ಸೋಮವಾರದ ದಿನ ಭವಿಷ್ಯ

Posted By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 18-12-2017 - Your Day Today - Oneindia Kannada

ಸುಳ್ಳು ಹೇಳಿ ಒಳ್ಳೆಯವನಾಗುವುದು ಅಥವಾ ಇತರರ ಚಾಡಿ ಹೇಳಿಕೊಂಡು ಬಹು ಬೇಗ ಒಳ್ಳೆಯವರಾಗಬಹುದು. ಸುಳ್ಳು ಹೇಳಿರುವುದು ಒಂದಲ್ಲಾ ಒಂದು ದಿನ ಬೆಳಕಿಗೆ ಬಂದೇ ಬರುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಸುಳ್ಳು ಹೇಳದೆ, ಚಾಡಿ ಹೇಳದೆಯೇ ಸತ್ಯದ ವರ್ತನೆಯಿಂದ ನಿಷ್ಠೆಯಿಂದ ಇದ್ದರೆ ಶಾಸ್ವತವಾಗಿ ಹೃದಯವನ್ನು ಮುಟ್ಟಿದ ವ್ಯಕ್ತಿಯಾಗಿರುತ್ತೀರಿ.

ಸುಳ್ಳು ಹೇಳಿ ಮೋಸ ಮಾಡುವುದಕ್ಕಿಂತ ಸೋಮವಾರವಾದ ಈ ದಿನದ ಆರಂಭವನ್ನು ಭಗವಂತನ ಸ್ಮರಣೆಯೊಂದಿಗೆ ಸ್ವಚ್ಛಂದವಾದ ಮನಸ್ಸಿನಿಂದ ಆರಂಭಿಸಿ ಎನ್ನುವುದೇ ನಮ್ಮ ಆಶಯ. ವಾರದ ಆರಂಭದಿಂದ ಯಾವೆಲ್ಲಾ ಬದಲಾವಣೆಯನ್ನು ನೀವು ಕಾಣಲಿದ್ದೀರಿ? ಎನ್ನುವುದನ್ನು ರಾಶಿ ಭವಿಷ್ಯವನ್ನು ಅರಿಯುವುದರ ಮೂಲಕ ತಿಳಿದುಕೊಳ್ಳಿ...

ಮೇಷ

ಮೇಷ

ಸುಗಮವಾದ ಜೀವನ ನಿಮಗೆ ಲಭ್ಯವಾಗುವುದು. ಅಮಾವಾಸ್ಯೆಯಾದರೂ ಸಹ ನೀವು ಹೆದರುವ ಅಗತ್ಯವಿಲ್ಲ. ವಿವಿಧ ಬಗೆಯ ಲಾಭಾಂಶವು ನಿಮಗೆ ದೊರೆಯಲಿದೆ. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳು ಸಹ ಉತ್ತಮ ರೀತಿಯಲ್ಲಿಯಲ್ಲಿಯೇ ಕಾರ್ಯ ರೂಪಕ್ಕೆ ಬರುವುದು. ಯಾವುದೇ ರೀತಿಯ ಹೂಡಿಕೆ ಇಂದು ಉತ್ತಮವಲ್ಲ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಕುಲದೇವರ ಪ್ರಾರ್ಥನೆ ಮಾಡಿ.

ವೃಷಭ

ವೃಷಭ

ಆಂತರಿಕ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ದಾಂಪತ್ಯದಲ್ಲಿ ಕಲಹ ಉಂಟಾಗುವ ಸಾಧ್ಯತೆಗಳಿವೆ. ಸಂಗಾತಿಯ ಆರೋಗ್ಯ ಸುಧಾರಣೆಗಾಗಿ ಹಣವನ್ನು ವ್ಯಯಿಸಬೇಕಾಗುವುದು. ಸ್ಥಿರಾಸ್ತಿ ಖರೀದಿಸಬೇಕೆನ್ನುವ ಮನಸ್ಸಾದರೂ ಅಪಜಯ ಉಂಟಾಗುವುದು. ಮಕ್ಕಳಿಂದ ಅಶುಭ ವಾರ್ತೆ ಕೇಳುವಿರಿ. ವಿದ್ಯಾರ್ಥಿಗಳ ವ್ಯಾಸಂಗದಲ್ಲಿ ಅಡೆತಡೆ ಉಂಟಾಗುವುದು. ಅಷ್ಟಮ ಶನಿ ಇರುವುದರಿಂದ ವ್ಯಾಪಾರಿಗಳಿಗೆ ಸಂಪೂರ್ಣ ಲಾಭ ಗಳಿಸಲು ಸಾಧ್ಯವಾಗದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಜೀವನಕ್ಕಾಗಿ ಶಿವ ಮತ್ತು ವೆಂಕಟೇಶ್ವರನ ಆರಾಧನೆ ಮಾಡಿ.

ಮಿಥುನ

ಮಿಥುನ

ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಸಂಪೂರ್ಣವಾದ ಸಮಾಧಾನ ಪಡೆದುಕೊಳ್ಳಲು ಸಾಧ್ಯವಾಗದು. ಬಂಧು ಮಿತ್ರರಿಂದಲೂ ಕಿರಿಕಿರಿ ಉಂಟಾಗುವುದು. ಕೆಲವರಿಗೆ ಉತ್ತಮ ಲಾಭಾಂಶ ಪಡೆಯುವ ಸಾಧ್ಯತೆಗಳಿವೆ. ಚಾಲಕ ವೃತ್ತಿಯನ್ನು ನಂಬಿದವರಿಗೆ ಉತ್ತಮವಾದ ಲಾಭ ಉಂಟಾಗುವುದು. ಕಪ್ಪು ಬಟ್ಟೆಯನ್ನು ಧರಿಸದಿರಿ. ಹಣವನ್ನು ದುಂದುವೆಚ್ಛ ಮಾಡದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಪ್ರಗತಿಗೆ ಶಿವನ ಆರಾಧನೆ ಮಾಡಿ.

ಕರ್ಕ

ಕರ್ಕ

ಇಂದು ನಿಮಗೆ ಸಮಾಧಾನವನ್ನುಂಟುಮಾಡುವ ದಿನ. ಅನೇಕ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಹಿರಿಯರು ತೀರ್ಥಕ್ಷೇತ್ರಕ್ಕೆ ಅಥವಾ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ. ಆರ್ಥಿಕ ವಲಯದಲ್ಲಿ ಉತ್ತಮ ಲಾಭಾಂಶವನ್ನು ಪಡೆದುಕೊಳ್ಳುವಿರಿ. ಸ್ತ್ರೀಯರಿಗೆ ತವರು ಮನೆಯಿಂದ ಉಡುಗೊರೆ ಲಭ್ಯವಾಗುವುದು. ತಂದೆ ಮಕ್ಕಳ ನಡುವೆ ಇದ್ದ ಭಿನ್ನಾಭಿಪ್ರಾಯ ಉಪಶಮನ ವಾಗುವುದು. ಮಿತ್ರರ ಆಗಮನದಿಂದ ಸಂತೋಷವನ್ನು ಪಡೆದುಕೊಳ್ಳುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದಾಯಕ ಬದುಕಿಗೆ ಶಿವನ ಆರಾಧನೆ ಮಾಡಿ.

ಸಿಂಹ

ಸಿಂಹ

ನಿಮಗೆ ಮಾನಸಿಕ ಕಿರಿಕಿರಿ ಮುಂದುವರಿಯುವುದು. ಆದಷ್ಟು ಕಾಳಜಿಯಿಂದ ಇರಿ. ಜಂಟಿ ವ್ಯವಹಾರದಲ್ಲಿ ಪಾಲ್ಗೊಳ್ಳದಿರಿ. ಇಲ್ಲ ಸಲ್ಲದ ಆರೋಪಕ್ಕೆ ನೀವು ತುತ್ತಾಗುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೂ ಅವಮಾನದ ಸನ್ನಿವೇಶ ಉಂಟಾಗುವುದು. ನಿಮ್ಮನ್ನು ತುಳಿಯಲು ಅನೇಕರು ಕಾಯುತ್ತಿರುತ್ತಾರೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಶಿವನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಇಂದು ನಿಮಗೆ ಸಾಮಾನ್ಯವಾದ ದಿನ. ವಿಪರೀತವಾದ ಆಯಾಸದಿಂದ ದೂರಾಗುವಿರಿ. ಸಮಾಧಾನದ ಬದುಕು ನಿಮ್ಮದಾಗಲಿದೆ. ಸ್ತ್ರೀಯರು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುವರು. ಸಹೋದ್ಯೋಗಿಗಳಿಂದ ಸಹಕಾರ ಹಾಗೂ ಪ್ರಶಂಸೆಗಳು ಸಿಗುವುದು. ಸಾಹಿತಿಗಳಿಗೆ ಅನುಕೂಲ. ಕೆಲವರಿಗೆ ಸರ್ಕಾರದ ಮನ್ನಣೆ ಸಿಗುವ ಸಾಧ್ಯತೆಗಳಿವೆ. ಸಮಸ್ಯೆಗಳ ಪರಿಹಾರ ಹಾಗೂ ಪ್ರಗತಿಪರ ಜೀವನಕ್ಕಾಗಿ ಶಿವನ ಆರಾಧನೆ ಮಾಡಿ.

ತುಲಾ

ತುಲಾ

ಇಂದು ನಿಮಗೆ ಉತ್ತಮವಾದ ದಿನ. ನಿಮ್ಮ ಕೆಲಸ ಕಾರ್ಯಗಳಲ್ಲಿ ಜಯವನ್ನು ಗಳಿಸುವಿರಿ. ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿಯನ್ನು ಕಾಣುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ಲಾಭವನ್ನು ತಂದಿಡುವುದು. ಮನೆಯಿಂದ ಹೊರಡುವಾಗ ಬಲಗಾಲನ್ನು ಮುಂದಿಟ್ಟು ಹೊರಡಿ. ರಾಹುಕಾಲದ ಪ್ರಯಾಣ ಮಾಡದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಜೀವನಕ್ಕಾಗಿ ಗಣೇಶನ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಅಸಮಧಾನವನ್ನು ಅನುಭವಿಸಬೇಕಾಗುವುದು. ಆರ್ಥಿಕ ಸ್ಥಿತಿಯು ಕುಸಿಯುವುದು. ಹೋಟೆಲ್ ಉದ್ಯಮದಲ್ಲೂ ಅಪಜಯ ಉಂಟಾಗುವುದು. ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಅಸಾಧ್ಯವಾಗುವುದು. ಅನಿರೀಕ್ಷಿತ ಸೋಲು ನಿಮ್ಮ ಮನಸ್ಸನ್ನು ಗಾಸಿಗೊಳಿಸುವುದು. ಮಕ್ಕಳಿಗಾಗಿ ಒಂದಿಷ್ಟು ಹಣವನ್ನು ವ್ಯಯಿಸಬೇಕಾಗುವುದು. ದೂರದ ಪ್ರಯಾಣವನ್ನು ಮಾಡಬೇಕಾಗುವ ಸಾಧ್ಯತೆಗಳಿವೆ. ಆಪ್ತರು ಅಗಲಿದ ದುರ್ವಾರ್ತೆಯನ್ನು ಕೇಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಧನು

ಧನು

ಆರ್ಥಿಕ ಸ್ಥಿತಿ ಕುಸಿಯುವುದು. ನೀವು ಮಾಡದ ತಪ್ಪಿಗೆ ಹಣ ವ್ಯಯಿಸಬೇಕಾಗುವುದು. ಜಂಟಿ ವ್ಯವಹಾರ ಒಳ್ಳೆಯದಲ್ಲ. ಕಲಾವಿದರಿಗೆ ಅಪಜಯ ಉಂಟಾಗುವುದು. ಮೂರನೇ ವ್ಯಕ್ತಿಯ ವೈಕ್ತಿಕ ವಿಚಾರದಲ್ಲಿ ಮೂಗು ತೂರಿಸದಿರಿ. ಆದಷ್ಟು ನೇರ ನಡೆ ಹಾಗೂ ನೇರ ನುಡಿಯನ್ನು ಅಳವಡಿಸಿಕೊಳ್ಳಿ. ವಿದ್ಯಾರ್ಥಿಗಳಿಗೂ ಅಪಜಯ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಕರ

ಮಕರ

ಸಂಪೂರ್ಣ ಸಮಾಧಾನ ಪಡೆಯಲು ವಿಫಲರಾಗುವಿರಿ. ಬಂಧು ಮಿತ್ರರಿಂದ ಕಿರಿಕಿರಿ ಉಂಟಾಗುವುದು. ಪತ್ರಕರ್ತರಿಗೆ ಹಿನ್ನಡೆ. ಅನೇಕ ವಿಚಾರದಲ್ಲಿ ಅವಕಾಶಗಳು ಕೈತಪ್ಪಿ ಹೋಗುವ ನೋವು ನಿಮ್ಮನ್ನು ಕಾಡುವುದು. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಅಪಜಯ ಹಾಗೂ ನಷ್ಟ ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಹಾಗೂ ಶಕ್ತಿಯ ಪ್ರಾರ್ಥನೆ ಮಾಡಿ.

ಕುಂಬ

ಕುಂಬ

ನಿಮಗೆ ಒಳ್ಳೆಯದಾಗುವುದು. ಭೂ ವ್ಯವಹಾರಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿರುವವರಿಗೆ ಲಾಭ ಉಂಟಾಗುವುದು. ಸುಂದರ ಕನಸು ನನಸಾಗುವುದು. ವಿದೇಶದಿಂದ ಬರುವಂತಹ ಹಣ ನಿಮ್ಮ ಜೀವನಕ್ಕೆ ಒಂದಿಷ್ಟು ಒಳ್ಳೆಯದನ್ನುಂಟುಮಾಡುವುದು. ಕೈಗಾರಿಕೋದ್ಯಮಗಳಲ್ಲಿ ಲಾಭ ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಉಂಟಾಗುವುದು. ಖನಿಜ ಮತ್ತು ತೈಲ ವ್ಯಾಪಾರಗಳು ಲಾಭ ಹಾಗೂ ಅನುಕೂಲವನ್ನು ತಂದುಕೊಡುವುದು. ಇನ್ನಷ್ಟು ಪ್ರಗತಿ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮೀನ

ಮೀನ

ಸುಂದರವಾದ ಜೀವನವನ್ನು ಕಾಣುವಿರಿ. ಅನೇಕ ದಿನಗಳಿಂದ ಅಂದುಕೊಂಡ ತೀರ್ಮಾನಗಳು ನಿಮ್ಮ ಜೀವನಕ್ಕೆ ಅನುಕೂಲವನ್ನು ತಂದುಕೊಡುತ್ತದೆ. ನಿರ್ದಿಷ್ಟವಾದ ಗುರಿಯನ್ನು ನೀವು ತಲುಪುವಿರಿ. ಎಲ್ಲಾರೀತಿಯ ಅನುಕೂಲ ಪಡೆದುಕೊಳ್ಳುವಿರಿ. ಅಸಾಹಯಕರಿಗೆ ಹಾಗೂ ಬಡವರಿಗೆ ದಾನ ಮಾಡಿ. ಭಗವಂತನ ಆಶೀರ್ವಾದ ಲಭಿಸುವುದು. ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

English summary

rashi-bhavishya-december-18th

Know what astrology and the planets have in store for you today. Choose your zodiac sign and read the details...