ಶುಕ್ರವಾರದ ದಿನ ಭವಿಷ್ಯ

Posted By: Divya pandith
Subscribe to Boldsky
ದಿನ ಭವಿಷ್ಯ - Kannada Astrology 01-12-2017 - Your Day Today - Oneindia Kannada

ಜೀವನದ ಸತ್ಯವೆಂದರೆ ನಿನ್ನೆ ಆಗಿದ್ದನ್ನು ಇಂದು ಬದಲಾಯಿಸಲು ಸಾಧ್ಯವಿಲ್ಲ. ನಾಳೆ ಹೀಗೆ ಆಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಆದರೆ ಮುಂದಿನ ದಿನದಲ್ಲಿ ನಡೆಯುವ ಘಟನೆಯ ನಿಯಂತ್ರಣವನ್ನು ಹೊಂದಬಹುದಷ್ಟೆ. ಆಗು ಹೋಗುಗಳೆಲ್ಲವೂ ಆ ಭಗವಂತನ ಇಚ್ಛೆ. ನಾವು ಹುಟ್ಟಿದಾಗ ಪಡೆದುಕೊಂಡು ಬಂದ ಪಾಪ ಪುಣ್ಯಗಳ ಆಧಾರದ ಮೇಲೆಯೇ ಎಲ್ಲವೂ ನಿಂತಿದೆ. ಅದರಂತೆಯೇ ನಡೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಸಮಾಜದಲ್ಲಿ ಮಹತ್ತರವಾದ ಬದಲಾವಣೆಯನ್ನು ನಾವು ಬಯಸುತ್ತೇವೆ ಎಂದಾದರೆ ಮೊದಲು ನಾವು ನಮ್ಮ ಹವ್ಯಾಸಗಳನ್ನು ಬದಲಿಸಿಕೊಳ್ಳಬೇಕು. ಇಂತಹ ಬದಲಾವಣೆ ಉಂಟಾಗಬೇಕೆಂದರೆ ನಮ್ಮ ಗ್ರಹಗತಿಗಳ ಬದಲಾವಣೆಯಿಂದ ಸನ್ನಿವೇಶದ ಅನುಭವಗಳನ್ನು ನಾವು ಅನುಭವಿಸರಬೇಕಾಗಿರುತ್ತದೆ. ಹಾಗಾದರೆ ಬನ್ನಿ ಶುಕ್ರವಾರವಾದ ಇಂದು ನಿಮ್ಮ ಜೀವನದಲ್ಲಿ ಯಾವೆಲ್ಲಾ ಮಹತ್ತರವಾದ ಬದಲಾವಣೆ ಉಂಟಾಗುತ್ತದೆ ಎನ್ನುವುದನ್ನು ಇಂದಿನ ರಾಶಿ ಭವಿಷ್ಯದ ಮೂಲಕ ಅರಿಯೋಣ... 

ಮೇಷ

ಮೇಷ

ಇಂದು ನಿಮಗೆ ಉತ್ತಮವಾದ ದಿನ. ಮನೆಯಲ್ಲಿ ಶಾಂತಿ ಹಾಗೂ ಮನಸ್ಸಿಗೆ ನೆಮ್ಮದಿ ದೊರೆಯುವುದು. ಕಲಾವಿದರಿಗೆ ಅನುಕೂಲಕರವಾದ ದಿನ. ಚಿತ್ರೋದ್ಯಮದಲ್ಲಿರುವವರಿಗೆ ಅಧಿಕ ಲಾಭ ಉಂಟಾಗುವುದು. ಸಹೋದರರಿಂದ ಸಹಕಾರ ದೊರೆಯುವುದು. ವಿದ್ಯಾರ್ಥಿಗಳಿಗೂ ಇಂದು ಶುಭದಿನವಾಗಲಿದೆ. ಮನೆಯಿಂದ ಹೊರಡುವಾಗ ದೇವರಿಗೆ ನಮಸ್ಕರಿಸಿ, ಬಲಗಾಲನ್ನು ಇಟ್ಟು ಹೊರಡಿ. ಎಲ್ಲಾ ರೀತಿಯ ಯಶಸ್ಸು ನಿಮಗೆ ಲಭಿಸುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ವೃಷಭ

ವೃಷಭ

ಕಾರ್ಯದಲ್ಲಿ ವಿಳಂಬ ಉಂಟಾಗುವುದು. ಮಾನಸಿಕವಾಗಿ ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಮನೆಗೆ ಸಂಬಂಧಿಸಿದ ಕೆಲವು ನಿರ್ಧಾರಯುತ ಕೆಲಸಗಳನ್ನು ಮುಂದೂಡದಿರಿ. ಆರ್ಥಿಕ ಸ್ಥಿತಿಯು ನಿಮ್ಮನ್ನು ಕಂಗೆಡಿಸುವುದು. ಯಾವುದೇ ರೀತಿಯಲ್ಲೂ ಕಂಗೆಡದೆ ಮಾಡುತ್ತಿರುವ ಕೆಲಸವನ್ನು ಮುಂದುವರಿಸಿ. ರಾಜಕೀಯದಲ್ಲಿರುವವರಿಗೆ ಹಿನ್ನಡೆ ಉಂಟಾಗುವುದು. ಆರ್ಥಿಕ ಸ್ಥಿತಿಯ ಸುಧಾರಣೆ, ಯಶಸ್ವಿ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಮಿಥುನ

ಮಿಥುನ

ಆರ್ಥಿಕ ಸ್ಥಿತಿಯು ಪ್ರಗತಿಯನ್ನುಂಟುಮಾಡುವುದು. ಸುಗಮವಾದ ವ್ಯವಸ್ಥೆಗಳಿಂದ ಸಂತೋಷವನ್ನು ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ಶುಭ ದಿನವಾಗಲಿದೆ. ವಿದೇಶದಿಂದ ಬರುವ ಬಂಧುಗಳು ಶುಭ ವಾರ್ತೆಯನ್ನು ತರುವರು. ಉದ್ಯೋಗ ಇಲ್ಲದವರಿಗೆ ಹೊಸ ಉದ್ಯೋಗ ಲಭಿಸುವುದು. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರಿಗೆ ಉತ್ತಮ ಫಲಿತಾಂಶ ದೊರೆಯುವುದು. ಜೀವನದಲ್ಲಿ ಇನ್ನಷ್ಟು ಯಶಸ್ಸು ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಕುಲದೇವರ ಪ್ರಾರ್ಥನೆ ಹಾಗೂ ಇಷ್ಟ ದೇವರ ಆರಾಧನೆ ಮಾಡಿ.

ಕರ್ಕ

ಕರ್ಕ

ಇಂದು ನಿಮಗೆ ನೆಮ್ಮದಿಯ ದಿನ. ಬಂಧು ಮಿತ್ರರಿಂದ ಸಹಕಾರ ಪಡೆಯುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ದೊರೆಯುವುದು. ವ್ಯಾಪಾರ ವಹಿವಾಟುಗಳಲ್ಲೂ ಉತ್ತಮವಾದ ಸಮೃದ್ಧಿ ಕಾಣುವಿರಿ. ಆರೋಗ್ಯದ ವಿಚಾರದಲ್ಲಿ ಕೊಂಚ ಎಚ್ಚರಿಕೆಯನ್ನು ವಹಿಸಿ. ಕೆಲವರಿಗೆ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ದೂರದಿಂದ ಬರುವ ಬಂಧು ಮಿತ್ರರು ಸಿಹಿ ಸುದ್ದಿಯನ್ನು ತರುತ್ತಾರೆ. ಸಿಹಿ ಭೋಜನವನ್ನು ಸವಿಯುವಿರಿ. ಹಿರಿಯರು ತೀರ್ಥ ಯಾತ್ರೆಯನ್ನು ನಡೆಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಗಣೇಶ ಮತ್ತು ಗೌರಿಯ ಆರಾಧನೆ ಮಾಡಿ.

ಸಿಂಹ

ಸಿಂಹ

ಸಿಂಹ ರಾಶಿಯವರಿಗೆ ಕೆಲವು ವಿಚಾರದಲ್ಲಿ ಅಪಶಕುನ ಹಾಗೂ ಕೆಟ್ಟ ವಿಚಾರಗಳನ್ನು ಎದುರಿಸಬೇಕಾದಂತಹ ದಿನ. ಮನೆಯಲ್ಲಿ ಎಲ್ಲಾ ವಿಚಾರದಲ್ಲೂ ಸಹಕಾರ ದೊರೆಯದು. ಇಲ್ಲ ಸಲ್ಲದ ಆರೋಪಗಳಿಂದ ಮನಸ್ಸಿಗೆ ನೋವುಂಟಾಗುವ ಸಾಧ್ಯತೆಗಳಿವೆ. ಮಿತ್ರರಿಂದ ಒಂದಷ್ಟು ಅಡೆ ತಡೆಗಳನ್ನು ಅನುಭವಿಸಬೇಕಾಗುವುದು. ಹಿತ ಶತ್ರುಗಳಿಂದ ಬಾಧೆ ಉಂಟಾಗುವುದು. ಮಾಡುತ್ತಿರುವ ಕೆಲಸದಲ್ಲೂ ಏರು ಪೇರು ಉಂಟಾಗುವುದು. ಅನೇಕ ಸಮಸ್ಯೆಗಳು ಒಟ್ಟೊಟ್ಟಿಗೆ ನಿಮ್ಮನ್ನು ಕಾಡುವುದು. ಪಂಚಮ ಶನಿ ಇರುವುದರಿಂದ ಹೆಚ್ಚು ಸಮಸ್ಯೆಯನ್ನು ಎದುರಿಸಬೇಕಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ದೇವಿಯ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಮನೆಯಲ್ಲಿ ನೆಮ್ಮದಿಯ ವಾತಾವರಣ. ಕೈಗೊಂಡಿರುವ ಕೆಲಸದಲ್ಲಿ ಯಶಸ್ಸು ದೊರೆಯುವುದು. ಬಂಧು ಮಿತ್ರರು ನಿಮ್ಮ ಕೆಲಸಕ್ಕೆ ಸಕಾರಾತ್ಮಕ ಒಲವನ್ನು ತೋರುವರು. ಅನೇಕ ದಿನಗಳಿಂದ ಕೈಗೊಂಡ ನಿರ್ಧಾರಗಳಲ್ಲಿ ಏರು ಪೇರು ಉಂಟಾಗುವ ಲಕ್ಷಣಗಳಿವೆ. ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಇರುವ ಸರಳ ಉಪಾಯವೆಂದರೆ ಶಿವನ ಆರಾಧನೆ ಹಾಗೂ ಲಕ್ಷ್ಮಿ ಪ್ರಾರ್ಥನೆ.

ತುಲಾ

ತುಲಾ

ಇಂದು ನಿಮಗೆ ಸುಂದರವಾದ ಜೀವನಕ್ಕೆ ಸಾಕ್ಷಿಯಾದ ದಿನವಾಗಲಿದೆ. ನೆಮ್ಮದಿಯನ್ನು ಕಾಣುವಿರಿ. ಬಂಧು ಮಿತ್ರರ ಸಮಾಗಮನ ಆಗುವುದು. ನಿರ್ದಿಷ್ಟವಾದ ನಿಮ್ಮ ಗುರಿಯನ್ನು ತಲುಪಲು ನಿಮಗೆ ಶುಭ ಕಾಲ. ಜಂಟಿ ವ್ಯವಹಾರದಲ್ಲೂ ಲಾಭ ಉಂಟಾಗುವದು. ತೈಲೋದ್ಯಮ, ಖನಿಜ, ಕೈಗಾರಿಕಾ ಕೆಲಸಗಳಲ್ಲೂ ಗಣನೀಯ ಲಾಭ ಉಂಟಾಗುವುದು. ಆರ್ಥಿಕವಾಗಿ ಹೆಚ್ಚು ಲಾಭ ಉಂಟಾಗುವುದು. ನಿಮ್ಮ ಸಮೃದ್ಧ ಬದುಕಿಗೆ ಗಣೇಶ ಮತ್ತು ಲಕ್ಷ್ಮಿಯ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರು ಹೆಚ್ಚು ಕಾಳಜಿಯಿಂದ ಇರಬೇಕು. ಬಂಧು ಮಿತ್ರರಿಂದ ಕಿರಿಕಿರಿಯ ವಾತಾವರಣ ಉಂಟಾಗುವುದು. ನಿರ್ದಿಷ್ಟ ಗುರಿಯನ್ನು ತಲುಪಲು ಅಸಾಧ್ಯವಾಗುವುದು. ತಂದೆ ತಾಯಿಯ ಆಶೀರ್ವಾದದಿಂದ ನೀವು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯುಂಟಾಗುವುದು. ಒಂದಿಷ್ಟು ಸ್ಥಿರಾಸ್ತಿಯನ್ನು ಖರೀದಿ ಮಾಡುವ ಲಕ್ಷಣವಿದೆ. ಆರ್ಥಿಕ ಸುಧಾರಣೆ, ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಧನು

ಧನು

ಇಂದು ನಿಮ್ಮ ಆರ್ಥಿಕ ಸ್ಥಿತಿಯು ಏರುಪೇರನ್ನುಂಟು ಮಾಡುವುದು. ವಿಪರೀತವಾದ ಆರೋಗ್ಯ ಸಮಸ್ಯೆಯು ನಿಮ್ಮನ್ನು ಆಸ್ಪತ್ರೆಗೆ ಸೇರುವಂತೆ ಮಾಡುತ್ತದೆ. ರಕ್ತದೊತ್ತಡ ಅಥವಾ ಮಧುಮೇಹದಂತಹ ರೋಗವು ನಿಮ್ಮನ್ನು ಕಾಡಲಿದೆ. ಮೂರನೆ ವ್ಯಕ್ತಿ ಹೇಳುವ ಮಾತಿಗೆ ಹೆಚ್ಚು ಚಿಂತಿಸದಿರಿ. ಒತ್ತಡಕ್ಕೆ ಒಳಗಾದಷ್ಟು ನಿಮ್ಮ ಆರೋಗ್ಯ ಇನ್ನಷ್ಟು ಹದಗೆಡುವುದು. ನಿಮ್ಮ ಆಂತರಿಕ ವಿಚಾರವನ್ನು ಬೇರೆಯವರೊಂದಿಗೆ ಹಂಚಿಕೊಳ್ಳದಿರಿ. ವ್ಯಾಪಾರ ವಹಿವಾಟುಗಳಲ್ಲಿ ಲಾಭ ಉಂಟಾಗಲು ವಿಶೇಷವಾಗಿ ಲಕ್ಷ್ಮಿ ಆರಾಧನೆ ಮಾಡಿ. ಕಷ್ಟಗಳ ನಿವಾರಣೆಗೆ ಧನ್ವಂತರಿ ಮಂತ್ರವನ್ನು ಪಠಿಸಿ.

ಮಕರ

ಮಕರ

ಅಂದುಕೊಂಡ ವಿಚಾರದಲ್ಲಿ ವಿಳಂಬ ಉಂಟಾಗುವುದು. ಬಂಧು ಮಿತ್ರರಿಂದ ಅಸಹಕಾರ, ಸ್ಥಿರಾಸ್ತಿಗಾಗಿ ಕಚ್ಚಾಟ ನಡೆಯುವುದು. ಹತ್ತಾರು ಸಮಸ್ಯೆಗಳು ಒಮ್ಮೆಲೇ ನಿಮ್ಮನ್ನು ಕಾಡುವ ಸಾಧ್ಯತೆಗಳಿವೆ. ಮನೆಯಲ್ಲಿ ಕಿರಿಕಿರಿಯ ವಾತಾವರಣ ಉಂಟಾಗುವುದು. ಆರ್ಥಿಕ ಕ್ಷೇತ್ರದಲ್ಲೂ ಒಂದಷ್ಟು ಅಡೆ ತಡೆ ಉಂಟಾಗುವುದು. ಯಶಸ್ವಿ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗಾಗಿ ದೇವಿ ಹಾಗೂ ಶಕ್ತಿಯ ಆರಾಧನೆ ಮಾಡಿ.

ಕುಂಬ

ಕುಂಬ

ತಂದೆ ಮಕ್ಕಳ ನಡುವೆ ಇದ್ದ ವೈಶಮ್ಯ ದೂರವಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಉಂಟಾಗುವುದು. ಮಾನಸಿಕವಾಗಿ ನೆಮ್ಮದಿ ದೊರೆಯುವುದು. ಅನೇಕ ದಿನಗಳಿಂದ ಅಂದುಕೊಂಡ ವಿಚಾರಗಳು ಇಂದು ಕೈಗೂಡಿ ಬರುತ್ತದೆ. ಅನುಪಯುಕ್ತ ಎಂದುಕೊಂಡ ವಿಚಾರವು ಸಹ ಲಾಭವನ್ನು ತಂದುಕೊಡುತ್ತದೆ. ಕಪ್ಪು ಬಣ್ಣದ ಬಟ್ಟೆಯನ್ನು ಧರಿಸದಿರಿ. ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಹೆಚ್ಚಿನ ಕಾಳಜಿಯಿಂದ ಇರಬೇಕು. ಇನ್ನಷ್ಟು ಇತ್ತಮ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಮೀನ

ಮೀನ

ಇಂದು ನಿಮಗೆ ಶುಭ ದಿನ. ವಿವಾಹದ ವಿಚಾರದಲ್ಲಿ ಉಂಟಾದ ಅಡೆತಡೆಗಳು ನಿವಾರಣೆ ಹೊಂದುತ್ತವೆ. ಅವಿವಾಹಿತರಿಗೆ ವಿವಾಹ ಯೋಗ. ಮಕ್ಕಳ ಆರೋಗ್ಯಕ್ಕಾಗಿ ಹಣ ವ್ಯಯಿಸಬೇಕಾಗುವುದು. ಬಂಧುಮಿತ್ರರಿಂದ ಕೊಂಚ ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಲಾಭವನ್ನು ತಂದುಕೊಡುತ್ತದೆ. ಆಮದು ಮತ್ತು ರಫ್ತು ಕೆಲಸದಲ್ಲಿ ಲಾಭಾಂಶ ಗಳಿಸಿಕೊಳ್ಳುವಿರಿ. ವಿದೇಶ ಯಾನ ಕನಸು ನನಸಾಗುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

English summary

rashi-bhavishya-December-1th

Know what astrology and the planets have in store for you today. Choose your zodiac sign and read the details...