ಸೋಮವಾರದ ದಿನ ಭವಿಷ್ಯ

Posted By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 11-12-2017 - Your Day Today - Oneindia Kannada

ದೊಡ್ಡಸ್ತಿಕೆ ಎನ್ನುವುದು ಶ್ರೀಮಂತಿಕೆಯಲ್ಲಿ ಇರುವುದಿಲ್ಲ. ನಮ್ಮ ನಡತೆ ಹಾಗೂ ಪ್ರಾಮಾಣಿಕತೆಯಲ್ಲಿ ಇರುತ್ತದೆ. ನಮ್ಮ ನಡೆ ನುಡಿಗಳು ಸಭ್ಯತೆಯಿಂದ ಕೂಡಿದ್ದರೆ, ಸುತ್ತಲಿನ ಜನರು ನಮ್ಮೊಂದಿಗೆ ಬೆರೆಯುತ್ತಾರೆ. ಜೊತೆಗೆ ಕಷ್ಟ-ಸುಖಗಳಿಗೆ ಆಗುತ್ತಾರೆ. ಹಾಗಾಗಿಯೇ ನಮ್ಮ ಬಳಿ ಹಣ, ಆಸ್ತಿ ಎನ್ನುವ ಐಶ್ವರ್ಯ ಇಲ್ಲದಿದ್ದರೂ ಸರಿ.

ಮನಸ್ಸು ವಿಶಾಲವಾಗಿ, ಪ್ರೀತಿ ವಿಶ್ವಾಸದಿಂದ ಕೂಡಿದ್ದರೆ ಸಾಕು. ಅದೇ ಅತ್ಯಂತ ದೊಡ್ಡ ಐಶ್ವರ್ಯವಾಗುವುದು. ಸೋಮವಾರವಾದ ಈ ಶುಭ ದಿನ ನಿಮ್ಮ ಜೀವನದಲ್ಲಿ ಯಾವೆಲ್ಲಾ ಬದಲಾವಣೆ ತರಬಹುದು ಎನ್ನುವ ವಿಚಾರವನ್ನು ತಿಳಿದಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದೆ ನೀಡಿರುವ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ

ಮೇಷ

ಸಮಾಧಾನದ ಬದುಕು ನಿಮ್ಮದಾಗುವುದು. ಪತ್ರಕರ್ತರಿಗೆ ಲಾಭಾಂಶ ಉಂಟಾಗುವುದು. ರಾಜಕೀಯ ನಾಯಕರಿಗೆ ನೆಮ್ಮದಿ ಲಭಿಸುವುದು. ಹಲವಾರು ವಿಷಯಗಳಿಂದ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ವಿವಾಹ ಯೋಗವು ಕೂಡಿ ಬರುವುದು. ಜೀವನದಲ್ಲಿ ಇನ್ನಷ್ಟು ಸಮೃದ್ಧಿಗಾಗಿ ಸೋಮೇಶ್ವರನ ಆರಾಧನೆ ಮಾಡಿ.

ವೃಷಭ

ವೃಷಭ

ಆರ್ಥಿಕ ಸ್ಥಿತಿಯಲ್ಲಿ ಏರು ಪೇರುಗಳನ್ನು ಕಾಣುವಿರಿ. ಹೈರಾಣವಾದ ಪರಿಸ್ಥಿತಿಯನ್ನು ಸರಿ ದೂಗಿಸಲು ಸಾಲಕ್ಕೆ ಮುಂದಾಗದಿರಿ. ಬಂಧು ಮಿತ್ರರಿಂದಲೇ ನಿಮಗೆ ಸಮಸ್ಯೆ ಉಂಟಾಗುವುದು. ಹತ್ತಾರು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುವುದು. ಸಿಮೆಂಟ್, ಕಬ್ಬಿಣ, ಹೋಟೆಲ್ ಸೇರಿದಂತೆ ಇನ್ನಿತರ ಉದ್ಯೋಗಗಳಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆಗಳಿವೆ. ಮಾಂಸಹಾರವನ್ನು ಸೇವಿಸದಿರಿ. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಮಿಥುನ

ಮಿಥುನ

ಇಂದು ನಿಮಗೆ ಶುಭಪ್ರದವಾಧ ದಿನ. ಮನೆಯಲ್ಲಿ ನೆಮ್ಮದಿ. ಹೆಂಡತಿಯಿಂದ ಸಂಪೂರ್ಣ ಸಹಕಾರ ದೊರೆಯುವುದು. ವಿದ್ಯಾರ್ಥಿಗಳ ಎಲ್ಲಾ ಕನಸುಗಳು ನನಸಾಗುವುದು. ಜೀವನದಲ್ಲಿ ಇನ್ನಷ್ಟು ಪ್ರಗತಿ ಹಾಗೂ ಉತ್ತಮ ಬದುಕಿಗಾಗಿ ಸೋಮೇಶ್ವರನ ಆರಾಧನೆ ಮಾಡಿ.

ಕರ್ಕ

ಕರ್ಕ

ಸುಂದರ ಬದುಕನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಅನೇಕ ದಿನಗಳಿಂದ ಪರಿಹಾರ ಕಾಣದ ನ್ಯಾಯಾಂಗದ ವ್ಯಾಜ್ಯದಲ್ಲಿ ಜಯವನ್ನು ಗಳಿಸುವಿರಿ. ಹಿರಿಯರು ಮಿತಿ ಮೀರಿದ ಆಹಾರವನ್ನು ಸೇವಿಸದಿರಿ. ಸ್ಥಿರಾಸ್ತಿಯಿಂದ ಲಾಭ. ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ಇನ್ನಷ್ಟು ಲಾಭ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಸಿಂಹ

ಸಿಂಹ

ನಿಮಗೆ ಪಂಚಮ ಶನಿ ಇರುವುದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು. ಯಾರೊಂದಿಗೂ ಕಲಹಕ್ಕೆ ಮುಂದಾಗದಿರಿ. ಮನದಾಳದ ಮಾತನ್ನು ಅನ್ಯರಲ್ಲಿ ಹೇಳದಿರಿ. ಮಹಿಳೆಯರಿಂದ ಅವಮಾನ ಉಂಟಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳ ಕಾಟ. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಸಾಮಾನ್ಯವಾದ ದಿನ. ಮಾನಸಿಕವಾಗಿ ಅಂದುಕೊಂಡ ವಿಚಾರವನ್ನು ಕೈಬಿಡದಿರಿ. ನೀವು ನಿರೀಕ್ಷಿಸಿದ ಮಟ್ಟದಲ್ಲೇ ಯಶಸ್ಸನ್ನು ಪಡೆದುಕೊಳ್ಳುವಿರಿ. ಸುಂದರವಾದ ಜೀವನವನ್ನು ನೀವು ಇಂದು ಅನುಭವಿಸುವಿರಿ. ಯುವತಿಯರಿಗೆ ಅನುಕೂಲ ಉಂಟಾಗುವುದು. ಸ್ಥಿರಾಸ್ತಿಯಿಂದ ಲಾಭ ಹಾಗೂ ವ್ಯಾಪಾರದಲ್ಲಿ ಅನುಕೂಲವನ್ನು ಪಡೆದುಕೊಳ್ಳುವಿರಿ. ಇನ್ನಷ್ಟು ಉತ್ತಮ ಬದುಕಿಗೆ ಶಿವನ ಆರಾಧನೆ ಮಾಡಿ.

ತುಲಾ

ತುಲಾ

ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ. ಮನಸ್ಸಿಗೂ ಒಂದಿಷ್ಟು ಸಮಾಧಾನ ಲಭಿಸುವುದು. ತಂದೆತಾಯಿಯ ಆಶೀರ್ವಾದ ಹಾಗೂ ಸಹಕಾರದಿಂದ ಹೊಸ ಉದ್ಯೋಗ ಅಥವಾ ವ್ಯವಹಾರಕ್ಕೆ ಮುಂದಾಗಲಿದ್ದೀರಿ. ಅನಿವಾರ್ಯವಾಗಿ ದೂರದ ಪ್ರಯಾಣ ಮಾಡುವಿರಿ. ಆ ಪ್ರಯಾಣದಿಂದ ನಿಮಗೆ ಲಾಭ ಉಂಟಾಗುವುದು. ಬಟ್ಟೆ, ಪೆಟ್ರೋಲ್ ಮತ್ತು ತೈಲ ವ್ಯಾಪಾರಿಗಳಿಗೆ ಉತ್ತಮ ಲಾಭ ಹಾಗೂ ಅನುಕೂಲ ಉಂಟಾಗುವುದು. ಇನ್ನಷ್ಟು ಯಶಸ್ಸು ಹಾಗೂ ಸಮಾಧಾನದ ಬದುಕಿಗೆ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಮಾನಸಿಕವಾಗಿ ಕಿರಿಕಿರಿ ಉಂಟಾಗುವುದು. ಬಂಧು ಮಿತ್ರರಿಂದಲೂ ಅಸಹಕಾರ. ಅನಿರೀಕ್ಷಿತ ವಾದ ಸೋಲು ನಿಮ್ಮನ್ನು ಹೈರಾಣ ಗೊಳಿಸುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಉಂಟಾಗುವ ಏರು ಪೇರು ಮಾನಸಿಕ ಕುಸಿತಕ್ಕೆ ಕಾರಣವಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಧನು

ಧನು

ಅನೇಕ ಸಮಸ್ಯೆಗಳು ನಿಮ್ಮ ಬೆನ್ನೇರಬಹುದು. ಅನೇಕ ದಿನಗಳಿಂದ ಚರ್ಚಿಸಲಾದ ತೀರ್ಮಾನಗಳಲ್ಲಿ ಏರುಪೇರು ಉಂಟಾಗುವುದು. ಇದು ನಿಮ್ಮ ಮಾನಸಿಕ ಸ್ಥಿತಿಯನ್ನು ಹಾಳುಮಾಡವುದು. ಮನೆಯಲ್ಲೂ ಅಸಮಧಾನ. ಮಕ್ಕಳಿಂದಲೂ ಅಶುಭ ವಾರ್ತೆ ಕೇಳುವಿರಿ. ಜನ್ಮದಲ್ಲಿರುವ ಶನಿ ಹೆಚ್ಚು ವ್ಯಯವನ್ನು ತಂದೊಡ್ಡುವನು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಮಕರ

ಮಕರ

ಆತುರದ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಕೈಗೊಳ್ಳದಿರಿ. ಸಹಪಾಠಿಗಳು ಹಾಗೂ ಸಹೋದ್ಯೋಗಿಗಳಿಂದಲೂ ಕಿರಿಕಿರಿ ಉಂಟಾಗುವುದು. ಆರ್ಥಿಕ ಸ್ಥಿತಿಯಲ್ಲೂ ಏರು ಪೇರು ಉಂಟಾಗುವುದು. ಸ್ತ್ರೀಯರು ಮಾಡುವ ಕೆಲಸದಲ್ಲಿ ಶ್ರದ್ಧೆಯನ್ನು ತೋರಿ. ಜೀವನದಲ್ಲಿ ಇನ್ನಷ್ಟು ಉತ್ತಮ ಫಲ ಪಡೆದುಕೊಳ್ಳಲು ಶಿವನ ಆರಾಧನೆ ಮಾಡಿ.

ಕುಂಬ

ಕುಂಬ

ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಹಾಗೂ ಗೃಹ ಕೈಗಾರಿಕೆಯಲ್ಲಿ ಲಾಭವನ್ನು ಗಳಿಸಿಕೊಳ್ಳುವಿರಿ. ಇಂದು ನಿಮಗೆ ಉತ್ತಮವಾದ ದಿನ. ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಕಾರ್ಮಿಕರಿಗೆ ಅನುಕೂಲ. ಯಶಸ್ವಿ ಜೀವನ ಹಾಗೂ ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಮೀನ

ಮೀನ

ಸುಂದರವಾದ ಜೀವನವನ್ನು ದೇವರು ಇಂದು ಕಲ್ಪಿಸುವನು. ಅನೇಕ ದಿನಗಳಿಂದ ಬಗೆ ಹರಿಯದ ವ್ಯಾಜ್ಯದಲ್ಲಿ ಜಯಗಳಿಸುವಿರಿ. ವಕೀಲ ವೃತ್ತಿಯಲ್ಲಿರುವವರಿಗೆ ಲಾಭ ಉಂಟಾಗುವುದು. ಕಲಾವಿದರಿಗೆ ನೆಮ್ಮದಿ ಹಾಗೂ ಚಿತ್ರೋದ್ಯಮದಲ್ಲಿ ತೊಡಗಿಕೊಂಡವರಿಗೆ ಲಾಭಾಂಶ ದೊರೆಯುವುದು. ವೈಜ್ಞಾನಿಕ ಕ್ಷೇತ್ರ ಹಾಗೂ ವೈದ್ಯ ವೃತ್ತಿಯಲ್ಲಿರುವವರಿಗೆ ಲಾಭ ಉಂಟಾಗುವುದು. ಜೀವನದಲ್ಲಿ ಇನ್ನಷ್ಟು ಸಂತೋಷವನ್ನು ಪಡೆದುಕೊಳ್ಳಲು ಶಿವನ ಆರಾಧನೆ ಮಾಡಿ.

English summary

rashi-bhavishya-December 11th

Know what astrology and the planets have in store for you today. Choose your zodiac sign and read the details...