನಿರೀಕ್ಷಿತ ಸಹಕಾರ ದೊರೆಯದು. ತಂದೆತಾಯಿಯ ಆಶೀರ್ವಾದ ಲಭಿಸುವುದು. ಸ್ಥಿರಾಸ್ತಿಯಿಂದ ಲಾಭಾಂಶ ದೊರೆಯದು. ಸಮಸ್ಯೆಗಳ ನಿವಾರಣೆಗೆ ವಿಷ್ಣು ಮತ್ತು ಶಕ್ತಿಯ ಆರಾಧನೆ ಮಾಡಿ.

ಧನು

ಧನು

ವಿಪರೀತವಾದ ಆಯಾಸ ಹಾಗೂ ಅನಾರೋಗ್ಯ ನಿಮ್ಮನ್ನು ಕಾಡುವುದು. ಇಲ್ಲ ಸಲ್ಲದ ಆರೋಪಗಳು ನಿಮ್ಮ ಬೆನ್ನೇರುವ ಸಾಧ್ಯತೆಗಳಿವೆ. ನೀವು ಮಾಡದ ತಪ್ಪಿಗೆ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಯಾರೊಂದಿಗೂ ಜಗಳ ಅಥವಾ ಮುನಿಸನ್ನು ತೋರದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಆಂಜನೇಯನ ಆರಾಧನೆ ಮತ್ತು ಗುರುವಿನ ಸ್ಮರಣೆಯನ್ನು ಮಾಡಿ.

 ಮಕರ

ಮಕರ

ಮನಸ್ಸಿಗೆ ಅಷ್ಟು ಸಮಾಧಾನ ಸಿಗದು. ಕಲೆ, ಸಂಗೀತ, ನೃತ್ಯಗಳಲ್ಲಿ ಇರುವವರು ಸರಸ್ವತಿಯ ಆರಾಧನೆ ಮಾಡಿದರೆ ಶುಭವಾಗುವುದು. ಬಂಧುಗಳು ಅಗಲಿದ ವಾರ್ತೆಯನ್ನು ಕೇಳುವಿರಿ. ಅನಾರೋಗ್ಯದ ಸಮಸ್ಯೆ ನಿಮ್ಮನ್ನು ಹೈರಾಣ ಗೊಳಿಸುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದಾಯಕ ಬದುಕಿಗಾಗಿ ಶಕ್ತಿಯ ಉಪಾಸನೆ ಹಾಗೂ ಶಿವನ ಆರಾಧನೆ ಮಾಡಿ.

ಕುಂಬ

ಕುಂಬ

ಇಂದು ನೀವು ಸಮಾಧಾನಕರವಾದ ಬದುಕನ್ನು ಕಾಣುವಿರಿ. ಬಂಧು ಮಿತ್ರರಿಂದಲೂ ನಿರೀಕ್ಷಿತ ಸಹಕಾರವನ್ನು ಪಡೆದುಕೊಳ್ಳಬಹುದು. ನಿಮ್ಮ ಸಮಸ್ಯೆಗಳು ನಿವಾರಣೆ ಹೊಂದುವುದು. ಮಾಡುತ್ತಿರುವ ಕೆಲಸದಲ್ಲಿ ಅಲ್ಪ ಪ್ರಮಾಣದ ಲಾಭ ಉಂಟಾಗುವುದು. ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣುವರು. ಚಿಕ್ಕವರಿಂದ ಹಿಡಿದು ವೃದ್ಧರ ವರೆಗೂ ಎಲ್ಲರೂ ಶಿವ ಮತ್ತು ಗುರುವಿನ ಆರಾಧನೆ ಮಾಡಿ.

ಮೀನ

ಮೀನ

ಸುಂದರವಾದ ಜೀವನಕ್ಕೆ ನೀವು ಸಾಕ್ಷಿಯಾಗುವಿರಿ. ಬಂಧು ಮಿತ್ರರಿಂದ ಸಹಕಾರ ದೊರೆಯುವುದು. ಸಹೋದರರೊಂದಿಗೆ ದೂರದ ಪ್ರಯಾಣ ಮಾಡುವಿರಿ. ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿ ಮತ್ತು ಹಣಗಳ ಉಡುಗೊರೆ ದೊರೆಯುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ದೇವಿಯ ಆರಾಧನೆ ಹಾಗೂ ಗುರುವಿನ ಸ್ಮರಣೆ ಮಾಡಿ.

English summary

rashi-bhavishya-December 7th

Know what astrology and the planets have in store for you today. Choose your zodiac sign and read the details...