ಈ ದೇಶಗಳ ಕಥೆ ಕೇಳಿದರೆ, ಕಣ್ಣೀರು ಬರುತ್ತೆ! ಯಾಕೆ ಗೊತ್ತೇ?

By: Hemanth
Subscribe to Boldsky

ಹುಟ್ಟು ಹಾಗೂ ಸಾವು ದೇವರಿಚ್ಛೆ ಎನ್ನುವ ಮಾತಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವೈದ್ಯಕೀಯ ಹಾಗೂ ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಸಾವನ್ನು ತಡೆಯಲು ಸಾಧ್ಯವೇ ಇಲ್ಲ. ಜನಸಂಖ್ಯೆ ಹೆಚ್ಚಳದಿಂದಾಗಿ ಚೀನಾದಂತಹ ಕೆಲವೊಂದು ರಾಷ್ಟ್ರಗಳಲ್ಲಿ ಒಂದೇ ಮಗು ಎನ್ನುವ ನಿಯಮ ಜಾರಿ ಮಾಡಲಾಗಿದೆ. ಒಂದಕ್ಕಿಂತ ಹೆಚ್ಚು ಮಗು ಹುಟ್ಟಿದರೆ ಅಲ್ಲಿ ಕಠಿಣ ಶಿಕ್ಷೆಯಿದೆ. ಆದರೆ ಸಾವನ್ನು ತಡೆಯುವ ಕಾನೂನು ಕೂಡ ಈ ಭೂಮಿ ಮೇಲಿದೆ. ಮನುಷ್ಯರು ಮಾಡಿರುವಂತಹ ಕೆಲವೊಂದು ಕಾನೂನುಗಳು ಸಾವಿಗೆ ತಡೆ ಉಂಟು ಮಾಡುತ್ತಿದೆ ಎಂದರೆ ನಂಬಲು ಸಾಧ್ಯವೇ?

ಕೆಲವೊಂದು ದೇಶಗಳಲ್ಲಿ ಸಾಯುವುದನ್ನು ಕೂಡ ನಿಷೇಧಿಸಲಾಗಿದೆ. ಆ ಜಾಗಗಳಲ್ಲಿ ಸಾಯಬಾರದು ಎನ್ನುವ ಕಾನೂನನ್ನು ಮಾಡಿದ್ದಾರೆ. ಇದು ವಿಶ್ವದ ಕೆಲವೊಂದು ಕಡೆಗಳಲ್ಲಿ ಈಗಲೂ ಜಾರಿಯಲ್ಲಿದೆ. ಇದು ತುಂಬಾ ತಮಾಷೆಯೆಂದು ನಮಗೆ ಅನಿಸಿದರೂ ಆ ಪ್ರದೇಶಗಳಲ್ಲಿ ವಾಸಿಸುತ್ತಾ ಇರುವವರಿಗೆ ಇದು ತುಂಬಾ ಕಠಿಣ... ಪಾಪ ಇವರು ಏನು ಪಾಪ ಮಾಡಿದರೆಂದು ಇವರಿಗೆ ಈ ರೀತಿಯ ಶಿಕ್ಷೆ? ಬನ್ನಿ ಯಾವ್ಯಾವ ಜಾಗದಲ್ಲಿ ಸಾಯಬಾರದು ಎನ್ನುವ ನಿಯಮ ಇದೆ ಎಂದು ಬೋಲ್ಡ್ ಸ್ಕೈ ನಿಮಗೆ ವಿವರಣೆ ನೀಡಲಿದೆ...ಮುಂದೆ ಓದಿ

ಇಟುಕುಶಿಮಾ

ಇಟುಕುಶಿಮಾ

ಜಪಾನ್ ನಲ್ಲಿರುವ ಈ ದ್ವೀಪವು ತುಂಬಾ ಪವಿತ್ರವೆಂದು ಶಿಟೋಸಿಯಂ ಮತ್ತು ಅವರ ಬೆಂಬಲಿಗರು ನಂಬಿದ್ದಾರೆ. ಈ ದ್ವೀಪದಲ್ಲಿ ಯಾರು ಸಾಯಬಾರದು ಎನ್ನುವ ನಿಯಮವಿದೆ. ಇಲ್ಲಿನ ಪಾವಿತ್ರ್ಯತೆ ಕಾಪಾಡುವುದು ಮುಖ್ಯ ಉದ್ದೇಶ. 1878ರಲ್ಲಿ ಈ ದ್ವೀಪದಲ್ಲಿ ಯಾರೂ ಮಗುವಿಗೆ ಜನ್ಮ ನೀಡುವಂತಿಲ್ಲ ಮತ್ತು ಸಾಯುವಂತಿಲ್ಲ ಎನ್ನುವ ಕಾನೂನು ಜಾರಿಯಾಗಿದೆ.

ಸೆಲಿಯಾ

ಸೆಲಿಯಾ

ಇದು ಇಟಲಿಯಲ್ಲಿರುವ ಒಂದು ಪ್ರದೇಶವಾಗಿದೆ. ಇಲ್ಲಿ ಈಗ ವಾಸಿಸುತ್ತಿರುವವರ ಸಂಖ್ಯೆ ಕೇವಲ 537 ಮಾತ್ರ. ಸೆಲಿಯಾದಲ್ಲಿ ಹೆಚ್ಚಿನವರು 65 ವರ್ಷಕ್ಕಿಂತ ಮೇಲಿನವರು. ಜನರು ಅನಾರೋಗ್ಯಕ್ಕೆ ಒಳಗಾಗದಂತೆ ನಿಷೇಧಿಸಲಾಗಿದೆ ಎಂದು ಈ ನಗರದ ಮೇಯರ್ ಘೋಷಿಸಿದ್ದಾರೆ ಮತ್ತು ಸಾಯುವುದಕ್ಕೆ ನಿಷೇಧ ಹೇರಲಾಗಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡದೆ ಇರುವವರಿಗೆ ಹತ್ತು ಯುರೋ ದಂಡ ಹೇರಲಾಗುತ್ತದೆ.

ಲಂಜರಾನ್

ಲಂಜರಾನ್

ಸ್ಪೇನ್ ನಲ್ಲಿ ಇರುವಂತಹ ಈ ಪ್ರದೇಶದಲ್ಲಿ ಸಾಯುವುದು ನಿಷಿದ್ಧ ಮತ್ತು ಇಲ್ಲಿ ಈಗ 4000 ಮಂದಿ ಮಾತ್ರ ವಾಸಿಸುತ್ತಾ ಇದ್ದಾರೆ. ಸ್ಮಶಾನಕ್ಕೆ ಸ್ಥಳಾವಕಾಶದ ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸಲು ಪ್ರಯತ್ನಿಸುತ್ತಾ ಇರುವ ವಿರೋಧ ಪಕ್ಷದವರನ್ನು ಈ ನಿಯಮವು ಕೆರಳಿಸಿದೆ. ಆದರೆ ಸರ್ಕಾರ ಮಾತ್ರ ಇದನ್ನು ಕಾನೂನು ಆಗಿ ಪರಿವರ್ತಿಸಿದೆ.

ಲಾಂಗ್ ಇಯರ್ಬೈನ್

ಲಾಂಗ್ ಇಯರ್ಬೈನ್

ನಾರ್ವೆಯ ಸ್ವಾಲ್ಬಾರ್ಡ್ ದ್ವೀಪದಲ್ಲಿ ಈ ಪ್ರದೇಶವಿದೆ. ಇಲ್ಲಿ ಸಾಯುವುದನ್ನು ನಿಷೇಧಿಸಲು ಪ್ರಮುಖವಾದ ಕಾರಣವೇ ಇದೆ. ಈ ಪ್ರದೇಶವು ಹಿಮಾವೃತವಾಗುವ ಕಾರಣದಿಂಧಾಗಿ ಶವವು ಕೊಳೆಯುವುದೇ ಇಲ್ಲ. 1917ರಲ್ಲಿ ಭಾದಿಸಿದಂತಹ ಸ್ಪ್ಯಾನಿಶ್ ಇನ್ಫ್ಲುಲೆನ್ಸ್ ಸಾಂಕ್ರಾಮಿಕ ವೈರಸ್ ನ ನೇರ ಮಾದರಿಗಳನ್ನು ಅಲ್ಲಿ ಸಮಾಧಿ ಮಾಡಿದ ದೇಹದಿಂದ ತೆಗೆದುಕೊಳ್ಳಲಾಗಿದೆ. ಇದರ ಬಳಿಕ ಅಲ್ಲಿ ಸಾಯಬಾರದು ಎನ್ನುವ ಕಾನೂನು ತರಲಾಗಿದೆ.

ಫ್ಲಾಸಿಯಾನೊ ಡೆಲ್ ಮಸ್ಸಿಕೊ

ಫ್ಲಾಸಿಯಾನೊ ಡೆಲ್ ಮಸ್ಸಿಕೊ

ಇಟಲಿಯ ದಕ್ಷಿಣ ಭಾಗದಲ್ಲಿ ಈ ಪ್ರದೇಶವಿದ್ದು, ಅಲ್ಲಿನ ಜನರಿಗೆ ಶವ ಹೂಳಲು ಸ್ಥಳಾವಕಾಶವಿಲ್ಲ. 'ಮರಣಾನಂತರ ಹೋಗಲು ನಿವಾಸಿಗಳು ಐಹಿಕ ಜೀವನದ ಮೇರೆಯ ಮೀರಿ ಇದು ನಿಷೇಧಿಸಲಾಗಿದ್ದು,' ಎಂದು ಇಲ್ಲಿನ ಮೇಯರ್ ಹೇಳಿಕೆ ಹೊರಡಿಸಿದ್ದಾರೆ.

ಸರ್ಫೌನೆಕ್ಸ್

ಸರ್ಫೌನೆಕ್ಸ್

ಫ್ರಾನ್ಸ್ ನಲ್ಲಿರುವ ಈ ನಗರದಲ್ಲಿ ಸ್ಮಶಾನಕ್ಕೆ ಜಾಗವೇ ಇಲ್ಲದ ಕಾರಣದಿಂದ ಇಲ್ಲಿನ ಕೋರ್ಟ್ ಅದರ ವಿಸ್ತರಣೆಗೆ ಸ್ಥಳಾವಕಾಶ ನೀಡಲು ನಿರಾಕರಿಸಿತ್ತು. ಇದಕ್ಕಾಗಿ ಇಲ್ಲಿ ಸಾಯುವುದನ್ನು ನಿಷೇಧಿಸಲಾಗಿದೆ.

ಬಿರಿಟಿಬಾ ಮಿರಿಮ್

ಬಿರಿಟಿಬಾ ಮಿರಿಮ್

ಈ ನಗರದಲ್ಲಿರುವಂತಹ ಸ್ಮಶಾನಗಳು ಸಂಪೂರ್ಣವಾಗಿ ತುಂಬಿಕೊಂಡಿದೆ ಮತ್ತು ಸ್ಮಶಾನಕ್ಕೆ ಬೇರೆ ಯಾವುದೇ ಸ್ಥಳ ಇಲ್ಲದೆ ಇರುವ ಕಾರಣದಿಂದಾಗಿ ಬ್ರೆಜಿಲ್ ನ ಈ ನಗರದ ಮೇಯರ್ ಸಾಯುವುದಕ್ಕೆ ನಿಷೇಧ ಹೇರಿ ಮಸೂದೆ ತಂದಿದ್ದಾರೆ.

ಲೆ ಲಾವಂಡೊ

ಲೆ ಲಾವಂಡೊ

ಸಮುದ್ರ ಬದಿಯಲ್ಲಿ ಸ್ಮಶಾನ ನಿರ್ಮಾಣ ಮಾಡಲು ಫ್ರಾನ್ಸ್ ನ ಲಾವಂಡೊ ನಗರದ ಮೇಯರ್ ಅನುಮತಿ ನೀಡಿಲ್ಲ. ಇದರ ಬಳಿಕ ಈ ಪ್ರದೇಶದಲ್ಲಿ ಜನರು ಸಾಯಬಾರದು ಎನ್ನುವ ಕಾನೂನು ಜಾರಿ ಮಾಡಲಾಗಿದೆ. ಇಲ್ಲಿ ಸಾಯುವಂತಹ ಜನರನ್ನು ಅವರ ಮೂಲ ಹಳ್ಳಿಗೆ ಕೊಂಡೊಯ್ಯಲಾಗುವುದು ಅಥವಾ ಪಾರಿವಾಳದ ಕುಳಿಯಲ್ಲಿ ಸಮಾಧಿ ಮಾಡಲಾಗುತ್ತದೆ.

ಕುಗ್ನಾಕ್ಸ್

ಕುಗ್ನಾಕ್ಸ್

ಇಲ್ಲಿನ ಮೇಯರ್ ಫಿಲಿಪ್ ಗುಯೆರಿನ್ ಖಾಲಿ ಇರುವ ವಿಮಾನ ನಿಲ್ದಾಣದಲ್ಲಿ ಹೊಸ ಸ್ಮಶಾನ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ. ಈ ನಗರದಲ್ಲಿ ಸ್ಮಶಾನಕ್ಕೆ ಜಾಗದ ಕೊರತೆಯಿದೆ. ವಿಮಾನ ನಿಲ್ದಾಣದಲ್ಲಿ ಸ್ಮಶಾನಕ್ಕೆ ಅನುಮತಿ ನಿರಾಕರಿಸಿದ ಕಾರಣ ಸಾಯಬಾರದು ಎನ್ನುವ ಕಾನೂನು ಜಾರಿಗೆ ಬಂದಿದೆ.

English summary

Places Around In The World Where It Is Illegal To Die

As we all know that death is inevitable, there are few meddling humans who have passed laws in certain places which prohibits a person from dying. Sounds confusing? Well, it means that it is totally illegal to die in certain places on the planet! Though this sounds like something totally unbelievable, it is considered to be taken seriously, as it is a sin to die in these specific places! Check out the list and update yourself!
Story first published: Thursday, June 22, 2017, 8:31 [IST]
Subscribe Newsletter