For Quick Alerts
ALLOW NOTIFICATIONS  
For Daily Alerts

ಈಗ ದುರ್ಗಂಧ ದ್ರವ್ಯಗಳಿಗೂ ಸಿಕ್ಕಾಪಟ್ಟೆ ಬೇಡಿಕೆ ಇದೆಯಂತೆ!!

By Arshad
|

ಎದುರಿನವರಿಗೆ ನಾವು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದರೆ ಚೊಕ್ಕಟವಾಗಿ ಉಡುಗೆ ತೊಟ್ಟುಕೊಂಡರೆ ಮಾತ್ರ ಸಾಲದು, ಬದಲಿಗೆ ನಮ್ಮಿಂದ ಹೊಮ್ಮುವ ಗಂಧವೂ ಎದುರಿನವರಿಗೆ ಸಹ್ಯವಾಗಿರಬೇಕು. ಇದೇ ಕಾರಣಕ್ಕೆ ಸುಗಂಧದ್ರವ್ಯಗಳನ್ನು ನಾವೆಲ್ಲಾ ಬಳಸುತ್ತೇವೆ. ಆದರೆ ಸುಗಂಧದ ಬದಲು ಪಾಪ್ ಕಾರ್ನ್, ಕೊಳಚೆ ಅಥವಾ ಗುಪ್ತಾಂಗದಿಂದ ಹೊರಡುವ ದುರ್ಗಂಧವನ್ನು ನಿಮ್ಮ ದೇಹ ಹೊರಡಿಸಿದರೆ?

ಕೆಲವರಿಗೆ ಇಂತಹ ದುರ್ಗಂಧಗಳು ಹೆಚ್ಚು ಇಷ್ಟವಾಗಿರುತ್ತವೆ. ಕೆಲವರಿಗಂತೂ ತಮ್ಮ ಇಷ್ಟದ ಅನಾರೋಗ್ಯಕರ ಆಹಾರದ ಪರಿಮಳವನ್ನು ಸು(ದುರ್)ಗಂಧದ ರೂಪದಲ್ಲಿ ಧರಿಸಲು ಇಷ್ಟವಾಗಿರುತ್ತದೆ. ಈ ವ್ಯಕ್ತಿಗಳ ಬಯಕೆಯನ್ನು ಮನಗಂಡ ಕೆಲವು ಸಂಸ್ಥೆಗಳು ಈ ದುರ್ಗಂಧ ಸೂಸುವ ಪರಿಕರಳನ್ನು ಉತ್ಪಾದಿಸಿ ಮಾರಾಟ ಮಾಡುವ ಭಾರೀ ಉದ್ಯಮಗಳನ್ನೇ ಸ್ಥಾಪಿಸಿ ವಿಶ್ವದಾದ್ಯಂತ ಮಾರಾಟ ಮಾಡುತ್ತಿವೆ. ಇಂದಿನ ಲೇಖನದಲ್ಲಿ ಇಂತಹ ದುರ್ಗಂಧ ಸೂಸುವ ಕೆಲವು ವಿಚಿತ್ರ ಉತ್ಪನ್ನಗಳ ಬಗ್ಗೆ ಪರಿಚಯಿಸಲಾಗುತ್ತಿದೆ. ಕಡೆಯ ಉತ್ಪನ್ನದವರೆಗೂ ಉಸಿರು ಬಿಗಿ ಹಿಡಿಯಿರಿ.....

ಹೊಗೆಸೊಪ್ಪು

ಹೊಗೆಸೊಪ್ಪು

ಹೊಗೆಸೊಪ್ಪಿನ ವಾಸನೆಯನ್ನು ಇಷ್ಟಪಡುವ ವ್ಯಕ್ತಿಗಳಿಗಾಗಿಯೇ ಈ ಉತ್ಪನ್ನವನ್ನು ನಿರ್ಮಿಸಲಾಗಿದ್ದು ವಿಶ್ವದಾದ್ಯಂತ ಲಕ್ಷಾಂತರ ಜನರು ಈ ವಾಸನೆಯನ್ನು ತಮ್ಮ ಮೈಗೆ ಪೂಸಿಕೊಂಡು ಇಡಿಯ ದಿನ ಈ ವಾಸನೆಯನ್ನು ಹೊಮ್ಮಿಸಲು ಇಷ್ಟಪಡುತ್ತಾರೆ. ಹೌದು, ಒಂದು ಸಂಸ್ಥೆ ಹೊಗೆಸೊಪ್ಪಿನ ವಾಸನೆ ಸೂಸುವ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿ ಒಂದು ವರ್ಷವೇ ಆಗಿದೆ. ಯಾವಾಗ ಇದು ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಗೊತ್ತಾಯಿತೋ, ಆಗಲೇ ಮುಂಗಡ ಪಾವತಿಸಿ ತಮಗಾಗಿ ಇದನ್ನು ಕಾದಿರಿಸಿದವರ ಸಂಖ್ಯೆ ಕಂಡರೆ ಈ ವಾಸನೆಯನ್ನು ಇಷ್ಟಪಡುವವರೆಷ್ಟು ಹೆಚ್ಚಿದ್ದಾರೆ ಎಂದು ತಿಳಿದುಬರುತ್ತದೆ.

ಕಡಲೇಡಿ (ಲಾಬ್ಸ್ಟರ್)

ಕಡಲೇಡಿ (ಲಾಬ್ಸ್ಟರ್)

ಮೀನಿಗಿಂತಲೂ ಕೊಂಚ ಹೆಚ್ಚೇ ಕಟುವಾದ ಉಪ್ಪಿನಲ್ಲಿ ಕೊಳೆತಂತಹ ವಾಸನೆ ಕಡಲೇಡಿಯದ್ದು. ಇದೇ ಕಾರಣಕ್ಕೆ ಹೆಚ್ಚು ಜನರು ಈ ಏಡಿಯನ್ನು ತಿನ್ನಲು ಬಯಸುತ್ತಾರಾದರೂ ಅಡುಗೆ ಮಾಡಲು ಯತ್ನಿಸುವುದಿಲ್ಲ. ಆದರೆ ಕೆಲವರಿಗೆ ಈ ವಾಸನೆಯೇ ಹೆಚ್ಚು ಇಷ್ಟವಾಗಿದ್ದು ಈಗತಾನೇ ಕಡಲೇಡಿಯನ್ನು ಹುರಿದರೆ ಹೊಮ್ಮುವಂತಹ ವಾಸನೆ ಹೆಚ್ಚು ಇಷ್ಟವಾಗುತ್ತದೆ. ಇವರಿಗಾಗಿ ಸಂಸ್ಥೆಯೊಂದು ಲಾಬ್ಸ್ಟರ್ ಪರ್ಫ್ಯೂಮ್ ಅನ್ನು ಪ್ರಸ್ತುತಪಡಿಸಿದ್ದು ಇದರಲ್ಲಿ ಹಸಿ ಮಾಂಸ, ಸಾಗರದ ನೀರು ಅಥವಾ ಬೆಣ್ಣೆಯೊಂದಿಗೆ ಹುರಿದರೆ ಬರುವಂತಹ ವಾಸನೆಗಳ ಆಯ್ಕೆಯನ್ನು ನೀಡಿದೆ. ಈ ವಾಸನೆ ಇಷ್ಟವಾಗದಿರುವವರಿಗೂ ಇದು ಏನು ಎಂಬ ಕುತೂಹಲವಂತೂ ಮೂಡುವುದು ಖಚಿತ.

ಗುಪ್ತಾಂಗ

ಗುಪ್ತಾಂಗ

ನಂಬಲಿಕ್ಕೇ ಕಷ್ಟವಾಗುವ, ಆದರೆ ಅಂತರ್ಜಾಲದಲ್ಲಿ ಜಾಲಾಡಿದರೆ ಸುಲಭವಾಗಿ ಕಂಡುಬರುವ ಈ ಉತ್ಪನ್ನ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಇಷ್ಟವಾಗುತ್ತಿರುವುದು ಕಂಡುಬಂದಿದೆ. ಹೌದು, ತೇವಗೊಂಡ ಗುಪ್ತಾಂಗ ಹೊರಡಿಸುವ ವಾಸನೆಯನ್ನೇ ತದ್ವತ್ತಾಗಿ ಹೊರಡಿಸುವ ಉತ್ಪನ್ನವನ್ನು ಪ್ರಸ್ತುತಪಡಿಸಲಾಗಿದೆ. ಆದರೆ ಈ ವಾಸನೆಯನ್ನು ಹೊಮ್ಮಿಸುತ್ತಾ ನಾಲ್ವರು ಜನರ ನಡುವೆ ಹೇಗೆ ಹೋಗುತ್ತಾರೋ ಎಂದು ಅಚ್ಚರಿಯಾಗುತ್ತದೆ. ಆದರೆ ಒಂದು ಸಂಸ್ಥೆ ವರ್ಷಕ್ಕೆ ಸಾವಿರಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡಿದೆ. ಜನರೆಷ್ಟು ವಿಚಿತ್ರ, ಅಲ್ಲವೇ!

ಕೊಳೆತ ತರಕಾರಿ

ಕೊಳೆತ ತರಕಾರಿ

ಒಂದು ವೇಳೆ ಗುಪ್ತಾಂಗದ ವಾಸನೆಯೇ ಅತಿ ಹೆಚ್ಚು ಘಾಟುಹೊಂದಿರುವುದೆಂದು ನಿಮಗನ್ನಿಸಿದರೆ ಇದಕ್ಕೂ ವಿಚಿತ್ರವಾದ ಮತ್ತು ಕಟುವಾದ ಕೊಳೆತ ತರಕಾರಿಯ ವಾಸನೆಯನ್ನು ಹೊಮ್ಮಿಸುವ ಉತ್ಪನ್ನವನ್ನೂ ಬಿಡುಗಡೆ ಮಾಡಲಾಗಿದೆ. ಹೌದು, ಈ ಉತ್ಪನ್ನವನ್ನು ಹಚ್ಚಿಕೊಂಡು ಹೋಗುವವರ ಶರೀರದಿಂದ ಕೊಳೆತ ತರಕಾರಿಯ ದುರ್ಗಂಧ ಹೊರಹೊಮ್ಮುತ್ತದೆ. ಹಿಂದೆ ಅಣ್ಣಾವ್ರ ಚಲನಚಿತ್ರ ಬಿಡುಗಡೆಯಾದಾಗ ಟಿಕೆಟ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ಸುಗಂಧ ಸಿಕ್ಕಿದ್ದರೆ ಚೆನ್ನಿತ್ತು. ಈಗ ಸಿಕ್ಕಿ ಏನು ಫಲ?

ಪಾಪ್ ಕಾರ್ನ್

ಪಾಪ್ ಕಾರ್ನ್

ಚಲನಚಿತ್ರ ವೀಕ್ಷಿಸುವ ಸಮಯದಲ್ಲಿ ಪಾಪ್ ಕಾರ್ನ್ ಮೆಲ್ಲುತ್ತಾ ಇರುವುದು ಈಗ ಒಂದು ಭಾರೀ ಲಾಭಕರವಾದ ಉದ್ಯಮವಾಗಿದೆ. ಒಬ್ಬರು ತಿನ್ನುತ್ತಿದ್ದರೆ ಅಕ್ಕಪಕ್ಕದವರಿಗೂ ಇದರ ವಾಸನೆ ಹೊಮ್ಮಲಿ ಎಂದು ಇದಕ್ಕೆ ಕೆಲವು ಪರಿಕರಗಳನ್ನೂ ಸೇರಿಸಿರಲಾಗಿರುತ್ತದೆ. ಆದರೆ ಈ ವಾಸನೆಯನ್ನು ಮೈಗೆ ತೀಡಿಕೊಂಡು ಹೊರಹೋದರೆ? ಅಕ್ಕಪಕ್ಕದವರು ಕುತೂಹಲದಿಂದ ಇವರತ್ತ ಗಮನ ಬೀರುವುದಂತೂ ಖಚಿತ. ಒಂದು ಸಂಸ್ಥೆ ಪಾಪ್ ಕಾರ್ನ್ ವಾಸನೆ ಹೊಮ್ಮಿಸುವ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಸಾಕಷ್ಟು ಬೇಡಿಕೆ ಹೊಂದಿದೆ. ಇದನ್ನು ಒತ್ತಿದರೆ ಉಪ್ಪು ಹಾಗೂ ಬೆಣ್ಣೆ ಬೆರೆಸಿದ ಪಾಪ್ ಕಾರ್ನ್ ಅನ್ನೇ ಹೋಲುವ ಸುಗಂಧ ಎದುರಾಗುತ್ತದೆ.

ಕಾಫಿ

ಕಾಫಿ

ಕಾಫಿ ಮಲೆನಾಡಿನವರ ಅಚ್ಚುಮೆಚ್ಚಿನ ಪೇಯವಾಗಿದ್ದು ಇಂದು ದೇಶದಾದ್ಯಂತ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಒಂದು ವೇಳೆ ನಿಮಗೂ ಕಾಫಿ ಇಷ್ಟವಾಗಿದ್ದು ಇದರ ಪರಿಮಳವೂ ಇಷ್ಟ ಎಂದಿದ್ದರೆ ಕಾಫಿಯ ಪರಿಮಳವನ್ನು ಬೀರುವ ಉತ್ಪನ್ನ ನಿಮಗೂ ಇಷ್ಟವಾಗುತ್ತದೆ. ಈ ಸುಗಂಧವನ್ನು ಹಚ್ಚಿಕೊಂಡಾಗ ಇಡಿಯ ದಿನ ತಾಜಾತನ ಹಾಗೂ ಮನಸ್ಸಿಗೆ ಮುದ ದೊರಕುತ್ತದೆ ಎಂದು ಈ ಉತ್ಪನ್ನ ಮಾರಾಟ ಮಾಡುವ ಸಂಸ್ಥೆ ಹೇಳಿಕೊಂಡಿದೆ. ವಿಶ್ವದಾದ್ಯಂತ ಈ ಪರಿಮಳವನ್ನು ಇಷ್ಟಪಡುವ ಗ್ರಾಹಕರು ಈ ಸುಗಂಧಕ್ಕೆ ಮುಗಿಬಿದ್ದಿದ್ದಾರೆ. ಈ ಬೇಡಿಕೆಯನ್ನು ಪರಿಗಣಿಸಿ ಈಗ ಜನಪ್ರಿಯವಾದ ಕಾಫಿ ಎಸ್ಪ್ರೆಸ್ಸೋ ಎಂಬ ವಿಶೇಷ ಸುಗಂಧವನ್ನೂ ಬಿಡುಗಡೆ ಮಾಡಲಾಗಿದೆ.

ಶವಾಗಾರ

ಶವಾಗಾರ

ಕೇಳಲಿಕ್ಕೇ ಅತ್ಯಂತ ಅಸಹ್ಯವಾದ ಈ ವಾಸನೆಯನ್ನು "ಫ್ಯೂನೆರಲ್ ಹೋಂ" ಎಂಬ ಹೆಸರಿನ ಸುಗಂಧದ್ರವ್ಯ ಬೀರುತ್ತದೆ. ಇದರಲ್ಲಿ ವಿವಿಧ ಬಿಳಿ ಹೂವುಗಳು, ಲಿಲ್ಲಿ, ಕ್ರೈಸಾಂಥಿಯಂ, ಹೂವುಗಳ ದಂಟು, ಎಲೆ, ಅಲಂಕಾರಿಕಾ ಗಿಡಗಳು ಮೊದಲಾದವುಗಳ ಪರಿಮಳದ ಮಿಶ್ರಣವಿದ್ದು ಇದನ್ನು ಆಘ್ರಾಣಿಸಿದಾದ ಶವಾಗಾರದಲ್ಲಿರುವಂತೆ ಅನ್ನಿಸುತ್ತದೆ. ಇದನ್ನು ಕೇವಲ ಸುಗಂಧ ದ್ರವ್ಯದಲ್ಲಿ ಮಾತ್ರವಲ್ಲ, ಬದಲಿಗೆ ಬಾಡಿ ಲೋಶನ್, ಶವರ್ ಜೆಲ್, ಸೋಪು ಮೊದಲಾದ ಮಾರ್ಜಕಗಳಲ್ಲಿಯೂ ಅಳವಡಿಸಲಾಗಿದೆ. ಅಷ್ಟಕ್ಕೂ ಸ್ಮಶಾನ ವೈರಾಗ್ಯದ ಭಾವನೆಯನ್ನು ಸ್ನಾನದ ಸಮಯದಲ್ಲಿ ಮೂಡಿಸುವ ಯೋಚನೆ ಎಷ್ಟು ಲಾಭಕರ ಎಂದು ನಮಗೆಂದೂ ಅರ್ಥವಾಗಲಾರದು.

ಪೇಂಟ್

ಪೇಂಟ್

ಮನೆಗೆ ಹೊಸದಾಗಿ ಬಣ್ಣ ಹೊಡೆಸಿದಾಗ ಕೆಲವು ದಿನಗಳವರೆಗೆ ಹಸಿಯಾದ ಪೇಂಟ್ ನ ವಾಸನೆ ಇರುತ್ತದೆ. ಕೆಲವರಿಗೆ ಈ ವಾಸನೆ ತುಂಬಾ ಇಷ್ಟವಾಗುತ್ತದೆ. ಇವರಿಗೆಂದೇ ವೋಡ್ ಪರ್ಫ್ಯೂಮ್ ಎಂಬ ಉತ್ಪನ್ನ ಲಭ್ಯವಿದ್ದು ಪೇಂಟ್ ನ ಪರಿಮಳವನ್ನು ಸೂಸುವಲ್ಲಿ ಪ್ರಥಮ ಉತ್ಪನ್ನವಾಗಿದೆ. ಅಷ್ಟೇ ಅಲ್ಲ, ಇದರ ಬಣ್ಣವೂ ಗಾಢವಾದ ನೀಲಿ ಬಣ್ಣವನ್ನು ಹೊಂದಿದ್ದು ಇದನ್ನು ಸಿಂಪಡಿಸಿದ ಸ್ಥಳದಲ್ಲಿ ನೀಲಿ ಬಣ್ಣವನ್ನು ಹಚ್ಚಿದಂತಿದ್ದರೂ ಕೊಂಚ ಹೊತ್ತಿಗೆ ಈ ಬಣ್ಣ ಮಾಯವಾಗುತ್ತದೆ. ಹಾಗಾಗಿ ಪೇಂಟ್ ನಿಮ್ಮ ಬಟ್ಟೆಗೆ ಕಲೆಯಾಗುತ್ತದೆ ಎಂಬ ಚಿಂತೆ ಇದ್ದರೆ ಈ ಉತ್ಪನ್ನ ಕಲೆಯಿಲ್ಲದೇ ಪೇಂಟ್ ನ ವಾಸನೆಯನ್ನು ದಿನವಿಡೀ ನಿಮ್ಮ ಶರೀರ ಸೂಸುವಂತೆ ಮಾಡುತ್ತದೆ.

ಬರ್ಗರ್

ಬರ್ಗರ್

ಅನಾರೋಗ್ಯಕರ, ಆದರೆ ಸ್ವಾದಿಷ್ಟವಾದ ಆಹಾರಗಳಲ್ಲಿ ಬರ್ಗರ್ ಹಾಗೂ ಪಿಜ್ಜಾಗಳು ಪ್ರಮುಖವಾಗಿದೆ. ಇವುಗಳನ್ನು ತಿನ್ನಲು ಇಷ್ಟಪಡುವ ವ್ಯಕ್ತಿಗಳು ಇದರ ವಾಸನೆಯನ್ನು ತಮ್ಮ ಶರೀರಕ್ಕೆ ಪೂಸಿಕೊಳ್ಳಲು ಇಷ್ಟಪಡುತ್ತಾರೋ ಗೊತ್ತಿಲ್ಲ. ಆದರೆ ಮಾರುಕಟ್ಟೆಯಲ್ಲಿ ಫ್ಲೇಮ್ ಎಂಬ ಹೆಸರಿನ ಉತ್ಪನ್ನವೊಂದಿದ್ದು ಇದನ್ನು ಪೂಸಿಕೊಂಡಾಗ ಆಲಿವ್ ಗಳಿಂದ ಅಲಂಕರಿಸಲ್ಪಟ್ಟ, ಚೀಸ್ ಹಾಗೂ ಇತರ ಸಾಮಾಗ್ರಿಗಳಿಂದ ಅತ್ಯಂತ ಸ್ವಾದಿಷ್ಟವಾಗಿ ತಯಾರಿಸಿದ ಬರ್ಗರ್ ನಂತಹ ಪರಿಮಳವೇ ಹೊಮ್ಮುತ್ತದೆ. ಆದರೆ ಸಸ್ಯಾಹಾರಿಗಳು ಈ ಸುಗಂಧದಿಂದ ದೂರವಿರುವುದೇ ಒಳ್ಳೆಯದು. ಏಕೆಂದರೆ ಈ ಉತ್ಪನ್ನದ ಜಾಹೀರಾತಿನಲ್ಲಿ "ಮಾಂಸವನ್ನು ಬೆಂಕಿಯಲ್ಲಿ ಹುರಿದ ಪರಿಮಳ ನಿಮ್ಮನ್ನು ತಪ್ಪುದಾರಿಗೆ ಎಳೆಯಬಹುದು" ಎಂದು ವಿವರಿಸಲಾಗಿದ್ದು ಇದು ಸಸ್ಯಾಹಾರಿಗಳಿಗೆ ಇಷ್ಟವಾಗಲಾರದು.

ಮಾರಿಜುವಾನಾ (Cannabis)

ಮಾರಿಜುವಾನಾ (Cannabis)

ಮಾದಕ ಪದಾರ್ಥವಾದ ಮಾರಿಜುವಾನಾ ಅಥವಾ ಮಾರಿಯುವಾನಾ ಎಂಬ ಎಲೆಯ ಪರಿಮಳವನ್ನು ಹೋಲುವ ಪರಿಮಳವನ್ನು ಪ್ರಸ್ತುತಪಡಿಸಲಾಗಿದೆ. ಆದರೆ ಇದರೊಂದಿಗೆ ಚಾಕಲೇಟು, ಮಸ್ಕ್ ಅಥವಾ ವೆನಿಲ್ಲಾ ಪರಿಮಳವನ್ನು ಬೆರೆಸಲಾಗಿದೆ. ಈ ವಾಸನೆಯಲ್ಲಿ ಮಾರಿಜುವಾನಾದ ವಾಸನೆಯೇ ಪ್ರಮುಖವಾಗಿ ಕಂಡುಬರುತ್ತದೆ ಹಾಗೂ ಈಗಾಗಲೇ ಈ ಮಾದಕಪದಾರ್ಥಕ್ಕೆ ಗುಲಾಮರಾಗಿರುವ ವ್ಯಕ್ತಿಗಳಿಗೆ ವ್ಯಸನದಿಂದ ದೂರಾಗಿಸಲು ನೆರವಾಗಲಿದೆ ಎಂದು ಜಾಹೀರಾತು ತಿಳಿಸುತ್ತದೆ.

English summary

perfumes made from the weirdest ingredients

On a serious note, you will never want yourself to smell like popcorn, garbage, weed or like that of a vagina! Also, if you have ever desired about smelling like your favourite junk food, then you can fulfill it by purchasing these odd and unusual-smelling perfumes around the world. And this post introduces you to some of the weird, unusual and strange-smelling perfumes that will leave you with raised eyebrows. Hold your breath and read the complete list!
X
Desktop Bottom Promotion