ಛೇ! ಹೀಗೂ ಉಂಟೇ? ಇಲ್ಲಿ ಪುರುಷರು ಪರಸ್ಪರ ವಿವಾಹವಾಗುತ್ತಾರಂತೆ!

Posted By: manu
Subscribe to Boldsky

ನಿಸರ್ಗ ಪ್ರತಿ ಜೀವಿಯಲ್ಲಿಯೂ ಗಂಡುಹೆಣ್ಣುಗಳನ್ನು ಸೃಷ್ಟಿಸಿ ಪರಸ್ಪರ ಆಕರ್ಷಿತವಾಗುವಂತೆ ಮಾಡಿ ಈ ಮೂಲಕ ವಂಶಾಭಿವೃದ್ಧಿಯ ಮೂಲಕ ಕುಲವನ್ನು ಮುಂದುವರೆಸುವಂತೆ ವ್ಯವಸ್ಥೆ ಮಾಡಿದೆ. ಇದನ್ನೇ ಹೆರಲಿಂಗ ಕಾಮ ಎಂದು ಕರೆಯುತ್ತಾರೆ. ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಈ ವ್ಯವಸ್ಥೆಗೆ ವಿವಾಹದ ಅನುಮತಿಯನ್ನು ನೀಡುವ ಮೂಲಕ ಸತಿಪತಿಗಳು ಕೂಡುವುದಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಕೆಲವು ವ್ಯಕ್ತಿಗಳು ಇದಕ್ಕೆ ವಿರುದ್ಧವಾಗಿ ಸಲಿಂಗಕಾಮಿಗಳಾಗಿರುತ್ತಾರೆ.

ವಿಶ್ವದ ಜನಸಂಖ್ಯೆಗೆ ಹೋಲಿಸಿದರೆ ಇವರ ಸಂಖ್ಯೆ ನಗಣ್ಯವಾದರೂ ಸಾಕಷ್ಟು ಸಂಖ್ಯೆಯಲ್ಲಿ ಇವರು ನಮ್ಮ ಸಮಾಜದಲ್ಲಿದ್ದಾರೆ. ಆದರೆ ಸಮಾಜದ ಕಟ್ಟುಪಾಡಿನ ಭಯದಿಂದ ಸಂಪ್ರದಾಯಸ್ಥ ರಾಷ್ಟ್ರಗಳಲ್ಲಿ ಇವರು ತಮ್ಮ ಬಯಕೆಯನ್ನು ಪ್ರಕಟಿಸುವುದೇ ಇಲ್ಲ. ಕೆಲವು ರಾಷ್ಟ್ರಗಳಲ್ಲಿ ಮಾತ್ರ ಈ ವ್ಯಕ್ತಿಗಳು ಪರಸ್ಪರ ವಿವಾಹವಾಗಿ ಕೂಡಿ ಬಾಳುವುದಕ್ಕೆ ಅವಕಾಶವಿದೆ. ಇದರಲ್ಲಿ ಪುರುಷರು ಪರಸ್ಪರ ಅಥವಾ ಮಹಿಳೆಯರು ಪರಸ್ಪರ ವಿವಾಹವಾಗುವುದನ್ನು ಕಾನೂನುಬದ್ಧಗೊಳಿಸಲಾಗುತ್ತದೆ. ಆದರೆ ಕೊಲಂಬಿಯಾ ದೇಶದಲ್ಲಿ ಇತ್ತೀಚೆಗೆ, ಅಂದರೆ ಏಪ್ರಿಲ್ 2016ರಲ್ಲಿ ಈ ಮದುವೆಗಳಿಗೆ ಅನುಮತಿ ಸಿಕ್ಕಿದೆ. 

ಈ ಊರಿನ ಹುಡುಗಿಯರು ತಮ್ಮ ತಂದೆಯನ್ನೇ ಪತಿಯಾಗಿ ಸ್ವೀಕರಿಸಬೇಕು!

ಮಾತ್ರವಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೂವರು ವ್ಯಕ್ತಿಗಳು ಈ ಬಂಧನಕ್ಕೆ ಒಳಪಡಬಹುದು ಎಂದೂ ಪ್ರಕಟಿಸಿದೆ. ಈ ದೇಶದ 'ಟ್ರಿಯೆಜಾ' (trieja) (ಟ್ರಿಯೋ ಅಂದರೆ ಮೂವರು, ಪರೇಜಾ ಅಂದರೆ ದಂಪತಿ) ಎಂಬ ವ್ಯವಸ್ಥೆಯ ಪ್ರಕಾರ ಮೂವರು ವ್ಯಕ್ತಿಗಳು ಕಾನೂನಿನಂತೆ ಒಂದು ಕುಟುಂಬವಾಗಬಹುದಾಗಿದ್ದು ಇವರಿಗೆ ಉತ್ತರಾಧಿಕಾರದ ಹಕ್ಕುಗಳೂ ಲಭ್ಯವಾಗುತ್ತವೆ. ಬನ್ನಿ, ಈ ವ್ಯವಸ್ಥೆಯನ್ನು ಒಪ್ಪಿಕೊಂಡ ಒಂದು ಕುಟುಂಬದ ಬಗ್ಗೆ ಅರಿಯೋಣ.... 

ಈ ವ್ಯವಸ್ಥೆಯನ್ನು ಒಪ್ಪಿಕೊಂಡ ಈ ಜೋಡಿ ವಿಶ್ವದಲ್ಲಿಯೇ ಪ್ರಥಮವಾಗಿದೆ

ಈ ವ್ಯವಸ್ಥೆಯನ್ನು ಒಪ್ಪಿಕೊಂಡ ಈ ಜೋಡಿ ವಿಶ್ವದಲ್ಲಿಯೇ ಪ್ರಥಮವಾಗಿದೆ

ಇದುವರೆಗೆ ಗುಟ್ಟಾಗಿಯೇ ತಮ್ಮ ಪ್ರೇಮವನ್ನು ಹಂಚಿಕೊಂಡಿದ್ದ ಈ ಮೂವರು ವ್ಯಕ್ತಿಗಳು ಈಗ ಕಾನೂನುಬದ್ಧವಾಗಿ ದಂಪತಿಗಳಾಗಿದ್ದು ಅಧಿಕೃತ ಕಾನೂನಿನ ಅನುಮತಿಯನ್ನು ಪಡೆದಿದ್ದಾರೆ. ಈ ಮೂಲಕ ತ್ರಿದಂಪತಿಗಳಾಗಿರುವ ಜಗತ್ತಿನ ಪ್ರಥಮ ವ್ಯಕ್ತಿಗಳು ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ.

ಇವರಾರು?

ಇವರಾರು?

ವಿಕ್ಟರ್ ಹ್ಯೂಗೋ ಪರಾಡಾ, ಜಾನ್ ಅಲೆಜಾಂಡ್ರೋ ರೋಡ್ರಿಗಸ್ ಮತ್ತು ಮ್ಯಾನ್ಯುವಲ್ ಜೋಸ್ ಬರ್ಮುಡೇಸ್ ಎಂಬ ಹೆಸರಿನ ಈ ಮೂವರು ವ್ಯಕ್ತಿಗಳು ಕೊಲಂಬಿಯಾದ ಮೆಡೆಲ್ಲಿನ್ ನಗರದ ಸಲಹಾವಕೀಲರಲ್ಲಿ ಕಾನೂನುಬದ್ಧ ಕಾಗದಪತ್ರಗಳಿಗೆ ಸಹಿ ಹಾಕಿ ಪರಸ್ಪರ ದಾಂಪತ್ಯಕ್ಕೆ ಬದ್ಧರಾಗಿದ್ದಾರೆ. ಈ ಮೂಲಕ ಇವರನ್ನು ಒಂದು ಕುಟುಂಬವೆಂದು ಕರೆಯಬಹುದಾಗಿದ್ದು ಉತ್ತರಾಧಿಕಾರದ ಹಕ್ಕುಗಳನ್ನು ಪಡೆಯಲು ಬಾಧ್ಯಸ್ಥರಾಗಿದ್ದಾರೆ.

ಇವರು ಆರ್ಥಿಕ ವ್ಯವಸ್ಥೆಯ ಹಕ್ಕುಗಳನ್ನು ಹಂಚಿಕೊಳ್ಳಬಯಸುತ್ತಾರೆ

ಇವರು ಆರ್ಥಿಕ ವ್ಯವಸ್ಥೆಯ ಹಕ್ಕುಗಳನ್ನು ಹಂಚಿಕೊಳ್ಳಬಯಸುತ್ತಾರೆ

ಇವರಲ್ಲೊಬ್ಬ ನವವಿವಾಹಿತರಾದ ವಿಕ್ಟರ್ ಹ್ಯೂಗೋ ಪರಾಡಾ ರವರು ಹೇಳುವಂತೆ ಈ ಟ್ರೀಜಾ ವ್ಯವಸ್ಥೆಯ ಪ್ರಕಾರ ಆರ್ಥಿಕ ವ್ಯವಸ್ಥೆಯ ಹಕ್ಕುಗಳನ್ನೂ ಇವರು ಹಂಚಿಕೊಳ್ಳಬಯಸುತ್ತಾರೆ.

ಸುಲಭ ಪದಗಳಲ್ಲಿ ಹೇಳಬೇಕೆಂದರೆ...

ಸುಲಭ ಪದಗಳಲ್ಲಿ ಹೇಳಬೇಕೆಂದರೆ...

ಇವರ ಪ್ರಕಾರ ಈ ಮೂವರೂ ಪರಸ್ಪರ ಮದುವೆಯಾಗಲು ಪ್ರೀತಿಯೇ ಕಾರಣವಾಗಿದೆ ಹಾಗೂ ಇವರ ಸಮಾನ ಪಾರಂಪರ್ಯದ ಬಗ್ಗೆ ಕಾಳಜಿ ವಹಿಸಿದಂತೆಯೂ ಆಗಿದೆ.

ಇವರು ತಮ್ಮ ಸಂಬಂಧವನ್ನು ವಿವರಿಸಿದ ರೀತಿ

ಇವರು ತಮ್ಮ ಸಂಬಂಧವನ್ನು ವಿವರಿಸಿದ ರೀತಿ

ಇನ್ನೊಬ್ಬ ನವವಿವಾಹಿತ ಅಲೆಜಾಂಡ್ರೋ ರವರು "ನಮ್ಮ ಈ ಸಂಬಂಧ ಒಗ್ಗಟ್ಟು ಮತ್ತು ಸಹಬಾಳ್ವೆಯನ್ನು ಆಧರಿಸಿದೆ. ಇಲ್ಲಿ ನಾವು ಮೂವರೂ ಸಮಾನ ಸ್ಥಾನವನ್ನು ಪಡಿದಿದ್ದು ಮೂವರಲ್ಲಿ ಯಾರೂ ಪ್ರಬಲರಲ್ಲ, ಯಾರಿಗೂ ಉನ್ನತ ಅಥವಾ ಕಡಿಮೆ ದರ್ಜೆಯಿಲ್ಲ, ನಾವು ಸದಾ ಒಂದು ಒಪ್ಪಂದಕ್ಕೆ ತಲುಪಲು ಯತ್ನಿಸುತ್ತೇವೆ" ಎಂದು ತಿಳಿಸಿದ್ದಾರೆ.

ಶುಭವಾಗಲಿ

ಶುಭವಾಗಲಿ

ಈಗ ವಿಶ್ವ ಪ್ರಗತಿಪರವಾಗುತ್ತಿದ್ದು ಹಳೆಯ ಗೊಡ್ಡು ಸಂಪ್ರದಾಯಗಳೆಲ್ಲಾ ನೇಪಥ್ಯ ಸರಿಯುತ್ತಿವೆ. ಜನರು ತಮ್ಮ ಇಚ್ಛೆಗನುಸಾರವಾಗಿ ಜೀವಿಸುವ ಹಕ್ಕನ್ನು ಪಡೆದುಕೊಳ್ಳುತ್ತಿದ್ದಾರೆ. ಅಂದರೆ ಸಂಪ್ರದಾಯಕ್ಕೆ ಕೊಂಚ ವಿರುದ್ಧವಾಗಿಯೇ ಬದಲಾಗುತ್ತಿದೆ. ಈ ಬದಲಾವಣೆ ಈ ಭೂಮಿಯನ್ನು ವಾಸಿಸಲು ಯೋಗ್ಯವಾಗಿಸುತ್ತಿದೆ ಎಂಬ ಭಾವನೆ ಮೂಡಿಸುತ್ತಿದೆ. ನಿಧಾನವಾಗಿ ವಿಶ್ವದ ಹಲವು ರಾಷ್ಟ್ರಗಳು ಈ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಾ ಬರುತ್ತಿವೆ.

All Images

For Quick Alerts
ALLOW NOTIFICATIONS
For Daily Alerts

    English summary

    OMG! Three-man Gay Marriage Is A Legal Thing In Colombia!

    According to a ruling by the court in April 2016, same-sex marriage in Colombia has been legalized. Since three people are legally allowed to marry each other here, the term is known as a 'trieja', which is a word that has been derived from two others: trio and pareja: trio and couple. This ceremony hence establishes the 3 men as a family unit that has inheritance rights. Read on more to know about this unique family of 3...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more