ಭಾನುವಾರದ ದಿನ ಭವಿಷ್ಯ

By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 17-12-2017 - Your Day Today - Oneindia Kannada

ಮನೆಗಿಂತ ಬಾಗಿಲು ಚಿಕ್ಕದು, ಬಾಗಿಲಿಗಿಂತ ಬೀಗ ಚಿಕ್ಕದು, ಬೀಗಕ್ಕಿಂತ ಕೀ ಚಿಕ್ಕದು. ಈ ಪುಟಾಣಿ ಕೀಯಿಂದಲೇ ವಿಶಾಲವಾದ ಮನೆಯನ್ನು ಪ್ರವೇಶಿಸುತ್ತೇವೆ. ಅದಕ್ಕಾಗಿಯೇ ಯಾವುದೇ ವ್ಯಕ್ತಿ ವಿಚಾರ ಮತ್ತು ವಿಷಯಗಳನ್ನು ಬಹಳ ಚಿಕ್ಕದು ಅಥವಾ ಕೀಳು ಎಂದು ಭಾವಿಸಬೇಡಿ.

ಕೆಲವೊಮ್ಮೆ ಅತಿ ಚಿಕ್ಕದಾದ ಒಂದು ಉತ್ತಮ ಲಾಲೋಚನೆಯಿಂದ ದೊಡ್ಡ ಸಾಧನೆ ಮಾಡಬಹುದು ಅಥವಾ ನಮಗಿಂತ ಕೆಳಗಿರುವ ವ್ಯಕ್ತಿಯಿಂದ ಒಂದು ಮಹತ್ತರವಾದ ಸಹಾಯವನ್ನು ಪಡೆದುಕೊಳ್ಳಬಹುದು. ಹಾಗಾಗಿ ಬದುಕಲ್ಲಿ ಯಾರನ್ನೂ ಹೀಗಳೆಯದಿರಿ. ಕೆಳಮಟ್ಟದ್ದು ಎಂದು ಯೋಚಿಸದಿರಿ.

ಪ್ರತಿಯೊಂದು ವಸ್ತು ಹಾಗೂ ವ್ಯಕ್ತಿಗೆ ಅದರದ್ದೇ ಆದ ವಿಶೇಷ ಗುಣಗಳು ಹಾಗೂ ಶ್ರೇಷ್ಠತೆ ಇರುತ್ತವೆ.  ಭಾನುವಾರವಾದ ಇಂದು ನಿಮಗೆ ಬಿಡುವಿನ ಸಮಯ. ಈ ಸುಂದರ ಸಮಯವನ್ನು ಉತ್ತಮ ಕೆಲಸಕ್ಕೆ ಉಪಯೋಗಿಸಿಕೊಳ್ಳಿ. ಎಲ್ಲದಕ್ಕೂ ಮುಂಚೆ ಇಂದು ನಿಮ್ಮ ಭವಿಷ್ಯದ ಫಲಾನುಫಲಗಳು ಹೇಗಿವೆ? ಎನ್ನುವುದನ್ನು ಅರಿಯಿರಿ...  

ಮೇಷ

ಮೇಷ

ಸುಂದರವಾದ ಜೀವನದ ಕಾಯಕಲ್ಪವನ್ನು ಪಡೆದುಕೊಳ್ಳುವಿರಿ. ಮಿತ್ರರು ಸಕಾರಾತ್ಮಕವಾಗಿ ವರ್ತಿಸುವರು. ವೈಜ್ಞಾನಿಕ ಆವಿಷ್ಕಾರವನ್ನು ಕೆಲವರು ರೂಪಿಸುವ ಸಾಧ್ಯತೆಗಳಿವೆ. ಸ್ತ್ರೀಯರು ಬಯಸಿದ ಎಲ್ಲಾ ವಿಚಾರಗಳು ಕೈಗೂಡಿ ಬರುವುದು. ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲ ಉಂಟಾಗುವುದು. ಮಿತ್ರರ ಆಗಮನದಿಂದ ನಿಮಗೆ ಹರ್ಷ ಉಂಟಾಗುವುದು. ಹಿರಿಯರಿಂದ ಆಶೀರ್ವಾದವನ್ನು ಪಡೆದುಕೊಳ್ಳುವಿರಿ. ಉತ್ತಮ ಬದುಕು ಹಾಗೂ ಗುರಿಯನ್ನು ತಲುಪಲು ಸೂರ್ಯ ನಾರಾಯಣನ ಪ್ರಾರ್ಥನೆ ಮಾಡಿ.

 ವೃಷಭ

ವೃಷಭ

ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ನೀಡುವುದು. ಸುಖಮಯವಾಧ ಜೀವನವನ್ನು ಕಾಣುವಿರಿ. ಅನೇಕ ದಿನಗಳಿಂದ ಅಂದುಕೊಂಡ ವಿಚಾರಗಳಿಂದ ಲಾಭವನ್ನು ಪಡೆದುಕೊಳ್ಳುವಿರಿ. ಅಷ್ಟಮ ಶನಿಯ ಪ್ರಭಾವಕ್ಕೆ ಒಳಗಾಗಿರುವುದರಿಂದ ಆದಷ್ಟು ಆತುರದ ನಿರ್ಧಾರಗಳನ್ನು ಕೈಗೊಳ್ಳದಿರಿ. ಯಾವುದೇ ಉದ್ದೇಶಗಳಿಗಾಗಿ ಹೂಡಿಕೆಗೆ ಮುಂದಾಗದಿರಿ. ಸಾಲ ಕೊಡುವುದು, ಪಡೆಯುವುದು ಅಥವಾ ಮಧ್ಯಸ್ಥಿಕೆ ನಡೆಸುವ ಕೆಲಸಕ್ಕೆ ಮುಂದಾಗದಿರಿ. ಜೀವನದಲ್ಲಿ ಇನ್ನಷ್ಟು ಪ್ರಗತಿ ಹಾಗೂ ಸಂತೋಷಕ್ಕಾಗಿ ವಿಷ್ಣುವಿನ ಆರಾಧನೆ ಹಾಗೂ ಸೂರ್ಯನ ಪ್ರಾರ್ಥನೆ ಮಾಡಿ.

ಮಿಥುನ

ಮಿಥುನ

ಆರೋಗ್ಯ ಸುಧಾರಣೆ ಕಾಣುವುದು. ಮಕ್ಕಳಿಂದ ಶುಭವಾರ್ತೆ ಲಭಿಸುವುದು. ಬರಬೇಕಿದ್ದ ಹಣಕಾಸಿನ ವ್ಯವಸ್ಥೆ ಸುಗಮಗೊಳ್ಳುವುದು. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಅನಿರೀಕ್ಷಿತ ಮಟ್ಟದ ಸೋಲಿನಿಂದ ದೂರಾಗುವ ಲಕ್ಷಣವಿದೆ.ಯುವಕರು, ರೂಪದರ್ಶಿಗಳು ಹಾಗೂ ಕಲಾವಿದರಿಗೆ ಅನುಕೂಲ ಹಾಗೂ ಅವಕಾಶ ಗಳುದೊರೆಯುವುದು. ಜೀವನದಲ್ಲಿ ಇನ್ನಷ್ಟು ಪ್ರಗತಿ ಹಾಗೂ ಸಂತೋಷಕ್ಕಾಗಿ ಗಣೇಶನ ಆರಾಧನೆ ಮಾಡಿ.

ಕರ್ಕ

ಕರ್ಕ

ಮನೆಯಲ್ಲಿ ನೆಮ್ಮದಿ ದೊರೆಯುವುದು. ಲಾಭಾಂಶವನ್ನು ಪಡೆದುಕೊಳ್ಳುವಿರಿ. ಸ್ತ್ರೀಯರು ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಸಾಧಿಸುವರು. ಆರಕ್ಷಣೆಯ ಅಧಿಕಾರಿಗಳಿಗೆ ನೆಮ್ಮದಿಯ ದಿನ. ಮಕ್ಕಳಿಂದ ಶುಭವಾರ್ತೆ. ಅಡೆತಡೆಗೆ ಒಳಗಾಗಿದ್ದ ಶುಭ ಕಾರ್ಯ ನೆರವೇರಲು ದಿನವನ್ನು ನಿಗದಿ ಪಡಿಸುವಿರಿ. ಸ್ಥಿರಾಸ್ಥಿಯಿಂದ ಲಾಭ. ಮಹಿಳೆಯರಿಗೆ ತವರು ಮನೆಯಿಂದ ಹಣ, ಚಿನ್ನ ಹಾಗೂ ಇನ್ನಿತರ ಉಡುಗೊರೆ ಸಾಮಾಗ್ರಿಗಳು ಲಭ್ಯವಾಗುವುದು. ಈ ದಿನವನ್ನು ಸಂತೋಷದಿಂದ ಕಳೆಯುವಿರಿ. ಇನ್ನಷ್ಟು ಸಂತೋಷ ಹಾಗೂ ಉತ್ತಮ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಸಿಂಹ

ಸಿಂಹ

ಇಂದು ನಿಮಗೆ ಅಷ್ಟು ಉತ್ತಮವಾದ ದಿನವಲ್ಲ. ನಿಮಗೆ ಪಂಚಮಶನಿಯ ಪ್ರಭಾವ ಇದೆ. ಯಾರೆಲ್ಲಾ ಆಹಾರೋತ್ಪನ್ನಗಳ ತಯಾರಿ ಹಾಗೂ ವ್ಯಾಪಾರ ಮಾಡುವವರಿಗೆ ಸಂಪೂರ್ಣವಾದ ಸಮಾಧಾನ ಲಭಿಸದು. ಮಾನಸಿಕ ಕಿರಿಕಿರಿಯನ್ನು ಅನುಭವಿಸುವಿರಿ. ಆರೋಗ್ಯದ ತೊಂದರೆಯಿಂದ ಹೈರಾಣವಾಗುವಿರಿ. ಅನೇಕರಿಂದ ಅವಮಾನ ಉಂಟಾಗುವುದು. ಸ್ಥಿರಾಸ್ತಿಯಿಂದ ಲಾಭ ಉಂಟಾಗದು. ಉತ್ತಮ ಬದುಕು ಹಾಗೂ ಸಂತೋಷಕ್ಕಾಗಿ ಶಿವನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಸಂಪೂರ್ಣವಾದ ಸಮಾಧಾನ ಲಭಿಸದು. ಪೂರ್ತಿ ಪ್ರಮಾಣದಲ್ಲಿ ನಿಮ್ಮ ಗುರಿಯನ್ನು ತಲುಪಲು ಸಾಧ್ಯವಾಗದು. ಮಾನಸಿಕವಾಗಿ ನೋವುಂಟಾಗುವ ಸಾಧ್ಯತೆಗಳಿವೆ. ಇನ್ನಷ್ಟು ಪ್ರಗತಿ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ತುಲಾ

ತುಲಾ

ಸಮಾಧಾನಕರ ದಿನವನ್ನು ಕಾಣುವಿರಿ. ಆರ್ಥಿಕವಾಗಿ ಲಾಭವನ್ನು ಗಳಿಸುವಿರಿ. ವ್ಯಾಪಾರ ವಹಿವಾಟುಗಳಲ್ಲಿ ಉತ್ತಮ ಲಾಭ ಉಂಟಾಗುವುದು. ಅನೇಕ ದಿನಗಳಿಂದ ಕಾಡುತ್ತಿದ್ದ ಮಾನಸಿಕ ನೋವು ದೂರಾಗುವುದು. ಮುರಿದು ಬಿದ್ದ ವಿವಾಹ ಹಾಗೂ ಪ್ರೇಮ ವೈಫಲ್ಯವು ಪುನಃ ಚಿಗುರೊಡೆಯುವುದು. ವಿವಾಹ ಯೋಗವನ್ನು ಪಡೆದುಕೊಳ್ಳುವಿರಿ. ಸಂತಾನ ಭಾಗ್ಯ ಪಡೆದುಕೊಳ್ಳುವಿರಿ. ದೂರದ ಪ್ರಯಾಣದಿಂದಲೂ ಲಾಭ ಗಳಿಸಿಕೊಳ್ಳುವಿರಿ. ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಮಾನಸಿಕವಾದ ಕಿರಿಕಿರಿ ದೂರಾಗುವ ಲಕ್ಷಣಗಳಿವೆ. ಆರ್ಥಿಕ ಸ್ಥಿತಿಯ ಕುರಿತು ಕಾಳಜಿ ಇರಲಿ. ಮಿತ್ರರಿಂದಲೇ ಅವಮಾನ ಹಾಗೂ ಮೋಸಗಳು ಉಂಟಾಗುವ ಸಾಧ್ಯತೆಗಳಿವೆ. ಅನಿರೀಕ್ಷಿತ ಸೋಲು ನಿಮಗೆ ಮಾನಸಿಕ ನೋವನ್ನುಂಟಮಾಡುವುದು. ವಿಪರೀತ ಆಯಾಸ ಹಾಗೂ ಅವಮಾನಗಳು ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಹಾಗೂ ವಿಷ್ಣುವಿನ ಸ್ಮರಣೆ ಮಾಡಿ.

ಧನು

ಧನು

ಇಂದು ನಿಮಗೆ ಅನುಕೂಲಕರವಾದ ದಿನವಲ್ಲ. ಹಣವನ್ನು ಕೊಡದಿರಿ. ಮೋಸಗಾರರ ಜಾಲಕ್ಕೆ ಬೀಳುವ ಸಾಧ್ಯತೆಗಳಿವೆ. ಸಾಲ ಕೊಡುವುದು ಹಾಗೂ ಪಡೆಯುವ ಕೆಲಸಕ್ಕೆ ಮುಂದಾಗದಿರಿ. ಸ್ಥಿರಾಸ್ತಿಗಾಗಿ ಕಚ್ಚಾಡದಿರಿ. ಕಾಲವೇ ಎಲ್ಲವನ್ನು ನಿರ್ಮಾಣ ಹಾಗೂ ನಿರ್ನಾಮವನ್ನು ಮಾಡುವುದು ಎನ್ನುವುದನ್ನು ನೆನಪಿಡಿ. ವೈವಾಹಿಕ ಜೀವನದಲ್ಲೂ ಕೆಲವು ನೋವುಂಟಾಗುವ ಸನ್ನಿವೇಶ ಉದ್ಭವವಾಗಬಹುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ಮಕರ

ಮಕರ

ಸಂಪೂರ್ಣವಾದ ಸಮಾಧಾನ ಲಭಿಸದು. ಕಿರಿಕಿರಿಯ ವಾತಾವರಣ ಉಂಟಾಗುವುದು. ಆರೋಗ್ಯದಲ್ಲೂ ಏರುಪೇರು ಉಂಟಾಗುವುದು. ಮಕ್ಕಳಿಂದ ಅವಮಾನ ಸಹಿಸಬೇಕಾಗುವುದು. ಅಪಘಾತ ಉಂಟಾಗುವ ಸಾಧ್ಯತೆಗಳೂ ಇವೆ. ರಾಹುಕಾಲದಲ್ಲಿ ಪ್ರಯಾಣ ಮಾಡದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗಾಗಿ ಗಣೇಶ ಹಾಗೂ ಶಿವನ ಆರಾಧನೆ ಮಾಡಿ.

ಕುಂಬ

ಕುಂಬ

ನಿಮಗೆ ಇಂದು ಸಂತೋಷಕರವಾದ ದಿನ. ವ್ಯಾಪಾರ ವಹಿವಾಟುಗಳಲ್ಲಿ ಸಮೃದ್ಧಿಯನ್ನು ಕಾಣುವಿರಿ. ಕಲಾವಿದರಿಗೆ ಹೊಸ ಹೊಸ ಅವಕಾಶಗಳು ಲಭ್ಯವಾಗುವುದು. ಪತ್ರಕರ್ತರಿಗೆ ಅನುಕೂಲಕರವಾದಂತಹ ದಿನ. ಸುಂದರವಾದ ನಿಮ್ಮ ಜೀವನದ ಕಾಯಕಲ್ಪಕ್ಕೆ ದೇವಿಯ ಆರಾಧನೆ ಮಾಡಿ.

ಮೀನ

ಮೀನ

ಇಂದು ನಿಮಗೆ ಶುಭ ದಿನ. ಸಂತೋಷಕರವಾದ ಅನೇಕ ಸಂದರ್ಭಗಳನ್ನು ನೀವಿಂದು ಅನುಭವಿಸುವಿರಿ. ಶುಭ ಸಮಾರಂಭಗಳಲ್ಲಿ ಪಾಲ್ಗೊಂಡಂತಹ ಖುಷಿ ನಿಮ್ಮ ಮನಸ್ಸಿಗೆ ಉಂಟಾಗುವುದು. ಸಮಾಧಾನಕರವಾದ ಜೀವನ. ಪತ್ರಕರ್ತರಿಗೆ ನೆಮ್ಮದಿ, ರಾಜಕಾರಣಿಗಳಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಜಯ. ಇನ್ನಷ್ಟು ಪ್ರಗತಿ ಹಾಗೂ ಸಂತೋಷಕ್ಕಾಗಿ ಕುಲದೇವರ ಆರಾಧನೆ ಮಾಡಿ.

English summary

rashi-bhavishya-December 17th

Know what astrology and the planets have in store for you today. Choose your zodiac sign and read the details...
Please Wait while comments are loading...
Subscribe Newsletter