ಇದೆಲ್ಲಾ ನಿಜವೇ? ಸಮುದ್ರದ ನೀರು ಒಮ್ಮಿಂದೊಮ್ಮೆಗೇ ಬತ್ತಿ ಹೋಯಿತೇ!!

Posted By: Arshad
Subscribe to Boldsky

ನಿಸರ್ಗ ಮುನಿಸಿಕೊಂಡರೆ ಮನುಷ್ಯರು ಇದನ್ನು ತಡೆಯಲು ಸಾಧ್ಯವೇ ಇಲ್ಲ. ಈ ಪ್ರಕೋಪದ ಪರಿಣಾಮಗಳನ್ನು ಊಹಿಸಬಹುದೇ ಹೊರತು ತಡೆಗಟ್ಟಲು ಸಾಧ್ಯವಿಲ್ಲ. ಏನಿದ್ದರೂ ಇದರ ಅಟ್ಟಹಾಸವನ್ನು ನೋಡುತ್ತಿರಬೇಕು ಅಷ್ಟೇ. ನಮ್ಮ ಸುತ್ತಮುತ್ತ ಹಲವಾರು ವಾತಾವರಣದ ವೈಪರೀತ್ಯಗಳು ಕಂಡುಬರುತ್ತಿವೆ. ಒಂದೆಡೆ ಅತಿವೃಷ್ಟಿಯಿಂದ ಮಹಾಪೂರ ಎದುರಾದರೆ ಇನ್ನೊಂದೆಡೆ ಚಂಡಮಾರುತ ಸಮುದ್ರವನ್ನೇ ಎತ್ತಿ ತೀರಪ್ರದೇಶಗಳ ಮೇಲೆ ಎಸೆಯುತ್ತಿದೆ.

ಇದರ ನಡುವೆ ಚಂಡಮಾರುತದ ಪರಿಣಾಮದಿಂದ ಸಮುದ್ರದ ನೀರೇ ಒಮ್ಮೊಂದೊಮ್ಮೆಗೇ ಖಾಲಿಯಾಗಿದೆ. ಹೌದು, ಚಂಡಮಾರುತ 'ಇರ್ಮಾ'ದ ಪರಿಣಾಮದಿಂದ ಬಹಾಮಾಸ್ ಪ್ರದೇಶದಲ್ಲಿ ಈ ನಿಸರ್ಗಪ್ರಕೋಪದ ಪರಿಣಾಮ ಕಂಡುಬಂದಿದೆ, ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಈ ವಿಷಯದ ವಿನಿಮಯ ಒಂದು ಟ್ವೀಟ್‌ನಿಂದ ಪ್ರಾರಂಭವಾಯಿತು

ಈ ವಿಷಯದ ವಿನಿಮಯ ಒಂದು ಟ್ವೀಟ್‌ನಿಂದ ಪ್ರಾರಂಭವಾಯಿತು

ಬಹಾಮಾಸ್ ನಲ್ಲಿರುವ ಲಾಂಗ್ ಐಲ್ಯಾಂಡ್ ಎಂಬಲ್ಲಿಂದ ಮಹಿಳೆಯೊಬ್ಬರು ತಮ್ಮ ಮೊಬೈಲಿನಿಂದ ಟ್ವಿಟ್ಟರ್ ಸಂದೇಶವೊಂದನ್ನು ಕಳುಹಿಸಿದರು. ಇವರ ಸಂದೇಶ ಹೀಗಿತ್ತು: "ನಾನು ಈಗ ನೋಡುತ್ತಿರುವುದನ್ನು ನಂಬಲಿಕ್ಕೇ ಸಾಧ್ಯವಿಲ್ಲ, ಇದು ಲಾಂಗ್ ಐಲ್ಯಾಂಡ್, ಬಹಾಮಾಸ್. ಇಲ್ಲಿನ ಸಮುದ್ರದಿಂದ ನೀರು ಕಾಣೆಯಾಗಿಬಿಟ್ಟಿದೆ!!!, ಎಲ್ಲಿಯವರೆಗೆ ಇರ್ಮಾ ಚಂಡಮಾರುತ ದಿಗಂತದಲ್ಲಿ ಕಾಣುತ್ತಿದೆಯೋ ಅಲ್ಲಿಯವರೆಗೂ ಸಮುದ್ರ ಖಾಲಿಯಾಗಿಬಿಟ್ಟಿದೆ"

ಈ ವಿಡಿಯೋದಲ್ಲಿ...

ಈ ಮಹಿಳೆ ತಾನು ಕಂಡ ವಿದ್ಯಮಾನವನ್ನು ತನ್ನ ಮೊಬೈಲಿನಲ್ಲಿ ವೀಡಿಯೋ ಮೂಲಕ ಸೆರೆಹಿಡಿದಿದ್ದು ಇವರು ನೀರು ಖಾಲಿಯಾದ ಬಳಿಕ ಉಳಿದ ಉಸುಕಿನಲ್ಲಿ ನಡೆದಾಡುತ್ತಿದ್ದಾರೆ. ಇದು ಪೂರ್ಣ ಒಣಗಿದ್ದು ದೊಡ್ಡ ದೊಡ್ಡ ಕಪ್ಪೆಚಿಪ್ಪುಗಳಿಂದ ಕೂಡಿದೆ. ಸಮುದ್ರ ತೀರ ಹಿಂದೆ ಇದ್ದುದಕ್ಕಿಂತ ಎಷ್ಟೋ ಹಿಂದೆ ಹೋಗಿದ್ದು ಇದುವರೆಗೆ ನೀರಿನಡಿಯಲ್ಲಿದ್ದ ನೆಲ ಈಗ ಆಕಾಶಕ್ಕೆ ತೆರೆದುಕೊಂಡಿದೆ.

ಇನ್ನೊಂದು ತೀರದ ನೀರನ್ನೂ ಚಂಡಮಾರುತ ನುಂಗಿತ್ತು!

ಇನ್ನೊಂದು ತೀರದ ನೀರನ್ನೂ ಚಂಡಮಾರುತ ನುಂಗಿತ್ತು!

ಬಹಾಮಾಸ್‌ನಲ್ಲಿಯೇ ಇರುವ ಇನ್ನೊಂದು ತೀರದಲ್ಲಿಯೂ ಇದೇ ರೀತಿ ನೀರು ಖಾಲಿಯಾಗಿರುವುದನ್ನು ಇನ್ನೊಬ್ಬ ವ್ಯಕ್ತಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಆದರೆ ಸುಮಾರು ಹದಿಮೂರು ಘಂಟೆಗಳ ಬಳಿಕ ಇದು ಸಾಮಾನ್ಯ ಮಟ್ಟಕ್ಕೆ ಹಿಂದಿರುಗಿದೆ.

ಮತ್ತೊಂದು ಟ್ವೀಟ್ ಪ್ರಕಾರ

ಮತ್ತೊಂದು ಟ್ವೀಟ್ ಸಹಾ ಈಗ ವೈರಲ್ ಆಗಿದ್ದು ಹೆಚ್ಚು ಹೆಚ್ಚು ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪವನಶಾಸ್ತ್ರಜ್ಞರ ಪ್ರಕಾರ

ಪವನಶಾಸ್ತ್ರಜ್ಞರ ಪ್ರಕಾರ

ಪವನಶಾಸ್ತ್ರಜ್ಞರ ವಿವರಣೆಯಂತೆ ಈ ಚಂಡಮಾರುತದ ಕೇಂದ್ರ ತೀರಾ ಕೆಳಗಿದ್ದುದು ಹಾಗೂ ಈ ಚಂಡಮಾರುತ ತೀರಾ ಪ್ರಬಲವಾಗಿದ್ದ ಕಾರಣ ಹತ್ತಿರದ ಅಷ್ಟೂ ನೀರನ್ನು ಮೇಲೆ, ಕೇಂದ್ರಭಾಗಕ್ಕೆ ಎಳೆದುಕೊಂಡಿದೆ. ಪರಿಣಾಮವಾಗಿ ಸುತ್ತ ಮುತ್ತಲ ನೀರು ಈ ಭಾಗಕ್ಕೆ ಹರಿದು ಬಂದಿದೆ. ತೀರ ಪ್ರದೇಶ ಹೆಚ್ಚು ಆಳವಾಗಿಲ್ಲದ ಕಾರಣ ಅಲ್ಲಿನ ನೀರೆಲ್ಲಾ ಹಿಂದೆ ಸರಿದು ನೆಲ ಆಕಾಶಕ್ಕೆ ತೆರೆದುಕೊಂಡಿದೆ.

English summary

Rare Phenomenon Of Ocean Water Getting Sucked Inside The Bahamas

When mother nature decides to show the world its furious side, there is very little that any human can do to stop the damage! With so many climatic changes happening around us, we are often noticing unexpected floods and hurricanes! Amidst all this, could you imagine of seeing an entire ocean going dry during the hurricane? Well, this is what happened when Hurricane Irma hit the Bahamas! Continue reading to know more...