Latest Updates
-
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಜೈಲಿನಲ್ಲಿರುವವರು ಖೈದಿಗಳಾಗಿದ್ದರೂ ಸಿಗುವುದು 'ರಾಜ ಮರ್ಯಾದೆ'!
ಸಮಾಜಕ್ಕೆ ಅಹಿತಕರವಾದ ಅಥವಾ ಹಾನಿಯುಂಟು ಮಾಡುವವರಿಗೆ ಬಂಧಿಸುವುದು/ಶಿಕ್ಷೆ ನೀಡುವುದು ಸಹಜ. ಅದು ಸರಿಯಾದ ಮಾರ್ಗವೂ ಹೌದು. ತಪ್ಪು ಮಾಡಿದವರಿಗೆ ತಪ್ಪಿನ ಅರಿವಾಗಿ, ತಮ್ಮನ್ನು ತಾವು ತಿದ್ದಿಕೊಳ್ಳಲು ಕೊಡುವ ಒಂದು ಸುವರ್ಣ ಅವಕಾಶ. ಅದೇ ಅಹಿತಕರ ಕೆಲಸ ಮಾಡಿದವರಿಗೆ ಸನ್ಮಾನಿಸುವುದು ಹಾಗೂ ರಾಜ ಮರ್ಯಾದೆಯ ವಸತಿ ವ್ಯವಸ್ಥೆ ಕಲ್ಪಿಸಿಕೊಡುವುದು ಎಂದರೆ ಅದೊಂದು ಹಾಸ್ಯ ಎನಿಸುವುದರಲ್ಲಿ ಸಂದೇಹವಿಲ್ಲ. ಆದರೆ ಇದು ನಿಜ.
ಹೌದು, ನಾರ್ವೆಯಲ್ಲಿ ತಪ್ಪು ಮಾಡಿದ ವ್ಯಕ್ತಿಗಳಿಗೆ ಯಾವುದೇ ರೀತಿಯ ಬಲವಂತವಾದ ಜೈಲು ಶಿಕ್ಷೆ ನೀಡುವುದಿಲ್ಲ. ಬದಲಿಗೆ ರಾಜ ಮರ್ಯಾದೆ ದೊರೆಯುತ್ತದೆ. ತಿನ್ನಲು ಬರೇ ಮುದ್ದೆ-ಸಾರು ಅಲ್ಲ. ಫೈ-ಸ್ಟಾರ್ ಹೋಟೆಲ್‍ಗಳಲ್ಲಿ ನೀಡುವ ಆಹಾರೋಪಚಾರಕ್ಕಿಂತಲೂ ಹೆಚ್ಚು ಗುಣಮಟ್ಟ ಮತ್ತು ವಿವಿಧ ಬಗೆಯ ಊಟ-ತಿಂಡಿಗಳನ್ನು ನೀಡುತ್ತಾರೆ.
ನಿಮಗಿದನ್ನು ಕೇಳುತ್ತಿದ್ದರೆ ನಂಬಲಸಾಧ್ಯ ಎನಿಸಬಹುದು ಅಥವಾ ಯಾಕೆ ಹೀಗೆ ಮಾಡುತ್ತಾರೆ ಎನ್ನುವ ಪ್ರಶ್ನೆ ಕಾಡಬಹುದು. ಈ ಎಲ್ಲ ಬಗೆಯ ಕುತೂಹಲಕ್ಕೆ ಮಾಹಿತಿಯನ್ನು ಈ ಲೇಖನ ತೆರೆದಿಡುತ್ತದೆ....

ಜೈಲಿನ ಇತಿಹಾಸ
ನಾರ್ವೆಯಲ್ಲಿರುವ ಈ ಜೈಲಿನಲ್ಲಿ ಮೊದಲು ಕ್ರೂರ ರೀತಿಯ ಶಿಕ್ಷೆ ನೀಡಲಾಗುತ್ತಿತ್ತು. ನಿರಾಶ್ರಿತ ಅಪರಾಧಿಗಳು, ತಂದೆತಾಯಿಗಳ ನಿರ್ಲಕ್ಷಕ್ಕೆ ಒಳಗಾದ ಖೈದಿಗಳು ಮತ್ತು ಬಡತನಕ್ಕೆ ಸೋತು ಬಂದ ಅಪರಾಧಿಗಳಿಗೆ ನರಕ ತಾಣವಾಗಿತ್ತು.

ಜೈಲಿನ ಕಥೆ
1915ರ ವೇಳೆಯಲ್ಲಿ ಇಲ್ಲಿ ಬಂಧಿತರಾದ ಅಪರಾಧಿಗಳು ಶಿಕ್ಷೆಯನ್ನು ಸಹಿಸಲಾಗದೇ ದಂಗೆಗೇಳುವುದು ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ದ್ವೀಪ ಪ್ರದೇಶದಲ್ಲಿದ್ದ ಈ ಜೈಲಿಗೆ ಮಿಲಿಟರಿ ಕಾವಲನ್ನು ಸಹ ನೀಡಲಾಗಿತ್ತು. 1953ರಲ್ಲಿ ಮಹಿಳೆಯರಿಗಾಗಿ ಇದ್ದ ಜೈಲನ್ನು ಮುಚ್ಚಲಾಯಿತು. 1970ರಲ್ಲಿ ಆ ಪ್ರದೇಶವನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿತು.
ಮರು ಸ್ಥಾಪನೆ
1982ರಲ್ಲಿ ಜೈಲಿನ ಮರು ಸ್ಥಾಪನೆಯಾಯಿತು. ಸುಮಾರು 115 ಅಪರಾಧಿಗಳನ್ನು ಹೊಂದಿರುವ ಈ ಜೈಲು ವಿಶ್ವದ ಅತ್ಯಂತ ಉದಾರವಾದ ಕಾರಾಗೃಹ ಎಂದು ಗುರುತಿಸಲಾಯಿತು.

ಸೆರೆಮನೆಯ ವಿಶೇಷತೆ
ಇಲ್ಲಿ ಅಪರಾಧಿಗಳಿಗಾಗಿ ಟಿವಿ, ಅಡುಗೆ ಮನೆ, ಹಾಲ್, ಖಾಸಗಿ ಬೆಡ್‍ರೂಮ್‍ಗಳ ವ್ಯವಸ್ಥೆಯಿದೆ. ಮನೆಯ ಕೆಲಸವನ್ನು ಪ್ರತಿಯೊಬ್ಬರು ಬೆಳಗ್ಗೆ 8.30 ರಿಂದ 3.30ರ ವರೆಗೆ ಮಾಡಬೇಕು.

ವಿಶೇಷ ಚಟುವಟಿಕೆಗಳು
ಬಿಡುವಿನ ಸಮಯದಲ್ಲಿ ಖೈದಿಗಳು ತಮಗಿಷ್ಟವಾಗುವ ಕುದುರೆ ಸವಾರಿ, ಮೀನು ಹಿಡಿಯುವುದು, ಟೆನ್ನಿಸ್ ಆಟ, ಸಮುದ್ರ ತೀರದಲ್ಲಿ ಓಡಾಡುವುದು ಮತ್ತು ಈಜುವ ಕೆಲಸವನ್ನು ಮಾಡಬಹುದು.

ಮೇಲ್ವಿಚಾರಣಾ ಸಿಬ್ಬಂದಿಗಳು
ಈ ಜೈಲಿನಲ್ಲಿ ಅಪರಾಧಿಗಳನ್ನು ಕಾಯಲು ಕೇವಲ 5 ಸಿಬ್ಬಂದಿಗಳಿದ್ದಾರೆ. ಈ ಖೈದಿಗಳಿಗೆ ಯಾವುದೇ ಸಮವಸ್ತ್ರಗಳಿಲ್ಲ. ಇವರು ದ್ವೀಪದೆಲ್ಲೆಡೆಯೂ ಓಡಾಡುತ್ತಾರೆ.
ವಿಚಿತ್ರವಾದ ಸಂಗತಿ
ಇಲ್ಲಿ ಅಪರಾಧಿಗಳಿಗೆ ಒಳ್ಳೆಯ ಸೌಲಭ್ಯ ಹಾಗೂ ಚಿಕಿತ್ಸೆಯನ್ನು ನೀಡುತ್ತಿದೆಯಾದರೂ ಅಪರಾಧಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿವೆ. ಮೊದಲು ಶೇ.70 ರಷ್ಟಿದ್ದ ಅಪರಾಧಗಳು ಶೇ. 16ಕ್ಕೆ ಇಳಿದಿದೆ. ಕಳೆದ 33 ವರ್ಷಗಳಿಂದ ತೆರೆದುಕೊಂಡಿದ್ದ ಈ ಸೆರೆಮನೆಯಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ತಪ್ಪಿಸಿಕೊಂಡು ಹೋಗಿರುವುದು ವರದಿಯಾಗಿದೆ. ಒಟ್ಟಿನಲ್ಲಿ ಈ ಸೆರೆಮನೆ ಅದ್ಭುತ ಮತ್ತು ಆಶ್ವರ್ಯವನ್ನು ಸೃಷ್ಟಿಸುತ್ತದೆ.



Click it and Unblock the Notifications