ಭಾನುವಾರದ ದಿನ ಭವಿಷ್ಯ

By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 03-12-2017 - Your Day Today - Oneindia Kannada

ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಹಾಗೊಮ್ಮೆ ಶಾಶ್ವತವಾಗಿರುವುದು ಎಂದರೆ ನಾವು ಮಾಡಿದ ಒಳ್ಳೆಯ ಕೆಲಸಗಳು ಹಾಗೂ ಧಾನ ಧರ್ಮ. ಹಾಗಾಗಿ ಪ್ರತಿಯೊಬ್ಬರು ಜೀವನದಲ್ಲಿ ಏನು ಸಾಧನೆ ಮಾಡಲಿಲ್ಲವೆಂದಾದರೂ ತೊಂದರೆ ಇಲ್ಲ. ಜೀವಿತಾವಧಿಯಲ್ಲಿ ಆದಷ್ಟು ಧಾನ-ಧರ್ಮ ಮಾಡುವುದರ ಮೂಲಕ ಪುಣ್ಯವನ್ನು ಗಳಿಸಬೇಕು. ಅದರಿಂದಲೇ ನಮ್ಮ ಮಕ್ಕಳು ಹಾಗೂ ಮರಿಮಕ್ಕಳಿಗೂ ಒಳ್ಳೆಯದಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಶನಿವಾರವಾದ ಇಂದು ನಿಮ್ಮ ಪಾಪ-ಪುಣ್ಯಗಳಿಗೆ ಅನುಗುಣವಾಗಿ ಯಾವೆಲ್ಲಾ ಫಲಾಫಲಗಳನ್ನು ಅನುಭವಿಸಲಿದ್ದೀರಿ ಎನ್ನುವ ವಿವರಣೆಯನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಹಾಗಾದರೆ ಇನ್ನೇಕೆ ತಡ? ಈ ಮುಂದೆ ನೀಡಿರುವ ರಾಶಿ ಭವಿಷ್ಯವನ್ನು ಓದಿ, ಇಂದಿನ ದಿನ ಭವಿಷ್ಯವನ್ನು ಅರಿಯಿರಿ...

ಮೇಷ

ಮೇಷ

ಸುಂದರವಾದ ಜೀವನವನ್ನು ನೀವು ಕಾಣುವಿರಿ. ಅನೇಕ ದಿನದಿಂದ ಪರಿಹಾರವಾಗದ ವ್ಯಾಜ್ಯಗಳು ತೀರ್ಮಾನಗೊಳ್ಳುವುದು. ನ್ಯಾಯವು ನಿಮ್ಮ ಕಡೆ ಆಗುವುದು. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಅಂದುಕೊಂಡ ಕೆಲಸವನ್ನು ಎಡಬಿಡದೆ ಮಾಡಿದಲ್ಲಿ ಉತ್ತಮ ಫಲಿತಾಂಶ ಲಭಿಸುವುದು. ಮಕ್ಕಳ ಮಾತನ್ನು ಅಲಕ್ಷಿಸಬೇಡಿ. ಸ್ಥಿರಾಸ್ತಿ ಖರೀದಿಯ ಕುರಿತು ಸ್ನೇಹಿತರಲ್ಲಿ ಚರ್ಚಿಸುವಿರಿ. ವಿದ್ಯಾರ್ಥಿಗಳಿಗೆ ಶುಭದಿನ. ಉತ್ತಮ ಭವಿಷ್ಯ ಹಾಗೂ ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಹಾಗೂ ಆಂಜನೇಯನ ಉಪಾಸನೆ ಮಾಡಿ.

ವೃಷಭ

ವೃಷಭ

ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಆಂತರಿಕ ವಿಚಾರವನ್ನು ಬೇರೆಯವರೊಂದಿಗೆ ಹಂಚಿಕೊಳ್ಳದಿರಿ. ಶ್ರಮಪಟ್ಟು ಮಾಡಿದ ಕೆಲಸಗಳಿಗೆ ಉತ್ತಮ ಫಲಿತಾಂಶ ದೊರೆಯುವುದು. ಪ್ರೇಮಿಗಳಿಗೆ ಪ್ರೇಮ ವೈಫಲ್ಯ ಉಂಟಾಗುವ ಸಾಧ್ಯತೆಗಳಿವೆ. ಸಹೋದರರ ನಡುವೆ ಕಲಹ ಉಂಟಾಗುವ ಸಾಧ್ಯತೆಗಳಿವೆ. ಆರೋಗ್ಯದ ಕುರಿತು ಕೊಂಚ ಕಾಳಜಿವಹಿಸಬೇಕು. ಒಂದಾದ ಮೇಲೊಂದರಂತೆ ಸಮಸ್ಯೆಗಳು ನಿಮ್ಮನ್ನು ಕಾಡುವುದು. ಆದಷ್ಟು ಸಮಾಧಾನಚಿತ್ತದಿಂದಲೇ ಎಲ್ಲವನ್ನೂ ಸ್ವೀಕರಿಸಬೇಕಾಗುವುದು. ರಕ್ತಕ್ಕೆ ಸಂಬಂಧಿಸಿದ ವ್ಯಾದಿ ಕಾಡಬಹುದು. ವಿದ್ಯಾರ್ಥಿಗಳಿಗೆ ಹಿನ್ನೆಡೆ ಉಂಟಾಗುವದು. ಉತ್ತಮ ಭವಿಷ್ಯಕ್ಕಾಗಿ ಆಂಜನೇಯನ ಆರಾಧನೆ ಮಾಡಿ.

ಮಿಥುನ

ಮಿಥುನ

ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಹೆಣ್ಣುಮಕ್ಕಳಿಗೆ ಒಂದು ರೀತಿಯ ಮಾನಸಿಕ ಕಿರಿಕಿರಿ ಉಂಟಾಗಬಹುದು. ಬಂಧುಮಿತ್ರರು ಕೆಲವು ಆರೋಪಗಳನ್ನು ನಿಮ್ಮ ಮೇಲೆ ಹೇರಬಹುದು. ಅನೇಕ ದಿನಗಳಿಂದ ತೀರ್ಮಾನಿಸಿಕೊಂಡ ಕೆಲಸಗಳು ಪೂರ್ಣಗೊಳ್ಳದೆ ಹಾಗೆ ಉಳಿಯುವುದು. ತಾಂತ್ರಿಕ ಕೆಲಸದಲ್ಲಿರುವವರಿಗೆ ಹಿನ್ನೆಡೆ ಉಂಟಾಗುವ ಸಾಧ್ಯತೆ ಇದೆ. ಮೀನು ವ್ಯಾಪಾರಿಗಳಿಗೆ ಉತ್ತಮ ಲಾಭ ಉಂಟಾಗುವುದು. ಯುವತಿಯರಿಗೆ ಮಾಡುವ ಕೆಲಸದಲ್ಲಿ ಸ್ವಲ್ಪ ಪ್ರಮಾಣದ ಯಶಸ್ಸು ದೊರೆಯುವುದು. ವಿದ್ಯಾರ್ಥಿಗಳಿಗೆ ಸಾಮಾನ್ಯವಾದಂತಹ ದಿನ. ಇನ್ನಷ್ಟು ಯಶಸ್ಸು ಹಾಗೂ ಉತ್ತಮ ಭವಿಷ್ಯಕ್ಕಾಗಿ ಶಿವನ ಆರಾಧನೆ ಮಾಡಿ.

 ಕರ್ಕ

ಕರ್ಕ

ಇಂದು ನಿಮಗೆ ಅತ್ಯುತ್ತಮವಾದ ದಿನವಾಗಲಿದೆ. ಇಷ್ಟುದಿನ ಅನುಭವಿಸಿದ ಕಿರಿಕಿರಿಗಳಿಗೆ ಇಂದು ಸಮಾಧಾನ ದೊರೆಯುವುದು. ತಂದೆ ತಾಯಿಗಳ ಆಶೀರ್ವಾದ ಹಾಗೂ ಸಹಕಾರದಿಂದ ಹೊಸ ಉದ್ಯೋಗವನ್ನು ಪ್ರಾರಂಭಿಸುವ ಸಾಧ್ಯತೆಗಳಿವೆ. ಹಣದ ವ್ಯಯ ಮಾಡುವಾಗ ಆದಷ್ಟು ಕಾಳಜಿ ವಹಿಸಿ. ಉಳಿದ ಕೆಲಸಗಳಲ್ಲಿ ಒಳ್ಳೆಯ ಫಲಿತಾಂಶ ಕಾಣಲಿದ್ದೀರಿ. ಇನ್ನಷ್ಟು ಪ್ರಗತಿ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಸಿಂಹ

ಸಿಂಹ

ಈ ರಾಶಿಯವರು ಆದಷ್ಟು ಆರೋಗ್ಯದ ಬಗ್ಗೆ ಹೆಚ್ಚು ಚಿಂತನೆ ಹಾಗೂ ಕಾಳಜಿ ವಹಿಸಬೇಕು. ಬಂಧು ಮಿತ್ರರಿಂದ ಅಸಮಧಾನ ಉಂಟಾಗುವುದು. ಹಿತಶತ್ರುಗಳಿಂದ ತೊಂದರೆ ಉಂಟಾಗುವುದು. ಕೆಲವರು ನಿಮ್ಮ ದಾಂಪತ್ಯದಲ್ಲಿ ಹುಳಿ ಹಿಂಡುವ ಸಾಧ್ಯತೆಗಳಿವೆ. ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಗಳ ಮಾತಿಗೆ ಕಿವಿಕೊಡದಿರಿ. ರಾಜಕೀಯ ಕ್ಷೇತ್ರದಲ್ಲೂ ಹಿನ್ನೆಡೆ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

 ಕನ್ಯಾ

ಕನ್ಯಾ

ಬಂಧುಗಳಿಂದ ಸಕಾರಾತ್ಮಕ ವರ್ತನೆ ಕಾಣುವಿರಿ. ಸಮಾಧಾನದ ಬದುಕು ನಿಮ್ಮದಾಗಲಿದೆ. ಮಕ್ಕಳಿಂದ ಧನಾತ್ಮಕ ವರ್ತನೆ ಹಾಗೂ ಶುಭ ಸಮಾಚಾರವನ್ನು ಕೇಳಲಿದ್ದೀರಿ. ಹಿರಿಯರ ಆಶೀರ್ವಾದವೂ ದೊರೆಯುವುದು. ಸ್ಥಿರಾಸ್ತಿಯಿಂದ ಕೊಂಚ ಲಾಭ ಉಂಟಾಗುವುದು. ಚಿನ್ನವನ್ನು ಖರೀದಿ ಮಾಡಲಿದ್ದೀರಿ. ಸರ್ಣ ಮಾರಾಟಗಾರರಿಗೆ ಉತ್ತಮ ಲಾಭ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ಗಣೇಶ ಮತ್ತು ಶಿವನ ಆರಾಧನೆ ಮಾಡಿ.

ತುಲಾ

ತುಲಾ

ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ. ಮನಸ್ಸಿಗೂ ಒಂದಿಷ್ಟು ಸಮಾಧಾನ ಲಭಿಸುವುದು. ತಂದೆತಾಯಿಯ ಆಶೀರ್ವಾದ ಹಾಗೂ ಸಹಕಾರದಿಂದ ಹೊಸ ಉದ್ಯೋಗ ಅಥವಾ ವ್ಯವಹಾರಕ್ಕೆ ಮುಂದಾಗಲಿದ್ದೀರಿ. ಅನಿವಾರ್ಯವಾಗಿ ದೂರದ ಪ್ರಯಾಣ ಮಾಡುವಿರಿ. ಆ ಪ್ರಯಾಣದಿಂದ ನಿಮಗೆ ಲಾಭ ಉಂಟಾಗುವುದು. ಬಟ್ಟೆ, ಪೆಟ್ರೋಲ್ ಮತ್ತು ತೈಲ ವ್ಯಾಪಾರಿಗಳಿಗೆ ಉತ್ತಮ ಲಾಭ ಹಾಗೂ ಅನುಕೂಲ ಉಂಟಾಗುವುದು. ಇನ್ನಷ್ಟು ಯಶಸ್ಸು ಹಾಗೂ ಸಮಾಧಾನದ ಬದುಕಿಗೆ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಆರ್ಥಿಕ ಸ್ಥಿತಿಯಲ್ಲಿ ತೊಂದರೆ ಉಂಟಾಗುವುದು. ಬಂಧು ಮಿತ್ರರಿಂದಲೂ ಕಿರಿಕಿರಿ ಉಂಟಾಗುವುದು. ಬಹುದಿನಗಳಿಂದ ಕೈಗೊಂಡ ತೀರ್ಮಾನದಲ್ಲಿ ಏರು ಪೇರು ಉಂಟಾಗುವುದು. ಇದು ನಿಮ್ಮ ಮಾನಸಿಕ ಸ್ಥಿತಿಯನ್ನು ತಲ್ಲಣಗೊಳಿಸುವ ಸಾಧ್ಯತೆ ಇದೆ. ಆದಷ್ಟು ಕಾಳಜಿಯಿಂದ ಇರಬೇಕಾಗುವುದು. ಸ್ತ್ರೀಯರಿಂದ ಅವಮಾನ ಹಾಗೂ ಆರೋಪಗಳನ್ನು ಎದುರಿಸ ಬೇಕಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ಶಕ್ತಿಯ ಆರಾಧನೆ ಮಾಡಿ.

ಧನು

ಧನು

ಈ ರಾಶಿಯವರು ಆದಷ್ಟು ಕಾಳಜಿಯಿಂದ ಇರಬೇಕು. ಹತ್ತಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ವಿಪರೀತ ಆರೋಗ್ಯ ಸಮಸ್ಯೆ ಹಾಗೂ ಉದ್ಯೋಗದಲ್ಲಿ ನಷ್ಟ ಉಂಟಾಗುವುದು. ಹಿತ ಶತ್ರುಗಳು ಮೋಸ ಮಾಡುವ ಲಕ್ಷಣಗಳಿವೆ. ನೂರಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಸಮಸ್ಯೆಗಳ ಪರಿಹಾರ ಹಾಗೂ ಉತ್ತಮ ಭವಿಷ್ಯಕ್ಕಾಗಿ ಶಿವನಿಗೆ ಬಿಲ್ವಾರ್ಚನೆ ಮಾಡಿ.

ಮಕರ

ಮಕರ

ಸಾಡೇಸಾತ್ ಶನಿಯ ಪ್ರಭಾವ ಇರುವುದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯದು. ಸ್ಥಿರಾಸ್ತಿಗಾಗಿ ಸಹೋದರರಲ್ಲಿ ಜಗಳ ಉಂಟಾಗಬಹುದು. ಕಾರ್ಮಿಕರಿಗೆ ಅಪಮಾನ ಉಂಟಾಗುವ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯಕ್ಕಾಗಿ ಹಣವನ್ನು ವ್ಯಯಿಸಬೇಕಾಗುವುದು. ಬಂಧುಮಿತ್ರರಿಂದ ಕಿರಿಕಿರಿ. ಹೀಗೆ ಹತ್ತಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದಾಯಕ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಕುಂಬ

ಕುಂಬ

ಈ ರಾಶಿಯವರಿಗೆ ಇಂದು ಸಮಾಧಾನಕರವಾದ ದಿನ. ಸಹೋದ್ಯೋಗಿಗಳಿಂದ ಅನುಕೂಲ ಉಂಟಾಗುವುದು. ಪತ್ರಕರ್ತರಿಗೆ ಜಯ. ಮನೆಯಲ್ಲಿ ಸಂತೋಷದ ವಾತಾವರಣ. ಬಂಧು ಮಿತ್ರರಿಂದ ಸಹಕಾರ ಲಭಿಸುವುದು. ಸ್ತ್ರೀಯರು ಉದ್ಯೋಗದಲ್ಲಿ ಮೇಲುಗೈ ಸಾಧಿಸುವರು. ರಾಜಕಾರಣಿಗಳಿಗೆ ಶುಭ ಹಾಗೂ ನೆಮ್ಮದಿ ದೊರೆಯುವುದು. ವಿದ್ಯಾರ್ಥಿಗಳಿಗೂ ಉತ್ತಮವಾದ ದಿನ. ಇನ್ನಷ್ಟು ಯಶಸ್ವಿ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಮೀನ

ಮೀನ

ಇಂದು ನಿಮಗೆ ಅದೃಷ್ಟದ ದಿನ. ನೀವು ಕೈಗೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ಖಾಸಗಿ ಹಾಗೂ ಸರಕಾರಿ ಉದ್ಯೋಗದಲ್ಲಿರುವವರಿಗೆ ಲಾಭ ಹಾಗೂ ಬಡ್ತಿ ಸಿಗುವುದು. ರಾಜಕಾರಣಿಗಳಿಗೆ ಕೊಂಚ ಅಸಮಧಾನ ಉಂಟಾಗುವುದು. ಮಹಿಳೆಯರಿಗೆ ಉತ್ತಮವಾದ ದಿನವಾಗಲಿದೆ. ಇನ್ನಷ್ಟು ಯಶಸ್ಸು ಹಾಗೂ ಸಂತೋಷದಾಯಕ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

English summary

rashi-bhavishya-December-3rd

Know what astrology and the planets have in store for you today. Choose your zodiac sign and read the details...
Please Wait while comments are loading...
Subscribe Newsletter