ನೀವು ಕಂಡು ಕೇಳರಿಯದ ಪವಾಡಗಳು ಇಲ್ಲಿ ನಡೆಯುತ್ತಿದೆ ನೋಡಿ!

By: manu
Subscribe to Boldsky

ಭಾರತದ ಪುಣ್ಯ ಭೂಮಿಯಲ್ಲಿ ಅನೇಕ ಅದ್ಭುತಗಳಿವೆ. ಹಲವು ಪವಾಡಗಳು ಇಲ್ಲಿ ಸಂಭವಿಸಿವೆ. ಇನ್ನು ಮುಂದೆಯೂ ಇದೇ ರೀತಿಯ ಪವಾಡಗಳು ನಡೆಯುತ್ತಿರುತ್ತವೆ ಎನ್ನಬಹುದು. ಉತ್ತಮ ಪರಿಸರ ಹಾಗೂ ಆರೋಗ್ಯವನ್ನು ಕಾಪಾಡುವ ಸಮೃದ್ಧ ದೇಶ ನಮ್ಮ ಭಾರತ ಎಂದರೆ ತಪ್ಪಾಗಲಾರದು. ಪ್ರಪಂಚದಾದ್ಯಂತ ನಮ್ಮ ದೇಶದ ಬಗ್ಗೆ ಅವರದೇ ಆದ ವಿಶೇಷ ಭಾವನೆ ಹಾಗೂ ಅಭಿಪ್ರಾಯನ್ನು ತಳೆದಿರುವುದು ಸುಳ್ಳಲ್ಲ.

ಕೆಲವು ರಾಷ್ಟ್ರಗಳು ಭಾರತವನ್ನು ಮೂಢನಂಬಿಕೆಯ ಭೂಮಿ ಎಂದೂ ಸಹ ಕರೆಯುತ್ತಾರೆ, ಅದು ಏನೇ ಇರಲಿ ಆದರೆ ನಮ್ಮ ದೇಶದ ಉದ್ದ ಅಗಲಕ್ಕೂ ಅನೇಕ ಪವಾಡಗಳು ನಡೆದಿದೆ, ಅಲ್ಲದೆ ಇಂದಿಗೂ ಕೆಲವು ಪವಾಡದ ಮೂಲಗಳು ಸಾಕ್ಷಿ ಹೇಳುತ್ತಿವೆ! ಅವುಗಳ ಕಿರು ಪರಿಚಯ ಇಲ್ಲಿದೆ ನೋಡಿ....

ಕಂಗ್ರಾದ ಜ್ವಾಲಾಜಿ ದೇಗುಲ

ಭಾರತದ ಕಂಗ್ರಾದ ಜ್ವಾಲಾಜಿ ದೇವಸ್ಥಾನ ಒಂದು ವಿಶೇಷ ಪವಾಡವೊಂದನ್ನು ಒಳಗೊಂಡಿದೆ. ಇಲ್ಲಿ ಒಂದು ನೈಸರ್ಗಿಕ ಅನಿಲದಿಂದ ಉರಿ(ಬೆಂಕಿ) ಸದಾ ಬೆಳಗುತ್ತಲೇ ಇರುತ್ತದೆ. ಇದರ ಗುಟ್ಟು ಹಾಗೂ ವೈಜ್ಞಾನಿಕ ಕಾರಣವೇನು ಎನ್ನುವುದನ್ನು ತಿಳಿಯಲು ಅನೇಕ ತಜ್ಞರು ಪ್ರಯತ್ನಿಸಿದರು. ಆದರೂ ಯಾವುದೇ ಸುಳಿವು ಸಿಗದೆ ವಿಫಲರಾದರು ಎನ್ನಲಾಗುತ್ತದೆ.

ಆಂಧ್ರ ಪ್ರದೇಶದ ಹ್ಯಾಂಗಿಂಗ್ ಪಿಲ್ಲರ್

ಆಂಧ್ರ ಪ್ರದೇಶದಲ್ಲಿರುವ ಲೇಪಾಕ್ಷಿ ದೇವಾಲಯವು ವಿಶೇಷವಾದ ಕೆತ್ತನೆ ಹಾಗೂ ಇತಿಹಾಸವನ್ನು ಒಳಗೊಂಡಿದೆ. ಇಲ್ಲಿಯ ಮ್ಯೂರಲ್ ಚಿತ್ರಕಲೆ ಹಾಗೂ ತೂಗುವ ಕಂಬ ಬಹಳ ಅದ್ಭುತವನ್ನು ಒಳಗೊಂಡಿದೆ. ಪವಾಡವನ್ನು ಸೃಷ್ಟಿಸುವ ಈ ತೂಗುವ ಕಂಬ ನೆಲದ ಮೇಲೆ ನಿಂತಿರುವಂತೆ ಕಾಣುತ್ತದೆ. ಆದರೆ ಅದು ನೆಲದ ಮೇಲೆ ನಿಂತಿಲ್ಲ. ಕಂಬ ಮತ್ತು ನೆಲದ ನಡುವೆ ಇರುವ ಅಂತರದ ಪ್ರದೇಶದಲ್ಲಿ ಭಕ್ತರು ಯಾವುದಾದರು ವಸ್ತುವನ್ನು ಹೊರ ಹಾಕುವಂತೆ ಮಾಡಿ, ಆ ಕೆಲಸದಲ್ಲಿ ಯಶಸ್ವಿಯಾದರೆ ಅದೃಷ್ಟ ಅವರನ್ನು ಕಾಪಾಡುತ್ತದೆ ಎನ್ನಲಾಗುತ್ತದೆ.  

Image Courtesy

                                     Image Courtesy

ಭೀಮ್ ಪಥಾರ್

ಉತ್ತರಾಖಂಡ್‍‌ನಲ್ಲಿ ಇರುವ ಈ "ಭೀಮ್ ಪಥಾರ್ ಕಲ್ಲು" ಒಂದು ಪವಾಡದಂತಿದೆ. ಇದು ನೋಡಲು ಒಂದು ಸಾಮಾನ್ಯ ಕಲ್ಲಂತೆ ಕಂಡರೂ ಇದನ್ನು ಸುಲಭವಾಗಿ ಎತ್ತಲು ಸಾಧ್ಯವಿಲ್ಲ. ಎಷ್ಟೇ ಬಲಿಷ್ಠವಾದ ವ್ಯಕ್ತಿ ಈ ಕಲ್ಲನ್ನು ಎತ್ತಲು ಸಾಧ್ಯವಿಲ್ಲ. ಬದಲಿಗೆ 9 ಮಂದಿಯಿರುವ ಒಂದು ಗುಂಪಿನ ಜನರು ಬಂದು, ಎಲ್ಲರೂ ಸೇರಿ ತಮ್ಮ ತೋರು ಬೆರಳನ್ನು ಉಪಯೋಗಿಸಿ ಎತ್ತಿದರೆ ಸುಲಭವಾಗಿ ಎತ್ತಬಹುದು ಎನ್ನಲಾಗುತ್ತದೆ.

ತೇಲುವ ಕಲ್ಲು

ರಾಮೇಶ್ವರಂನಲ್ಲಿ ಕಂಡುಬರುವ ಕಲ್ಲುಗಳು ನೀರಿನಲ್ಲಿ ತೇಲುತ್ತವೆ. ಅವು ಯಾವುದೇ ಕಾರಣಕ್ಕೂ ಮುಳುಗುವುದಿಲ್ಲ. ಕೆಲವು ಮೂಲಗಳು ಹಾಗೂ ಸ್ಥಳೀಯ ಜಾನಪದ ಕಥೆಗಳ ಪ್ರಕಾರ ಇಲ್ಲಿಯ ಕಲ್ಲುಗಳು ರಾಮಾಯಣದ ಕಾಲದಲ್ಲಿ ಭಾರತದಿಂದ ಲಂಕೆಗೆ ಸೇತುವೆ ನಿರ್ಮಿಸಿದ ಕಲ್ಲುಗಳು ಎನ್ನುವ ನಂಬಿಕೆಯಿದೆ.

ಶಿವಪುರದ ಕಲ್ಲು

ಶಿವಪುರದ ದರ್ಗಾದಲ್ಲಿರುವ ಭೀಮ್ ಪಥರ್ ಕಲ್ಲು. ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿರುವ ಈ ದರ್ಗಾದ ಕಲ್ಲು 200 ಕೆ.ಜಿ. ತೂಕವನ್ನು ಹೊಂದಿದೆ ಎನ್ನಲಾಗುತ್ತದೆ. 11 ಮಂದಿಯ ಒಂದು ಗುಂಪಿನ ಜನರು ತಮ್ಮ ತೋರು ಬೆರಳುಗಳ ಸಹಾಯದಿಂದ ಕಲ್ಲನ್ನು ಎತ್ತಿ, ತಲೆಗಿಂತ ಎತ್ತರಕ್ಕೆ ಹಾರಿಸಬಹುದು. ಆದರೆ ಕಡಿಮೆ ಸಂಖ್ಯೆ ಇರುವ ಗುಂಪಿನ ಜನರು ಅಥವಾ ಶಕ್ತಿಯಿರುವ ಯಾವ ವ್ಯಕ್ತಿಯಿಂದಲೂ ಈ ಕಲ್ಲನ್ನು 2ಮೀ. ಎತ್ತರಕ್ಕೆ ಎತ್ತಲು ಸಾಧ್ಯವಿಲ್ಲ ಎನ್ನಲಾಗುತ್ತದೆ.

English summary

Places in India which are no less than a miracle!

We’ve often heard people rant that India is a land of mysteries and wondered where the notion came from. Well, we’ve finally got an answer for you! India truly has zillions of secrets buried deep in its most bizarre of places, that either leave people wide eyed with shock or freak them out when they learn about them. From hills that pull cars up to motorbikes that are worshipped, India is home to the most unusual of places.
Story first published: Wednesday, June 28, 2017, 23:40 [IST]
Subscribe Newsletter