ಶುಕ್ರವಾರದ ದಿನ ಭವಿಷ್ಯ

Posted By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 15-12-2017 - Your Day Today - Oneindia Kannada

ಶರೀರಕ್ಕೆ ಸೇರಿಸುವ ವಿಷದಿಂದಾಗಿ ವ್ಯಕ್ತಿ ಒಂದೇ ಸಮನೆ ಸಾಯುವನು. ಆದರೆ ಕಿವಿಗೆ ಸೇರಿದ ಚಿಕ್ಕ ಚಿಕ್ಕ ವಿಷದ ವಿಷಯಗಳನ್ನು ಮನಸ್ಸಿನಲ್ಲಿ ಹಾಗೆಯೇ ಇಟ್ಟುಕೊಂಡರೆ ಸಂಬಂಧಗಳೆಲ್ಲವೂ ದುರ್ಬಲಗೊಳ್ಳುವುದು. ಕೊನೆಗೊಂದು ದಿನ ಸಂಬಂಧಗಳನ್ನು ತೊರೆಯಲು ಆಗದೆ, ನಿಭಾಯಿಸಲೂ ಆಗದೆ ಪ್ರತಿ ಕ್ಷಣ ಕ್ಷಣವೂ ಮಾನಸಿಕವಾಗಿ ನೊಂದು ಸಾಯುತ್ತಿರ ಬೇಕಾಗುವುದು.

ಹಾಗಾಗಿ ಪ್ರತಿಯೊಬ್ಬರು ಸದಾ ವಿಶಾಲ ಮನಸ್ಸನ್ನು ಹೊಂದಿರಬೇಕು. ಬೇರೆಯವರ ಚಾಡಿ ಮಾತಿಗೆ ಕಿವಿ ಕೊಡದೆ ಜೀವನವನ್ನು ಸಂತೋಷದಿಂದ ಕಳೆಯಿರಿ. ಶುಭ ಶುಕ್ರವಾರವಾದ ಇಂದು ನಿಮ್ಮ ಭವಿಷ್ಯದಲ್ಲಿ ಲಕ್ಷ್ಮಿ ದೇವಿ ಯಾವೆಲ್ಲಾ ಸಹಾಯ ಮಾಡುವಳು? ಭವಿಷ್ಯದ ಸ್ಥಿತಿ-ಗತಿ ಹೇಗಿರುತ್ತದೆ ಎನ್ನುವುದನ್ನು ಈ ಮುಂದೆ ವಿವರಿಸಲಾದ ದಿನ ಭವಿಷ್ಯವನ್ನು ಪರಿಗಣಿಸಿ... 

ಮೇಷ

ಮೇಷ

ಸ್ತ್ರೀಯರು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವರು. ನೀವು ಅಂದುಕೊಂಡಂತೆಯೇ ಆರ್ಥಿಕ ಸ್ಥಿತಿಯೂ ಸುಧಾರಣೆ ಕಾಣುವುದು. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವದ ವರ್ತನೆಯು ಇನ್ನಷ್ಟು ಜಯವನ್ನು ತಂದುಕೊಡುವುದು. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ನೆಮ್ಮದಿ ಹಾಗೂ ಅನುಕೂಲ ದೊರೆಯುವುದು. ಮಕ್ಕಳ ವಿವಾಹದ ಕುರಿತು ಸ್ನೇಹಿತರಲ್ಲಿ ಚರ್ಚಿಸುವಿರಿ. ಜೀವನದಲ್ಲಿ ಇನ್ನಷ್ಟು ಪ್ರಗತಿ ಹಾಗೂ ಸಂತೋಷಕ್ಕಾಗಿ ಲಕ್ಷ್ಮಿಯ ಆರಾಧನೆ ಮಾಡಿ.

ವೃಷಭ

ವೃಷಭ

ಆರ್ಥಿಕ ವಲಯದಲ್ಲಿ ಅಡೆತಡೆಗಳು ಉಂಟಾಗುವುದು. ನೀವು ಮಾಡುತ್ತಿರುವ ಉದ್ಯೋಗದ ಬದಲಾವಣೆ ಮಾಡದಿರಿ. ಉಪನ್ಯಾಸಕರಿಗೆ ಸಮಾಧಾನ ಲಭ್ಯವಾಗುವುದು. ವಿದ್ಯಾರ್ಥಿಗಳ ನಡುವೆ ಕಿತ್ತಾಟ ಉಂಟಾಗುವುದು. ಸಗಟು ವ್ಯಾಪಾರಿಗಳಿಗೆ ಉತ್ತಮ ಲಾಭ ಉಂಟಾಗುವುದು. ಚಿಲ್ಲರೆ ವ್ಯಾಪಾರಿಗಳಿಗೆ ಸಾಮಾನ್ಯವಾದ ದಿನವಾಗುವುದು. ಮೋಸಗಾರರ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳಿವೆ. ಇನ್ನಷ್ಟು ಉತ್ತಮ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಲಕ್ಷ್ಮಿ ದೇವಿಯನ್ನು ಆರಾಧಿಸಿ.

ಮಿಥುನ

ಮಿಥುನ

ಇಂದು ನಿಮಗೆ ಶುಭ ದಿನ. ಲಾಭ ನಿಮ್ಮನ್ನು ಅರಸಿ ಬರುವುದು. ಬಿಳಿ ಬಟ್ಟೆಯನ್ನು ಧರಿಸಿದರೆ ಎಲ್ಲರೂ ನಿಮ್ಮೆಡೆಗೆ ಆಕರ್ಷಿತರಾಗುವರು. ಸುಂದರವಾದ ಜೀವನವನ್ನು ನೀವಿಂದು ಕಾಣುವಿರಿ. ಸ್ನೇಹಿತರಿಂದ ಸಹಕಾರವನ್ನು ನೀವು ಬಯಸಬಹುದು. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿ ದೊರೆಯುವುದು. ಇನ್ನಷ್ಟು ಸುಂದರ ಬದುಕಿಗಾಗಿ ಲಕ್ಷ್ಮಿ ದೇವಿಯ ಆರಾಧನೆ ಮಾಡಿ.

ಕರ್ಕ

ಕರ್ಕ

ಸಮಾಧಾನದ ಬದುಕನ್ನು ಕಾಣುವಿರಿ. ನೆಮ್ಮದಿಯು ಲಭ್ಯವಾಗುವುದು. ಸಹೋದರರಿಂದ ಸಹಕಾರ ದೊರೆಯುವುದು. ಹೊಸ ಉದ್ಯೋಗದ ಕುರಿತು ಚರ್ಚೆ ನಡೆಸುವಿರಿ. ವಿದೇಶ ಪ್ರವಾಸದ ಕನಸು ನನಸಾಗುವುದು. ಅನಿರೀಕ್ಷಿತ ಲಾಭಾಂಶಗಳು ನಿಮಗೆ ದೊರೆಯುವುದು. ಯಾವುದೇ ಭಯಕ್ಕೆ ಒಳಗಾಗುವ ಅಗತ್ಯವಿಲ್ಲ. ಗಗನ ಸಖಿಯರಿಗೆ ಹಾಗೂ ವಾಯು ಪಡೆಯಲ್ಲಿ ಕೆಲಸದಲ್ಲಿರುವವರಿಗೆ ಅನುಕೂಲಕರವಾದ ದಿನ. ಇನ್ನಷ್ಟು ಸಂತೋಷವನ್ನು ಪಡೆದುಕೊಳ್ಳಲು ಗುರು ಮತ್ತು ಲಕ್ಷ್ಮಿಯ ಆರಾಧನೆ ಮಾಡಿ.

ಸಿಂಹ

ಸಿಂಹ

ಇಂದು ಆದಷ್ಟು ಎಚ್ಚರಿಕೆಯಿಂದ ಇರಿ. ಸ್ತ್ರೀಯರಿಂದ ಅವಮಾನ ಅನುಭವಿಸಬೇಕಾಗುವ ಸಾಧ್ಯತೆಗಳಿವೆ. ರಾಜಕಾರಣಿಗಳಿಗೂ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಯಾರಿಗೂ ಸಾಲ ಕೊಡುವುದು ಹಾಗೂ ಸಾಲ ನೀಡುವ ಕೆಲಸಕ್ಕೆ ಹೋಗಬೇಡಿ. ಜಂಟಿ ವ್ಯವಹಾರಕ್ಕೆ ಮುಂದಾಗದಿರಿ. ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಪ್ರೇಮ ವೈಫಲ್ಯ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ದುರ್ಗೆಯ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಇಂದು ನಿಮಗೆ ಸುಖಮಯವಾದ ದಿನ. ದಾಂಪತ್ಯದಲ್ಲಿದ್ದ ಬಿರುಕು ಸರಿಯಾಗುವುದು. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಅನಿರೀಕ್ಷಿತ ಲಾಭ ನಿಮಗೆ ಖುಷಿಯನ್ನು ನೀಡುವುದು. ಚಾಲಕ ವೃತ್ತಿಯಲ್ಲಿರುವವರು ಬಹಳ ಕಾಳಜಿಯಿಂದ ವಾಹನವನ್ನು ಓಡಿಸಿ. ಆಘಾತ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಲಕ್ಷ್ಮಿಯ ಆರಾಧನೆ ಮಾಡಿ.

ತುಲಾ

ತುಲಾ

ಮಾನಸಿಕ ಸ್ಥಿತಿ ಸಮತೋಲನದಲ್ಲಿರುವುದು. ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಖನಿಜ, ಕಬ್ಬಿಣ ಹಾಗೂ ಅದಿರು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ಧಾರ್ಮಿಕ ಚಿಂತಕರಿಗೆ ಅನುಕೂಲ ಉಂಟಾಗುವುದು. ಹಿರಿಯರ ಮಾತನ್ನು ತಿರಸ್ಕರಿಸದಿರಿ. ಆರ್ಥಿಕ ಸ್ಥಿತಿ-ಗತಿಯ ಕುರಿತು ಯಾರೊಂದಿಗೂ ಚರ್ಚಿಸದಿರಿ. ಬ್ಯಾಂಕ್ ನೌಕರರಿಗೂ ಉತ್ತಮವಾದ ದಿನ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಲಕ್ಷ್ಮಿಯ ಆರಾಧನೆ ಮಾಡಿ.

 ವೃಶ್ಚಿಕ

ವೃಶ್ಚಿಕ

ಆರ್ಥಿಕವಾದ ಏರು ಪೇರು ಹೈರಾಣವಾಗುವಂತೆ ಮಾಡುವುದು. ಶನಿಯ ಪ್ರಭಾವ ಇರುವುದರಿಂದ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಾಗದು. ಮನೆಯಿಂದ ಹೊರಡುವಾಗ ವಿನಾಯಕ ಮತ್ತು ಆಂಜನೇಯನ ಸ್ಮರಣೆ ಮಾಡಿ ಹೊರಡುವುದು ಉತ್ತಮ. ಕೈಗಾರಿಕೋದ್ಯಮದಲ್ಲಿರುವವರಿಗೆ ಅಡೆತಡೆ ಉಂಟಾಗುವ ಸಾಧ್ಯತೆಗಳಿವೆ. ಮಕ್ಕಳಿಗಾಗಿ ಹಣ ವ್ಯಯಿಸಬೇಕಾಗುವುದು. ಸಮಸ್ಯೆಗಳ ನಿವಾರಣೆಗೆ ಲಕ್ಷ್ಮಿಯ ಆರಾಧನೆ ಮಾಡಿ.

 ಧನು

ಧನು

ಆರ್ಥಿಕ ಸ್ಥಿತಿಗತಿಯು ಚಿಂತನೀಯವಾಗಿರುತ್ತದೆ. ಆರೋಗ್ಯದಲ್ಲೂ ಗಣನೀಯವಾದ ವೈಪರೀತ್ಯ ಉಂಟಾಗುವುದು. ಮೂರನೇ ವ್ಯಕ್ತಿಯ ಮಾತಿಗೆ ತಲೆ ಕೆಡಿಸಿಕೊಳ್ಳದಿರಿ. ಜೀವನದ ನಿರ್ಧಾರವನ್ನು ಸೂಕ್ತ ರೀತಿಯಲ್ಲಿ ಕೈಗೊಳ್ಳಿ. ಸಂಬಂಧಿಸದ ಜಗಳದಲ್ಲಿ ಮೂಗು ತೂರಿಸಲು ಹೋಗದಿರಿ. ಆಂತರಿಕ ವಿಚಾರವನ್ನು ಯಾರೊಂದಿಗೂ ಚರ್ಚಿಸದಿರಿ. ಹೆಂಡತಿಯ ಆರೋಗ್ಯದ ಕುರಿತು ಕಾಳಜಿ ವಹಿಸಿ. ಶನಿಯ ಪ್ರಭಾವ ಇರುವುದರಿಂದ ಹಣವನ್ನು ವ್ಯಯಿಸಬೇಕಾಗುವ ಸಾಧ್ಯತೆಗಳಿರುತ್ತವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಲಕ್ಷ್ಮಿಯ ಆರಾಧನೆ ಮಾಡಿ.

ಮಕರ

ಮಕರ

ಆತುರದಿಂದ ವರ್ತಿಸದಿರಿ. ಮನೆಯಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ಅನಿರೀಕ್ಷಿತ ಸೋಲು ನಿಮ್ಮ ಮನಸ್ಸಿಗೆ ಗಾಯವನ್ನುಂಟುಮಾಡುವುದು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀರು ಮತ್ತು ಬೆಂಕಿಯ ಬಳಿ ಮಕ್ಕಳನ್ನು ಕಳುಹಿಸದಿರಿ. ಕೈಗಾರಿಕೋದ್ಯಮದಲ್ಲಿರುವವರಿಗೆ ನಷ್ಟ ಸಾಧ್ಯತೆ. ಕೆಮಿಕಲ್ ಉದ್ಯಮ ಅಥವಾ ವ್ಯಾಪಾರದಲ್ಲಿರುವವರು ಬೆಂಕಿಯಿಂದ ಕೊಂಚ ದೂರದಲ್ಲಿರುವುದು ಸೂಕ್ತ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಲಕ್ಷ್ಮಿ ದೇವಿಯ ಆರಾಧನೆ ಮಾಡಿ.

ಕುಂಬ

ಕುಂಬ

ಸಮಾಧಾನದ ಬದುಕು ಕಾಣುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ. ಮನಸ್ಸಿಗೆ ಸಂತೋಷ. ಸ್ತ್ರೀಯರು ನೆಮ್ಮದಿಯನ್ನು ಪಡೆದುಕೊಳ್ಳುವ ಲಕ್ಷಣಗಳಿವೆ. ಉದ್ಯಮಿಗಳಿಗೆ ಲಾಭ ಹಾಗೂ ಉದ್ಯೋಗಿಗಳಿಗೆ ಅನುಕೂಲಕರ ವ್ಯವಸ್ಥೆ ಲಭಿಸುವುದು. ಕಪ್ಪು ಬಟ್ಟೆಯನ್ನು ತೊಡದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಮೀನ

ಮೀನ

ಸುಖಮಯವಾದ ಜೀವನ ಹಾಗೂ ಸಂತೋಷದ ಬದುಕನ್ನು ಕಾಣುವಿರಿ. ನೆಮ್ಮದಿಯಿಂದ ಕೂಡಿರುವ ಈ ದಿನ ಅನಿರೀಕ್ಷಿತ ಸೋಲಿನಿಂದ ದೂರಾಗುವಿರಿ. ಎಲ್ಲಾ ಬಗೆಯ ಸಮಾಧಾನದ ಬದುಕಿಗೆ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

English summary

rashi-bhavishya-December 15th

Know what astrology and the planets have in store for you today. Choose your zodiac sign and read the details...