ಶನಿವಾರದ ದಿನ ಭವಿಷ್ಯ

By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 16-12-2017 - Your Day Today - Oneindia Kannada

ಸಾಮಾನ್ಯವಾಗಿ ಎಲ್ಲರೂ ಬದುಕು ಚೆನ್ನಾಗಿರಬೇಕು, ನನಗೆ ಸಿಗುವ ವಸ್ತು ಚೆನ್ನಾಗಿ ಇರಬೇಕು, ಸಂಗಾತಿ ಸುಂದರವಾಗಿರಬೇಕು, ನಾವು ತೊಡುವ ಉಡುಗೆ ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಒಟ್ಟಿನಲ್ಲಿ ಎಲ್ಲಾ ವಿಚಾರದಲ್ಲೂ ಸುಂದರವಾಗಿರಬೇಕು ಎನ್ನುವುದೊಂದೇ ತಲೆಯಲ್ಲಿರುತ್ತದೆ. ಸುಂದರವಾಗಿರುವುದಕ್ಕಿಂತ ನಮಗೆ ಹೊಂದಾಣಿಕೆಯಾಗುವುದು, ಆರಾಮದಾಯಕವಾಗಿರುವುದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಯಾರು ಅರಿಯುವುದೇ ಇಲ್ಲ.

ಸುಂದರವಾದ ವಸ್ತುವಿಗಿಂತ ನಮಗೆ ಶೋಭಿತವಾಗುವ ವಸ್ತು, ಹೆಚ್ಚು ಆರಾಮವನ್ನು ನೀಡುವ ವಿಚಾರ ಹಾಗೂ ನಮ್ಮನ್ನು ಉತ್ತಮವಾಗಿ ನೋಡಿ ಕೊಳ್ಳುವವರಿಂದಲೇ ನಮ್ಮ ಜೀವನ ಸುಂದರ ಹಾಗೂ ಸುಖಕರವಾಗಿರುತ್ತದೆ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಶನಿವಾರ ಎಂದೊಡನೆ ಎಲ್ಲರ ಮನಸ್ಸಿನಲ್ಲೂ ಅದಷ್ಟು ಒಳ್ಳೆಯದಲ್ಲಾ ಎಂಬ ಭಾವವೇ ಹೆಚ್ಚಾಗಿರುತ್ತದೆ. ವಾರ ಯಾವುದಾದರೇನು? ನಮ್ಮ ಬದುಕಲ್ಲಿ ಯಾವ ಹೊಸ ಬದಲಾವಣೆ ಉಂಟಾಗುವುದು? ಎನ್ನುವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡೋಣ. ಶನಿವಾರದ ಇಂದಿನ ನಿಮ್ಮ ಭವಿಷ್ಯವನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

ಸ್ತ್ರೀಯರು ಆರೋಗ್ಯದ ಕುರಿತು ಕೊಂಚ ಕಾಳಜಿಯನ್ನು ವಹಿಸಿ. ಪೂರ್ತಿ ಪ್ರಮಾಣದ ಸಮಾಧಾನದ ಬದುಕನ್ನು ಕಾಣಲು ಕೆಲವರಿಗೆ ಅಸಾಧ್ಯವಾಗುವುದು. ಮಾಂಸಹಾರವನ್ನು ಸೇವಿಸದಿರಿ. ಅನೇಕದಿನಗಳಿಂದ ತೀರ್ಮಾನಿಸಿದ ಕಾರ್ಯಗಳು ಮಧ್ಯಾಹ್ನ ನಂತರದ ಸಮಯದಲ್ಲಿ ನೆರವೇರುವುದು. ಮಿತ್ರರಿಂದ ಸಹಾಯವನ್ನು ನಿರೀಕ್ಷಿಸಬಹುದು. ಸಹ ಪಾಠಿಗಳ ನಡುವೆ ವೈಮನಸ್ಸು ಉಂಟಾಗುವ ಸಾಧ್ಯತೆಗಳಿವೆ. ಮನೆಯಿಂದ ಹೊರಡುವ ಮುನ್ನ ಬಲಗಾಲನ್ನು ಇಟ್ಟು ಹೊರಡಿ. ಉತ್ತಮ ಬದುಕು ಹಾಗೂ ಸಂತೋಷಕರವಾದ ಜೀವನಕ್ಕೆ ಆಂಜನೇಯನ ಆರಾಧನೆ ಮಾಡಿ.

ವೃಷಭ

ವೃಷಭ

ಆರ್ಥಿಕ ವಲಯವು ಸಂಕಷ್ಟದಿಂದ ಕೂಡಿರುತ್ತದೆ. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಲ್ಲಿ ಏರು ಪೇರು ಉಂಟಾಗುವ ಸಾಧ್ಯತೆಗಳಿವೆ. ಆದಷ್ಟು ಎಚ್ಚರಿಕೆಯಿಂದ ಇರಬೇಕು. ಅಷ್ಟಮ ಶನಿಯ ಪ್ರಭಾವ ಇರುವುದರಿಂದ ನೀವು ನಿರೀಕ್ಷಿಸಿದ ಗುರಿಯನ್ನು ತಲುಪಲು ಸಾಧ್ಯವಾಗದು. ತೈಲೋದ್ಯಮ ಹಾಗೂ ಖನಿಜ ವ್ಯಾಪಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಮೋಸಗಾರರ ವಂಚನೆಗೆ ಒಳಗಾಗುವ ಲಕ್ಷಣಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಆಂಜನೇಯ ಮತ್ತು ಶಿವನ ಆರಾಧನೆ ಮಾಡಿ.

ಮಿಥುನ

ಮಿಥುನ

ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಆರ್ಥಿಕ ಸ್ಥಿತಿಯಲ್ಲಿ ಸಂಪೂರ್ಣ ಸಮಾಧಾನ ಕಾಣಲು ಕಷ್ಟವಾಗುವುದು. ಬಂಧು ಮಿತ್ರರಿಂದ ಕಿರಿಕಿರಿ. ಅನಿರೀಕ್ಷಿತ ಸೋಲು ನಿಮ್ಮ ಮಾನಸಿಕ ಸ್ಥಿತಿಯನ್ನು ಹಾಳುಮಾಡುವುದು. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಪೂರ್ಣ ಪ್ರಮಾಣದ ಯಶಸ್ಸು ಗಳಿಸಲು ಕಷ್ಟವಾಗುವುದು. ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ಸಮಾಧಾನ ಲಭಿಸದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಶಿವನ ಆರಾಧನೆ ಮಾಡಿ.

ಕರ್ಕ

ಕರ್ಕ

ಸಮಾಧಾನದ ಬದುಕು ನಿಮ್ಮದಾಗಲಿದೆ. ವ್ಯಾಪಾರಿಗಳಿಗೆ ಲಾಭಾಂಶವು ದೊರೆಯುವುದು. ಆರೋಗ್ಯ ಸುಧಾರಣೆ ಕಾಣುವುದರ ಜೊತೆಗೆ ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ವಿದೇಶ ಯಾನದ ಕನಸು ನನಸಾಗುವುದು. ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ದೂರಾಗುವುದು. ಅನಿರೀಕ್ಷಿತ ಲಾಭಾಂಶದಿಂದ ಜೀವನ ಸಂತೋಷ ಕಾಣುವುದು. ಇನ್ನಷ್ಟು ಸಂತೋಷಕರವಾದ ಜೀವನಕ್ಕೆ ಗಣೇಶನ ಆರಾಧನೆ ಹಾಗೂ ಕುಲದೇವರ ಪ್ರಾರ್ಥನೆ ಮಾಡಿ.

ಸಿಂಹ

ಸಿಂಹ

ಪಂಚಮ ಶನಿ ಇರುವುದರಿಂದ ಆರ್ಥಿಕ ಸ್ಥಿತಿಯು ಕುಸಿತವನ್ನು ಕಾಣುವುದು. ವಿವಿಧ ಮಾನಸಿಕ ಕಿರಿಕಿರಿಗೆ ಒಳಗಾಗುವಿರಿ. ಸಹೋದ್ಯೋಗಿಗಳಿಂದ ಅಡೆತಡೆ. ಹಾಗೂ ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಬೇಕಾದ ಸ್ಥಿತಿ ಒದಗಿ ಬರುವುದು. ಕೆಲಸಕ್ಕೆ ರಾಜಿನಾಮೆ ಕೊಡುವ ಸಾಧ್ಯತೆಗಳಿವೆ. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ಲಭಿಸದು. ಕಲಾವಿದರಿಗೆ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಸಮಾಧಾನದ ಬದುಕನ್ನು ಕಾಣುವಿರಿ. ನಿಮ್ಮ ಜೀವನದ ಆಸೆಗಳನ್ನು ನೆರವೇರಿಸಿಕೊಳ್ಳುವಿರಿ. ಸುಂದರವಾದ ಜೀವನಕ್ಕೆ ಇಂದು ನೀವು ನಾಂದಿಯಾಗುವಿರಿ. ಅನಿರೀಕ್ಷಿತ ಸೋಲು ನಿಮ್ಮಿಂದ ದೂರಾಗುವುದು. ಮನೆಯಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದಂತಹ ತೀರ್ಮಾನಗಳು ಇಂದು ಲಾಭವನ್ನು ತಂದುಕೊಡುವುದು. ಪ್ರಗತಿಯುತವಾದ ಜೀವನಕ್ಕೆ ಶಿವನ ಆರಾಧನೆ ಮಾಡಿ.

ತುಲಾ

ತುಲಾ

ಇಂದು ನಿಮಗೆ ಉತ್ತಮವಾದ ದಿನ. ಎಲ್ಲಾ ವಿಚಾರದಲ್ಲೂ ಪ್ರಗತಿಯನ್ನು ಸಾಧಿಸುವಿರಿ. ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವರು. ಬಡ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಬ್ಯಾಂಕ್ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಜೀವನಕ್ಕಾಗಿ ಶಿವನ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಅನಿರೀಕ್ಷಿತ ಸೋಲು ನಿಮ್ಮ ಮನಸ್ಸಿಗೆ ನೋವನ್ನುಂಟುಮಾಡುವುದು. ಮಾನಸಿಕ ಕಿರಿಕಿರಿ ಹೆಚ್ಚುವುದು. ಆನಿಯ ಪ್ರಭಾವ ಇರುವುದರಿಂದ ಆರ್ಥಿಕ ವಲಯದಲ್ಲೂ ಅನೇಕ ಬಗೆಯ ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಧನು

ಧನು

ಆರೋಗ್ಯ ಸಮಸ್ಯೆಯು ನಿಮ್ಮನ್ನು ಹೈರಾಣವಾಗುವಂತೆ ಮಾಡುತ್ತದೆ. ಮಾನಸಿಕವಾದ ಕಿರಿಕಿರಿ ಉಂಟಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳಿಂದ ಕಿರಿಕಿರಿ ಉಂಟಾಗುವುದು. ಮನೆಯಲ್ಲಿ ನಡೆಯ ಬೇಕಿದ್ದ ದೇವರ ಕೆಲಸ ಅಥವಾ ಕಾರ್ಯಕ್ರಮಗಳಿಗೆ ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ಹಲವಾರು ಬಗೆಯ ಸೋಲು ಹಾಗೂ ವಿಘ್ನಗಳು ನಿಮ್ಮನ್ನು ಹೈರಾಣ ಗೊಳಿಸುವುದು. ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ಆಂಜನೇಯನ ಆರಾಧನೆ ಅಗತ್ಯ.

ಮಕರ

ಮಕರ

ಸ್ತ್ರೀಯರಿಗೆ ಉದ್ಯೋಗದಲ್ಲಿ ಜಯವನ್ನು ಸಾಧಿಸುವ ಸಾಧ್ಯತೆಗಳಿವೆ. ಆತುರ ಪ್ರವೃತ್ತಿಯನ್ನು ತೋರದಿರಿ. ಯುವಕರು ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಖನಿಜ ಮತ್ತು ಕೈಗಾರಿಕೋದ್ಯಮಗಳಲ್ಲಿ ನಷ್ಟ ಉಂಟಾಗುವುದು. ತಂತ್ರಜ್ಞರಿಗೆ ಅನಾನುಕೂಲ ಹಾಗೂ ವಿದ್ಯಾರ್ಥಿಗಳಿಗೆ ಅಪಜಯ ಉಂಟಾಗುವದು. ಮನೆಯಿಂದ ಹೊರಡುವಾಗ ಮಕ್ಕಳ ಮುಖ ದರ್ಶನ ಮಾಡಿ ಹೊರಡಿ. ಚಾಲಕ ವೃತ್ತಿಯಲ್ಲಿರುವವರು ಆದಷ್ಟು ಕಾಳಜಿಯಿಂದ ಇರಬೇಕು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಕುಂಬ

ಕುಂಬ

ಇಂದು ನಿಮಗೆ ಉತ್ತಮವಾದಂತಹ ದಿನ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಅನುಕೂಲ ಉಂಟಾಗುವುದು. ಗುರುಗಳಿಗೆ ಶಿಷ್ಯರಿಂದ ಗೌರವ ದೊರೆಯುವುದು. ಮಕ್ಕಳಿಂದ ಶುಭವಾರ್ತೆ. ನಿರೀಕ್ಷಿಸಿದಂತೆ ಯಶಸ್ಸು ದೊರೆಯುವುದು. ಬಟ್ಟೆ ವ್ಯಾಪಾರ ಹಾಗೂ ತೈಲೋದ್ಯಮದಲ್ಲಿ ಉತ್ತಮ ಲಾಭ ಗಳಿಸುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮೀನ

ಮೀನ

ಸುಂದರವಾದ ನಿಮ್ಮ ಕನಸು ನನಸಾಗುವುದು. ಮಕ್ಕಳಿಂದ ಶುಭವಾರ್ತೆ ಲಭಿಸುವುದು. ಅನಿರೀಕ್ಷಿತ ಸೋಲು ದೂರಾಗುವ ಲಕ್ಷಣಗಳಿವೆ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ಆರ್ಥಿಕ ಕ್ಷೇತ್ರದಲ್ಲಿ ಶುಭಕರವಾದ ಪರಿಣಾಮವನ್ನು ಅನುಭವಿಸುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗೇಶ ಮತ್ತು ದುರ್ಗಾರಾಧನೆಯನ್ನು ಮಾಡಿ.

English summary

rashi-bhavishya-december-16th

Know what astrology and the planets have in store for you today. Choose your zodiac sign and read the details...
Subscribe Newsletter