ನಿಮಗೆ ಗೊತ್ತಾ? ಇಲ್ಲಿಯ ಜನರು ಪೆಟ್ರೋಲ್‍ಗಿಂತ ನೀರಿಗೆ ಹೆಚ್ಚು ಹಣವನ್ನು ನೀಡುತ್ತಾರೆ!!

By: Divya pandith
Subscribe to Boldsky

ನಮಗೆಲ್ಲಾ ತಿಳಿದಿರುವ ಹಾಗೆ ಸಂಚಾರ ವ್ಯವಸ್ಥೆಗೆ ಬೇಕಾಗುವ ಪ್ರಮುಖ ತೈಲವೆಂದರೆ ಪೆಟ್ರೋಲ್. ಇದರ ಉತ್ಪಾದನೆ ಹಾಗೂ ಪೂರೈಕೆಯ ಆಧಾರದ ಮೇಲೆ ಬೆಲೆ ನಿರ್ಣಯವಾಗುವುದು. ಹಾಗಾಗಿಯೇ ಬೇರೆ ಬೇರೆ ರಾಷ್ಟ್ರಗಳಲ್ಲಿ ವಿಭಿನ್ನ ಬೆಲೆಗಳಿರುವುದನ್ನು ನಾವು ಪರಿಗಣಿಸಬಹುದು. ಕುವೈಟ್/ಕುವೈತ್ ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ ಪೆಟ್ರೋಲ್ ಬೆಲೆ ನೀರಿನ ಬೆಲೆಗಿಂತ ಅಗ್ಗವಾಗಿದೆ. ಯುಕೆ, ನೆದರ್‌ಲ್ಯಾಂಡ್, ಸ್ವೀಡನ್ ಮತ್ತು ಟರ್ಕಿ ದೇಶಗಳಲ್ಲಿ ಪೆಟ್ರೋಲ್ ಬೆಲೆ ದುಬಾರಿ.

ಬೆಂಗಳೂರಿನ ಈ ಬಂಕ್‌‌ನಲ್ಲಿ ಪೆಟ್ರೋಲ್-ಡೀಸೆಲ್‌ ಹಾಕಿಸಿದರೆ ಊಟ-ತಿಂಡಿ ಉಚಿತ!!

ಭಾರತದ ವಿಚಾರಕ್ಕೆ ಬಂದರೆ ಪೆಟ್ರೋಲ್ ಬೆಲೆ ಆಗಾಗ ಏರಿಳಿತವಾಗುತ್ತಿರುವುದನ್ನು ಗಮನಿಸಬಹುಯದು. ಬೇರೆ ದೇಶಗಳಿಗೆ ಹೋಲಿಸಿದರೆ ಇಲ್ಲಿ ಬಲು ದುಬಾರಿ ಎಂತಲೇ ಹೇಳಬಹುದು. ಪೆಟ್ರೋಲ್‍ಗಳ ಉತ್ಪಾದನೆ ಎಲ್ಲೆಲ್ಲಿ ಹೆಚ್ಚಾಗಿದೆ? ಯಾವ ದೇಶಗಳಲ್ಲಿ ನೀರಿಗಿಂತ ಅಗ್ಗ ಬೆಲೆಗೆ ದೊರೆಯುತ್ತದೆ? ಇದಕ್ಕೆ ಕಾರಣವೇನು ಎನ್ನುವ ವಿವರಣೆಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ನೀವು ಈ ವಿಚಾರದ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಮುಂದೆ ಓದಿ... 

ವೆನೆಜುವೆಲಾ

ವೆನೆಜುವೆಲಾ

ಈ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಕೇವಲ $0.031 ಬೆಲೆಗೆ ಪಡೆಯಬಹುದು. ಭಾರತದ ಬೆಲೆಗೆ ತಿರುಗಿಸಿ ಹೇಳುವುದಾದರೆ 2 ರೂಪಾಯಿ. ಈ ದೇಶದ ಆರ್ಥಿಕ ವ್ಯವಸ್ಥೆ ಪೆಟ್ರೋಲ್ ರಫ್ತು ಮಾಡುವುದರ ಮೇಲೆಯೇ ಅವಲಂಭಿತವಾಗಿದೆ. ಅಂದರೆ ಶೇ. 50ರಷ್ಟು ಆರ್ಥಿಕ ಮಟ್ಟವು ಪೆಟ್ರೋಲ್ ಉತ್ಪಾದನೆ ಹಾಗೂ ರಫ್ತು ಮಾಡುವುದರಿಂದ ಒಳಗೊಂಡಿದೆ. ಇದನ್ನೇ ದೇಶದ ದೊಡ್ಡ ಆದಾಯ ಎಂದು ಪರಿಗಣಿಸಲಾಗಿದೆ.

ಸೌದಿ ಅರೇಬಿಯಾ

ಸೌದಿ ಅರೇಬಿಯಾ

ನೀರಿನ ಬೆಲೆಗಿಂತ ಅಗ್ಗದ ಬೆಲೆಗೆ ಪೆಟ್ರೋಲ್ ಸಿಗುವ ಇನ್ನೊಂದು ದೇಶ ಸೌದಿ ಅರೇಬಿಯಾ. ಇದು ವಿಶ್ವದಲ್ಲೇ ಅತಿ ಹೆಚ್ಚು ತೈಲ ಉತ್ಪಾದಿಸುವ ರಾಷ್ಟ್ರ ಮತ್ತು ಹೆಚ್ಚಿನ ಪ್ರಮಾಣದಲ್ಲಿ ತೈಲ ರಫ್ತು ಮಾಡುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಒಂದು ಲೀಟರ್ ಪೆಟ್ರೋಲ್‍ಅನ್ನು $0.096 ನಲ್ಲಿ ಪಡೆಯಬಹುದು. ಅಂದರೆ 6.20. ರೂ.

ಲಿಬಿಯಾ

ಲಿಬಿಯಾ

ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ಲಭ್ಯವಿರುವ ರಾಷ್ಟ್ರಗಳಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವುದು ಲಿಬಿಯಾ. ವಿಶ್ವದ ಒಂಬತ್ತನೇ ಅತಿದೊಡ್ಡ ಪೆಟ್ರೋಲ್ ಉತ್ಪಾದಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಒಂದು ಲೀಟರ್ ಪೆಟ್ರೋಲ್‍ಗೆ ಕೇವಲ $0.110 ಡಾಲರ್‍ಗೆ ಪಡೆಯಬಹುದು. ಇದು ಭಾರತದ ಬೆಲೆಯಲ್ಲಿ 7.05 ರೂ.

ತುರ್ಕಮೆನಿಸ್ತಾನ್

ತುರ್ಕಮೆನಿಸ್ತಾನ್

ಈ ದೇಶದಲ್ಲಿ ತಿಂಗಳಿಗೆ ಒಬ್ಬರು 120 ಲೀಟರ್ ಪೆಟ್ರೋಲ್‍ಗಳ ವರೆಗೆ ಬಳಸಬಹುದು. ಹಾಗಾಗಿ ಪೆಟ್ರೋಲ್ ಬೆಲೆ ಬದಲಾಗುತ್ತಲೇ ಇರುತ್ತದೆ. ತಿಂಗಳಿಗೆ 120 ಲೀಟರ್ ಪೆಟ್ರೋಲ್‍ನ ಮಿತಿ ಮೀರಿದರೆ ಅವರು $0.146 ನ್ನು ಪಾವತಿಸಬೇಕಾಗುವುದು. ಅಂದರೆ ಲೀಟರ್‍ಗೆ 9.40 ರೂ.

ಬಹ್ರೇನ್

ಬಹ್ರೇನ್

ಈ ದೇಶದ ಬಹುಪಾಲು ಆದಾಯ ಪೆಟ್ರೋಲ್ ಉತ್ಪಾದನೆಯಿಂದಲೇ ಬರುತ್ತದೆ. ಅಗ್ಗದ ದರದಲ್ಲಿ ಪೆಟ್ರೋಲ್ ತಯಾರಿಸುವ ಐದನೇ ರಾಷ್ಟ್ರ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ಬಹ್ರೇನ್‍ಅಲ್ಲಿ ಒಂದು ಲೀಟರ್ ಪೆಟ್ರೋಲ್‍ಗೆ ಕೇವಲ $0.156 ನೀಡಬೇಕು. ಅಂದರೆ 10.20 ರೂ.

ಕುವೈತ್

ಕುವೈತ್

ಪ್ರಪಂಚದ ಐದನೇ ಅತಿದೊಡ್ಡ ತೈಲ ಉತ್ಪಾದಿಸುವ ರಾಷ್ಟ್ರ ಎನ್ನುವ ಪ್ರಸಿದ್ಧಿಗೆ ಪಾತ್ರವಾಗಿದೆ. ಇಲ್ಲಿ ತೈಲದ ಸರಾಸರಿ ಬೆಲೆ $0.171. ಕುವೈತ್‍ನಲ್ಲಿ 104 ಶತಕೋಟಿ ಬ್ಯಾರೆಲ್ ತೈಲ ಮೀಸಲು ಹೊಂದಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ $1.51 ಅಂದರೆ ಲೀಟರ್‌ಗೆ 11 ರೂಪಾಯಿ.

ಕತಾರ್

ಕತಾರ್

ಅಗ್ಗದ ಬೆಲೆಗೆ ಪೆಟ್ರೋಲ್ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್ 7ನೇ ಸ್ಥಾನವನ್ನು ಪಡೆದುಕೊಂಡಿದೆ. ತೈಲದ ಉದ್ಯಮವೇ ಕತಾರ್‍ಗೆ ಪ್ರಮುಖ ಆದಾಯದ ಮೂಲವಾಗಿದೆ. ಇಲ್ಲಿ 15 ಶತ ಕೋಟಿ ಬ್ಯಾರಲ್‍ಗಳನ್ನು ಒಳಗೊಂಡಿದೆ. ಪ್ರತಿ ಒಂದು ಲೀಟರ್ ಪೆಟ್ರೋಲ್ ಬೆಲೆ $0.182 ಅಂದರೆ 11.70 ರೂಪಾಯಿ.

ಈಜಿಪ್ಟ್

ಈಜಿಪ್ಟ್

ಪರ್ಷಿಯನ್ ಕೊಲ್ಲಿಯಿಂದ ಒಂದು ಶತ ಕೋಟಿ ಲೀಟರ್ ಪೆಟ್ರೋಲ್‍ಅನ್ನು ಸುಯೆಜ್ ಕಾಲುವೆಯ ಮೂಲಕ ಒಯ್ಯಲಾಗುತ್ತದೆ. ಒಂದು ಲೀಟರ್ ಪೆಟ್ರೋಲ್ ಬೆಲೆ $0.232 ಅಂದರೆ 15.15 ರೂಪಾಯಿ. ದೇಶದ ರಾಜಕೀಯ ಬದಲಾವಣೆಯ ಕಾರಣದಿಂದ ಪೆಟ್ರೋಲ್ ಬೆಲೆ ಈಗಲೂ ಅನಿಶ್ಚಿತವಾಗಿಯೇ ಉಳಿದಿದೆ.

ಓಮನ್

ಓಮನ್

ಈ ದೇಶವು ಪ್ರತಿ ದಿನ 600,000 ಬ್ಯಾರೆಲ್ಸ್ ಪೆಟ್ರೋಲ್‍ಅನ್ನು ಉತ್ಪಾದಿಸುತ್ತದೆ. ಇದರಿಂದಾಗಿಯೇ ದೇಶದಲ್ಲಿ ಪೆಟ್ರೋಲ್ ಬೆಲೆಗಳನ್ನು ಸರಕಾರ ಕಡಿತ ಗೊಳಿಸುತ್ತಲಿರುತ್ತದೆ. ಸರಾಸರಿ ಪೆಟ್ರೋಲ್ ಬೆಲೆ $ 0.243 ಅಂದರೆ 15.86 ರೂಪಾಯಿ.

ಲಾಲ್ಜೀರಿಯಾ

ಲಾಲ್ಜೀರಿಯಾ

ಆಫ್ರಿಕಾದ ಅತಿ ಹೆಚ್ಚು ಪೆಟ್ರೋಲ್ ಉತ್ಪಾದಿಸುವ ರಾಷ್ಟ್ರ ಆಲ್ಜೀರಿಯಾ. ಹೆಚ್ಚು ಪೆಟ್ರೋಲ್ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿರುವ ರಾಷ್ಟ್ರವಿದು. ಈ ದೇಶದ ಆದಾಯ ಶೇ. 60 ರಷ್ಟು ತೈಲವನ್ನೇ ಅವಲಂಬಿಸಿಕೊಂಡಿದೆ. ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ $0.244 ಅಂದರೆ 15.72 ರೂಪಾಯಿ.

ಪೆಟ್ರೋಲ್‍ಅನ್ನು ಬಹು ಅಗ್ಗದ ಬೆಲೆಗೆ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಗಳು ಇವು. ಇವುಗಳಿಗೆ ಭಾರತದಲ್ಲಿರುವ ಪೆಟ್ರೋಲ್ ಬೆಲೆಯನ್ನು (ಲೀಟರ್‍ಗೆ 79.87 ರೂ.)ಹೋಲಿಸಿದರೆ ಬಹು ದುಬಾರಿಯ ಸರಕು ಎಂದು ಹೇಳಬಹುದು.

English summary

Places Where Petrol Is Cheaper Than Water!

Petrol prices are different in different countries. In countries like Kuwait and Saudi Arabia, the price of petrol is cheaper than water! On the other hand, purchasing petrol in countries like the UK, Netherlands, Sweden, and Turkey is quite an expensive affair. Today, we would speak about the places where petrol is cheaper than water. Go ahead and take a look.
Subscribe Newsletter