ಅಚ್ಚರಿಯಾದರೂ ಸತ್ಯ: ಮೂಗು ನೋಡಿ ವ್ಯಕ್ತಿತ್ವ ತಿಳಿಯಿರಿ!

Posted By: Lekhaka
Subscribe to Boldsky

ವ್ಯಕ್ತಿಯೊಬ್ಬನ ವ್ಯಕ್ತಿತ್ವ ತಿಳಿಯಲು ಆತನೊಂದಿಗೆ ಸ್ವಲ್ಪ ಸಮಯವಾದರೂ ಕಳೆಯಬೇಕಾಗುತ್ತದೆ. ಇದರ ಬಳಿಕ ಆ ವ್ಯಕ್ತಿ ಹೇಗೆ ಎಂದು ಹೇಳಬಹುದು. ಆದರೆ ದೇಹದಲ್ಲಿರುವ ಕೆಲವೊಂದು ಅಂಗಾಂಗಗಳನ್ನು ನೋಡಿಕೊಂಡೇ ವ್ಯಕ್ತಿಯ ವ್ಯಕ್ತಿತ್ವ ಅಳೆಯಬಹುದು. ಹೌದು, ಇದು ನಿಜ. ನಿಮ್ಮ ಕೈ ಉಗುರಿನಿಂದ ಹಿಡಿದು ಮೂಗಿನ ತನಕ ಪ್ರತಿಯೊಂದು ನಿಮ್ಮ ವ್ಯಕ್ತಿತ್ವ ಹೇಗೆ ಹೇಳುವುದು.

ಅದರಲ್ಲೂ ಈ ಲೇಖನದಲ್ಲಿ ವ್ಯಕ್ತಿತ್ವವನ್ನು ಮೂಗಿನ ಗಾತ್ರ, ವಿನ್ಯಾಸದಿಂದ ಹೇಗೆ ತಿಳಿದುಕೊಳ್ಳಬಹುದು ಎನ್ನುವುದನ್ನು ನಿಮಗೆ ಹೇಳಲಿದ್ದೇವೆ. ಕೆಲವು ವಿಧದ ಮೂಗನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದು ವ್ಯಕ್ತಿತ್ವ ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಆಸಕ್ತಿದಾಯಕ ವಿಷಯವನ್ನು ತಿಳಿದುಕೊಳ್ಳಲು ಮುಂದೆ ಓದುತ್ತಾ ಸಾಗಿ...  

ನುಬಿಯನ್ ಮೂಗು

ನುಬಿಯನ್ ಮೂಗು

ಈ ರೀತಿಯಾಗಿರುವ ಮೂಗನ್ನು ನುಬಿಯನ್ ಮೂಗು ಎಂದು ಕರೆಯಲಾಗುತ್ತದೆ. ಮೂಗು ನೇರವಾಗಿರುವುದು ಮತ್ತು ಮೂಗು ಕೆಳಗೆ ಇಳಿಯುವ ಅಂತ್ಯದಲ್ಲಿ ಅದು ಕುಗ್ಗಿರುವುದು. ಇದು ನಿಮ್ಮ ಕಣ್ಣುಗಳನ್ನು ತುಟಿಗಳತ್ತ ಸೆಳೆಯುವುದು. ಮೂಗು ಹಣ್ಣುಗಳನ್ನು ಹೊತ್ತ ಶಾಖೆಯಂತಿರುವುದು. ಈ ರೀತಿಯ ಮೂಗು ಹೊಂದಿರುವವರು ತುಂಬಾ ಕೂತೂಹಲಕಾರಿ ಮತ್ತು ಅಭಿವ್ಯಕ್ತಿಯ ವ್ಯಕ್ತಿತ್ವದವರು. ಇವರು ಆಶಾವಾದಿಯಾಗಿರುವರು ಮತ್ತು ಹೊಸ ವಿಷಯಗಳನ್ನು ಕಲಿಯಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅವರು ತಮ್ಮ ಆಲೋಚನೆ ವ್ಯಕ್ತಪಡಿಸುವಲ್ಲಿ ತುಂಬಾ ಪ್ರಭಾವಿಯಾಗಿರುವರು.

ಗ್ರೀಕ್ ಮೂಗು

ಗ್ರೀಕ್ ಮೂಗು

ಇತಿಹಾಸ ಹೇಳುವಂತೆ ಹಿಂದಿನ ಶಿಲ್ಪಿಗಳು ಮೂಗಿಗೆ ಈ ಹೆಸರು ನೀಡಿದರು. ಉದ್ದದಲ್ಲಿ ಮೂಗು ಕುಗ್ಗಿರುವುದು ಮತ್ತು ವಿಶಿಷ್ಟವಾದ ನೇರ ಮತ್ತು ಚೂಪಾಗಿರುವುದು. ಈ ರೀತಿಯ ಮೂಗು ಹೊಂದಿರುವವರು ತುಂಬಾ ವಿವೇಕಯುಕ್ತ ಹಾಗೂ ಪ್ರಯೋಗಶೀಲರಾಗಿರುವರು. ಇವರು ತುಂಬಾ ಪ್ರಾಮಾಣಿಕವಾಗಿರುವರು. ಅವರು ತಾವು ಹೇಳಿದ ವಿಚಾರ ಮಾಡಿಯೇ ತೀರುವರು. ಇದು ಆಗದಿದ್ದರೆ ಸಾಯಲು ತಯಾರಾಗಿರುವರು. ಇಂತಹ ಜನರೊಂದಿಗೆ ತಮ್ಮ ರಹಸ್ಯಗಳನ್ನು ನಂಬಿಕೆಯಿಂದ ಹೇಳಿಕೊಳ್ಳಬಹುದು.

ಕೊಕ್ಕಿನಂತಹ ಮೂಗು

ಕೊಕ್ಕಿನಂತಹ ಮೂಗು

ಈ ಮೂಗು ಪಕ್ಷಿಗಳ ಕೊಕ್ಕಿನ ಆಕಾರದಂತೆ ಇರುವುದು. ಮೂಗು ಮೂಳೆಯ ಕೆಳಗಿನ ಭಾಗದಿಂದ ಮೇಲಿನ ತನಕ ಕೆಳಕ್ಕೆ ಬಾಗಿರುವುದು. ಇಂತಹ ಮೂಗು ಹೊಂದಿರುವವರು ವ್ಯಕ್ತಿತ್ವವು ಅಭಿಪ್ರಾಯವಿಲ್ಲದ, ಚಿಂತನಶೀಲ ಮತ್ತು ಗಹನವಾಗಿರುವುದು. ತಮ್ಮ ಅಭಿಪ್ರಾಯಗಳನ್ನು ಯಾವುದೇ ಪರಿಸ್ಥಿತಿಯಲ್ಲೂ ಭಾವೋದ್ವೇಗದಿಂದ ರಕ್ಷಿಸಿಕೊಳ್ಳುವುದನ್ನು ನಂಬುತ್ತಾರೆ ಮತ್ತು ಅಪಾಯಗಳನ್ನು ಎದುರಿಸಲು ಹೆದರುವರು. ಇಂತಹ ಮೂಗು ಹೊಂದಿರುವವರು ರಾಜತಾಂತ್ರಿಕ, ಸ್ವಯಂ ಪರಿಣಾಮಕಾರಿ ಮತ್ತು ಸೃಜನಾತ್ಮಕವಾಗಿರುವರು.

ಕಮಾನು ಮೂಗು

ಕಮಾನು ಮೂಗು

ಈ ರೀತಿಯ ಮೂಗಿನ ಆಕಾರವು ಹುಕ್ ಮೂಗಿನಂತೆ ಮೂಳೆಯಿಂದ ಬಾಗಿರುವುದು. ಇದು ತುಂಬಾ ವಿಶಿಷ್ಠವಾದ ಆಕಾರ. ಇದು ತುದಿಯಲ್ಲಿ ಚೂಪಾಗಿರುವುದು. ಇಂತಹ ಮೂಗು ಹೊಂದಿರುವವರು ಶ್ರೇಷ್ಠ ಮ್ಯಾನೇಜರ್ ಗಳಾಗಿರುವರು. ಇವರು ತುಂಬಾ ಸಂಘಟಿತ ಮತ್ತು ಪರಿಣಾಮಕಾರಿಯಾಗಿರುವರು. ಇವರು ಇತರರಿಗೆ ಉದಾಹರಣೆಯಾಗಿರುವರು. ಇವರು ತಮ್ಮ ವೃತ್ತಿಗೆ ಹೆಚ್ಚು ಹೊಂದಿಕೊಂಡಿರುವರು. ಆದರೆ ಜೀವನದಲ್ಲಿ ತಾವು ಮೌಲ್ಯ ನೀಡುವವರನ್ನು ಹೆಚ್ಚು ಪ್ರೀತಿಸುವರು.

ಬಟನ್ ಮೂಗು

ಬಟನ್ ಮೂಗು

ಇದು ತುಂಬಾ ಚಿಕ್ಕ ಮತ್ತು ರಸಕವಳದಂತೆ ಇರುವುದು. ಇದು ತುಂಬಾ ಸಾಮಾನ್ಯವಾಗಿರುವಂತಹ ಮೂಗು ಎಂದು ಪರಿಗಣಿಸಲಾಗಿದೆ. ಈ ರೀತಿಯ ಮೂಗು ಹೊಂದಿರುವವರು ತುಂಬಾ ಬದ್ಧತೆ, ಪ್ರಬಲವಾದ ಇಚ್ಛಾಶಕ್ತಿ ಮತ್ತು ಸ್ವಯಂಪ್ರೇರಿತರಾಗಿರುವರು. ಇವರು ಹಲವಾರು ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವರು ಮತ್ತು ಪರಿಣಾಮಕಾರಿಯಾಗಿರುವರು. ಅವರ ನಿರ್ಧಾರಗಳು ಭಾವನೆಗಳನ್ನು ಹೊಂದಿರುವುದು. ಆದರೆ ಯಾವುದನ್ನು ಬಿಡಬೇಕು ಮತ್ತು ಯಾವುದನ್ನು ಬಿಡಬಾರದು ಎನ್ನುವ ನಂಬಿಕೆಯಿರುವುದು.

ನೇರವಾದ ಮೂಗು

ನೇರವಾದ ಮೂಗು

ಮೂಗಿನ ಈ ಆಕಾರವು ತುದಿಗೆ ವಿಶಾಲವಾದ ಮೂಗಿನ ಹೊಳ್ಳೆಯನ್ನು ಹೊಂದಿರುತ್ತದೆ. ಈ ಮೂಗು ನೇರವಾಗಿರುವುದು ಮತ್ತು ಉಳಿದವುಗಳಿಂತ ಚೆಲ್ಲಿರುವುದು. ಇಂತಹ ಆಕಾರದ ಮೂಗು ಹೊಂದಿರುವ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವರು. ಅವರು ಭಾವನೆಗಳನ್ನು ಓದಬಲ್ಲರು. ಇವರು ತುಂಬಾ ತಾಳ್ಮೆ ಮತ್ತು ಸಹನಶೀಲರಾಗಿರುವರು. ಅವರು ಅಪೇಕ್ಷಿಸದ ಪ್ರಚೋದನೆ ಇಷ್ಟಪಡಲ್ಲ.

ಕಾನ್ಕೇವ್ ಮೂಗು

ಕಾನ್ಕೇವ್ ಮೂಗು

ಈ ಮೂಗು ಮೂಳೆಯ ಮೇಲೆ ಕಮಾನಿನಂತೆ ಇದೆ. ತುದಿಯು ಸ್ವಲ್ಪ ಹೊರಚಾಚಿರುವ ಕಾರಣ ಇದು ಚೂಪಾಗಿ ಕಾಣುವುದು. ಇಂತಹ ಮೂಗಿನವರ ವ್ಯಕ್ತಿತ್ವವು ಜೀವನದ ತುಂಬಾ ಸೂಕ್ಷ್ಮ ಭಾಗವಾಗಿರುವುದು. ಇವರು ಯಾವುದೇ ಹೊರೆಯನ್ನು ನಗುವಿನೊಂದಿಗೆ ಸ್ವೀಕರಿಸುವರು ಮತ್ತು ನೆರವಿಗೆ ಮೊದಲಿಗರಾಗಿ ಧಾವಿಸುವರು. ಇವರ ಭಾವನೆಗಳು ತುಂಬಾ ಆಳವಾಗಿರುವುದು. ಇವರು ತುಂಬಾ ನೋವು ಅನುಭವಿಸಿದರೂ ಅದನ್ನು ಯಾರಿಗೂ ಹೇಳುವುದಿಲ್ಲ.

 ಕ್ರೂಕೆಟ್ ಮೂಗು

ಕ್ರೂಕೆಟ್ ಮೂಗು

ಬಾಗಿದ ಮೂಗಿನ ಆಕಾರ ಹೊಂದಿರುವ ಜನರು ತುಂಬಾ ಸರಳ ಹಾಗೂ ನೇರ ವ್ಯಕ್ತಿತ್ವದವರಾಗಿರುವರು. ಇಂತಹ ಮೂಗು ಸೇತುವೆಯಂತಿರುವುದು. ತುದಿ ಮಾತ್ರ ಸುತ್ತಿನಂತಿರುವುದು. ಈ ರೀತಿಯ ಮೂಗು ಹೊಂದಿರುವವರು ಒಳ್ಳೆಯ ಕೇಳುಗಳು ಮತ್ತು ವೀಕ್ಷಕರು. ಇವರು ತಮ್ಮ ಸುತ್ತಲಿನ ವ್ಯಕ್ತಿಗಳ ಬಗ್ಗೆ ತೀರ್ಪು ನೀಡುವ ಬದಲು ಅವರನ್ನು ಅರ್ಥ ಮಾಡಿಕೊಳ್ಳುವರು. ಇಂತವರು ಒಳ್ಳೆಯ ಸ್ನೇಹಿತರು ಮತ್ತು ಪಾಲುದಾರರು ಎನ್ನಲಾಗುತ್ತದೆ. ನಿಮ್ಮ ಮೂಗಿನ ಆಕಾರ ಇವುಗಳಲ್ಲಿ ಯಾವುದು ಎಂದು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿಬಿಡಿ.

English summary

Personality Defined Based On The Shape Of The Nose

There are different types of things that define an individual's personality. From the shape of your finger nails to the shape of your nose, these features could indicate a specific personality type of a person. We have listed out the types of noses that people could be born with and what each of them signify. After all, a person's physical attributes play an important role in the development of his/her personality and some of the features reveal a lot about the kind of person he/she is. So, go ahead and continue reading this interesting piece of information.
Story first published: Wednesday, October 25, 2017, 8:31 [IST]